ಹಳದಿ ಕಣ್ಣಿನ ಹರಟೆಮಲ್ಲ (YELLOWEYED BABBLER)
ಕ್ರೈಸೊಮ್ಮ ಸೈನೆಸ್ಸ್ (
Chrysomma sinense)

342_69_PP_KUH

ಗಾತ್ರ : ೧೮ ಸೆಂ.ಮೀ.

ಆವಾಸ : ಮುಳ್ಳಿನ ಕುರುಚಲು ಕಾಡು, ಮರಗಳುಳ್ಳ ಹುಲ್ಲು ಗಾವಲು, ಮತ್ತು ವ್ಯವಸಾಯ ಭೂಮಿಯ ಹತ್ತಿರದ ಕಾಡು. ಸ್ಥಳೀಯ ಪಕ್ಷಿ.

ಲಕ್ಷಣಗಳು : ಗಂಡು ಹೆಣ್ಣು ಒಂದೇ ತೆರ. ಹಳದಿ ಕಣ್ಣು ಮತ್ತು ಕಿತ್ತಳೆ ಬಣ್ಣದ ಕಣ್ಣು ಉಂಗುರ ಪ್ರಮುಖ ಲಕ್ಷಣಗಳು. ಬಿಳಿ ಗಂಟಲು ಮತ್ತು ಎದೆ.

ಆಹಾರ : ಜೇಡ ಮತ್ತು ಕೀಟಗಳು.

ಸಂತಾನಾಭಿವೃದ್ಧಿ : ಜೂನ್‌ನಿಂದ ಸೆಪ್ಟೆಂಬರ್. ಹುಲ್ಲಿನ ಬಟ್ಟಲಿನಂತಹ ಗೂಡು. ಜೇಡನ ಬಲೆಯ ಹೊದಿಕೆ ೪-೫ ಹಳದಿಬಿಳಿ ಮೊಟ್ಟೆಗಳು.

—- 

ಸಾಮಾನ್ಯ ಹರಟೆಮಲ್ಲ (COMMON BABBLER)
ಟುರ‍್ಯಿಡಿಸ್ ಕಾಡೇಟಸ್ (
Turdoides caudatus)

343_69_PP_KUH

ಗಾತ್ರ : ೨೩ ಸೆಂ.ಮೀ.

ಆವಾಸ : ಮುಳ್ಳು ಪೊದೆಯೆ ಕಾಡು, ಹುಲ್ಲುಗಾವಲು, ವ್ಯವಸಾಯ ಭೂಮಿ ಮೊದಲಾದೆಡೆ ಇರುವ ಇದು ಸ್ಥಳೀಯ ಪಕ್ಷಿ.

ಲಕ್ಷಣಗಳು : ಗಂಡುಹೆಣ್ಣು ಒಂದೇ ತೆರನಾಗಿವೆ. ಗೆರೆಗಳಿರುವ ಮಣ್ಣಿನ ಕಂದು ಬಣ್ಣದ ಮೇಲ್ಭಾಗ, ಕಂದುರೆಕ್ಕೆಗಳು, ಉದ್ದನೆಯ ಅಡ್ಡ ಗೆರೆಗಳ ಕಂದು ಬಣ್ಣದ ಬಾಲ, ಮಸಲು ಬಿಳಿಗಂಟಲು, ತಿಳಿಕಂದು ಹೊಟ್ಟೆ ಇರುತ್ತದೆ.

ಆಹಾರ : ಕೀಟಗಲೂ, ಚಿಕ್ಕಪುಟ್ಟ ಹಣ್ಣುಗಳು ಮತ್ತು ಮಕರಂದ.

ಸಂತಾನಾಭಿವೃದ್ಧಿ : ಮಾರ್ಚ್‌ನಿಂದ ಜುಲೈನ ಅವಧಿ. ಮುಳ್ಳುಗಳಿರುವ ಪೊದೆಯಲ್ಲಿ ಹುಲ್ಲು, ಎಳೆಗಳ ಬಟ್ಟಲಿನಂತಹ ಗೂಡು ರಚಿಸಿ ೩-೪ ಮೊಟ್ಟೆಗಳನ್ನಿಡುತ್ತವೆ. ಕೋಗಿಲೆ ಜಾತಿಯ ಹಕ್ಕಿಗಳಂತೆ ಹರಟೆಮಲ್ಲ ಗೂಡಿನ ಪರಾವಲಂಬಿಗಳು.

—- 

ದೊಡ್ಡ ಬೂದು ಹರಟೆಮಲ್ಲ (LARGE GREY BABBLER)
ಟು. ಮೆಲ್ಕೊಲ್ಮಿ (
Turdoides malcolmi)

344_69_PP_KUH

ಗಾತ್ರ : ೨೮ ಸೆಂ.ಮೀ.

ಆವಾಸ : ಶುಷ್ಕ ಕುರುಚಲು ಕಾಡು. ವ್ಯವಸಾಯ ಭೂಮಿ ಮುಂತಾದ ಕಡೆ ಇರುವ ಸ್ಥಳೀಯ ಪಕ್ಷಿ.

ಲಕ್ಷಣಗಳು : ಗಂಡುಹೆಣ್ಣುಗಳ ನಡುವೆ ವ್ಯತ್ಯಾಸವಿಲ್ಲ. ಕಂದು ಬಣ್ಣದ ಹಿನ್ನೆಲೆಯಲ್ಲಿ ಕಡು ಕಂದು ಬಣ್ಣದ ರೇಖೆಗಳು. ರೆಕ್ಕೆಗಳ ತುದಿ ಮತ್ತು ಬಾಲದ ತುದಿ ಹೊಗೆ ಕಪ್ಪು, ಬಾಲದ ಅಂಚುಬಿಳಿ. ೮-೧೦ರ ಗುಂಪಿನೊಂದಿಗೆ ಸದಾಗದ್ದಲ ಮಾಡುವುದು ಪ್ರಮುಖ ಲಕ್ಷಣ.

ಆಹಾರ : ಕೀಟ, ಕಾಳು ಮತ್ತು ಹಣ್ಣುಗಳನ್ನು ತಿನ್ನುತ್ತವೆ.

ಸಂತಾನಾಭಿವೃದ್ಧಿ : ಹೆಚ್ಚು ಕಡಿಮೆ ವರ್ಷವಿಡಿ. ತುಂಬ ಎಲೆಗಳಿರುವ ಮರಗಳಲ್ಲಿ ಹುಲ್ಲು, ಬೇರು, ತೊಗಟೆಗಳ ಬಟ್ಟಲಿನಂತಹ ಗೂಡು ರಚಿಸಿ ೩-೪ ತಿಳಿ ನೀಲಿ ಮೊಟ್ಟೆಗಳನ್ನಿಡುತ್ತವೆ.

—- 

ಕೆಂಗಂದು ಹರಟೆಮಲ್ಲ (RUFOUS BABBLER)
ಟು. ಸಬ್ ರೂಫಸ್ (
Turdoides subrufus)

345_69_PP_KUH

ಗಾತ್ರ : ೨೫ ಸೆಂ.ಮೀ.

ಆವಾಸ : ಕಾಡುಗಳ ಅಂಚಿನಲ್ಲಿ ಎತ್ತರದ ಬಿದಿರು ಮೆಳೆಗಳಲ್ಲಿರುವ ಸ್ಥಳೀಯ ಪಕ್ಷಿ.

ಲಕ್ಷಣಗಳು : ಗಂಡು ಹೆಣ್ಣು ಒಂದೇ ತೆರನಾಗಿವೆ. ಅಲಿವ್ ಕಂದಿನಲ್ಲಿ ಕೆಂಗಂದು ಬಿತ್ತಿರುವ ಬಣ್ಣ, ಹೊಟ್ಟೆ ಭಾಗ ಕಡುಕಂದು. ಕಪ್ಪು ಹಳದಿ ಕೊಕ್ಕು, ಹಣೆ ಬೂದು ಇರುತ್ತದೆ.

ಆಹಾರ : ಕೀಟ, ಹಣ್ಣು ಮತ್ತು ಮಕರಂದ.

ಸಂತಾನಾಭಿವೃದ್ಧಿ : ಹೆಚ್ಚಾಗಿ ಫೆಬ್ರವರಿಯಿಂದ ಮೇವರೆಗಿನ ಅವಧಿ. ಎಲೆ, ಹುಲ್ಲುಗಳಿಂದ ದೊಡ್ಡದು ಎನ್ನಬಹುದಾದ ಬಟ್ಟಲಿ ನಂತಹ ಗೂಡು ರಚಿಸಿ ೪ ದಟ್ಟ ನೀಲಿ ಬಣ್ಣದ ಮೊಟ್ಟೆಗಳನ್ನಿಡುತ್ತವೆ.

—- 

ಕಾಡು ಹರಟೆಮಲ್ಲ (JUNGLE BABBLER)
ಟು. ಸ್ರೈಯೇಟಸ್ (
Turdoides striatus)

346_69_PP_KUH

ಗಾತ್ರ : ೨೫ ಸೆಂ.ಮೀ.

ಆವಾಸ : ಎಲೆ ಉದುರುವ ಕಾಡು ಮತ್ತು ವ್ಯವಸಾಯದ ಭೂಮಿಯ ಕಡೆ ಕಾಣುವ ಸ್ಥಳೀಯ ಪಕ್ಷಿ.

ಲಕ್ಷಣಗಳು : ಗಂಡು ಹೆಣ್ಣುಗಳ ನಡುವೆ ವ್ಯತ್ಯಾಸವಿಲ್ಲ. ಸಂಪೂರ್ಣವಾಗಿ ಕಂದುಬಣ್ಣದ ಹಕ್ಕಿ. ಬಾಲ ಮತ್ತು ರೆಕ್ಕೆಯ ತುದಿ ಕಡು ಕಂದು, ಹಳದಿ ಕೊಕ್ಕು. ಏಳು ಭಗಿನಿಯರು ಎಂದೇ ಪ್ರಸಿದ್ಧವಾದ ಏಳರ ಗುಂಪಿನಲ್ಲಿ ಸದಾ ಗಲಾಟೆ ಮಾಡುತ್ತಿರುವ ಸಾಮಾನ್ಯ ಹಕ್ಕಿ.

ಆಹಾರ : ಜೇಡ, ಜಿರಳೆ ಮತ್ತು ಇತರ ಕೀಟಗಳು ಕಾಳು, ಹಣ್ಣು ತಿನ್ನುವುದೂ ಉಂಟು.

ಸಂತಾನಾಭಿವೃದ್ಧಿ : ಹೆಚ್ಚು ಕಡಿಮೆ ವರ್ಷವಿಡಿ. ಗೂಡು ಉಳಿದ ಹರಟೆಮಲ್ಲ ಹಕ್ಕಿಗಳಂತೆ ಇರುತ್ತದೆ. ೩-೪ ನೀಲಿ ಮೊಟ್ಟೆಗಳನ್ನಿಡುತ್ತದೆ.