ಕಾಡು ಸಿಪಿಲೆ (FOREST WAGTAIL)
ಮಾಟಸಿಲ್ಲ ಇಂಡಿಕ (
Motacilla indica)

396_69_PP_KUH

ಗಾತ್ರ : ೧೭ ಸೆಂ.ಮೀ.

ಆವಾಸ : ತೊರೆಗಳ ಸಕ್ಕ, ಕಾಡು, ವ್ಯವಸಾಯ ಭೂಮಿ ಇತ್ಯಾದಿ. ವಲಸೆ ಹಕ್ಕಿ.

ಲಕ್ಷಣಗಳು : ಗಂಡು ಹೆಣ್ಣು ಒಂದೇ ತೆರನಾಗಿವೆ. ಆಲಿವ್ ಕಂದು ಮೇಲ್ಭಾಗ, ಹಳದಿಬಿಳಿ ರೆಕ್ಕೆ ರೇಖೆಗಳು. ಕಪ್ಪು ಬಾಲದ ಅಂಚಿನಲ್ಲಿ ಬಿಳಿ ಅಂಚು, ಬಿಳಿ ಹೊಟ್ಟೆ, ಕತ್ತು ಮತ್ತು ಎದೆಯ ಮೇಲೆ ಎರಡು ಅಡ್ಡ ರೇಖೆಗಳು, ಬಿಳಿ ಹುಬ್ಬು, ಬಾಲ ಕುಣಿಸುತ್ತಿರುತ್ತದೆ.

ಆಹಾರ : ಕೀಟ, ಚಿಕ್ಕ ಬಸವನಹುಳು, ಎರೆಹುಳು.

ಸಂತಾನಾಭಿವೃದ್ಧಿ : ಅಸ್ಸಾಮಿನಲ್ಲಿ. ಚಳಿಗಾಲದಲ್ಲಿ ವಲಸೆ.

—- 

ಹಳದಿ ಸಿಪಿಲೆ (YELLOW WAGTAIL)
ಮಾ. ಫ್ಲಾವ (
Motacilla flava)

397_69_PP_KUH

ಗಾತ್ರ : ೧೮ ಸೆಂ.ಮೀ.

ಆವಾಸ : ಜೌಗು ಪ್ರದೇಶ, ಕಾಂಡ್ಲವನ, ವ್ಯವಸಾಯ ಭೂಮಿ. ವಲಸೆ ಪಕ್ಷಿ.

ಲಕ್ಷಣಗಳು : ಗಂಡುಹೆಣ್ಣು ಹೆಚ್ಚು ಕಡಿಮೆ ಒಂದೇ ತೆರ. ಆವಿಲ್ ಬೆನ್ನು, ಬಿಳುಪು ಬೂದು ತಲೆ, ಬಿಳಿ ಹುಬ್ಬು, ಕಣ್ನು ಮೂಲಕ ಕಪ್ಪು ಅಡ್ಡ ರೇಖೆ, ಕಡುಹಳದಿ ಕುತ್ತಿಗೆ, ಎದೆ, ಹೊಟ್ಟೆ, ಕಪ್ಪು ಬಾಲ. ಬಾಲ ಕುಣಿಸುತ್ತಿರುತ್ತದೆ.

ಆಹಾರ : ಕೀಟಗಳು.

ಸಂತಾನಾಭಿವೃದ್ಧಿ : ಹಿಮಾಲಯದಲ್ಲಿ. ಚಳಿಗಾಲದಲ್ಲಿ ವಲಸೆ.

 —-

ಹಳದಿತಲೆ ಸಿಪಿಲೆ (YELLOWHEADED WAGTAIL)
ಮಾ. ಸಿಟ್ರಿಯೋಲ (
Motacilla citreola)

398_69_PP_KUH

ಗಾತ್ರ : ೧೯ ಸೆಂ.ಮೀ.

ಆವಾಸ : ಜೌಗು ಪ್ರದೇಶ, ತೇವವಾಗಿರುವ ಗದ್ದೆ, ಬಯಲು. ವಲಸೆ ಪಕ್ಷಿ.

ಲಕ್ಷಣಗಳು : ಬೂದು ಬೆನ್ನು, ತಲೆ, ಕತ್ತು, ಎದೆ, ಹೊಟ್ಟೆ, ಹಳಿದಿ ಪ್ರಮುಖ ಲಕ್ಷಣ. ಕಪ್ಪು ರೆಕ್ಕೆಗಳ ಮೇಲೆ ಬಿಳಿ ರೇಖೆಗಳು. ಹೆಣ್ಣು : ಅಗಲ ಹಳದಿ ಹುಬ್ಬು, ತಲೆ, ಬೆನ್ನು ಬೂದು, ಎದೆ ತಿಳಿ ಹಳದಿ, ಹೊಟ್ಟೆ ಬೂದು ಹಳದಿ. ಬಾಲ, ರಕ್ಕೆಗಳ ಗಂಡಿಗಿಂತ ತಿಳಿ ವಿನ್ಯಾಸ.

ಆಹಾರ : ಕೀಟಗಳು, ಸಣ್ಣ ಮೃದ್ವಂಗಿಗಳು.

ಸಂತಾನಾಭಿವೃದ್ಧಿ : ಹಿಮಾಲಯದಲ್ಲಿ. ಚಳಿಗಾಲದಲ್ಲಿ ವಲಸೆ.

 —-

ಬೂದು ಸಿಪಿಲೆ (GREY WAGTAIL)
ಮಾ. ಸಿನೆರಿಯ (
Motacilla cinerea)

399_69_PP_KUH

ಗಾತ್ರ : ೧೯ ಸೆಂ.ಮೀ.

ಆವಾಸ : ನಿಧಾನವಾಗಿ ಹರಿಯುವ ತೊರೆ, ಬೆಟ್ಟಗಳ ಬುಡ, ಕಡಿದ ಕಾಡುಗಳಲ್ಲಿ. ವಲಸೆ ಹಕ್ಕಿ.

ಲಕ್ಷಣಗಳು : ಉಳಿದ ಸಿಪಿಲೆಗಳಿಗಿಂತ ಉದ್ದದ ಬಾಲ. ಹೆಚ್ಚು ಕಡಿಮೆ ಬೂದುಹಳದಿ ಸಿಪಿಲೆ. ಗಂಡುಹೆಣ್ಣುಗಳ ನಡುವೆ ವ್ಯತ್ಯಾಸವಿಲ್ಲ. ಬಿಡಿ ಗಂಟಲು, ತಿಳಿ ಹಳದಿ ಕೆಳಭಾಗ. ಹುಬ್ಬು ನೀಳ ಹಾಗೂ ಬಿಳಿ, ಬಾಲದ ಬುಡ ಹಳದಿ, ತುದಿಕಪ್ಪು.

ಆಹಾರ : ಕೀಟಗಳು, ಸಣ್ಣ ಮೃದ್ವಂಗಿಗಳು.

ಸಂತಾನಾಭಿವೃದ್ಧಿ : ಹಿಮಾಲಯದಲ್ಲಿ. ಚಳಿಗಾಲದಲ್ಲಿ ವಲಸೆ ಬರುತ್ತವೆ.

—- 

ವರ್ಣಮಯ ಸಿಪಿಲೆ (PIED WAGTAIL)
ಮಾ. ಮಾಡೆರಾಸ್ಪೆಟೆನ್ಸಿಸ್ (
Motacilla maderasptensis)

400_69_PP_KUH

ಗಾತ್ರ : ೨೧ ಸೆಂ.ಮೀ.

ಆವಾಸ : ಕಲ್ಲು ಬಂಡೆಗಳ ತೊರೆ ; ನದಿ, ಕೊಳ, ಕೆರೆ ಮತ್ತು ವ್ಯವಸಾಯ ಭೂಮಿ. ಸ್ಥಳೀಯ ಪಕ್ಷಿ.

ಲಕ್ಷಣಗಳು : ಅತ್ಯಂತ ಸಾಮಾನ್ಯ ಸಿಪಿಲೆ. ಕಪ್ಪು ಮೇಲ್ಭಾಗ ; ದಟ್ಟ ಬಿಳಿಹುಬ್ಬು ; ದೊಡ್ಡ ರೆಕ್ಕೆಗಳ ಮೇಲೆ ಅಗಲವಾದ ಬಿಳಿ ಪಟ್ಟಿ; ಕಪ್ಪು ತಲೆ, ಕುತ್ತಿಗೆ, ಬೆನ್ನು ಮತ್ತು ಬಾಲ, ಹೊಟ್ಟೆ ಬಿಳಿ; ಹೆಣ್ಣು ಸಾಮಾನ್ಯವಾಗಿ ಬೂದು ಬಣ್ಣ. ವಿನ್ಯಾಸ ಗಂಡಿನದೇ.

ಆಹಾರ : ಕೀಟಗಳು.

ಸಂತಾನಾಭಿವೃದ್ಧಿ : ಮಾರ್ಚಿನಿಂದ ಸೆಪ್ಟೆಂಬರ್. ಬೇರು, ಹುಲ್ಲು, ನಾರುಗಳ ಬಟ್ಟಿಲಿನಂತಹ ಗುಡು, ಹಳೆಯ ಮನೆಯಲ್ಲಿ ಮುಂದೆ ಚಾಚಿದ ಬಂಡೆಯ ಮೇಲೆ ಅಥವಾ ಸೇತುವೆ ಕೆಳಗೆ. ಕಲೆಗಳಿರುವ ೩-೪ ಬೂದುಹಸಿರು ಅಥವಾ ಕಂದು ಮೊಟ್ಟೆಗಳು.