ಹಳದಿ ಕೆನ್ನೆಯ ಟಿಟ್ (YELLOWCHEEKED TIT)
ಪ. ಕ್ಸಾಂತೊಗಿನಿಸ್ (
Parus xanthogenys)

391_69_PP_KUH

ಗಾತ್ರ : ೧೪ ಸೆಂ.ಮೀ.

ಆವಾಸ : ಕಾಡು ಮತ್ತು ಕೋಟೆಗಳು. ವಲಸೆ ಪಕ್ಷಿ.

ಲಕ್ಷಣಗಳು : ಗಂಡು ಹೆಣ್ಣು ಒಂದೇ ತೆರ. ಆಲಿವ್ ಹಸಿರು ಬೆನ್ನು, ಕಪ್ಪು ಶಿಖೆ, ಕಣ್ಣುಗಳ ಹಿಂದೆ ಕಪ್ಪು ರೇಖೆ, ಗಲ್ಲದಿಂದ ಹೊಟ್ಟೆಯವರೆಗೆ ಕಪ್ಪು ಪಟ್ಟಿ, ಶಿಖೆಯ ಹಿಂಭಾಗ ಹಳದಿ, ಹೊಟ್ಟೆಯ ಇಕ್ಕೆಡೆ, ಕುತ್ತಿಗೆಯ ಬದಿಗಳು ಹಳದಿ. ಬಾಲದಲ್ಲಿ ಕಪ್ಪು ಮಧ್ಯದ ಗರಿ.

ಆಹಾರ : ಕೀಟಗಳು, ಚಿಕ್ಕಪುಟ್ಟ ಹಣ್ಣುಗಳು.

ಸಂತಾನಾಭಿವೃದ್ಧಿ : ಏಪ್ರೀಲ್‌ನಿಂದ ಸೆಪ್ಟೆಂಬರ‍್ವರೆಗೆ. ಮರದ ಪೊಟರೆ ಅಥವಾ ಹಳೆ ಗೋಡೆಯ ಬಿರುಕಿನಲ್ಲಿ ಬೇರು, ನಾರು, ಗರಿ, ಕೂದಲುಗಳ ಅಂದವಲ್ಲದ ಗೂಡು. ಕಲೆಗಳಿರುವ ೪-೬ ಬಿಳಿ ಮೊಟ್ಟೆಗಳು.

—- 

ಬತ್ತದ ಗದ್ದೆ ಪಿಪಿಟ್ (PADDYFIELD PIPIT)
ಆಂತಸ್ ನೊವೆಸೀಲಾಂಡಿಯ (
Anthus novaeseelandiae)

392_69_PP_KUH

ಗಾತ್ರ : ೧೫ ಸೆಂ.ಮೀ.

ಆವಾಸ : ಹುಲ್ಲುಗಾವಲು, ವ್ಯವಸಾಯ ಭೂಮಿ, ಜವುಗು ಪ್ರದೇಶ ಸ್ಥಳೀಯ ಹಕ್ಕಿ.

ಲಕ್ಷಣಗಳು : ಗಂಡು-ಹೆಣ್ಣು ಒಂದೇ ತೆರ. ಕೆಂಚುಕಂದು ಮೇಲ್ಭಾಗ; ಗರಿಗಳ ಮೇಲೆ ಕಡು ಕಂದುಬಣ್ಣ ಚುಕ್ಕೆಗಳು; ಕಡುಕಂದು ಬಾಲದ ಅಂಚಿನ ಗರಿಗಳು ಬಿಳಿ. ಕೆಳಭಾಗ ತಿಳಿ ಹಳದಿ ಕಂದು. ಬಿಳಿ ಬಾಗಿದ ಹುಬ್ಬು. ಎದೆಯ ಮೇಲೆ ಕಂದು ರೇಖೆಗಳು.

ಆಹಾರ : ಶೀತ, ಜೇಡ ಮತ್ತು ಕಾಳುಗಳು.

ಸಂತಾನಾಭಿವೃದ್ಧಿ : ಫೆಬ್ರವರಿಯಿಂದ ಅಕ್ಟೋಬರ್. ಹುಲ್ಲು, ನಾರು, ಬೇರುಗಳ ಆಳವಿಲ್ಲದ ಬಟ್ಟಲಿನಂತಹ ಗೂಡು, ನೀಲದ ಮೇಲೆ ಕಂದು ಕಲೆಗಳಿರುವ ೩-೪ ಬೂದು ಬಿಳಿ ಮೊಟ್ಟೆಗಳು.

—- 

ಕಂದು ಬಂಡೆ ಪಿಪಿಟ್ (ಕೊಕ್ಕಿನ ಎಪಳಿಕ) (BROWN ROCK PIPIT)
ಆಂ. ಸಿಮಿಲಿಸ್ (
Anthus similis)

393_69_PP_KUH

ಗಾತ್ರ : ೨೦ ಸೆಂ.ಮೀ.

ಆವಾಸ : ಕಲ್ಲುಬಂಡೆಗಳ ಮೇಲೆ; ಕುರುಚಲು ಕಾಡಿನಲ್ಲಿ. ವಲಸೆ ಪಕ್ಷಿ.

ಲಕ್ಷಣಗಳು : ಗಂಡುಹೆಣ್ಣು ಒಂದೇ ತೆರ. ದೊಡ್ಡಗಾತ್ರ, ಮಾಸಲು ಕಂದು ಬಣ್ಣದ ಉದ್ದಬಾಲದ ಪಿಪಿಟ್. ಮೇಲ್ಭಾಗದಲ್ಲಿ ಗೆರೆಗಳು; ಹುಬ್ಬು ಮಾಸಲು ಹಳದಿ; ಬಾಲ ಮತ್ತು ರೆಕ್ಕೆಗಳು ಹೆಚ್ಚು ಕಂದು. ಹೊಟ್ಟೆ ಮಾಸಲು ಕಂದು, ಹೊಟ್ಟೆಯ ಮೇಲೆ ಗೆರೆಗಳಿಲ್ಲ.

ಆಹಾರ : ಕೀಟಗಳು, ಸಣ್ಣ ಹಣ್ಣುಗಳು.

ಸಂತಾನಾಭಿವೃದ್ಧಿ : ಹಿಮಾಲಯದಲ್ಲಿ ಚಳಿಗಾಲದಲ್ಲಿ ದಕ್ಷಿಣಕ್ಕೆ ವಲಸೆ.

—- 

ಮರದ ಪಿಪಿಟ್ (TREE PIPIT)
ಆಂ. ಹಾಡ್ ಗ್ಗೊನಿ (
Anthus hodgsoni)

394_69_PP_KUH

ಗಾತ್ರ : ೧೫ ಸೆಂ.ಮೀ.

ಆವಾಸ : ಕಾಡು, ಹುಲ್ಲಿರುವ ಬೆಟ್ಟದ ಇಳಿಜಾರು. ವಲಸೆ ಪಕ್ಷಿ.

ಲಕ್ಷಣಗಳು : ಗಂಡುಹೆಣ್ಣು ಒಂದೇ ತೆರ. ಆಲಿವ್ ಕಂದು ಮೇಲ್ಭಾಗದಲ್ಲಿ ಕಂದು ಬಣ್ಣ ರೇಖೆಗಳು, ಮಾಸಲು ಬಿಳಿ ಹುಬ್ಬು ತಿಳಿಮಾಸಲು ಬಿಳಿ ಕೆಳಭಾಗ. ಕಂದು ಗೆರೆಗಳು ಹೆಚ್ಚು, ಗರಿಗಳ ಎರಡು, ಮತ್ತು ಬಾಲದ ಹೊರ ಗರಿ ಬಿಳಿ.

ಆಹಾರ : ಕೀಟ, ಹುಲ್ಲು ಕಳೆಗಳ ಬೀಜ.

ಸಂತಾನಾಭಿವೃದ್ಧಿ : ಹಿಮಾಲಯದಲ್ಲಿ. ಚಳಿಗಾಲದಲ್ಲಿ ವಲಸೆ.

—- 

ಉದ್ದಬಾಲದ ಕಳಿಂಗ (LONGTAILED SHRIKE)
ಲೇನಿಯಸ್ ಸ್ಕಾಕ್ (
Lanius schach)

395_69_PP_KUH

ಗಾತ್ರ : ೨೫ ಸೆಂ.ಮೀ.

ಆವಾಸ : ಉದ್ಯಾನ, ತೋಟ, ಹೊಲಗದ್ದೆ ಮತ್ತು ತೆರೆದ ಕಾಡುಗಳಲ್ಲಿ ಇರುವ ಇದು ಸ್ಥಳೀಯ ಪಕ್ಷಿ.

ಲಕ್ಷಣಗಳು : ಗಂಡು ಹೆಣ್ಣುಗಳು ನಡುವೆ ವ್ಯತ್ಯಾಸವಿಲ್ಲ. ತಲೆ ಕುತ್ತಿಗೆ ಮತ್ತು ಬೆನ್ನು ಬೂದು ಬಣ್ಣ. ಬಾಲದ ಬುಡ ಮತ್ತು ಹೊಟ್ಟೆಯ ಕೆಳಭಾಗ ಕೆಂಗಂದು. ಗಿಡ್ಡಬಲಿಷ್ಠ ಕೊಕ್ಕು. ಕಪ್ಪು ರೆಕ್ಕೆಯ ಅಂಚಿನಲ್ಲಿ ಬಿಳಿ ಚುಕ್ಕೆ. ಉದ್ದನೆಯ ಬಾಲ. ಹಣೆ ಮತ್ತು ಕಣ್ಣುಗಳನ್ನು ಒಳಗೊಂಡ ಕಪ್ಪುಪಟ್ಟಿ ಇರುತ್ತದೆ.

ಆಹಾರ : ಕೀಟ, ಇಲಿ, ಚಿಕ್ಕ ಹಕ್ಕಿಗಳ ಮತ್ತು ಸರೀಸೃಪಗಳನ್ನು ತಿನ್ನುತ್ತವೆ.

ಸಂತಾನಾಭಿವೃದ್ಧಿ : ಫೆಬ್ರವರಿಯಿಂದ ಜುಲೈನ ಅವಧಿ. ಕಡ್ಡಿ, ಹುಲ್ಲು, ಉಲ್ಲನ್ ಇತ್ಯಾದಿಗಳ ಆಳವಾದ ಬಟ್ಟಲಿನಂತಹ ಗೂಡು ನಿರ್ಮಿಸಿ ೩-೫ ಹಸಿರುಬಿಳಿ ಮೊಟ್ಟೆಗಳನ್ನಿಡುತ್ತದೆ.