ನೀಲಿರೆಕ್ಕೆಯ ಎಲೆ ಹಕ್ಕಿ (BLUE-WINGED LEAFBIRD)
ಕ್ಲೊರೊಪ್ಸಿಸ್ ಕೊಕಿಂಕಿನಿಯೆಸಿಸ್ (
Chloropsis cochinchinensis)

386_69_PP_KUH

ಗಾತ್ರ : ೨೦ ಸೆಂ. ಮೀ.

ಆವಾಸ : ತೆಳುಕಾಡು ಮತ್ತು ಉದ್ಯಾನ. ಸ್ಥಳೀಯ ಪಕ್ಷಿ.

ಲಕ್ಷಣಗಳು : ಬಂಗಾರ ಹೊದಿಕೆಯ ಎಲೆ ಹಕ್ಕಿ ಎಂತಲೂ ಕರೆಯಬಹುದು. ಗಂಡು : ಹಸಿರು ಗರಿಗಳು, ನೀಲಿ ರೆಕ್ಕೆಗಳು. ಹಳದಿ ಹಣೆ. ಕೊಕ್ಕಿನ ಹಿಂಭಾಗ ಕಣ್ಣಿನ ಕೆಳಗೆ ನೀಲಿ ಪಟ್ಟಿ, ಗಂಟಲು ಕಪ್ಪು, ಹೆಣ್ಣು : ಗಂಟಲು ನೀಲಿ. ತಲೆ ಮತ್ತು ಹಣಿ ಹಸಿರುಹಳದಿ.

ಆಹಾರ : ಹಣ್ಣು, ಕೀಟ ಮತ್ತು ಮಕರಂದ.

ಸಂತಾನಾಭಿವೃದ್ಧಿ : ಏಪ್ರೀಲ್‌ನಿಂದ ಆಗಸ್ಟದವರೆಗೆ. ಮಖಮಲ್ಲು ಹಣೆ ಎಲೆಹಕ್ಕಿಯ ಗೂಡಿನಂತಹ ಗೂಡು. ಚುಕ್ಕೆಗಳಿರುವ ಕೆನೆ ಬಿಳುಪಿನ ೨-೩ ಮೊಟ್ಟೆಗಳು.

—- 

ಮಖಮಲ್ಲ ಹಣೆ ನತಾಚ್ (VELVETFRONTED NUTHATCH)
ಸಿಟ್ಟ ಫ್ರಾಂಟಾಲಿಸ್ (
Sitta frontalis)

387_69_PP_KUH

ಗಾತ್ರ : ೧೦ ಸೆಂ.ಮೀ.

ಆವಾಸ : ಕರ್ನಾಟಕದ ಜಿನ್ಸ ಪ್ರದೇಶಗಳಲ್ಲಿರುವ ಸ್ಥಳೀಯ ಪಕ್ಷಿ.

ಲಕ್ಷಣಗಳು : ಗಂಡು : ಮೇಲ್ಭಾಗ ವೆಲ್ಟೆಟ್ ನೀಲಿ. ಹೆಣ್ಣು : ಕಡು ಕಪ್ಪು ವೆಲ್ವೆಟ್. ಕಣ್ಣುಗಳ ಮೂಲಕ ಕಡುಕಪ್ಪು, ಗಲ್ಲಗಂಟಲು ಬಿಳಿ, ಹವಳದ ಕೆಂಪು ಕೊಕ್ಕು, ಹಳದಿ ಕಣ್ಣು ರೆಕ್ಕೆಯ ಅಂಚು ಕಪ್ಪು, ಕೆಳಭಾಗ ಬೂದುಕೆಂಚು, ಹೆಚ್ಚಿಗೆ ಕಣ್ಣಿನ ಕಪ್ಪು ರೇಖೆ ಇಲ್ಲ.

ಆಹಾರ : ಕೀಟಗಳು.

ಸಂತಾನಾಭಿವೃದ್ಧಿ : ಫೆಬ್ರವರಿಯಿಂದ ಏಪ್ರೀಲ್ ವರೆಗೆ. ಮರ ಕುಟಿಕ ಅಥವಾ ಕುಟ್ರು ಹಕ್ಕಿಯ ಹಳೆಯ ಗೂಡನ್ನು ಉಪಯೋಗಿಸುತ್ತವೆ. ೩-೬ ಕಲೆಗಳಿರುವ ಬಿಳಿ ಮೊಟ್ಟೆಗಳು.

 —-

ಕೆಂಗಂದುಹೊಟ್ಟೆಯ ನತಾಚ್ (CHESTNUTBELLIED NUTHATCH)
ಸಿಟ್ಟ ಕಸ್ಟನಿಯ (
Sitta castanea)

388_69_PP_KUH

ಗಾತ್ರ : ೧೨ ಸೆಂ.ಮೀ.

ಆವಾಸ : ಸ್ಥಳೀಯ ಪಕ್ಷಿ. ಬೆಟ್ಟ ಗುಡ್ಡಗಳ ಕಾಡುಗಳಲ್ಲಿ.

ಲಕ್ಷಣಗಳು : ಗಿಡ್ಡ ಬಾಲ ಹಕ್ಕಿ. ಬೂದು ನೀಲಿ ಮೇಲ್ಭಾಗ, ಕೆಂಗಂದು ಕೆಳಭಾಗ. ಕಣ್ಣುಗಳು ಮೂಲಕ ಕಪ್ಪು ಗೆರೆ, ಬಿಳಿ ಕೆನ್ನೆ ಮತ್ತು ಗಲ್ಲ, ಹೆಣ್ಣು ಹಕ್ಕಿ ಭಾಗ ಹೆಚ್ಚು ತಿಳಿಕಂದು, ಉಳಿದಂತೆ ವ್ಯತಾಸವಿಲ್ಲ.

ಆಹಾರ : ಮರದ ತೊಗಟೆಯಲ್ಲಿರುವ ಕೀಟಗಳು, ಜೇಡ, ಬೀಜ ಕಾಳುಗಳನ್ನು ತಿನ್ನುವುದುಂಟು.

ಸಂತಾನಾಭಿವೃದ್ಧಿ : ಫೆಬ್ರವರಿ ಮೇ ನಡುವೆ. ಮರದ ಪೊಟರೆಯಲ್ಲಿ ಎಲೆ, ಹುಲ್ಲು, ನಾರು, ಹಾವಸೆ ಇತ್ಯಾದಿ ಹಾಸಿದ ಗೂಡು, ಮಣ್ಣಿನ ಲೇಪ. ಕೆಂಪು ಚುಕ್ಕೆಗಳು ೨-೬ ಮೊಟ್ಟೆಗಳು.

 —-

ಬೂದು ಟಿಟ್ (GREY TIT)
ಪರಸ್ ಮೇಜರ್ (
Parus major)

389_69_PP_KUH

ಗಾತ್ರ : ೧೪ ಸೆಂ.ಮೀ.

ಆವಾಸ : ದಟ್ಟವಾದ ಮರಗಳಿರುವಡೆ. ಆದರೆ ದಟ್ಟಾರಣ್ಯಗಳಲ್ಲಿ ಇರುವುದಿಲ್ಲ. ಸ್ಥಳೀಯ ಪಕ್ಷಿ.

ಲಕ್ಷಣಗಳು : ಗಂಡುಹೆಣ್ಣು ಒಂದೇ ತೆರ. ಕಪ್ಪು ತಲೆ, ಕುತ್ತಿಗೆ ಮತ್ತು ಗಂಟಲು ಎದೆಯ ಮೇಲೆ ಕಪ್ಪು ರೇಖೆ. ಕಣ್ಣುಗಳ ಕೆಳಗೆ ಬಳ್ಳಿಗೆ, ಬೂದು ಹೊದಿಕೆ. ಬಾಲದ ಮೇಲೆ ಬಿಳಿ ಗೆರೆ.

ಆಹಾರ : ಹೂಗಳ ಮೊಗ್ಗು, ಹಣ್ಣು, ಬೀಜ ಕಾಳು ಇತ್ಯಾದಿ.

ಸಂತಾನಾಭಿವೃದ್ಧಿ : ಫೆಬ್ರವರಿಯಿಂದ ನವಂಬರ‍್ವರೆಗೆ. ಹುಲ್ಲು, ಎಳೆ, ಹಾವಸೆಗಳ ಹಾಸುಗಳ, ಮರದ ಪೊಟರೆಯಲ್ಲಿ ಗೂಡು. ೪-೬ ಬಿಳಿ ಮೊಟ್ಟೆಗಳು.

—- 

ಬಿಳಿರೆಕ್ಕೆಯ ಕಪ್ಪುಟಿಟ್ (WHITEWINGED BLACK TIT)
ಪ. ನುಕೇಲಿಸ್ (
P. nuchalis)

390_69_PP_KUH

ಗಾತ್ರ : ೧೫ ಸೆಂ.ಮೀ.

ಆವಾಸ : ಕಲ್ಲು ಮುಳ್ಳುಗಳಿರುವ ಬಯಲು ಪ್ರದೇಶಗಳಲ್ಲಿ ವಾಸಿಸುತ್ತವೆ.

ಲಕ್ಷಣಗಳು : ಇದೊಂದು ಕಪ್ಪು ಬಿಳಿ ಟಿಟ್. ಕಣ್ಣಿನ ಕೆಳಭಾಗದಲ್ಲಿ ಬಿಳಿ. ರೆಕ್ಕೆಗಳ ಮೇಲೆ ಕಪ್ಪು ಬಿಳಿ ಪಟ್ಟಿಗಳು. ಆಹಾರ ಆವಾಸ ಉಳಿದ ಟಿಟ್ ಗಳಂತೆ. ಸ್ಥಳೀಯ ಪಕ್ಷಿ.

ಆಹಾರ : ಕೀಟಗಳನ್ನು ತಿನ್ನುತ್ತವೆ.

ಸಂತಾನಾಭಿವೃದ್ಧಿ : ಮೇನಿಂದ ಆಗಸ್ಟ್ ತಿಂಗಳಿನಲ್ಲಿ ನಾರು, ಉಣ್ಣೆಗಳಿಂದ ಒರಟಾದ ಗೂಡು ಕಟ್ಟುತ್ತದೆ. ಎರಡು ಪಕ್ಷಿಗಳು ಮರಿಗಳ ಪೋಷಣೆಯಲ್ಲಿ ಮಾಡುತ್ತವೆ.