ವಲಸೆ ಬರುವ ಉಲಿಯಕ್ಕಿಗಳು (THICK BILLED WARBLER)
ದಪ್ಪ ಕೊಕ್ಕಿನ ಉಲಿಯಕ್ಕಿ (
Acrocephalus aedon)

366_69_PP_KUH

ಗಾತ್ರ : ೨೦ ಸೆಂ.ಮೀ.

ಆವಾಸ : ಜೌಗು ಪ್ರದೇಶ ಮತ್ತಿತರ ನೀರಿರುವ ಹುಲ್ಲಿನ ಪ್ರದೇಶದಲ್ಲಿ ಕಂಡು ಬರುತ್ತವೆ.

ಲಕ್ಷಣಗಳು : ಗಂಡು ಹೆಣ್ಣುಗಳ ನಡುವೆ ವ್ಯತ್ಯಾಸವಿಲ್ಲ. ಏಪ್ರಿಲ್‌ನಲ್ಲಿ ಹೊರ ಹೋಗುವ ವಲಸೆ ಹಕ್ಕಿ.

ಆಹಾರ : ಕೀಟಗಳು

ಸಂತಾನಾಭಿವೃದ್ಧಿ : ನಿರ್ದಿಷ್ಟವಾಗಿ ತಿಳಿದಿಲ್ಲ.

—- 

ಕಿನ್ ಉಲಿಯಕ್ಕಿ (FRANKLIN’S WREN WARBLER)
ಪ್ರಿನಿಯ ಹೊಡ್ಗ್ ಸೋನಿ (
Prinia hodgsonii)

367_69_PP_KUH

ಗಾತ್ರ : ೧೧ ಸೆಂ.ಮೀ.

ಆವಾಸ : ಎಲೆಯುದುರುವ ಕಾಡು, ಕಾಡಿನ ಅಂಚು. ಕುರುಚಲು ಸಸ್ಯಗಳ ಪ್ರಧೇಶಗಳಲ್ಲಿ ಕಾಣುವ ಸ್ಥಳೀಯ ಪಕ್ಷಿ.

ಲಕ್ಷಣಗಳು : ಗಂಡುಹೆಣ್ಣುಗಳ ನಡುವೆ ವ್ಯತ್ಯಾಸವಿಲ್ಲ. ಮಸುಕು ಬೂದು ಬಣ್ಣದ ಚಿಕ್ಕ ಹಕ್ಕಿ. ತುಕ್ಕುಕಂದು ರೆಕ್ಕೆಗಳು ಕೆಳಭಾಗ ಬಿಳಿ, ಎದೆಯಲ್ಲಿ ಬೂದು ಬಣ್ಣದ ಅಡ್ಡ ಪಟ್ಟಿ, ಕಪ್ಪು ಬಿಳುಪು ಉದ್ದನೆಯ ಬಾಲದ ತುದಿ ಇರುತ್ತದೆ.

ಆಹಾರ : ಪ್ರಮುಖವಾಗಿ ಕೀಟಗಳು, ಮಕರಂದ ಹೀರುವುದೂ ಉಂಟು.

ಸಂತಾನಾಭಿವೃದ್ಧಿ : ಜೂನ್‌ನಿಂದ ಅಕ್ಟೋಬರ‍್ನ ಅವಧಿ. ನಾರು ಹುಲ್ಲುಗಳ ಬಟ್ಟಲಿನಂತಹ ಗೂಡು ನೇತಾಡುವ ಎಲೆಗಳಲ್ಲಿ ರಚಿಸುತ್ತದೆ. ಕೆಂಪು ಗುರುತಿರುವ ೩-೪ ತಿಲಿನೀಲಿಬಿಳಿ ಮೊಟ್ಟೆಗಳಿಡುತ್ತವೆ.

 —-

ಸರಳ ರೆನ್ ಉಲಿಹಕ್ಕಿ (PLAIN WREN WARBLER)
ಪ್ರಿನಿಯ ಸಬ್ ಫ್ಲೇವ (
Prinia subflava)

368_69_PP_KUH

ಗಾತ್ರ : ೧೩ ಸೆಂ.ಮೀ.

ಆವಾಸ : ವ್ಯವಸಾಯದ ಭೂಮಿ, ಹುಲ್ಲುಗಾವಲು, ಕುರುಚಲು ಕಾಡುಗಳಲ್ಲಿರುವ ಸ್ಥಳೀಯ ಪಕ್ಷಿ.

ಲಕ್ಷಣಗಳು : ಗಂಡುಹೆಣ್ಣು ಒಂದೇ ತೆರನಾಗಿರುತ್ತವೆ. ತಿಳಿ ಕಂದು ಮೇಲ್ಭಾಗ, ಬಿಳಿ ಹುಬ್ಬು, ಕಡುಕಂದು ಬಾಲರೆಕ್ಕೆಗಳು, ಅಡ್ಡ ಗೆರೆಗಳ ಉದ್ದೆ ಬಾಲತುದಿ ಆಯಪಲ್‌ಅಂಚು ಬಿಳಿ, ಕೆಳಭಾಗ ಮಾಸಲು ಬಿಳಿ ಇರುತ್ತದೆ.

ಆಹಾರ : ಇರುವೆ, ದುಂಬಿ, ಇತರೆ. ಕೀಟಗಳು, ಹುಳುಗಳು ಮತ್ತು ಮಕರಂದವನ್ನು ಸೇವಿಸುತ್ತವೆ.

ಸಂತಾನಾಭಿವೃದ್ಧಿ : ಮಾರ್ಚ್‌ನಿಂದ ಸೆಪ್ಟೆಂಬರ‍್ನ ಅವಧಿ. ಉದ್ದನೆಯ, ನೆತ್ತಿಯ ಮೇಲೆ ರಂಧ್ರವಿರುವ ಹುಲ್ಲುಗಳ ಗೂಡು ರಚಿಸಿ ೩-೫ ಹಸಿರು ನೀಲಿ ಮೊಟ್ಟೆಗಳನ್ನು ಇಡುತ್ತದೆ.

—- 

ಬೂದುರೆನ್ ಉಲಿಹಕ್ಕಿ (ASHY WREN-WARBLER)
ಪ್ರಿ. ಸೋಸಿಯಾಲಿಸ್ (
Prinia socialis)

369_69_PP_KUH

ಗಾತ್ರ : ೧೩ ಸೆಂ.ಮೀ.

ಆವಾಸ : ಕಾಡುಗಳ ಅಂಚು, ಕುರುಚಲು ಕಾಡು, ಉದ್ಯಾನ, ವ್ಯವಸಾಯ ಭೂಮಿಗಳ ಕಡೆ ಇರುವ ಸ್ಥಳೀಯ ಪಕ್ಷಿ.

ಲಕ್ಷಣಗಳು : ಗಂಡುಹೆಣ್ಣು ಒಂದೇ ತೆರನಾಗಿವೆ. ಬೂದು ಕಂದು ಮೇಲ್ಭಾಗ, ಮಾಸಲು ಬಿಳಿ ಕೆಳಭಾಗ. ಉದ್ದನೆಯ, ಅಡ್ಡ ಗುರುತುಗಳ ಕಪ್ಪು ಬಿಳುಪು ತುದಿಯ ಬಾಲ; ಬಾಲ ರೆಕ್ಕೆ ಕಂದು, ಹುಬ್ಬು ಅಸ್ಪಷ್ಟವಾಗಿರುತ್ತದೆ.

ಆಹಾರ : ಕೀಟಗಳು ಮತ್ತು ಮಕರಂದ.

ಸಂತಾನಾಭಿವೃದ್ಧಿ : ಮಳೆಗಾಲದ ಸಮಯ. ಜೇಡನ ಬಲೆಯಿಂದ ಜೋಡಿಸಿದ ಎಲೆಗಳ ಗೂಡು ರಚಿಸಿ ೩-೪ ಇಟ್ಟಿಗೆ ಕೆಂಪು ಮೊಟ್ಟೆಗಳನ್ನಿಡುತ್ತದೆ.

—- 

ಕಾಡಿನ ರೆನ್ ಉಲಿಹಕ್ಕಿ (JUNGLE WREN WARBLER)
ಪ್ರಿ. ಸಿಲ್ವಟಿಕ (
Prinia sylvatica)

370_69_PP_KUH

ಗಾತ್ರ : ೧೩ ಸೆಂ.ಮೀ.

ಆವಾಸ : ಕುರುಚಲು ಕಾಡು, ಎತ್ತರದ ಹುಲ್ಲುಗಾವಲುಗಳಲ್ಲಿ ಇರುವ ಸ್ಥಳೀಯ ಪಕ್ಷಿ.

ಲಕ್ಷಣಗಳು : ಗಂಡುಹೆಣ್ಣು ಒಂದೇ ತೆರನಾಗಿವೆ. ಮಣ್ಣಿನ ಕಂದು ಬಣ್ಣದ ಚಿಕ್ಕ ಪಕ್ಷಿ. ಉದ್ದನೆಯ ಅಡ್ಡ ಗೆರೆಗಳ ಬಾಲ, ಹುಬ್ಬು ತೆಳುಗೆರೆ, ಬಾಲದ ತುದಿಬಿಳಿ, ರೆಕ್ಕೆಗಳು ಸಮನಾಗಿವೆ. ಕೆನೆ ಬಣ್ಣದ ಕೆಳಭಾಗ, ಗಂಟಲು ತಿಳಿ ಬೂದು ಇರುತ್ತದೆ.

ಆಹಾರ : ಕೀಟಗಳು ಮತ್ತು ಜೇಡನನ್ನು ತಿನ್ನುತ್ತದೆ.

ಸಂತಾನಾಭಿವೃದ್ಧಿ : ಮಾರ್ಚನಿಂದ ಅಕ್ಟೋಬರ‍್ನ ಅವಧಿ. ಪೊದೆಗಳಲ್ಲಿ ಹುಲ್ಲು, ಜೇಡನ ಬಲೆಯಿಂದ ಚೆಂಡಿನಂತಹ ಗೂಡುರಚಿಸಿ ೪ ಮೊಟ್ಟೆಗಳನ್ನಿಡುತ್ತದೆ.