ಬಿಳಿ ಸಿಪಿಲೆ (WHITE WAGTAIL)
ಮಾ. ಆಲ್ಬ (
Motacilla alba)

401_69_PP_KUH

ಗಾತ್ರ : ೧೮ ಸೆಂ.ಮೀ.

ಆವಾಸ : ತೇವವಿರುವ ಮೈದಾನ, ನದಿತೀರ, ವ್ಯವಸಾಯ ಭೂಮಿ, ರಸ್ತೆ ಬದಿ ಚರಂಡಿ ಇತ್ಯಾದಿ. ವಲಸೆ ಪಕ್ಷಿ.

ಲಕ್ಷಣಗಳು : ತಲೆ, ಕುತ್ತಿಗೆ, ಗಂಟಲು, ಎದೆ ಬೆನ್ನು ಕಪ್ಪು, ಹೊಟ್ಟೆ, ಹಣೆ ಬಿಳಿ, ಕಪ್ಪು ಕಣ್ಣುಗಳ ಸುತ್ತ ಬಿಳಿ ಛಾಯೆ. ಕಪ್ಪು ಬಾಲ, ರೆಕ್ಕೆಗಳ ಬುಡ ಬಿಳಿ, ಉಳಿದಂತೆ ಕಪ್ಪು ರೇಖೆಗಳು, ಕಾಲು, ಕೊಕ್ಕು ಕಪ್ಪು.

ಆಹಾರ : ಕೀಟಗಳು.

ಸಂತಾನಾಭಿವೃದ್ಧಿ : ಹಿಮಾಲಯದಲ್ಲಿ. ಚಳಿಗಾಲದಲ್ಲಿ ಕರ್ನಾಟಕಕ್ಕೆ ವಲಸೆ ಬರುತ್ತದೆ.

 —-

ಕೆನ್ನೀಲಿಕಲಿ ಸೂರಕ್ಕಿ (PURPLE RUMPED SUNBIRD)
ನೆಕ್ಟರಿನಿಯ ಜೈಲೊನಿಕ
(Nectarinia zeylonica)

402_69_PP_KUH

ಗಾತ್ರ : ೧೦ ಸೆಂ.ಮೀ.

ಆವಾಸ : ತೆರೆಕಾಡು, ಹೂತೋಟ, ತೋಪು, ಸಸ್ಯಗಳು, ಹಳ್ಳಿ, ಪೇಟೆಗಳಲ್ಲಿ. ಸ್ಥಳೀಯ ಪಕ್ಷಿ.

ಲಕ್ಷಣಗಳು : ಗಂಡು ಹೊಳೆಯುವ ಕಪ್ಪು, ಕೆಂಗಂದು ಮೇಲ್ಭಾಗ, ಲೋಹದ ಹಸಿರು ತಲೆ, ಲೋಹ ಕೆನ್ನೀಲಿ (rump)ಮತ್ತು ಗಂಟಲು, ಮರೂನ್ ಬಣ್ಣದ ಕತ್ತುಪಟ್ಟಿ ಎದೆ ಹೊಟ್ಟೆ ಹಳದಿ. ಮೊನಚಾದ, ಸ್ವಲ್ಪ ಬಾಗಿದ, ಉದ್ದನೆಯ ಕೊಕ್ಕು. ಹೆಣ್ಣುಗಂಡು ಜೊತೆಯಾಗಿರುತ್ತವೆ.

ಆಹಾರ : ಕೀಟ, ಜೇಡ ಮತ್ತು ಮಕರಂದ. ಹೂವುಗಳ ಪರಾಗಾರ್ಪಣೆಗೆ ಸಹಾಯಕವಾಗಿವೆ.

ಸಂತಾನಾಭಿವೃದ್ಧಿ : ವರ್ಷದಲ್ಲಿ ಕೆಲವು ಬಾರಿ. ಕಸಕಡ್ಡಿ, ತೊಗಟೆ, ಒಣಗಿದ ಹೂವು, ಜೇಡದ ಬಲೆ ಇತ್ಯಾದಿಗಳ ನೇತಾಡುವ ಅಂದವಲ್ಲದ ಗೂಡು. ಪ್ರದೇಶ ದ್ವಾರದಲ್ಲಿ ಹುಲ್ಲಿನ ಹೂಗಳ ಪೋರ್ಚ್ ೨-೩ ತಿಳಿ ಹಸಿರುಬಿಳಿ ಮೊಟ್ಟೆ.

—- 

ದಪ್ಪ ಕೊಕ್ಕಿನ ಹೂಕುಟುಕ (THICKBILLED FLOWER PECKER)
ಡಿಕೇಯಮ್ ಅಜೈಲ್ (
Dicaeum agile)

403_69_PP_KUH

ಗಾತ್ರ : ೯ ಸೆಂ.ಮೀ.

ಆವಾಸ : ಕಾಡು, ತೋಪು, ತೋಟ ಮತ್ತು ಉದ್ಯಾನ, ಸ್ಥಳೀಯ ಪಕ್ಷಿ.

ಲಕ್ಷಣಗಳು : ಗಂಡುಹೆಣ್ಣು ಒಂದೇ ತೆರನಾಗಿವೆ. ಆಲಿವ್ ಬೂದು ಮೇಲ್ಭಾಗ, ಹಸಿರು ಮಾಸಲು ಕೆಳಭಾಗ, ತಿಳಿಯಾದ ಗೆರೆಗಳಿವೆ. ದಪ್ಪ, ನೀಲಿ ಕೊಕ್ಕು, ಬಾಲದ ತುದಿ ಬಿಳ, ಕಿತ್ತಳೆ ಕೆಂಪು ಕಣ್ಣುಗಳು.

ಆಹಾರ : ಲಾಂಟಾನ, ಆಲ, ಬದನಿಕೆ ಮೊದಲಾದ ಸಸ್ಯಗಳ ಹಣ್ಣು, ಕೀಟ, ಜೇಡಗಳನ್ನು ತಿನ್ನುತ್ತದೆ.

ಸಂತಾನಾಭಿವೃದ್ಧಿ : ಜನವರಿಯಿಂದ ಜೂನ್, ಸಸ್ಯಜನ್ಯ ವಸ್ತುಗಳ ಅಂಡಾಕೃತಿಯ ಗೂಡು. ೨ ಬಿಳಿ ಮೊಟ್ಟೆಗಳು.

—- 

ಸಾದಾ ಹೂಕುಟುಕ (PLAIN FLOWER PECKER)
ಡಿಕೆಯಮ್ ಕಾನ್ ಕಲರ್ (
Dicaeum concolor)

404_69_PP_KUH

ಗಾತ್ರ : ೯ ಸೆಂ.ಮೀ.

ಆವಾಸ : ಎಲೆ ಉದುರುವ ಕಾಡು, ನಿತ್ಯಹರಿದ್ವರ್ಣ ಕಾಡು, ತೋಟ. ಸ್ಥಳೀಯ ಪಕ್ಷಿ.

ಲಕ್ಷಣಗಳು : ಗಂಡುಹೆಣ್ಣು ಒಂದೇ ತೆರ. ಟಿಕೆಲ್ಸ್ ಹೂ ಕುಟುಕ ಹೋಲುತ್ತದೆ. ಆದರೆ ಬಣ್ಣ ಹೆಚ್ಚು ಕಡುಕಂದು ಮತ್ತು ಕಪ್ಪು ಕೊಕ್ಕು. ಆಲಿವ್ ಹೊರ ಮೇಲ್ಭಾಗ. ತಿಳಿಹಳದಿ ಬೂದು ಕೆಳಭಾಗ.

ಆಹಾರ : ಚಿಕ್ಕ ಪುಟ್ಟ ಹಕ್ಕಿಗಳು, ಮಕರಂದ, ಕೀಟಗಳು.

ಸಂತಾನಾಭಿವೃದ್ಧಿ : ಜನವರಿಯಿಂದ ಆಗಸ್ಟ್. ಪೊದೆಯ ಮೇಲೆ ನಿರ್ಮಿಸುವ ಚೂರಗಲು ಹತ್ತಿಯ ಜೇನುಹುಟ್ಟಿನಂತಹ ಗೂಡು. ೨-೩ ಬಿಳಿ ಮೊಟ್ಟೆಗಳು.

—- 

ಚಿಕ್ಕ ಸೂರಕ್ಕಿ (SMALL SUNBIRD)
ನೆಕ್ಟೇರಿನಿಯಾ ಮಿನಿಮ (
Nectarinia minima)

405_69_PP_KUH

ಗಾತ್ರ : ೮ ಸೆಂ.ಮೀ.

ಆವಾಸ : ನಿತ್ಯಹರಿದ್ವರ್ಣ ಕಾಡು, ಕಾಪಿ, ಟಿ, ತೋಟಗಳು, ಗಿರಿಧಾಮದ ತೋಟಗಳು. ಸ್ಥಳೀಯ ಪಕ್ಷಿ.

ಲಕ್ಷಣಗಳು : ಗಂಡುಕೆನ್ನಿಲಿ ಸೂರಕ್ಕಿಯನ್ನು ಹೋಲುತ್ತದೆ. ಕಡು ಮರೂನ ಬೆನ್ನು, ಭುಜದ ಮೇಲೆ ಲೋಹ ಹಸಿರುಬಣ್ಣ ಅಗಲವಾದ ಕೆಂಪುಮರೂನ್ ಕತ್ತು ಪಟ್ಟಿ, ಹೊಟ್ಟೆ ಲಿಂಬೆಹಳದಿ, ತೆಳು, ಮೊನಚು, ಬಾಗಿದ ಕೊಕ್ಕು, ಹೆಣ್ಣು ಮೇಲ್ಭಾಗ ಆಲಿವ್ ಹಸಿರು, ಬಾಲದ ಬುಡ (ಸೊಂಟ) ಕೆಂಪು, ತಿಳಿಹಳದಿ ಕೆಳಭಾಗ.

ಆಹಾರ : ಮಕರಂದ, ಕೀಟ, ಜೇಡ.

ಸಂತಾನಾಭಿವೃದ್ಧಿ : ಡಿಸೆಂಬರಿನಿಂದ ಏಪ್ರೀಲ್. ಕಸ, ಕಡ್ಡಿ, ತೊಗಟೆ, ಎಲೆ, ಒಣಗಿದ ಹೂವು, ಜೇಡನ ಬಲೆ ಇತ್ಯಾದಿಗಳ ನೇತಾಡುವ ಅಂದವಲ್ಲದ ಗೂಡು. ಪೊದೆಗಳ ನಡುವೆ ಅಥವಾ ಟೊಂಗೆಯಲ್ಲಿ ಕೆಂಪು ಚುಕ್ಕೆಗಳಿರುವ ೨ ಬಿಳಿ ಮೊಟ್ಟೆಗಳು.