ಬೂದು ತಲೆಯ ನೊಣ ಹಿಡುಕ (GREYHEADED FLYCATCHER)
ಕ್ಯುಲಿಸಿಕ್ಯಾಪಾ ಸಿಲೋನೆನ್ಸಿಸ್ (
Culicicapa ceylonensis)

361_69_PP_KUH

ಗಾತ್ರ : ೧೩ ಸೆಂ.ಮೀ.

ಆವಾಸ : ಮರಗಳಿರುವ ಪ್ರದೇಶ, ಕಾಡುಗಳು, ವಲಸೆ ಪಕ್ಷಿ.

ಲಕ್ಷಣಗಳು : ಗಂಡುಹೆಣ್ಣುಗಳ ನಡುವೆ ವ್ಯತ್ಯಾಸವಿಲ್ಲ. ಬೂದು ತಲೆ, ಕುತ್ತಿಗೆ, ಗಂಟಲು ಮತ್ತು ಹಣೆ. ಎದೆ, ಹೊಟ್ಟೆ ಹಳದಿ, ಹಳದಿಹಸಿರು ಮೇಲ್ಭಾಗ. ಕಂದು ಬಾಲ ಮತ್ತು ರೆಕ್ಕೆಗಳ ಮೇಲೆ ಹಳದಿ ರೇಖೆಗಳು ಇರುತ್ತವೆ.

ಆಹಾರ : ಕೀಟಗಳನ್ನು ತಿನ್ನುತ್ತವೆ.

ಸಂತಾನಾಭಿವೃದ್ಧಿ : ಹಿಮಾಲಯದಲ್ಲಿ, ಚಳಿಗಾಲದಲ್ಲಿ ಕರ್ನಾಟಕಕ್ಕೆ ವಲಸೆ ಬರುತ್ತವೆ.

  —-

ಬಿಳಿಹುಬ್ಬಿನ ಬೀಸಣಿಗೆ ಬಾಲ ( WHITEBROWED FANTAIL FLYCATCHER)
ರ‍್ಹಿಪಿಡ್ಯುರ ಆರಿಯೋಲ (
Rhipidura aureola)

362_69_PP_KUH

ಗಾತ್ರ : ೧೮ ಸೆಂ.ಮೀ.

ಆವಾಸ : ಕಾಡು, ಮರಗಳಿರುವ ಪ್ರದೇಶದಲ್ಲಿ ಕಾಣುವ ಸ್ಥಳೀಯ ಪಕ್ಷಿ.

ಲಕ್ಷಣಗಳು : ಗಂಡು ಹೆಣ್ಣು ಒಂದೇ ತೆರನಾಗಿವೆ. ಹೊಗೆ ಕಂದು ಬಣ್ಣದ ನೊಣಹಿಡುಕ. ಹಣೆ ಅಗಲ, ಬಿಳಿ. ಬಿಳಿ ಹುಬ್ಬು ಹಿಂತಲೆಯವರೆಗೆ, ಎದೆ, ಹೊಟ್ಟೆ, ಬಿಳಿ. ಬೀಸಣೆಗೆಯಂತಹ ಬಾಲ ಪ್ರಮುಖ ಲಕ್ಷಣ. ಬಾಲಕ್ಕೆ ಬಿಳಿ ಅಂಚು, ರೆಕ್ಕೆಗಳ ಮೇಲೆ ಬಿಳಿ ಚುಕ್ಕೆಗಳ ಸಾಲು ಕಂಡುಬರುತ್ತದೆ.

ಆಹಾರ : ಕೀಟಗಳು, ಹೆಚ್ಚಾಗಿ ನೊಣದಂಥ ಕೀಟಗಳನ್ನು ತಿನ್ನುತ್ತದೆ.

ಸಂತಾನಾಭಿವೃದ್ಧಿ : ಫೆಬ್ರವರಿಯಿಂದ ಆಗಸ್ಟ್. ತೆಳುವಾದ ಹುಲ್ಲುಗಳನ್ನು ಟೊಂಗೆಗೆ ನೀಟಾಗಿ ಜೋಡಿಸಿದ ಬಟ್ಟಲಿನಂತಹ ಗೂಡು. ಕಂದು ಚುಕ್ಕೆಗಳಿರುವ, ಉಂಗುರವಿರುವ, ತಿಳಿಕೆಂಪು, ಕೆನೆಬಣ್ಣದ ಮೊಟ್ಟೆಗಳನ್ನಿಡುತ್ತವೆ.

  —-

ಬಿಳಿ ಚುಕ್ಕೆಯ ಬೀಸಣೆಗೆ ಬಾಲ (WHITESPOTTED FANTAIL FLYCATCHER)
ರ‍್ಹಿ. ಆಲ್ಬಿಕೊಲ್ಲಿಸ್ (
Rhipidura albicollis)

363_69_PP_KUH

ಗಾತ್ರ : ೧೯ ಸೆಂ.ಮೀ.

ಆವಾಸ : ಕಾಡು, ತೋಟ, ತೋಪು, ಕುರುಚಲು ಕಾಡು ಮತ್ತು ಹಳ್ಳಿಪೇಟೆಗಳಲ್ಲಿ ಕಂಡುಬರುವ ಸ್ಥಳೀಯ ಪಕ್ಷಿ.

ಲಕ್ಷಣಗಳು : ಗಂಡುಹೆಣ್ಣುಗಳ ನಡುವೆ ವ್ಯತ್ಯಾಸವಿಲ್ಲ. ಹೊಗೆ ಕಂದು ಬಣ್ಣದ ಚಟುವಟಿಕೆಯ ಹಕ್ಕಿ. ಬಿಳಿ ಹುಬ್ಬು, ಬಿಳಿ ಚುಕ್ಕೆಗಳ ಎದೆ, ಬಿಳುಚು ಹೊಟ್ಟೆ, ಬಿಳಿ ಗಂಟಲು ಪ್ರಮುಖ ಲಕ್ಷಣ. ಬೀಸಣಿಗೆಯಂತಹ ಬಾಲ, ಬಾಲದ ಅಂಚು ಬಿಳಿ ಇರುತ್ತದೆ.

ಆಹಾರ : ಕೀಟಗಳು ಮತ್ತು ಅವುಗಳ ಮರಿಗಳನ್ನು ತಿನ್ನುತ್ತದೆ.

ಸಂತಾನಾಭಿವೃದ್ಧಿ : ಮಾರ್ಚ್‌ನಿಂದ ಆಗಸ್ಟ್‌ನ ಅವಧಿ. ಹುಲ್ಲು ಎಳೆನಾರುಗಳ ಸುಂದರ ಬಟ್ಟಲು ಗೂಡು. ಹೊರಗಡೆ ಜೇಡಿನ ಬಲೆಗಳ ಲೇಪ.

 —- 

ಬೀಸಣಿಗೆ ಬಾಲದ ಉಲಿಯಕ್ಕಿ (STREAKED WARBLER)
ಸಿಸ್ಟಿಕೋಲ ಜಾಂಸಿಡಿಸ್ (
Cisticola juncidis)

364_69_PP_KUH

ಗಾತ್ರ : ೧೦ ಸೆಂ.ಮೀ.

ಆವಾಸ : ಗದ್ದೆಗಳು, ಮೈದಾನ ಮತ್ತು ಹುಲ್ಲುಗಾವಲುಗಳನ್ನು ಕಂಡುಬರುವ ಸ್ಥಳೀಯ ಪಕ್ಷಿ.

ಲಕ್ಷಣಗಳು : ಗುಬ್ಬಚ್ಚಿಯಂತಹ ಸಣ್ಣ ಪಕ್ಷಿ. ಗಂಡುಹೆಣ್ಣು ಒಂದೇ ತೆರನಾಗಿವೆ. ಗೆರೆಗಳಿರುವ ಕಂದು ಬಣ್ಣದ ಮೇಲ್ಭಾಗ, ಕೆಳಭಾಗ ಬಿಳಿ, ಬಾಲದ ತುದಿ ಬಿಳಿ. ಬೀಸಣಿಗೆಯಂತೆ ಬಾಲವನ್ನು ಬಿಚ್ಚಿರುತ್ತದೆ. ಹುಬ್ಬು ತಿಳಿ ಹಳದಿಕಂದು.

ಆಹಾರೆ : ಸಣ್ಣ ಕೀಟಗಳು ಕಂಬಳಿ ಹುಳುಗಳನ್ನು ತಿನ್ನುತ್ತದೆ.

ಸಂತಾನಾಭಿವೃದ್ಧಿ : ಮಳೆಗಾಲದ ಸಮಯದಲ್ಲಿ. ಹುಲ್ಲು, ಎಲೆಗಳ ಗೂಡು. ಜೇಡನ ಬಲೆಯ ಉದ್ದನೆಯ ಗೂಡು ಮೆಲ್ಭಾಗದಲ್ಲಿ ಪ್ರವೇಶ ದ್ವಾರವಿರುತ್ತದೆ. ಚುಕ್ಕೆಗಳಿರುವ ೩-೫ ತಿಳಿನೀಲಿ ಬಿಳಿ ಮೊಟ್ಟೆಗಳನ್ನಿಡುತ್ತದೆ.

 —-

ಸಗ್ಗವಕ್ಕಿ (PARADISE FLYCATCHER)
ಟರ್‌ಪ್ಸಿಫೋನ್ ಪಾರಡಿಸಿ (Terpsiphone paradisi)

365_69_PP_KUH

ಗಾತ್ರ : ೨೦ ಸೆಂ.ಮೀ.

ಆವಾಸ : ಮರಗಳಿರುವ ಪ್ರದೇಶ. ತೋಪು, ಮನುಷ್ಯವಾಸದ ಸಮೀಪವಿರುವ ಸ್ಥಳೀಯ ಪಕ್ಷಿ.

ಲಕ್ಷಣಗಳು : ಗಂಡು ಶುದ್ಧ ಬಿಳಿ, ರಿಬ್ಬನ್ನಿನಂತಹ ಉದ್ದನೆಯ ಬಾಲ, ತಲೆ, ಕುತ್ತಿಗೆ, ಕಪ್ಪು, ತಲೆಯ ಮೇಲೆ ಕಪ್ಪು ಶಿಖೆ. ರೆಕ್ಕೆಯ ತುದಿ ಕಪ್ಪು. ಹೆಣ್ಣು : ಕಂದು ಮೇಲ್ಭಾಗ, ಹೊಟ್ಟೆ ಬೂದು, ತಲೆ, ಕುತ್ತಿಗೆ, ಕಪ್ಪು. ಕಪ್ಪು ಶಿಖೆ. ಗಲ್ಲ, ಗಂಟಲು ಹೊಗೆ ಬೂದು ಇರುತ್ತದೆ.

ಆಹಾರ : ನೊಣಗಳಂತಹ ಕೀಟಗಳನ್ನು ತಿನ್ನುತ್ತದೆ.

ಸಂತಾನಾಭಿವೃದ್ಧಿ : ಫೆಬ್ರವರಿಯಿಂದ ಜುಲೈನ ಅವಧಿ. ನಾರು, ಬೇರು, ಹುಲ್ಲುಗಳಿಂದ ಉಂಟಾದ ಬಟ್ಟಲಿನಂತಹ ಗೂಡು. ಕೆಂಪು ಚುಕ್ಕೆಗಳಿರುವ ೩-೫ ತಿಳಿ ಕೆಂಪು ಕೆನೆಬಣ್ಣದ ಮೊಟ್ಟೆಗಳಿರುತ್ತವೆ.