ಕ್ವಾಕರ್ ಹರಟೆಮಲ್ಲ (QUAKAR BABBLER)
ಅಲ್ಸಿಪ್ಪೆ ಪಾಯಿಯಿಸಿಫಾಲ (
Alcippe poioicephala)

347_69_PP_KUH

ಗಾತ್ರ : ೧೫ ಸೆಂ.ಮೀ.

ಆವಾಸ : ಅರಣ್ಯದ ಕೆಳಮಟ್ಟದ ಸಸ್ಯಗಳು, ದ್ವಿತೀಯ ಹಂತದ ಸಸ್ಯಗಳು. ಎಲೆ ಉದುರುವ ಕಡು ಮೊದಲಾದೆಡೆ ಇರುವ ಸ್ಥಳೀಯ ಪಕ್ಷಿ.

ಲಕ್ಷಣಗಳು : ಗಂಡುಹೆಣ್ಣು ಒಂದೇ ತೆರನಾಗಿವೆ. ಚಿಕ್ಕ ಆಲಿವ್ ಕಂದು ಬಣ್ಣದ ಬಾಬ್ಲರ್ ಬೂದು ತಲೆ ಮತ್ತು ಕುತ್ತಿಗೆ ; ತಿಳಿಬೂದು ಕೆಳಭಾಗ, ತುಕ್ಕುಕಂದು ರೆಕ್ಕೆ ಮತ್ತು ಬಾಲ ಬೆನ್ನು ತಿಳಿಹರಿಸು.

ಆಹಾರ : ಜೇಡ, ಕೀಟ, ಮಕರಂದ

ಸಂತಾನಾಭಿವೃದ್ಧಿ : ಮಳೆಗಾಲದ ಸಮಯ, ಬೇರು, ನಾರು, ಲೈಖೆನ್ ಮೊದಲಾದವುಗಳಿಂದ ಬಟ್ಟಲಿನಂತಹ ಒರಟು ಗೂಡು ರಚಿಸಿ ೨-೩ ತಿಳಿಬೂದು ಮೊಟ್ಟೆಗಳನ್ನಿಡುತ್ತದೆ.

 

ನೀಲಗಿರಿ ನಗುವಹಕ್ಕಿ (NILGIRI LAUGHING THRUSH)
ಗ್ಯಾ. ಕ್ಯಾಚಿನ್ನನ್ಸ್ (
Garrulax cachinnans)

348_69_PP_KUH

ಗಾತ್ರ : ೩೦ ಸೆಂ.ಮೀ.

ಆವಾಸ : ಪಶ್ಚಿಮ ಘಟ್ಟದ ಕುರುಚಲು ಕಾಡು, ಶೋಲಾ, ತೋಟದ ಕಡೆ ಇರುವ ಸ್ಥಳೀಯ ಪಕ್ಷಿ.

ಲಕ್ಷಣಗಳು : ಗಂಡುಹೆಣ್ಣುಗಳು ಒಂದೇ ತೆರನಾಗಿವೆ. ಆಲಿವ್ ಕಂದು ಮತ್ತು ಕೆಂಗಂದು ಬಣ್ಣದ ಹಕ್ಕಿ. ಹುಬ್ಬು ಬಿಳಿ ಎದ್ದು. ಕಾಣುತ್ತದೆ. ಕೊಕ್ಕು ಮತ್ತು ಗಲ್ಲ ಕಪ್ಪು. ಬೂದು ತಲೆ ಹೊಟ್ಟೆ ಎದೆಕೆಂಗಂದು ಉಳಿದಂತೆ ಆಲಿವ್ ಕಂದುಬಣ್ಣ.

ಆಹಾರ : ಚೆರಿ, ಪೇರಳೆ ಹಣ್ಣಗಳು ಮತ್ತು ಕೀಟ.

ಸಂತಾನಾಭಿವೃದ್ಧಿ : ಮೇ-ಜೂನ್ ತಿಂಗಳ ಅವಧಿ. ಲೈಖೆನ್, ಮೋಸ್, ಬೇರು, ನಾರುಗಳ ಬಟ್ಟಲಿನಂತಹ ಗೂಡನ್ನು ಸಣ್ಣ ಮರಗಳಲ್ಲಿ ರಚಿಸಿ ಕೆಂಪು ಚುಕ್ಕೆಗಳಿರುವ ೨-೩ ತಿಳಿ ನೀಲಿ ಮೊಟ್ಟೆಗಳನ್ನಿಡುತ್ತದೆ.

 

ನಗುವ ಹಕ್ಕಿ (LAUGHING THRUSH)
ಗ್ಯಾರ‍್ರುಲ್ಯಾಕ್ಸ್ ಮಾನಿಲಿಗರ್ (
Garrulax moniliger)

349_69_PP_KUH

ಗಾತ್ರ : ೨-೩ ಸೆಂ.ಮೀ.

ಆವಾಸ : ತೇವವಿರುವ ನಿತ್ಯ ಹರಿದ್ವರ್ಣ ಕಾಡು (ಪಶ್ಚಿಮ ಘಟ್ಟ). ಸ್ಥಳೀಯ ಪಕ್ಷಿ.

ಲಕ್ಷಣಗಳು : ಗಂಡು ಹೆಣ್ಣು ಒಂದೇ ತೆರನಾಗಿವೆ. ತಲೆ, ಕುತ್ತಿಗೆ, ಬಳಪದ ಬೂದು, ಹೊಟ್ಟೆ ಕೆಂಗಂದು, ದಡ್ಡ ಕಂದು ರೆಕ್ಕೆಗಳು, ಗಂಟಲು ಶುದ್ಧ ಬಿಳಿ, ಕಣ್ಣುಗಳ ಮೂಲಕ ಕರಿ ಬೂದು ಪಟ್ಟಿ, ಬಾಲ ಕಪ್ಪುಕಂದು ಇರುತ್ತದೆ.

ಆಹಾರ : ಹಣ್ಣು ಮತ್ತು ಕಿಟಗಳನ್ನು ತಿನ್ನುತ್ತದೆ.

ಸಂತಾನಾಭಿವೃದ್ಧಿ : ಮಳೆಗಾಲದ ಸಮಯ. ಬೇರು, ನಾರು, ಬಳ್ಳಿ ತೊಗಟೆಗಳ ಸ್ವಲ್ಪ ದೊಡ್ಡದೆನಿಸಬಹುದಾದ ಗೋಲಾಕೃತಿಯ ಗೂಡು ರಚಿಸಿ ೩-೪ ಬಿಳಿ ಮೊಟ್ಟೆಗಳನ್ನಿಡುತ್ತದೆ.

 

ನೀಲಿತಲೆ ನಗುವ ಹಕ್ಕಿ (BLUEHEADED ROCK THRUSH)
ಮಾಂಟಿಕೋಲ ಸಿನೆಲೊರಿಂಕಸ್ (
Monticola cinclorhynchus)

350_69_PP_KUH

ಗಾತ್ರ : ೧೭ ಸೆಂ.ಮೀ.

ಆವಾಸ : ನೆರಳಿರುವ ಕಾಡು ಪ್ರದೇಶ, ತೋಪು, ವಲಸೆ ಪಕ್ಷಿ.

ಲಕ್ಷಣಗಳು : ಗಂಡು ತಲೆ, ಗಂಟಲು, ಗಲ್ಲ ಆಕಾಶನೀಲಿ. ರೆಕ್ಕೆಗಳ ಮೇಲೆ ಬಿಳಿ ತೇಪೆ, ಸೊಂಟ, ಎದೆ, ಹೊಟ್ಟೆ ಕಿತ್ತಳೆಕಂದು. ರೆಕ್ಕೆಗಳ ಬುಡದಲ್ಲಿ ಸ್ವಲ್ಪ ನೀಲಿ. ಹೆಣ್ಣು ಬೂದುಕಂದು ಮೇಲ್ಭಾಗ, ಮಾಸಲು ಬಿಳಿ ಕೆಳಭಾಗದಲ್ಲೂ ಚುಕ್ಕೆಗಳು.

ಆಹಾರ : ಕೀಟ, ಹಣ್ಣು, ಮಕರಂದ.

ಸಂತಾನಾಭಿವೃದ್ಧಿ : ಹಿಮಾಲಯದಲ್ಲಿ, ಪಶ್ಚಿಮ ಘಟ್ಟಕ್ಕೆ ಚಳಿಗಾಲದಲ್ಲಿ ವಲಸೆ.

 

ಕೇರಳ ನಗುವ ಹಕ್ಕಿ (KERALA LAUGHING THRUSH)
ಗ್ಯಾರುಲ್ಯಾಕ್ಸ್ ಜೆರೊನಿ (
Garrulax jerdoni)

351_69_PP_KUH

ಗಾತ್ರ : ೨೦ ಸೆಂ.ಮೀ.

ಆವಾಸ : ಪಶ್ಚಿಮ ಘಟ್ಟದ ಸ್ಥಳೀಯ ಪಕ್ಷಿ. ಗಿರಿಧಾಮ, ತೋಟಗಳು. ಹಣ್ಣುಗಳಿರುವ ನೆಡುತೋಪು ಮುಂತಾದೆಡೆ ಇರುತ್ತದೆ.

ಲಕ್ಷಣಗಳು : ಗಂಡು-ಹೆಣ್ಣು ಒಂದೇ ತೆರನಾಗಿವೆ. ಹಣೆ, ನೆತ್ತಿ, ಹೊಗೆ ಕಂದು, ಹುಬ್ಬು ಬಿಳಿ, ಕಣ್ಣುಗಳ ಮೂಲಕ ಕಪ್ಪು ರೇಖೆ, ಗಲ್ಲ, ಎದೆ, ಬೂದು, ಎದೆಯ ಮೇಲೆ ಕಂದು ಗೆರೆಗಳು, ಹೊಟ್ಟೆ ಕೆಂಗಂದು ಇರುತ್ತದೆ.

ಆಹಾರ : ಚೆರಿಯಂತಹ ಹಣ್ಣುಗಳು ಮತ್ತು ಕೀಟಗಳು.

ಸಂತಾನಾಭಿವೃದ್ಧಿ : ಡಿಸೆಂಬರ‍್ನಿಂದ ಜೂನ್‌ವರೆಗಿನ ಅವಧಿ. ಒರಟು ಹುಲ್ಲುಗಳ ಬಟ್ಟಲಿನಂತಹ ಗೂಡು ರಚಿಸಿ ಕೆಂಪು ಗುರುತುಗಳಿರುವ ಎರಡು ನೀಲಿ ಮೊಟ್ಟೆಗಳನ್ನಿಡುತ್ತದೆ.