ಬಿಳಿಹೊಟ್ಟೆಯ ನೀಲಿನೊಣಹಿಡುಕ (WHITEBELLIED BLUE FLYCATCHER)
ಮ್ಯೂ. ಪಲ್ಲಿಪಸ್ (
Muscicapa pallipes)

357_69_PP_KUH

ಗಾತ್ರ : ೧೫ ಸೆಂ.ಮೀ.

ಆವಾಸ : ಪಶ್ಚಿಮ ಘಟ್ಟದ ಕಾಡಿನಲ್ಲಿರುವ ಸ್ಥಳೀಯ ಪಕ್ಷಿ.

ಲಕ್ಷಣಗಳು : ಗಂಡುನೀಲಿ ಮೇಲ್ಭಾಗ. ಕಣ್ಣಿನ ಸುತ್ತುಮುತ್ತ ಕೊಕ್ಕಿನ ಬುಡ ಕಪ್ಪು. ಗಂಟಲು, ಹಣೆ ನೀಲಿ, ದೊಡ್ಡ ಬಿಳಿಕೆಂಗಂದು ಬಾಲ. ಹೆಣ್ಣುಕಡು ಆಲಿವ್ ಕಂದು ಮೇಲ್ಭಾಗ, ಕೆಂಗಂದು ಬಾಲ, ಕೆಂಗಂದುಕಿತ್ತಳೆ ಗಂಟಲು ಮತ್ತು ಎದೆ, ಕೆಳಭಾಗ ಬಿಳಿ.

ಆಹಾರ : ಕೀಟಗಳು.

ಸಂತಾನಾಭಿವೃದ್ಧಿ : ಫೆಬ್ರವರಿಯಿಂದ ಸೆಪ್ಟೆಂಬರ‍್ನ ಅವಧಿ. ಮೋಸ್, ಹುಲ್ಲು, ಎಳೆಗಳಿಂದ ಅಂದವಿಲ್ಲದ ಬಟ್ಟಲಿನಂತಹ ಗೂಡು. ಕಂದುಬಣ್ಣದ ಕಲೆಯ ೩-೪ ತಿಳಿ ಹಸಿರು ಮೊಟ್ಟೆಗಳಿರುತ್ತವೆ.

 

ನೀಲಿಗಂಟಲಿನ ನೊಣಹಿಡುಕ (BLUETHROATED FLYCATCHER)
ಮ್ಯೂ. ರುಬಿಕ್ಯುಲಾಯಿಡಿಸ್ (
Muscicapa rubiculoides)

358_69_PP_KUH

ಗಾತ್ರ : ೧೪ ಸೆಂ.ಮೀ.

ಆವಾಸ : ಕೆಳಹಂತದ ಗಿಡಗಳಿರುವ ದಟ್ಟಕಾಡು. ವಲಸೆ ಪಕ್ಷಿ.

ಲಕ್ಷಣಗಳು : ಗಂಡು : ನೀಲಿ ಗಂಟಲು ಮತ್ತು ಮೇಲ್ಭಾಗ, ಎದೆ ನಸುಕಂದು. ಹಣೆ ನೀಲಿ, ಕಣ್ಣು, ಕೊಕ್ಕು, ಕೊಕ್ಕಿನ ಬುಡ ಕಪ್ಪು, ಹೊಟ್ಟೆ ಬಿಳಿ. ಹೆಣ್ಣು : ಆಲಿವ್ ಕಂದು ಮೇಲ್ಭಾಗ, ಕಣ್ಣಿನ ಸುತ್ತು ಮತ್ತು ಕೊಕ್ಕಿನ ಬುಡ ತಿಳಿ, ಗಂಟಲು ಮಾಸಲು, ಎದೆ ತಿಳಿಗಂದು ಇರುತ್ತದೆ.

ಆಹಾರ : ಕೀಟಗಳು ಮತ್ತು ಡಿಂಬ.

ಸಂತಾನಾಭಿವೃದ್ಧಿ : ಹಿಮಾಲಯದಲ್ಲಿ ಚಳಿಗಾಲದಲ್ಲಿ ಕರ್ನಾಟಕ್ಕೆ ವಲಸೆ ಬರುತ್ತವೆ.

 

ಟಿಕೆಲ್ಸ್ ನೀಲಿ ನೊಣಹಿಡುಕ (TICKELL’S BLUE FLYCATEHER)
ಮ್ಯೂ. ಟಿಕೆಲ್ಲಿಯೆ (
Muscicapa tickelliae)

359_69_PP_KUH

ಗಾತ್ರ : ೧೪ ಸೆಂ.ಮೀ.

ಆವಾಸ : ತೆರೆದ ಒಣಕಾಡು, ಮರಗಳಿರುವ ಪ್ರದೇಶ. ಸ್ಥಳೀಯ ಪಕ್ಷಿ.

ಲಕ್ಷಣಗಳು : ನೀಲಿ ಗಂಟಲಿನ ನೊಣಬಾಕವನ್ನು ಹೊಲುತ್ತದೆ. ಆದರೆ ಗಂಟಲು ನೀಲಿಯ ಬದಲು ಕೆಂಗಂದು. ಗಂಡು ಮೇಲ್ಭಾಗ ಸ್ವಲ್ಪ ತಿಳಿನೀಲಿ. ಗಂಟಲು, ಎದೆ ಕೆಂಗಂದು. ಹೊಟ್ಟೆ ಬಿಳಿ. ಹೆಣ್ಣು ತಿಳಿ ಮತ್ತು ಮಾಸಲು.

ಆಹಾರ : ಹಾರುವ ನೊಣಗಳಂತಹ ಕೀಟಗಳನ್ನು ತಿನ್ನುತ್ತದೆ.

ಸಂತಾನಾಭಿವೃದ್ಧಿ : ಮಾರ್ಚ್‌ನಿಂದ ಆಗಸ್ಟ್‌ನ ಅವಧಿ. ಕಡ್ಡಿ, ಎಲೆ, ತೊಗಟೆ ನಾರು, ಹುಲ್ಲುಗಳಿಂದ ಕೂಡಿದ ಅಂದವಿಲ್ಲದ ಬಟ್ಟಲಿನಂಥ ಗೂಡನ್ನು ಮರದ ಪೊಟರೆಯಲ್ಲಿ ರಚಿಸಿ ಕಂದು ಚುಕ್ಕೆಗಳಿರುವ ೩-೫ ಮಣ್ಣು ಕಂದು ಬಣ್ಣದ ಮೊಟ್ಟೆಗಳನ್ನಿಡುತ್ತದೆ.

 

ನೀಲಿಗಿರಿ ನೊಣಹಿಡುಕ (NILGIRI VERDITER FLYCATCHER)
ಮ್ಯೂ. ಆಲ್ಬಿಕಾಡೇಟ (
Muscicapa albicaudata)

360_69_PP_KUH

ಗಾತ್ರ : ೧೫ ಸೆಂ.ಮೀ.

ಆವಾಸ : ಬೆಟ್ಟದ ಮೇಲಿನ ನಿತ್ಯಹರಿದ್ವರ್ಣದ ಕಾಡು, ಕಾಫಿ, ತೋಟಗಳಲ್ಲಿ ಕಂಡುಬರುವ ಸ್ಥಳೀಯ ಪಕ್ಷಿ.

ಲಕ್ಷಣಗಳು : ಗಂಡು ಇಂಡಿಗೊ ನೀಲಿ, ಹೊಟ್ಟೆ ನೀಲಿ ಬೂದು, ಬಾಲದ ಬುಡ ಬಿಳಿ, ಕಣ್ಣ ಮೂಲಕ ಕಪ್ಪು ಪಟ್ಟಿಕ, ನೀಲಿ ಹಣೆ. ಹೆಣ್ಣುಮಾಸಲು ಬೂದುಹಸಿರು, ಬಾಲದ ಮೇಲೆ ಬಿಳಿ ತೇಪೆ, ಹೊಟ್ಟೆಯ ಭಾಗ ಬೂದು ನೀಲಿ ಇರುತ್ತದೆ.

ಆಹಾರ : ನೊಣ ಇತ್ಯಾದಿ ಕೀಟಗಳು.

ಸಂತಾನಾಭಿವೃದ್ಧಿ : ಮಾರ್ಚ್‌ನಿಂದ ಏಪ್ರೀಲ್ ತಿಂಗಳು. ಮರದ ಪೊಟರೆ, ಗೋಡೆ, ಮಣ್ನೀನ ದಿಣ್ಣೆಗಳಲ್ಲಿ ಹುಲ್ಲು, ಎಲೆ, ಎಳೆಗಳ ಅಂದವಿಲ್ಲದ ಬಟ್ಟಲಿನಂತಹ ಗೂಡು ರಚಿಸಿ ಕೆಂಪು ಚುಕ್ಕೆಗಳ ಕೆನೆಬಿಳಿ ಬಣ್ಣದ ಮೊಟ್ಟೆಗಳನ್ನಿಡುತ್ತದೆ.

 

ವರ್ಡಿಟರ್ ನೊಣಹಿಡುಕ (VERDITER FLYCATCHER)
ಮ್ಯೂ. ತಲಸ್ಸಿನ (
Muscicapa thalassina)

ಗಾತ್ರ : ೧೬ ಸೆಂ.ಮೀ.

ಆವಾಸ : ದಟ್ಟ ಮರಗಳಿರುವ ಪ್ರದೇಶ. ಸ್ಥಳೀಯ ಪಕ್ಷಿ.

ಲಕ್ಷಣಗಳು : ಗಂಡುಹಕ್ಕಿ ಬೂದು ನಳಿಲಿ. ಕಪ್ಪು ಕೊಕ್ಕು. ಹೆಣ್ಣು ಹಕ್ಕಿ ಹೆಚ್ಚು ಮಾಸಲು ಮತ್ತು ಬೂದು. ರೆಕ್ಕೆಗಳು ಹೆಚ್ಚು ಕಡುಬೂದು. ಸಾಮಾನ್ಯವಾಗಿ ಒಂಟಿಯಾಗಿ ಕಾಣಸಿಗುತ್ತದೆ.

ಆಹಾರ : ಕೀಟಗಳೇ ಪ್ರಮುಖ ಆಹಾರ.

ಸಂತಾನಾಭಿವೃದ್ಧಿ : ಹಿಮಾಲಯ ಪ್ರದೇಶದಲ್ಲಿ. ಚಳಿಗಾಲದಲ್ಲಿ ಕರ್ನಾಟಕದ ಕಾಡುಗಳಿಗೆ ವಲಸೆ.