ನೀಲಿ ರಾಕ್ ನಗುವ ಹಕ್ಕಿ (BLUEROCK THRUSH)
ಮಾಂಟಿಕೋಲ ಸೋಲಿಟೇರಿಯಸ್ (
Monticola Solitarius)

352_69_PP_KUH

ಗಾತ್ರ : ೨೩ ಸೆಂ.ಮೀ.

ಆವಾಸ : ಕಲ್ಲುಬಂಡೆಗಳ ಮೇದಾನ ಪ್ರದೇಶ, ಬಂಡ ತುದಿ, ಮನುಷ್ಯ ಆವಾಸ, ವಲಸೆಪಕ್ಷಿ.

ಲಕ್ಷಣಗಳು : ಗಂಡು ಇಂಡಿಗೊ ನೀಲಿ, ಕಂದು ರೆಕ್ಕೆಗಳು ಮತ್ತು ಬಾಲ. ಹೆಣ್ಣು ಬೂದು ಕಂದು ಮೇಲ್ಭಾಗ. ಬಿಳಿ ಕೆಳಭಾಗದಲ್ಲಿ ಕಂದು ಬಣ್ಣದ ಅಡ್ಡಗೆರೆಗಳು.

ಆಹಾರ : ಕೀಟಗಳು, ಚಿಕ್ಕಪುಟ್ಟ ಹಕ್ಕಿಗಳು.

ಸಂತಾನಾಭಿವೃದ್ಧಿ : ಹಿಮಾಲಯದಲ್ಲಿ, ಚಳಿಗಾಲದಲ್ಲಿ ವಲಸೆ ಬರುವುದು.

—- 

ಕೆಂಪುಎದೆ ನೊಣ ಹಿಡುಕ (REDBREASTED FLYCATCHER)
ಮ್ಯೂಸಿಕಾಪ ಪಾರ‍್ವ (
Muscicapa parva)

353_69_PP_KUH

ಗಾತ್ರ : ೧೨-೧೩ ಸೆಂ.ಮೀ.

ಆವಾಸ : ತೆರೆದ ಕಾಡು, ಪೊದೆಗಳು ಮತ್ತು ಮರಗಳಿರುವ ಪ್ರದೇಶ ವಲಸೆ ಪಕ್ಷಿ.

ಲಕ್ಷಣಗಳು : ಗಂಡುಮಾಸಲು ಕಂದು ಮೇಲ್ಭಾಗ, ಬಾಲದ ಕೆಳಗೆ ಬಿಳಿ, ಅಂಚು ಕಪ್ಪು, ಕೆಂಗಂದು ಕಿತ್ತಳೆ ಗಲ್ಲ, ಎದೆ ಮತ್ತು ಹೊಟ್ಟೆಯ ಭಾಗ ಬಿಳಿಚು. ತಲೆ, ಕೆನ್ನೆ ಬೂದು. ಹೆಣ್ಣು, ಬಿಳಿ ಗಂಟಲು, ತಿಳಿ ಕೆಂಪು ಎದೆ. ಹೊಟ್ಟೆ ಹೆಚ್ಚು ಬಿಳಿ ಇರುತ್ತದೆ.

ಆಹಾರ : ಹಾರುವ ಚಿಕ್ಕ ಕೀಟಗಳನ್ನು ತಿನ್ನುತ್ತದೆ.

ಸಂತಾನಾಭಿವೃದ್ಧಿ : ಪಶ್ಚಿಮ ಹಿಮಾಲಯ. ಚಳಿಗಾಲದಲ್ಲಿ ವಲಸೆ ಬರುತ್ತದೆ.

—- 

ಕೆಂಗಂದು ಬಾಲದ ನೊಣಹಿಡುಕ (RUFOUSTAILED FLYCATCHER)
ಮ್ಯೂಸಿಕ್ಯಾಪಾ ರುಬಿಕ್ಯುಲಾಯ್ಡಿಸ್ (
Muscicapa rubeculoides)

354_69_PP_KUH

ಗಾತ್ರ : ೧೪ ಸೆಂ.ಮೀ.

ಆವಾಸ : ಕಾಡು, ವಲಸೆ ಪಕ್ಷಿ.

ಲಕ್ಷಣಗಳು : ಗಂಡುಹೆಣ್ಣು ಒಂದೇ ತೆರನಾಗಿವೆ. ಮಾಸಲು ಬಣ್ಣ, ಬಾಲಕೆಂಗಂದು, ಕಣ್ಣಿನ ಸುತ್ತಲೂ ಬಿಳಿಚು ಹಳದಿ, ಗಂಟಲು ಎದೆ ಬೂದುಕಂದು, ಹೊಟ್ಟೆ ಬಿಳಿ ಇರುತ್ತದೆ.

ಆಹಾರ : ನೊಣಗಳಂತಹ ಕೀಟಗಳನ್ನು ತಿನ್ನುತ್ತದೆ.

ಸಂತಾನಾಭಿವೃದ್ಧಿ : ಪಶ್ಚಿಮ ಹಿಮಾಲಯ, ನೇಪಾಳದಲ್ಲಿ, ಚಳಿಗಾಲದಲ್ಲಿ ವಲಸೆ ಬರುತ್ತವೆ.

—- 

ಕಂದು ಎದೆಯ ನೊಣ ಹಿಡುಕು (BROWNBREASTED FLYCATCHER)
ಮ್ಯೂ. ಮುಟ್ಟುಯಿ (
Muscicapa muttui)

355_69_PP_KUH

ಗಾತ್ರ : ೧೪ ಸೆಂ.ಮೀ.

ಆವಾಸ : ನಿತ್ಯ ಹರಿದ್ವರ್ಣದ ಕಾಡು. ವಲಸೆ ಪಕ್ಷಿ.

ಲಕ್ಷಣಗಳು : ಗಂಡುಹೆಣ್ಣು ಒಂದೇ ತೆರನಾಗಿವೆ. ಕಂದು ನೊಣ ಹಿಡುಕವನ್ನು ಹೋಲುತ್ತದೆ. ಆದರೆ ಹೆಚ್ಚು ಕಂದು. ಕೊಕ್ಕು ತುಸು ದೊಡ್ಡದು. ಎದೆ, ಗಂಡಲು ಬೂದುಕಂದು ; ಮೇಲ್ಭಾಗ ಕಡುಕಂದು, ಹಳದಿ ಕಾಲುಗಳು. ರೆಕ್ಕೆಗಳ ಅಂಚು ತುಕ್ಕು ಕಂದು ಬಣ್ಣದಿಂದ ಕೂಡಿರುತ್ತದೆ.

ಆಹಾರ : ನೊಣದಂತಹ ಹಾರುವ ಕೀಟಗಳನ್ನು ತಿನ್ನುತ್ತದೆ.

ಸಂತಾನಾಭಿವೃದ್ಧಿ : ಎತ್ತರದ ಆಗ್ನೇಯ ರಾಜ್ಯಗಳಲ್ಲಿ. ಚಳಿಗಾಲದಲ್ಲಿ ವಲಸೆ ಬರುತ್ತವೆ.

—- 

ಬಿಳಿ ಹುಬ್ಬಿನ (ನೀಲಿ) ನೊಣ ಹಿಡುಕ (WHITEBROWED FLYCATCHER)
ಮ್ಯೂ. ಸುಪರ‍್ಲಿಯಾರಿಸ್ (
Muscicapa superciliaris)

356_69_PP_KUH

ಗಾತ್ರ : ೧೦-೧೨ ಸೆಂ.ಮೀ.

ಆವಾಸ : ಕಾಡು, ಮರಗಳಿರುವ ಇತರ ಪ್ರದೇಶ. ವಲಸೆ ಪಕ್ಷಿ.

ಲಕ್ಷಣಗಳು : ಗಂಡು ಕಡುನೀಲಿ ಮೇಲ್ಭಾಗ, ಉದ್ದ ಬಿಳಿ ಹುಬ್ಬು ಪ್ರಮುಖ ಲಕ್ಷಣ. ಬಾಲದ ಕೆಳಗೆ ಬಿಳಿ, ಕಪ್ಪು ಕಣ್ಣು, ಕೊಕ್ಕು ಇರುತ್ತದೆ. ಹೆಣ್ಣು : ಮಾಸಲು ಬಳಪದ ಬಣ್ಣ, ಬೂದು ಬಿಳಿ ಕೆಳಭಾಗ, ಬಾಲಕ್ಕೆ ಕಪ್ಪು ಅಂಚು, ಕೆಳಭಾಗ ಬಿಳಿ ಕೊಕ್ಕು, ಕಣ್ಣು ಕಪ್ಪು.

ಆಹಾರ : ಕೀಟಗಳನ್ನು ತಿನ್ನುತ್ತವೆ.

ಸಂತಾನಾಭಿವೃದ್ಧಿ : ಹಿಮಾಲಯದಲ್ಲಿ. ಚಳಿಗಾಲದಲ್ಲಿ ವಲಸೆ ಬರುತ್ತವೆ.