ತಿಳಿಹಸಿರಿನ ಎಲೆ ಉಲಿಯಕ್ಕಿ (DULLGREEN LEAF WARBLER)
ಫಿಲ್ಲೊಸ್ಕೋಪಸ್ ಟ್ರೊಕಿಲಾಯಿಡಿಸ್ (
Phylloscopus trochiloides)

376_69_PP_KUH

ಗಾತ್ರ : ೧೫ ಸೆಂ.ಮೀ.

ಆವಾಸ : ಮರಗಿಡಿಗಳಲ್ಲಿ ತೋಟ, ಕೈದೋಟಗಳಲ್ಲಿ, ಜಾಲಿ ಗಿಡಗಳ ನಡುವೆ ಮತ್ತು ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಒಂಟಿಯಾಗಿ ಇಲ್ಲವೇ ಗುಂಪಿನಲ್ಲಿ ಕೀಟ ಹಿಡಿಯುತ್ತವೆ.

ಲಕ್ಷಣಗಳು : ಅತ್ಯಂತ ಚಟುವಟಿಕೆಯ ಹಕ್ಕಿ. ಬೆನ್ನಿನ ಭಾಗ ಮಾಸಲು ಹಸಿರಾಗಿದೆ. ಹೊಟ್ಟೆ ಭಾಗ ಹಳದಿಯಾಗಿರುತ್ತದೆ. ಚಳಿಗಾಲದಲ್ಲಿ ವಲಸೆ ಬರುತ್ತದೆ.

ಆಹಾರ : ಕೀಟಗಳನ್ನು ತಿನ್ನುತ್ತವೆ.

ಸಂತಾನಾಭಿವೃದ್ಧಿ : ಮರಗಿಡಗಳ ಕವಲುಗಳ ನಡುವೆ, ಪೊಟರೆಗಳಲ್ಲಿ ಒಣ ಎಲೆಗಳನ್ನು ಬಳಸಿ ಚಂಡಿನಂತಹ ಗೂಡನ್ನು ಕಟ್ಟುತ್ತದೆ. ಗೂಡಿನಲ್ಲಿ ಪಾಚಿಯಿಂದ ಮೆತ್ತೆ ಮಾಡುತ್ತದೆ. ಹೆಣ್ಣು ಹಕ್ಕಿ ಕಾವು ಕೊಡುತ್ತದೆ. ಎರಡು ಹಕ್ಕಿಗಳು ಮರಿಯ ಪಾಲನೆ ಪೋಷಣೆಯನ್ನು ಮಾಡುತ್ತವೆ.

—- 

ಬ್ಲಿತ್ಸ್ ಜೊಂಡು ಉಲಿಹಕ್ಕಿ(BLYTH’S REED WARBLER)
ಆ. ಡುಮೆಂಟೊರಮ್ (
Acrocephalus dumentorum)

377_69_PP_KUH

ಗಾತ್ರ : ೧೪ ಸೆಂ.ಮೀ.

ಆವಾಸ : ಪೊದೆ, ಕಾಡಿನಂಚಿನ ಮರಗಳು, ವ್ಯವಸಾಯದ ಭೂಮಿಯ ಕಡೆ ಇರುವ ವಲಸೆ ಹಕ್ಕಿ.

ಲಕ್ಷಣಗಳು : ದೊಡ್ಡ ಜೊಂಡು ಉಲಿಹಕ್ಕಿಯನ್ನು ಹೋಲುವ ಆದರೆ ಸ್ವಲ್ಪ ಸಣ್ಣಗಾತ್ರದ ಹಕ್ಕಿ. ಉದ್ದ ಕೊಕ್ಕು, ಆಲಿವ್ ಬೂದು ಮೇಲ್ಭಾಗ, ಮಾಸಲು ಹುಬ್ಬು, ಬಿಳಿ ಗಂಟಲು, ಉಳಿದಂತೆ ಮಾಸಲು ಬಿಳಿ ಕೆಳಭಾಗ.

ಆಹಾರ : ಕೀಟಗಳನ್ನು ತಿನ್ನುತ್ತದೆ.

ಸಂತಾನಾಭಿವೃದ್ಧಿ : ಪಾಕಿಸ್ತಾನದಲ್ಲಿ. ಕರ್ನಾಟಕಕ್ಕೆ ವಲಸೆ ಬರುತ್ತದೆ.

—- 

ಶಾಮಾ (SHAMA)
ಕಾಪ್ಸಿಕಸ್ ಮಲಬಾರಿಕಸ್ (
Copsychus malabaricus)

378_69_PP_KUH

ಗಾತ್ರ : ೨೩ ಸೆಂ.ಮೀ.

ಆವಾಸ : ಕಾಡು, ಬಿದಿರು ಮೆಳೆಗಳು, ಗಿರಿಧಾಮಗಳು. ಸ್ಥಳೀಯ ಪಕ್ಷಿ.

ಲಕ್ಷಣಗಳು : ಗಂಡು : ಹೊಳೆಯುವ ಕಪ್ಪು ತಲೆ, ಬೆನ್ನು ಮತ್ತು ಎದೆ. ಕೆಂಗಂದು ಕಿತ್ತಳೆ ಕೆಳಭಾಗ. ಅಡ್ಡ ಗೆರೆಗಳ ಬಾಲದ ಬುಡದಲ್ಲಿ ಬಿಳಿ. ಹೆಣ್ಣು : ಗಂಡಿನ ಕಪ್ಪಿರುವ ಭಾಗಗಳಲ್ಲಿ ಬೂದು, ಸ್ವಲ್ಪ ಗಿಡ್ಡ ಬಾಲ, ಮಾಸಲು ಕೆಂಗಂದು ಎದೆ ಇರುತ್ತದೆ.

ಆಹಾರ : ಕೀಟಗಳನ್ನು ತಿನ್ನುತ್ತವೆ.

ಸಂತಾನಾಭಿವೃದ್ಧಿ : ಎಪ್ರಿಲ್‌ನಿಂದ ಜೂನ್‌ನ ಅವಧಿ. ಬಿದಿರು ಮಳೆಗಳ ಬುಡದಲ್ಲಿ ಅಥವಾ ಮರದ ಪೊಟರೆಯಲ್ಲಿ ಹುಲ್ಲು, ಎಲೆ, ಬೇರುಗಳ ಆಳವಿಲ್ಲದ ಬಟ್ಟಲಿನಂತಹ ಗೂಡು ರಚಿಸಿ ಕಲೆಗಳಿರುವ ೩-೫ ತಿಳಿ ಪಚ್ಚೆ ಮೊಟ್ಟೆಗಳನ್ನಿಡುತ್ತದೆ.

 —-

ಕಪ್ಪು ರೆಡ್ ಸ್ಟಾರ್ಟ್ (BLACK REDSTART)
ಫೊನಿಕ್ಯುರಸ್ ಓಕ್ರರ‍್ (
Phoenicurus ochruros)

379_69_PP_KUH

ಗಾತ್ರ : ೧೫ ಸೆಂ.ಮೀ.

ಆವಾಸ : ವ್ಯವಸಾಯ ಭೂಮಿ, ಹಳ್ಳಿ ಸುತ್ತಮುತ್ತು, ಮಾವಿನ ತೋಪು ಮತ್ತು ಒಣಕುರುಚಲು ಕಾಡುಗಳಲ್ಲಿ ಕಾಣುವ ವಲಸೆ ಪಕ್ಷಿ.

ಲಕ್ಷಣಗಳು : ಗಂಡು : ಬೂದು ಮೇಲ್ಬಾಗ ; ನೆತ್ತಿ, ಬೆನ್ನ ಹಿಂಭಾಗ, ಬಾಲದ ಬುಡ ಮತ್ತು ಅಂಚು ಕೆಂಗಂದು, ಕಪ್ಪು ಗಂಟಲು ; ಎದೆ, ಹೊಟ್ಟೆ ಕೆಂಗಂದು. ಹೆಣ್ಣು : ಮಾಸಲು ಕಂದು ಮೇಲ್ಭಾಗ, ತಿಳಿಗಂದು ಹೊಟ್ಟೆ ಇರುತ್ತದೆ.

ಆಹಾರ : ಕೀಟಗಳು, ನೆಲದಲ್ಲಿ ಹೆಕ್ಕಿ ತಿನ್ನುವುದು ಸ್ವಭಾವ.

ಸಂತಾನಾಭಿವೃದ್ಧಿ : ಹಿಮಾಲಯದಲ್ಲಿ. ಚಳಿಗಾಲದಲ್ಲಿ ಕರ್ನಾಟಕಕ್ಕೆ ವಲಸೆ ಬರುತ್ತವೆ.

—- 

ಕಪ್ಪು ಮಡಿವಾಳ (INDIAN ROBIN)
ಸಾಕ್ಸಿಕೊಲಾಯಿಡಿಸ್ ಫುಲಿಕೇಟ (
Saxicoloides fulicata)

380_69_PP_KUH

ಗಾತ್ರ : ೧೬ ಸೆಂ.ಮೀ.

ಆವಾಸ : ಮನೆಯ ಸುತ್ತಮುತ್ತ, ತೋಟ, ಕಾಡಿನ ಅಂಚು, ಕುರುಚಲು ಕಾಡು. ಸಾಮಾನ್ಯ ಸ್ಥಳೀಯ ಪಕ್ಷಿ.

ಲಕ್ಷಣಗಳು : ಗಂಡು : ಹೊಗೆ ಕಪ್ಪು ಮೇಲ್ಭಾಗ, ರೆಕ್ಕೆಗಳ ಮೇಲೆ ಬಿಳಿ ಗುರುತು. ಎತ್ತಿದ ಬಾಲದ ಕೆಳಭಾಗ ತುಕ್ಕು ಕಂದು, ಹೆಣ್ಣು : ರೆಕ್ಕೆಗಳ ಮೇಲೆ ಬಿಳಿ ಗುರುತು ಇಲ್ಲ; ಮಾಸಲು ಕಂದು ಬೂದು ಕೆಳಭಾಗ ; ಒಂಟಿ ಅಥವಾ ಜೋಡಿಯಾಗಿ ಓಡಾಡುತ್ತವೆ.

ಆಹಾರ : ಕೀಟಗಳು, ಜೇಡ ಮತ್ತು ಡಿಂಬಗಳು.

ಸಂತಾನಾಭಿವೃದ್ಧಿ : ಫೆಬ್ರವರಿಯಿಂದ ಮೇ. ಕಲ್ಲುಗಳ ಕೆಳಗೆ, ಮರದ ಪೊಟರೆಯಲ್ಲಿ ಅಥವಾ ಇನ್ಯಾವುದೇ ರಂಧ್ರದಲ್ಲಿ ಹುಲ್ಲು, ಬೇರು ಇತ್ಯಾದಿ ಕಸಕಡ್ಡಿಗಳ ಗೂಡು, ೨-೩ ಕೆನೆಬಿಳಿ ಮೊಟ್ಟೆಗಳು.