ಕಪ್ಪು ಬಿಳುಪು ಬೇಲಿ ಹರಟಿಗ (PIED BUSHCHAT)
ಸಾಕ್ಸಿಕೋಲ ಕೇಪ್ರೆಟಾ (
Saxicola caprata)

381_69_PP_KUH

ಗಾತ್ರ : ೧೩ ಸೆಂ.ಮೀ

ಆವಾಸ : ಒಣ ಮೈದಾನ ಪ್ರದೇಶ, ಕುರುಚಲು ಕಾಡು, ವ್ಯವಸಾಯ ಭೂಮಿ ಕಡೆ ಕಾಣುವ ಸ್ಥಳೀಯ ಸಾಮಾನ್ಯ ಪಕ್ಷಿ.

ಲಕ್ಷಣಗಳು : ಗಂಡು : ಕಪ್ಪು, ಬಾಲದ ಬುಡದಲ್ಲಿ ಮತ್ತು ರೆಕ್ಕೆಯ ಮೇಲೆ ಬಿಳಿ ತೇಪೆ. ಹೊಟ್ಟೆ ಮತ್ತು ಬಾಲದ ಕೆಳಭಾಗ ಬಿಳಿ. ಹೆಣ್ಣು : ಮೇಲ್ಭಾಗ ಬೂದು, ಕಂದು, ಕೆಳಭಾಗ ಮಾಸಲು ಹಳದಿಕಂದು; ಎದೆಯ ಮೇಲೆ ತುಕ್ಕಿನ ಛಾಯೆ ಇರುತ್ತದೆ.

ಆಹಾರ : ಕೀಟಗಳನ್ನು ತಿನ್ನುತ್ತವೆ.

ಸಂತಾನಾಭಿವೃದ್ಧಿ : ಫೆಬ್ರವರಿಯಿಂದ ಮೇ. ವರೆಗಿನ ಅವಧಿ. ಭೂಮಿಯ ರಂಧ್ರ ಅಥವಾ ಮಣ್ಣು ದಿಣ್ಣೆಯಲ್ಲಿ ರಂಧ್ರಕೊರೆದು ಹುಲ್ಲು. ಕೂದಲುಗಳಿಂದ ಹೊದಿಸಲ್ಪಟ್ಟ ಗೂಡು ರಚಿಸಿ ಕೆಂಗಂದು ಕಲೆಗಳಿರುವ ೩-೫ ತಿಳಿ ನೀಲಿಬಿಳಿ ಮೊಟ್ಟೆಗಳನ್ನಿಡುತ್ತದೆ.

—- 

ಕಲ್ಲು ಹರಟಿಗ (STONECHAT)
ಸಾಕ್ಸಿಕೋಲ ಟಾರಕ್ವೇಟ (
Saxicola torquata)

382_69_PP_KUH

ಗಾತ್ರ : ೧೬ ಸೆಂ.ಮೀ.

ಆವಾಸ : ಒಣ ಬಯಲು ಪ್ರದೇಶ, ವ್ಯವಸಾಯ ಭೂಮಿ. ಸಮುದ್ರ ತೀರ, ಕೊರಕಲು ಪ್ರದೇಶಗಳಲ್ಲಿ ಕಂಡುಬರುವ ವಲಸೆ ಪಕ್ಷಿ.

ಲಕ್ಷಣಗಳು : ಗಂಡು : ಕಪ್ಪು ತಲೆ, ಕಿತ್ತಳೆಕಂದು ಎದೆ, ಕುತ್ತಿಗೆಯ ಇಕ್ಕೆಡೆ ಬಿಳಿ ಪಟ್ಟಿಗಳು, ಉಳಿದಂತೆ ಕಪ್ಪು. ಹೆಣ್ಣು : ಬೆನ್ನ ಮೇಲೆ ಕಂದು ಹಿನ್ನೆಲೆಯಲ್ಲಿ ಕಡುಕಂದು ರೇಖೆಗಳು. ಕೆಳಭಾಗ ತಿಳಿಕಂದು ಇರುತ್ತದೆ.

ಆಹಾರ : ಕೀಟಗಳನ್ನು ತಿನ್ನುತ್ತವೆ.

ಸಂತಾನಾಭಿವೃದ್ಧಿ : ಹಿಮಾಲಯದಲ್ಲಿ. ಚಳಿಗಾಲದಲ್ಲಿ ವಲಸೆ ಬರುತ್ತವೆ.

—- 

ಸೀಟಿಹೊಡೆಯುವ ಥ್ರಶ್ (ಗಾಯಕ) (MALABAR WHISTHING THRUSH)
ಮಿಯೊಫೋನಸ್ ಹಾರ್ಸ್‌ಫಿಲ್ಡಿ (
Myiophonus horsfieldi)

383_69_PP_KUH

ಗಾತ್ರ : ೨೫ ಸೆಂ.ಮೀ.

ಆವಾಸ : ಕಾಡು ಮಧ್ಯದ ತೊರೆಗಳು, ಜಲಪಾತ ಮತ್ತು ಹತ್ತಿರದ ತೋಟಗಳು. ಸ್ಥಳೀಯ ಪಕ್ಷಿ.

ಲಕ್ಷಣಗಳು : ಗಂಡುಹೆಣ್ಣು ಒಂದೇ ತೆರ. ಕಡು ನೀಲಿಕಪ್ಪು ಗರಿಗಳು. ಬಾಲ ಮತ್ತು ರೆಕ್ಕೆಗಳ ಮೇಲಿನ ಗರಿಗಳು ಹೊಳೆಯುತ್ತವೆ. ಕೋಬಾಲ್ಟ್‌ನೀಲಿ ಹಣೆ, ಕಪ್ಪು ಕೊಕ್ಕು ಮತ್ತು ಕಾಲುಗಳು.

ಆಹಾರ : ಕೀಟಗಳು, ಏಡಿ, ಬಸವನಹುಳ, ಕಪ್ಪೆ ಮತ್ತು ಚಿಕ್ಕ ಹಣ್ಣುಗಳು.

ಸಂತಾನಾಭಿವೃದ್ಧಿ : ಫೆಬ್ರವರಿಯಿಂದ ಆಗಷ್ಟ್. ಮಣ್ಣಿನಿಂದ ಜೋಡಿಸಿದ ಕಡ್ಡಿ ಹುಲ್ಲುಗಳ ಗೂಡು. ಬೂದುಕಂದು ಚುಕ್ಕೆಗಳಿರುವ ೩-೪ ತಿಳಿ ಕಲ್ಲು ಬಣ್ಣದ ಮೊಟ್ಟೆಗಳು.

—- 

ಕಿತ್ತಳೆತಲೆ ನೆಲದ ಥ್ರಶ್ (ORANGE-HEADED GROUNDTHRUSH)
ಜೂತೆರೆ ಸಿಟ್ರಿನ (
Zoothera citrina)

384_69_PP_KUH

ಗಾತ್ರ : ೨೧ ಸೆಂ.ಮೀ.

ಆವಾಸ : ಕಾಡು, ಬಿದಿರು ಮಳೆ, ತೋಟ, ತೋಪು, ವಲಸೆ ಪಕ್ಷಿ.

ಲಕ್ಷಣಗಳು : ತಲೆ, ಕುತ್ತಿಗೆ ಮತ್ತು ಕೆಳಭಾಗಗಳು ಕಿತ್ತಲೆ ನೆಲಗಂದು, ಬಾಲದದ ಕೆಳಭಾಗ ಬಿಳಿ. ರೆಕ್ಕೆ ಮೇಲೆ ಬಿಳಿ ರೇಖೆ. ಕಣ್ಣಬದಿಯಲ್ಲಿ ಬಿಳಿನೇರೆ ರೇಖೆಗಳು. ಹೆಣ್ಣುಆಲಿವ್ ಕಂದು ಬಣ್ಣ.

ಆಹಾರ : ಕೀಟ, ಬಸವನಹುಳ, ಸಣ್ಣ ಹಕ್ಕಿಗಳು.

ಸಂತಾನಾಭಿವೃದ್ಧಿ : ಹಿಮಾಲಯದಲ್ಲಿ. ಚಳಿಗಾಲದಲ್ಲಿ ವಲಸೆ ಬರುತ್ತದೆ.

—- 

ಕರಿಹಕ್ಕಿ (BLACKBIRD)
ಟುರ್ಡಸ್ ಮೆರುಲ (
Turdus merula)

385_69_PP_KUH

ಗಾತ್ರ : ೨೫ ಸೆಂ.ಮೀ.

ಆವಾಸ : ಗುಡ್ಡಗಳು, ಕಾಡು, ತೋಟ, ತೋಪು. ಸ್ಥಳೀಯ ಪಕ್ಷಿ.

ಲಕ್ಷಣಗಳು : ಗಂಡು : ಸೀಸೆ ಬೂದು ಮೇಲ್ಭಾಗ, ಹೊಗೆಕಂದು ಕೆಳಭಾಗ, ಕಪ್ಪು ಟೋಪಿ ಪ್ರಮುಖ ಲಕ್ಷಣ. ಕಿತ್ತಳೆಹಳದಿ ಕಾಲು, ಕೊಕ್ಕು ಮತ್ತು ಕಣ್ಣುಗಳು. ಹೆಣ್ಣು : ಕಡು ಹೊಗೆ ಕಂದು ಮೇಲ್ಭಾಗ, ಕಂದು ಕೆಳಭಾಗ, ಕಡುಕಂದು ಬಣ್ಣ ಗೆರೆಗಳು ಗಲ್ಲ ಮತ್ತು ಗಂಟಲು ಮೇಲೆ.

ಆಹಾರ : ಎರೆಹುಳು, ಕೀಟಗಳು ಮತ್ತು ಸಣ್ಣ ಹಣ್ಣುಗಳು.

ಸಂತಾನಾಭಿವೃದ್ಧಿ : ಮೇಯಿಂದ ಆಗಸ್ಟ್ ವರೆಗೆ. ಬೇರು, ನಾರು, ಮೋಸ್, ಕೂದಲು ಇತ್ಯಾದಿಗಳನ್ನು ಮಣ್ಣಿನೊಂದಿಗೆ ಸೇರಿಸಿದ ಬಟ್ಟಲಿನಂತಹ ಗೂಡು. ಕಂದು ಕಲೆಗಳಿರುವ ಹಸಿರುಬಿಳಿ ೩-೫ ಮೊಟ್ಟೆಗಳು.