ಹಳದಿ ಬೆನ್ನಿನ ಸೂರಕ್ಕಿ (YELLOWBACKED SUNBIRD)
ಏತೊಪೈಗ ಸಿಪರಾಜ (
Aethopyga siparaja)

406_69_PP_KUH

ಗಾತ್ರ : ೧೫ ಸೆಂ.ಮೀ.

ಆವಾಸ : ಕಾಡು ಮತ್ತು ತೋಪುಗಳ ಪೊದೆಗಳು. ಸ್ಥಳೀಯ ಪಕ್ಷಿ.

ಲಕ್ಷಣಗಳು : ಗಂಡು : ಕಣ್ಣು ಕೋರೈಸುವ ಬಣ್ಣಗಳ ಪುಟ್ಟ ಹಕ್ಕಿ. ಉದ್ದ ಬಾಲ, ಲೋಹದ ಹಸಿರು ತಲೆ, ಬಾಲ, ಕಡು ಬೆನ್ನು ಮತ್ತು ಕುತ್ತಿಗೆಯ ಇಕ್ಕೆಡೆ. ಆಲಿವ್ ಹಳದಿ ಹೊಟ್ಟೆ, ಸೊಂಟ ಹಳದಿ. ಎದೆಯಲ್ಲಿ ಗೀರುಗಳ ಹಳದಿ, ಆಲಿವ್ ಗರಿಗಳು, ಹಳದಿ ಕೆಳಭಾಗ.

ಆಹಾರ : ಮಕರಂದ, ಕೀಟ, ಜೇಡ.

ಸಂತಾನಾಭಿವೃದ್ಧಿ : ಏಪ್ರೀಲಿನಿಂದ ಅಕ್ಟೋಬರ್. ಕೆಳ ಪೊದೆಗಳಲ್ಲಿ ಇತರೆ ಸೂರಕ್ಕಿಗಳ ಗೂಡಿನಂತಹ ಗೂಡು. ಕಂದು ಚಿಕ್ಕ ಚುಕ್ಕೆಗಳಿರುವ ೨-೩ ಕೆನೆಬಿಳಿ ಮೊಟ್ಟೆಗಳು.

—- 

ಕೆನ್ನೀಲಿ ಸೂರಕ್ಕಿ (PURPLE SUNBIRD)
ನೆಕ್ಟರೈನಾ ಏಸಿಯಾಟಿಕ (
Nectarinia asiatica)

407_69_PP_KUH

ಗಾತ್ರ : ೧೦ ಸೆಂ.ಮೀ.

ಆವಾಸ : ತೆರೆದ ಕಾಡು, ತೋಪು, ಉದ್ಯಾನ ಮತ್ತು ತೋಟ, ಸ್ಥಳೀಯ ಪಕ್ಷಿ.

ಲಕ್ಷಣಗಳು : ಗಂಡು ಲೋಹದ ಕಡು ನೀಲಿ ಮೇಲ್ಭಾಗ, ಗಂಟಲು ಮತ್ತು ಎದೆ, ದೂರದಿಂದ ನೋಡುವಾಗ ಸಂಪೂರ್ಣ ಕಪ್ಪು ಹಕ್ಕಿಯಂತೆ ಕಾಣಬಹುದು. ಕಡು ಕಿನ್ನಿಲಿ ಕಪ್ಪು ಹೊಟ್ಟೆ, ಹೊಟ್ಟೆ ಮತ್ತು ಎದೆಯ ಮಧ್ಯ ಕಡು ನೇರಳೆ ಪಟ್ಟಿ ಪ್ರಮುಖಲಕ್ಷಣ. ಹೆಣ್ಣು ಆಲಿವ್ ಕಂದು ಮೇಲ್ಭಾಗ, ತಿಳಿಹಳದಿ ಕೆಳಭಾಗ. ಸಂತಾನಾಭಿವೃದ್ಧಿ ಕಾಲದಲ್ಲಿ ಗಂಡು ಹಕ್ಕಿಗಳನ್ನು ಹೋಲುತ್ತದೆ.

ಆಹಾರ : ಮಕರಂದ, ಕೀಟಗಳು, ಜೇಡ.

ಸಂತಾನಾಭಿವೃದ್ಧಿ : ಸಾಮಾನ್ಯವಾಗಿ, ಮಾರ್ಚ್‌ನಿಂದ ಮೇ. ಉಳಿದ ಸೂರಕ್ಕಿಗಳಂತೆ ನೇತಾಡುವ ಗುಡು. ಕಲೆಗಳಿರುವ ತಿಳಿಹಸಿರುಬಿಳಿ ೨-೩ ಮೊಟ್ಟೆಗಳು.

 —-

ಲೊಟೆನ್ಸ್ ಸೂರಕ್ಕಿ (LOTEN’S SUNIRD)
ನೆ. ಲೊಟಿನಿಯ (
Nectarinia lotenia)

408_69_PP_KUH

ಗಾತ್ರ : ೧೩ ಸೆಂ.ಮೀ.

ಆವಾಸ : ನಿತ್ಯಹರಿದ್ವರ್ಣ ಕಾಡು, ಹೂತೋಟ, ಸ್ಥಳೀಯ ಪಕ್ಷಿ.

ಲಕ್ಷಣಗಳು : ಗಂಡು : ದೇಹ ಕೆನ್ನೀಲಿಕಪ್ಪು ಮೇಲ್ಭಾಗ, ಮಾಸಲು ಕಪ್ಪು ರೆಕ್ಕೆಗಳು, ಬಾಲ, ಮರೂನ್ ಎದೆ, ರೆಕ್ಕೆಗಳ ಕೆಳಗೆ ಹಳದಿ ಗರಿಗುಚ್ಚಗಳು. ಹೆಣ್ಣು : ಅಲಿವ್ ಮೇಲ್ಭಾಗ, ಕಪ್ಪು ಬಾಲದ ತುದಿಯಲ್ಲಿ ಬಿಳಿ, ತಿಳಿಹಳದಿ ಕೆಳಭಾಗ ಉದ್ದ, ಕಪ್ಪು, ಮೊನಚಾದ, ಬಾಗಿದ ಕೊಕ್ಕು.

ಆಹಾರ : ಬಂದಣಿಗೆ ಹೂವಿನ ಮಕರಂದ ಕೀಟ ಮತ್ತು ಜೇಡ.

ಸಂತಾನಾಭಿವೃದ್ಧಿ : ಮಾರ್ಚಿನಿಂದ ಮೇ. ಅಂಡಾಕೃತಿಯ ಚೀಲದಂತಹ ಗೂಡು. ಪ್ರವೇಶದ್ವಾರದಲ್ಲಿ ಹುಲ್ಲುಗಳು. ಕಂದು ಬಣ್ಣದ ಮೊಟ್ಟೆಗಳು.

 —-

ಕೀರು ಜೇಡವ್ಯಾಧ (LITTLE SPIDERHUNTER)
ಆರಕ್ನೋತೆರಾ ಲಾಂಗಿರೋಸ್ಟ್ರಿಸ್ (
Arachnothera longirostris)

409_69_PP_KUH

ಗಾತ್ರ : ೧೪ ಸೆಂ.ಮೀ.

ಆವಾಸ : ಕಾಡುಗಳು, ಶೋಲಾ, ನಾಲೆ. ಸ್ಥಳೀಯ ಪಕ್ಷಿ.

ಲಕ್ಷಣಗಳು : ಗಂಡುಹೆಣ್ಣುಗಳ ನಡುವೆ ವ್ಯತ್ಯಾಸವಿಲ್ಲ. ಹೆಣ್ಣು ಶೂರಕ್ಕಿಯನ್ನು ಹೋಲುತ್ತದೆ. ಆಲಿವ್ ಹಸಿರು ಮೇಲ್ಭಾಗ ಕಪ್ಪು, ಬಾಲದ ತುದಿ ಬಿಳಿ, ಬೂದು ಬಿಳಿ ಗಂಟಲು, ಹೊಟ್ಟೆ, ಎದೆ ಹಳದಿ, ಅತಿಉದ್ದ, ಚೂಪಾದ, ಸ್ವಲ್ಪ ಬಾಗಿದ ಕೊಕ್ಕು ಪ್ರಮುಖ ಲಕ್ಷಣ.

ಆಹಾರ : ಮಕರಂದ, ಕೀಟ ಮತ್ತು ಜೇಡ.

ಸಂತಾನಾಭಿವೃದ್ಧಿ : ಮಾರ್ಚ್‌ನಿಂದ ಸೆಪ್ಟೆಂಬರ‍್ವರೆಗೆ, ಎಲೆ, ಹುಲ್ಲು, ತೊಗಟೆ ಇತ್ಯಾದಿಗಳ ಆಳವಾದ ಬಟ್ಟಲಿನಂತಹ ಗೂಡು. ಬಾಳೆ ಎಲೆಯಂತ ದೊಡ್ಡ ಎಲೆಗಳ ಕೆಳಗೆ ನಿರ್ಮಾಣ. ಕೆಂಪುಚುಕ್ಕೆಗಳ ೨ ತಿಳಿಗೆಂಪು ಮೊಟ್ಟೆಗಳು.

—-

ಬಿಳಿಗಣ್ಣು (WHITEEYE)
ಜೊಸ್ಟೆರಾಪ್ಸ್‌ಪಾಲ್ಟಿಬ್ರೋಸಾ (Zosterops palpebrosa)

410_69_PP_KUH

ಗಾತ್ರ : ೧೦ಸೆಂ.ಮೀ.

ಆವಾಸ : ಕಾಡು, ತೋಪು, ತೋಟ, ಉದ್ಯಾನಇತ್ಯಾದಿಸ್ಥಳೀಯಪಕ್ಷಿ.

ಲಕ್ಷಣಗಳು : ಗಂಡುಹೆಣ್ಣುಒಂದೇತೆರ. ಹಸಿರುಬೆನ್ನುಹಳದಿಮೇಲ್ಬಾಗ, ಕಣ್ಣುಮೂಲಕಚಿಕ್ಕಪಟ್ಟಿ, ಕಣ್ಣುಸುತ್ತಬಿಳಿಉಂಗುರಪ್ರಮುಖಲಕ್ಷಣ. ಕಡುಹಳದಿಗಂಟಲು, ಬಾಲದಕೆಳಗೆಬಿಳಿಎದೆಮತ್ತುಹೊಟ್ಟೆಒಳ್ಳೆಮೊನಚಾದಪೃಷ್ಟಭಾಗದಕೊಕ್ಕು. ಗುಂಪುಗಳಲ್ಲಿಓಡಾಟ.

ಸಂತಾನಾಭಿವೃದ್ಧಿ : ಏಪ್ರೀಲ್‌ನಿಂದಜುಲೈ. ಜೇಡನಬಲೆನಾರುಗಳಿಂದಕೂಡಿದಚಿಕ್ಕಬಟ್ಟಲಿನಂತಹಗೂಡು೨-೩ತಿಳಿನೀಲಿಮೊಟ್ಟೆಗಳು.