ದರ್ಜಿ ಹಕ್ಕಿ (TAILOR BIRD)
ಆರೋಟೊಮಸ್ ಸುಟೊರಿಯಸ್ (
Orthotomus sutorius)

371_69_PP_KUH

ಗಾತ್ರ : ೧೩ ಸೆಂ.ಮೀ.

ಆವಾಸ : ಸಾಮಾನ್ಯ ಸ್ಥಳೀಯ ಪಕ್ಷಿ. ಕುರುಚಲು ಕಾಡು, ತೋಟ, ಮನೆಯ ಸುತ್ತಲಿನ ಹೂದೋಟಗಳಲ್ಲಿ ಇರುತ್ತದೆ.

ಲಕ್ಷಣಗಳು : ಗಂಡುಹೆಣ್ಣು ಒಂದೇ ತೆರನಗಿವೆ. ಆಲಿವ್ ಹಸಿರು ಮೇಲ್ಭಾಗ, ತುಕ್ಕುಕಂದು ಹಣೆ, ಮಾಸಲು ಬಿಳಿ ಹೊಟ್ಟೆಯ ಭಾಗ, ಸೂಜಿಯಂತಿರುವ ಬಾಲದ ಗೆರೆಗಳು ಇರುತ್ತವೆ. ಸಂತಾನಾಭಿವೃದ್ಧಿಯ ಕಾಲದಲ್ಲಿ ಗಂಡು ಪಕ್ಷಿಯಲ್ಲಿ ಹೆಚ್ಚು ಬೆಳೆದಿರುತ್ತದೆ.

ಆಹಾರ : ಸಣ್ಣ ಕೀಟಗಳು, ಮರಿಹುಳ ಮತ್ತು ಮಕರಂದ.

ಸಂತಾನಾಭಿವೃದ್ಧಿ : ಏಪ್ರಿಲ್ ನಿಂದ ಸೆಪ್ಟೆಂಬರ‍್ನ ಅವಧಿ. ಒಂದೇ ಎಲೆಯನ್ನು ಮಡಚಿ ಅಥವಾ ಎರಡು ಎಲೆಗಳನ್ನು ಜೋಡಿಸಿ ಹೊಲಿದ ಗೂಡ, ಒಳಗೆ ಹತ್ತಿಯ ಹಾಸು. ಕಂದು ಚುಕ್ಕೆಗಳ ೩-೪ ನೀಲಿಬಿಳಿ ಮೊಟ್ಟೆಗಳಿರುತ್ತವೆ.

—- 

ಹುಲ್ಲು ಉಲಿಯಕ್ಕಿ (GRASS WARBLER)
ಕೀಟೊರ್ನಿಸ್ ಸ್ಟ್ರೆಯೇಟಸ್ (
Chaetornis striatus)

372_69_PP_KUH

ಗಾತ್ರ : ೨೦ ಸೆಂ.ಮೀ.

ಆವಾಸ : ಬತ್ತದಗದ್ದೆ, ಎತ್ತರದ ಹುಲ್ಲುಗಳಿರುವ ಹುಲ್ಲು ಗಾವಲುಗಳಲ್ಲಿರುವ ಸ್ಥಳೀಯ ಪಕ್ಷಿ.

ಲಕ್ಷಣಗಳು : ಗಂಡುಹೆಣ್ಣು ಒಂದೇ ತೆರನಾಗಿವೆ. ಗುಬ್ಬಚ್ಚಿಯನ್ನು ಹೋಲುವ ಹಕ್ಕಿ. ತಿಳಿಗಂದು ಮೇಲ್ಭಾಗದಲ್ಲಿ ಕಪ್ಪು ಚುಕ್ಕೆಗಳ ಗೆರೆಗಳು, ಅಡ್ಡ ಗೆರೆಗಳ ಬಾಲ, ಮಧ್ಯ ಬಿಳಿಗೆರೆ ಹುಬ್ಬು ತಿಳಿಗಂದು, ಹೊಟ್ಟೆ ಮಾಸಲುಕಂದು ಕುತ್ತಿಗೆ ಬೂದು ಹಿನ್ನೆಲೆಯಲ್ಲಿ ಚುಕ್ಕೆಗಳಿರುತ್ತವೆ.

ಆಹಾರ : ಕೀಟಗಳನ್ನು ತಿನ್ನುತ್ತವೆ.

ಸಂತಾನಾಭಿವೃದ್ಧಿ : ಮೇಯಿಂದ ಸೆಪ್ಟೆಂಬರ‍್ವರೆಗಿನ ಅವಧಿ. ಚೆಂಡಿನಂತಹ ಹುಲ್ಲಿನ ಗೂಡಿಗೆ ಮೇಲ್ಭಾಗದಲ್ಲಿ ಒಳದಾರಿ. ೪-೫ ಮೊಟ್ಟೆಗಳಿರುತ್ತವೆ.

—- 

ದೊಡ್ಡ ಕೊಕ್ಕಿನ ಎಲೆ ಉಲಿಹಕ್ಕಿ (LARGEBILLED LEAF WARBLER)
ಫಿಲ್ಲೊಸ್ಕೋಪಸ್ ಮ್ಯಾಗ್ನಿರೊಸ್ಟ್ರಿಸ್ (
Phylloscopus magnirostris)

373_69_PP_KUH

ಗಾತ್ರ : ೧೩ ಸೆಂ.ಮೀ.

ಆವಾಸ : ಅಗಲ ಎಲೆಗಳ ಕಾಡು. ವಲಸೆ ಹಕ್ಕಿ.

ಲಕ್ಷಣಗಳು : ಉಲಿ ಹಕ್ಕಿ ಜಾತಿಯಲ್ಲಿ ಅತಿದೊಡ್ಡದು. ಕಂದುಆಲಿವ್ ಮೇಲ್ಭಾಗ. ಉದ್ದನೆಯ ತಿಳಿ ಹಳದಿ ಹುಬ್ಬು. ಕಪ್ಪು ಕಣ್ಣುಪಟ್ಟಿ, ಗಲ್ಲದಲ್ಲಿ ತುಸು ಹಳದಿ, ಕೆಳಭಾಗ ಬಿಳಿ ಹಳದಿ, ಬೂದು ಗಂಟಲು ಹಾಗು ಎದೆ.

ಆಹಾರ : ಕೀಟಗಳನ್ನು ತಿನ್ನುತ್ತದೆ.

ಸಂತಾನಾಭಿವೃದ್ಧಿ : ಹಿಮಾಲಯದಲ್ಲಿ ಪಶ್ಚಿಮ ಘಟ್ಟಕ್ಕೆ ಚಳಿಗಾಲದಲ್ಲಿ ವಲಸೆ ಬರುತ್ತವೆ.

—- 

ದೊಡ್ಡ ಜೊಂಡು ಉಲಿಹಕ್ಕಿ (GREAT REED WARBLER)
ಆ. ಸ್ಟೆಂಟೊರಿಯಸ್ (
Acrocephalus stentoreus)

374_69_PP_KUH

ಗಾತ್ರ : ೧೯ ಸೆಂ.ಮೀ.

ಆವಾಸ : ಜೊಂಡು ಮತ್ತು ನೀರಿನ ಹತ್ತಿರ ಇರುವ ಪೊದೆಗಳಲ್ಲಿ ವಾಸಿಸುವ ವಲಸೆ ಹಕ್ಕಿ.

ಲಕ್ಷಣಗಳು : ದೊಡ್ಡ ಜಾತಿಯ ಉಲಿಹಕ್ಕಿ. ಗಂಡುಹೆಣ್ಣು ಒಂದೇ ತೆರನಾಗಿವೆ. ಆಲಿವ್ ಕಂದು ಮೇಲ್ಭಾಗವಿದ್ದು ಎದ್ದು ಕಾಣುವ ಮಾಸಲು ಬಿಳಿಹುಬ್ಬು, ಬಿಳಿಗಂಟಲು, ಮಾಸಲು ಬಿಳಿ ಎದೆ ಮತ್ತು ಹೊಟ್ಟೆ, ಬಾಲದತುದಿ. ಬಿಳಿ ಗಲ್ಲ ಇರುತ್ತದೆ.

ಆಹಾರ : ಕೀಟಗಳನ್ನು ತಿನ್ನುತ್ತವೆ.

ಸಂತಾನಾಭಿವೃದ್ಧಿ : ಉತ್ತರ ಭಾರತದ ಅಲ್ಲಲ್ಲಿ. ವ್ಯಾಪಕವಾಗಿ ವಲಸೆ ಹೋಗುತ್ತವೆ.

—- 

ಗದ್ದೆ ಉಲಿಯಕ್ಕಿ (PADDYFIELD WARBLER)
ಆ. ಅಗ್ರಿಕೋಲ (Acrocephalus agricola)

375_69_PP_KUH

ಗಾತ್ರ : ೧೫ ಸೆಂ.ಮೀ.

ಆವಾಸ : ಪಾಕಿಸ್ತಾನದಲ್ಲಿ ಸಂತಾನಾಭಿವೃದ್ಧಿ ಮಾಡುವ ಈ ಪುಟ್ಟ ಹಕ್ಕಿ ಚಳಿಗಾಲದಲ್ಲಿ ಬತ್ತಡ ಗದ್ದೆ, ಕಬ್ಬಿಣ ಹಿತ್ತಲು ಇತ್ಯಾದಿ ಕಡೆ ಕಂಡುಬರುತ್ತದೆ. ಇದೊಂದು ಕೆಂಗಂದು ಬಣ್ಣದ ಪಕ್ಷಿ. ಗಂಟಲು ಮತ್ತು ಕೆಳಭಾಗ ಬಿಳಿ.

ಲಕ್ಷಣಗಳು : ಬೆನ್ನು ಮಾಸಲು ಕಂದು ಬಣ್ಣ. ಉದರ ಬಿಳಿ ಭಾಗ ಮತ್ತು ಕಡು ಕಂದು ಬಣ್ಣದಾಗಿದೆ. ಹೆಚ್ಚು ಕೂಗಾಡುತ್ತದೆ.

ಆಹಾರ : ಕೀಟಗಳನ್ನು ತಿನ್ನುತ್ತವೆ.

ಸಂತಾನಾಭಿವೃದ್ಧಿ : ಕರ್ನಾಟಕಕ್ಕೆ ಚಳಿಗಾಲದಲ್ಲಿ ಬಂದು (ಅಕ್ಟೋಬರ‍್ನಿಂದ ಮಾರ್ಚ್) ಪಾಕಿಸ್ತಾನಕ್ಕೆ ಹೋಗಿ ಸಂತಾನೋತ್ಪತ್ತಿ ಮಾಡುತ್ತದೆ.