ಗಣ : ಸಿಪ್ರಿನಿಫಾರ್ಮಿಸ್‌(Cypriniformes)
ಕುಟುಂಬ : ಸಿಪ್ರಿನಿಡೀ (Cyprinidae)
ಉದಾ : ಕರ್ನಾಟಕದ ಕಾರ್ಪ್
‌, ಗೆಂಡೆ ಮೀನು
ಶಾಸ್ತ್ರೀಯ ನಾಮ : ಪುಂಟಿಯಸ್ಕರ್ನಾಟಿಕಸ್‌(Puntius carnaticus)

009_69_PP_KUH

ವಿತರಣೆ : ಕಾವೇರಿ, ಕೃಷ್ಣ ನದಿ ಜಲಾನಯನದ ಪ್ರದೇಶದಲ್ಲಿ ಇವು ಸಾಮಾನ್ಯ. ನದಿ-ಉಪನದಿ, ಹೊಳೆ, ಹಳ್ಳಗಳ ಜೊತೆಗೆ ಕೊಳ್ಳಗಳು ಮತ್ತು ಜಲಾಶಯಗಳಲ್ಲಿಯೂ ಕಂಡು ಬರುತ್ತವೆ.

ಗಾತ್ರ : ಸಾಧಾರಣ ಗಾತ್ರ ಮತ್ತು ಉದ್ದ ಇರುತ್ತದೆ. ೧೨ ಕೆ.ಜಿಗೂ ಹೆಚ್ಚು ತೂಕ ಬೆಳೆಯುತ್ತವೆ.

ಆಹಾರ : ಜಲಸಸ್ಯ ಮತ್ತು ನೀರಿನಲ್ಲಿ ದೊರಕುವ ಇತರ ಆಹಾರ.

ಲಕ್ಷಣಗಳು : ನೀಳವಾದ ದೇಹ. ತಲೆ ಮತ್ತು ದೇಹ ಈ ಜಾತಿಗೆ ಅನುಗುಣವಾದ ಉದ್ದ ಮತ್ತು ದಪ್ಪನಾಗಿದೆ. ಸಾಧಾರಣ ಗಾತ್ರದ ಕಣ್ಣುಗಳು ಬಾಯಿ ತುದಿಯಲ್ಲಿವೆ. ತುಟಿಗಳು ಮಾಂಸಲವಾಗಿ ತುಸು ದಪ್ಪವಾಗಿವೆ. ಎರಡು ಜೊತೆ ದಾಡಿ ಮೀಸೆಗಳಿವೆ. ಇದರಲ್ಲಿ ಮುಂದಿನ ಜೊತೆ ಕಣ್ಣುಗಳವರೆಗೆ ಚಾಚಬಹುದಾದಷ್ಟು ಉದ್ದವಾಗಿದೆ. ಹಿಂದಿನ ಎರಡನೆ ಜೊತೆ ಅದಕ್ಕಿಂತ ಮೋಟು. ಬೆನ್ನು ಈಜುರೆಕ್ಕೆಯಲ್ಲಿ ನಾಲ್ಕು ಸರಳಿನಾಕಾರದ ಮುಳ್ಳುಗಳಿವೆ. ಈ ಮುಳ್ಳುಗಳು ಮೂತಿಗೆ ಸನಿಹದಲ್ಲಿವೆ. ಬೆನ್ನು ಈಜುರೆಕ್ಕೆಯ ಅತ್ಯಂತ ಹಿಂದಿನ ರೆಕ್ಕೆ ಕಡ್ಡಿ ಮೂಳೆಯದು, ಬಲವಾಗಿದೆ ಮತ್ತು ನಯವಾಗಿದೆ. ಭುಜದ ಈಜುರೆಕ್ಕೆ ತಲೆಯಷ್ಟೇ ಉದ್ದವಾಗಿದೆ. ದೇಹದ ಮೇಲಿನ ಹುರುಪೆಗಳು ಸಾಮಾನ್ಯಕ್ಕಿಂತ ತುಸು ದೊಡ್ಡವು. ಪಾರ್ಶ್ವ ಪಂಕ್ತಿ ಸಂಪೂರ್ಣ ಮತ್ತು ಸ್ಪಷ್ಟ ಪಾರ್ಶ್ವ ಪಂಕ್ತಿ ರಚನೆಯಲ್ಲಿ ೨೮ ರಿಂದ ೩೨ ಹುರುಪೆಗಳು ಸೇರುತ್ತವೆ. ದೇಹದ ಬಣ್ಣ, ಮೇಲೆ ಆಲಿವ್‌ಹಸಿರು, ಪಕ್ಕೆಗಳಲ್ಲಿ ತೆಳ್ಳಿಗಿನ ಬಂಗಾರ ಬಣ್ಣ ಮತ್ತು ತಳಭಾಗ ಹೊಳಪು ಬಿಳಿ, ಪಾರ್ಶ್ವ ಪಂಕ್ತಿಯ ಮೇಲೆ ಬೆನ್ನಿನ ಕಡೆಗೆ ನಾಲ್ಕು ಅಥವಾ ಐದು ಅಸ್ಪಷ್ಟ ಸೂಕ್ಷ್ಮ ಪಟ್ಟಿಗಳಿವೆ. ದಾಡಿ ಮೀಸೆಗಳ ಬಣ್ಣ ಕಪ್ಪು, ಕಣ್ಣುಗಳ ಬಣ್ಣ ಬಂಗಾರ ಹಳದಿ, ಈಜುರೆಕ್ಕೆಗಳು ಮೊಬ್ಬು ಮತ್ತು ಬೆನ್ನಿನ ಈಜುರೆಕ್ಕೆ ವಿನಹ ಉಳಿದವಕ್ಕೆ ಕಪ್ಪು ಅಂಚಿದೆ.

ಸಂತಾನಾಭಿವೃದ್ಧಿ : ಇದು ಹರಿಯುವ ನೀರಿನ ವಿನಹ ಕೊಳಗಳ ನಿಂತ ನೀರಿನಲ್ಲಿ ಸಂತಾನೋತ್ಪತ್ತಿ ನಡೆಸುವುದಿಲ್ಲ. ಇದಕ್ಕೆ ಹರಿಯುವ ನೀರೇ ಬೇಕು. ಸೆಪ್ಟೆಂಬರ್-ಡಿಸೆಂಬರ್ ತಿಂಗಳುಗಳಲ್ಲಿ ಇದರ ಮರಿಗಳು ದೊರಕುತ್ತವೆ. ಈ ಮರಿಗಳನ್ನು ತಂದು ಕೊಳಗಳಲ್ಲಿ ಸಾಕಬಹುದು, ಬೆಳಸಬಹುದು. ದಕ್ಷಿಣ ಭಾರತದಲ್ಲಿ ಇದನ್ನು ಬೆಳಸುವುದೊಂದು ಉದ್ಯಮವಾಗಿದೆ. ಇತ್ತೀಚೆಗೆ ಇದು ಹೆಚ್ಚು ದೊರಕುತ್ತಿಲ್ಲ. ಸಂಖ್ಯೆ ಕ್ಷೀಣಿಸಿದಂತೆ ತೋರುತ್ತದೆ.

—- 

ಗಣ : ಸಿಪ್ರಿನಿಫಾರ್ಮಿಸ್‌(Cypriniformes)
ಕುಟುಂಬ : ಸಿಪ್ರಿನಿಡೀ (Cyprinidae)
ಉದಾ : ಕೆಲವು ಪುಂಟಿಯಸ್
ಜಾತಿಯ ಮೀನುಗಳು

) ಪುಂಟಿಯಸ್ಕಾವೇರಿಯನ್ಸಿಸ್‌(P. cauveriensis) : ಈ ಪ್ರಭೇಧದ ಮೀನಿನ ಕೆನ್ನೆಯ ಬಳಿ ಮಾಂಸದ ಮಡಿಕೆಯೊಂದಿದೆ ಬೆನ್ನಿನ ಈಜುರೆಕ್ಕೆಯ ಬುಡದಲ್ಲಿ ಹುರುಪೆ ಸಾಲುಗಳಿವೆ.

010_69_PP_KUH

) ಪುಂಟಿಯಸ್ಆರುಲಿಯಸ್‌(P. arulius) : ಇದಕ್ಕೆ ಎರಡು ಕಪ್ಪು ಬೊಟ್ಟುಗಳಿವೆ, ಒಂದು ಅಂಡಾಕಾರವಾಗಿ, ಅಗಲವಾಗಿ ಗುದ ಈಜುರೆಕ್ಕೆಯ ಬಳಿ ಮತ್ತು ಇನ್ನೊಂದು ಗುದ ಈಜುರೆಕ್ಕೆಯ ಮೇಲೆ ಇದೆ.

011_69_PP_KUH

) ಪುಂ. ಫಿಲಮೆಂಟೋಸಸ್‌(P. filamentosus) : ಪಾರ್ಶ್ವ ಪಂಕ್ತಿಯ ಮೇಲೆ ಗುದ ಈಜುರೆಕ್ಕೆಯ ನೇರಕ್ಕೆ ಕಡು ಕಪ್ಪು ಅಂಡಾಕಾರದ ಗುರುತಿದೆ.

012_69_PP_KUH

ಇತರ ಪ್ರಭೇಧಗಳು :

ಪುಂ. ಜರ್ದೋನಿ (P. jerdoni)

013_69_PP_KUH

ಪುಂ. ಆಂಫಿಬಿಯಸ್‌(P. amphibius)
ಪುಂ. ಬೊವಾನಿಕಸ್‌(P. bovanicus)
ಪುಂ. ಕೂರ್ಗೆನ್ನಿಸ್‌(P. coorgensis) ಇತ್ಯಾದಿ.

—- 

ಗಣ : ಸಿಪ್ರಿನಿಫಾರ್ಮಿಸ್‌(Cypriniformes)
ಕುಟುಂಬ : ಸಿಪ್ರಿನಿಡೀ (Cyprinidae)
ಉದಾ : ಶಾಸ್ತ್ರೀಯ ನಾಮ : ಪುಂಟಿಯಸ್
ಟಿಕ್ಟೊ (Puntius ticto)

ವಿತರಣೆ : ಜಲಕೃಷಿಕರಲ್ಲಿ ಹೆಚ್ಚು ಜನಪ್ರಿಯ ಮೀನು. ಸರ್ವವ್ಯಾಪಿ ೧೦ ಸೆಂ. ಮೀ. ಉದ್ದ ಬೆಳೆಯುತ್ತದೆ.

ಲಕ್ಷಣಗಳು : ನೀಳವಾದ ದೇಹ, ವಯಸ್ಸಾದ ಮೀನುಗಳ ಬೆನ್ನು ಎತ್ತರವಿರುತ್ತದೆ. ತಲೆ ಸಾಧಾರಣ ಚಪ್ಪಟೆ. ಸಣ್ಣಬಾಯಿ ಮುಂದಿನ ತುದಿಯಲ್ಲಿದೆ. ದಾಡಿ ಮೀಸೆಗಳಿಲ್ಲ. ಭುಜದ ಈಜುರೆಕ್ಕೆ ಸೊಂಟದ ಭಾಗದಿಂದ ಸ್ವಲ್ಪ ಹಿಂದಿದೆ. ಈ ಈಜುರೆಕ್ಕೆಯ ಕಡೆಯ ಕಡ್ಡಿ ಮೂಳೆಯದು, ತುಸು ಬಲವಾದುದು ಮತ್ತು ಇದರ ಹಿಂದಿನ ಅಂಚು ಗರಗಸಾಕಾರವಾಗಿದೆ. ಹುರುಪೆಗಳು ಸಾಧಾರಣ ಗಾತ್ರ. ಚೆನ್ನಾಗಿ ರೂಪಗೊಂಡು, ಪೂರ್ಣವಾದ ಪಾರ್ಶ್ವ ಪಂಕ್ತಿಯಲ್ಲಿ ೨೩ ರಿಂದ ೨೫ ಹುರುಪೆಗಳಿವೆ. ಕಂದು ಕಪ್ಪಿನಿಂದ ಹುಲ್ಲು ಹಸುರಿನವರೆಗೆ ಬದಲಾಗುವ ಮೈಬಣ್ಣ. ಪಕ್ಕೆಗಳು ಹೊಳಪು ಬೆಳ್ಳಿ. ತಳಭಾಗ ಬಿಳಿ. ಭುಜದ ಈಜುರೆಕ್ಕೆಯ ಮೇಲೆ ಅಡ್ಡ ಕಪ್ಪು ಗುರುತಿದೆ. ಇದೇ ತರಹ ಕಪ್ಪು ಗುರುತು ಬಾಲದ ಮೇಲಿದೆ. ಆದರೆ ಬಂಗಾರ ಅಂಚಿನ ಗುರುತು ಬಾಲದ ಬುಡದ ಬಳಿ ಇದೆ. ಈಜುರೆಕ್ಕೆಗಳು ನವಿಲು ಹಸಿರು, ಗಂಡು ಮೀನಿನಲ್ಲಿ ಬೆನ್ನು ಈಜುರೆಕ್ಕೆಗೆ ದಪ್ಪ ಕೆಂಪು ಅಂಚಿದೆ. ಇದರ ನೆರವಿನಿಂದ ಗಂಡು ಮೀನನ್ನು ಗುರುತಿಸಬಹುದು. ಹೆಣ್ಣು ಮೀನಿನ ಭುಜದ ಈಜುರೆಕ್ಕೆ ಬಿಳಿಚಿಕೊಂಡಂತೆ ಕಾಣುತ್ತದೆ. ಸಂತಾನೋತ್ಪತ್ತಿ ಕಾಲದಲ್ಲಿ ತೆಳು ಗುಲಾಬಿ ವರ್ಣ ಕಾಣಿಸಿಕೊಳ್ಳುತ್ತದೆ.

ಈ ಮೀನು ಆಹಾರಕ್ಕಿಂತ ಹೆಚ್ಚಾಗಿ ಅದರ ವರ್ಣ ವೈವಿಧ್ಯತೆಗೆ ಹೆಸರಾದುದು. ಜಲಕೃಷಿ ತೊಟ್ಟಿಗಳಲ್ಲಿ ಸಾಧುವಾಗಿ ವರ್ತಿಸುತ್ತದೆ.

—- 

ಗಣ : ಸಿಪ್ರಿನಿಫಾರ್ಮಿಸ್‌(Cypriniformes)
ಕುಟುಂಬ : ಸಿಪ್ರಿನಿಡೀ (Cyprinidae)
ಉದಾ : ಕಲ್ಲಂಗಡಿ ಬಾರ್ಬ್
ಶಾಸ್ತ್ರೀಯ ನಾಮ : ಪುಂಟಿಯಸ್
ಫೇಸಿಯೇಟಸ್‌(Puntius fasciatus)

014_69_PP_KUH

ವಿತರಣೆ : ದಕ್ಷಿಣ ಭಾರತದ ಕಾವೇರಿವರೆಗಿನ ಸಿಹಿನೀರು ಜಲಾನಯನ ಪ್ರದೇಶಗಳಿಗೆ ಸೀಮಿತವಾಗಿದೆ. ಕೆಳಗೆ ದಕ್ಷಿಣದಲ್ಲಿ ಕನ್ಯಾಕುಮಾರಿಯವರೆಗೂ ಹರಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ನದಿ, ಹೊಳೆ, ಹಳ್ಳ, ಕೆರೆ, ಕೊಳಗಳಲ್ಲಿ ವಿಶೇಷವಾಗಿ ದೊರಕುತ್ತದೆ.

ಇದರ ಪಾರ್ಶ್ವಪಂಕ್ತಿಯಲ್ಲಿ ೧೮ ರಿಂದ ೨೦ ಹುರುಪೆಗಳಿರುತ್ತವೆ. ಇದರ ಬಣ್ಣ ಮೊಬ್ಬು ಕೆಂಪು. ಮೂರು ನಾಲ್ಕು ಕಪ್ಪು ಪಟ್ಟಿಗಳಿವೆ. ಈಜುರೆಕ್ಕೆಗಳು ಕಡುಕೆಂಪಾಗಿದ್ದು ಕಪ್ಪು ಅಂಚು ಇರುತ್ತದೆ.

ಉದಾ : ಬಾರ್ಬ್
ಶಾಸ್ತ್ರೀಯ ನಾಮ : ಪುಂಟಿಯಸ್ಸರಾನ (Puntius sarana)

015_69_PP_KUH

ವಿತರಣೆ : ನದಿ, ಹಳ್ಳ, ಕೆರೆ, ಕೊಳಗಳಲ್ಲಿ ದೊರಕುತ್ತದೆ.

ಗಾತ್ರ : ಗರಿಷ್ಟ ಉದ್ದ ೩೦ ಸೆಂ. ಮೀ.

ಲಕ್ಷಣಗಳು : ಗೋಳಾಕಾರದ ದೇಹ, ದೊಡ್ಡ ಕಣ್ಣುಗಳು, ಸಾಧಾರಣ ಅಗಲವಾದ ಮುಂತುದಿಯಲ್ಲಿರುವ ಬಾಯಿ, ಎರಡು ಜೊತೆ ದಾಡಿ ಮೀಸೆಗಳಿವೆ. ಹಿಂದಿನ ಜೊತೆ ದಾಡಿ ಮೀಸೆಗಳು ಹೆಚ್ಚು ಉದ್ದ. ಬೆನ್ನಿನ ಈಜುರೆಕ್ಕೆ ತುಸು ಹಿಂದೆ ಬಾಲದ ಕಡೆಯಲ್ಲಿದೆ. ಇದರ ಕೊನೆಯ ಮುಳ್ಳು, ಮೂಳೆಯಿಂದಾದುದು, ಬಲವಾದುದು ಮತ್ತು ನವಿರಾದ ಗರಗಸ ಅಂಚು ಹೊಂದಿದೆ. ಸಾಧಾರಣ ಗಾತ್ರದ ಹುರುಪೆಗಳ ಹೊದಿಕೆ. ಪರಿಪೂರ್ಣವಾದ ಪಾರ್ಶ್ವಪಂಕ್ತಿ, ೨೬ ರಿಂದ ೨೮ ಹುರುಪೆಗಳನ್ನೊಳಗೊಳ್ಳುತ್ತದೆ.

ಬೆನ್ನುಭಾಗ ಆಲಿವ್‌ವರ್ಣ. ಪಕ್ಕೆಗಳು ಬೆಳ್ಳಿ ಮತ್ತು ಬಂಗಾರ ಛಾಯೆಕೂಡಿರುವವು. ಕೆನ್ನೆಗಳು ಬಂಗಾರ ಬಣ್ಣ, ದಾಡಿ ಮೀಸೆಗಳು ಕೆಂಪು ಕಂದು. ಈಜುರೆಕ್ಕೆಗಳ ಬಣ್ಣ ಕಂದುವಿನಿಂದ ಕಿತ್ತಳೆ ಬಣ್ಣದ ವರೆಗೆ ವ್ಯತ್ಯಾಸ. ಗುದ ಈಜುರೆಕ್ಕೆಯ ಹಿಂದೆ ಕಪ್ಪು ಗುರುತಿದೆ.

ಮೀನು ಸಾಕುವವರು ಇದನ್ನು ಹೆಚ್ಚಾಗಿ ಇಷ್ಟ ಪಡುತ್ತಾರೆ. ಬೇಗ ಮತ್ತು ಹೆಚ್ಚು ಗಾತ್ರ ಬೆಳೆಯುವುದರಿಂದ ವ್ಯಾಪಾರ ದೃಷ್ಟಿಯಿಂದ ಮತ್ತು ವ್ಯಾವಹರಿಕವಾಗಿಯೂ ಇದನ್ನು ಸಾಕುವುದು ಲಾಭದಾಯಕ.

—-

ಗಣ : ಸಿಪ್ರಿನಿಫಾರ್ಮಿಸ್ (Cypriniformes)
ಕುಟುಂಬ : ಸಿಪ್ರಿನಿಡೀ (Cyprinidae)
ಉದಾ : ಸಾಮಾನ್ಯ ಕಾರ್ಪ (Common carp)
ಶಾಸ್ತ್ರೀಯ ನಾಮ : ಸಿಪ್ರಿನಸ್
ಕಾರ್ಪಿಯೊ (Cyprinus carpio)

ವಿತರಣೆ : ಏಷ್ಯ ಮಧ್ಯಭಾಗದ ಇದರ ಮೂಲ ನಿವಾಸ. ಅಲ್ಲಿಂದ ಬೇರೆಡೆಗಳಿಗೆ ಹಂಚಲಾಗಿದೆ. ಇಂದು ಸರ್ವವ್ಯಾಪಿ. ಬಹಳ ಜನಪ್ರಿಯ ಸಾಕು ಮೀನು.

ಗಾತ್ರ : ೩೦-೪೫ ಸೆಂ. ಮೀ. ಉದ್ದ. ೧ ರಿಂದ ೨ ಕೆ.ಜಿ. ತೂಕ.

ಆಹಾರ : ಸರ್ವ ಆಹಾರ ಭಕ್ಷಕ. ಸಾಮಾನ್ಯವಾಗಿ ತಳದಲ್ಲಿ ಆಹಾರ ಸೇವಿಸುತ್ತದೆ.

ಲಕ್ಷಣಗಳು : ದಪ್ಪ ಮತ್ತು ಚಪ್ಪಟೆಯಾದ ದೇಹ. ತ್ರಿಕೋನಾಕಾರದ ತಲೆ, ಸಾಧಾರಣ ಗಾತ್ರ. ದುಂಡಗಿನ ಒರಟು ಮೂತಿ. ಓರೆಯಾದ ಪುಟ್ಟಬಾಯಿ. ಚಾಚಬಹುದಾದ ಮಾಂಸಲವಾದ ದಪ್ಪ ತುಟಿಗಳು. ಬೆನ್ನಿನ ಈಜುರೆಕ್ಕೆ ದೇಹದ ಮಧ್ಯಭಾಗದಲ್ಲಿದೆ. ಅದರಲ್ಲಿ ಒಂದು ಮುಳ್ಳು ಇದೆ. ಮುಳ್ಳು ದಪ್ಪ ಮತ್ತು ಅದರ ಒಳ ಅಂಚು ಗರಗಸಾಕಾರವಾಗಿ ತುರಿತುರಿಯಾಗಿದೆ. ದೊಡ್ಡ ಗಾತ್ರದ ಭುಜದ ಈಜುರೆಕ್ಕೆಗಳಿವೆ. ಅವು ದುಂಡಗಿವೆ. ಬಾಲದ ಈಜುರೆಕ್ಕೆ ಆಳವಾಗಿ ಕವಲೊಡೆದಿದೆ ಮತ್ತು ಅಂಚು ನಯವಾಗಿಲ್ಲ. ದೇಹದ ಮೇಲೆ ದೊಡ್ಡ ಹುರುಪೆಗಳ ಹೊದಿಕೆ ಇದೆ. ನೇರವಾದ ಪಾರ್ಶ್ವ ಪಂಕ್ತಿಯುಂಟು ಮತ್ತು ಅದರಲ್ಲಿ ೩೦ ರಿಂದ ೪೦ ಹುರುಪೆಗಳಿವೆ.

ಮೀನು ವಾಸಿಸುವ ಸ್ಥಳಗಳನ್ನನುಸರಿಸಿ ಮತ್ತು ಕೊಳದ ತಳದ ಪರಿಸರವನ್ನವಲಂಬಿಸಿ ದೇಹದ ಬಣ್ಣ ಬದಲಾಗುತ್ತದೆ. ಸಾಮಾನ್ಯವಾಗಿ ಬೆನ್ನು ಭಾಗ ಆಲಿವ್‌ಹಸಿರು, ಪಕ್ಕೆಗಳು ಬಿಳುಪು ಅಥವ ತೆಳು ಬಂಗಾರ ಬಣ್ಣ. ಈಜುರೆಕ್ಕೆಗಳ ಬಣ್ಣ ಹಳದಿ, ಕೆಂಪು ಅಥವಾ ಬಂಗಾರವರ್ಣ.

ಸಂತಾನಾಭಿವೃದ್ಧಿ : ಸಂತಾನಾಭಿವೃದ್ಧಿ ಕಾಲದಲ್ಲಿ ಗುದ ಈಜುರೆಕ್ಕೆ ಹೊಳಪು ಕೆಂಪು ಬಣ್ಣ ತಾಳುತ್ತದೆ. ಈಗ ಈ ಮೀನು ವರ್ಷವಿಡೀ ಸಂತಾನೋತ್ಪತ್ತಿ ನಡೆಸುತ್ತದೆ. ಎಲ್ಲೆಡೆ ಇದರ ಮೊಟ್ಟೆಗಳು, ಮರಿಗಳು ದೊರಕುತ್ತವೆ. ವಿಶೇಷವಾಗಿ ಸ್ವಾಭಾವಿಕವಾಗಿ ಜನವರಿ – ಏಪ್ರಿಲ್‌ತಿಂಗಳುಗಳಲ್ಲಿ ಸಂತಾನೋತ್ಪತ್ತಿ ನಡೆಸುತ್ತದೆ. ನಿಂತ ನೀರುಗಳಲ್ಲಿಯೂ ಸಂತಾನೋತ್ಪತ್ತಿ ನಡೆಸುತ್ತದೆ. ೧ ವರ್ಷದಲ್ಲಿ ೧ ರಿಂದ ೨ ಕೆ.ಜಿ. ಬೆಳೆಯುತ್ತದೆ. ಒಂದು ವರ್ಷಕ್ಕೆಲ್ಲಾ ಹೆಣ್ಣು ಮೀನು ಲಿಂಗ ಪ್ರೌಢತನಗಳಿಸುತ್ತದೆ. ಮೊಟ್ಟೆಗಳು ಹಳದಿ ಬಣ್ಣ, ದುಂಡು ಆಕಾರ, ೧೩೩ ಮಿ. ಮೀ. ವ್ಯಾಸ ಇರುತ್ತವೆ. ಅಂಟು ಸ್ವಭಾವ, ತಳಕ್ಕೆ ಮುಳುಗಿ ಜಲಕಳೆಗಳಿಗೆ ಅಂಟಿಕೊಳ್ಳುತ್ತವೆ. ಇವುಗಳನ್ನು ಸಂಗ್ರಹಿಸಿ ಸಾಕುತೊಟ್ಟಿಗಳಿಗೆ ವರ್ಗಾಯಿಸುತ್ತಾರೆ.

ಸ್ವಭಾವ : ಕೆರೆ, ಕೊಳ, ಜಲಾಶಯಗಳಲ್ಲಿ ಯಶಸ್ವಿಯಾಗಿ ಸಾಕಬಹುದು. ಸಾಮಾನ್ಯವಾಗಿ ತಳವಾಸಿ. ಬಹಳ ಬೇಗ ಬೆಳೆಯುತ್ತದೆ. ರುಚಿಯಾದ ಮಾಂಸ, ಸುಲಭ ಒಗ್ಗುವಿಕೆ, ಸರಳ ಸಂತಾನೋತ್ಪತ್ತಿ ಕ್ರಮಗಳಿಂದಾಗಿ ಜನಪ್ರಿಯವಾಗಿದೆ. ಉಳಿದೆಲ್ಲ ಸಾಕು ಮೀನುಗಳಿಗಿಂತ ಉತ್ತಮ ಮತ್ತು ಲಾಭದಾಯಕ. ರೋಗನಿರೋಧಕ ಶಕ್ತಿ ಹೆಚ್ಚು. ಪ್ರತಿ ಹೆಕ್ಟೇರಿಗೆ ೫೦೦ ರಿಂದ ೬೦೦ ಕೆ.ಜಿ. ಉತ್ಪಾದನೆಯಾಗುತ್ತದೆ.

ಈ ಮೀನಿನಲ್ಲಿ ಅನೇಕ ಉಪಪ್ರಭೇಧಗಳು, ವಿಧಿಗಳು, ಉಪವಿಧಿಗಳಿವೆ. ೧೯೩೯ ರಲ್ಲಿ ಮೊಟ್ಟ ಮೊದಲಿಗೆ ಇದನ್ನು ಭಾರತಕ್ಕೆ ತಂದು ನೀಲಗಿರಿ ಕೊಳಗಳಲ್ಲಿ ಸಾಕಲಾರಂಭಿಸಿದಂದಿನಿಂದ ಭಾರತಾದ್ಯಂತ ಹರಡಿದೆ. ಹುರುಪೆ ಹೊಂದಿದ ಮತ್ತು ಹುರುಪೆ ರಹಿತ ಎರಡು ವಿಧಗಳಿವೆ. ಇದರಲ್ಲಿ ಹುರುಪೆಗಳು ಕ್ರಮವಾಗಿ ಸಾಲುಗಳಲ್ಲಿವೆ. ಇದು ಹುರುಪೆ ಕಾರ್ಪೆಂದು ಹೆಸರಾಗಿದೆ. ೩೩ ರಿಂದ ೩೫ ಹುರುಪೆಗಳನ್ನೊಳಗೊಂಡ ಪಾರ್ಶ್ವಪಂಕ್ತಿ ಇರುವ ಕಾರ್ಪ್ ವಿಧವೂ ಇದೆ. (ಸಿ. ಕಾ. ಕಮ್ನಾನಿಸ್‌) ಸಂಪೂರ್ಣ ಹುರುಪೆ ರಹಿತವಾದ, ಕಿರು ಜಾಡಿನಂತೆ ಕಾಣುವ ಪಾರ್ಶ್ವಪಂಕ್ತಿ ಇರುವ ತೊಗಲು ಕಾರ್ಪ್, ಸಿ.ಕಾ. ಹಿಮೆಟೊಪೈರಸ್

ಇದು ಸ್ವಾಭಾವಿಕವಾಗಿ ಗುಂಪು ಜೀವಿ. ಸಾಮಾನ್ಯವಾಗಿ ತಳವಾಸಿ.