ಕಪ್ಪು ತಲೆ ಬಂಟಿಂಗು (BLACKHEADED BUNTING)
ಎಂಬರಿಜ ಮೆಲನೊಸಿಫಾಲ
(Emberiza melanocephala)

411_69_PP_KUH

ಗಾತ್ರ : ೧೮ ಸೆಂ.ಮೀ.

ಆವಾಸ : ವ್ಯವಸಾಯ ಭೂಮಿ. ವಲಸೆ ಹಕ್ಕಿ.

ಲಕ್ಷಣಗಳು : ಗಂಡು ಕಪ್ಪು ತಲೆ, ತೆಳುವಾದ ಹಳದಿ ಕುತ್ತಿಗೆ ಪಟ್ಟಿ ಕೆಂಗಂದು ಬೆನ್ನು ಹಳದಿ ಕೆಳಭಾಗ. ಹೆಣ್ಣು ತಿಳಿಕೆಂಗು ಮೇಲ್ಬಾಗ, ಪಟ್ಟಿಗಳಿವೆ, ಹಳದಿ ಸೊಂಟ, ಮಾಸಲು ಹಳದಿ ಕೆಳಭಾಗ.

ಆಹಾರ : ಕಾಳುಗಳು, ಬೆಳೆ.

ಸಂತಾನಾಭಿವೃದ್ಧಿ : ಯುರೋಪು, ಮಧ್ಯಪ್ರದೇಶ. ಚಳಿಗಾಲದಲ್ಲಿ ವಲಸೆ ಬರುತ್ತವೆ.

—- 

ಗೀಜಗ (BAYA WEAVER BIRD)
ಪೊಸ್ಲಿಯಸ್ ಫಿಲಿಪ್ಟನಸ್
(Ploceus philippinus)

412_69_PP_KUH

ಗಾತ್ರ : ೧೫ ಸೆಂ.ಮೀ.

ಆವಾಸ : ಮೈದಾನ, ಹೊಲಗದ್ದೆಗಳು, ತೆಂಗು-ತಾಳೆ ಮರಗಳಿರುವಲ್ಲಿ ಸ್ಥಳೀಯ ಪಕ್ಷಿಗಳು.

ಲಕ್ಷಣಗಳು : ಗುಬ್ಬಚ್ಚಿಯನ್ನು ಹೋಲುತ್ತವೆ. ಗಂಡು ನೆತ್ತಿಯ ಮೇಲೆ ಹಳದಿ ಟೋಪಿ, ಕಡು ಕಂದು ಮೇಲ್ಭಾಗ, ಹಳದಿ ಕುತ್ತಿಗೆ, ಎದೆ, ಕಪ್ಪು ಕೆನೆ, ಗಲ್ಲ ಹೊಟ್ಟೆ ಮಾಸಲು ಬಿಳಿ, ದಪ್ಪ, ಅಗಲಕೊಕ್ಕು, ಹಳದಿ ಕಡು ಗೆರೆಗಳ ಕಂದು ಮೇಲ್ಭಾಗ, ತಿಳಿ ಕತ್ತು ಬಿಳಿಹಳದಿ ಕಣ್ಣು ತಿಳಿಗಂದು.

ಆಹಾರ : ಕಾಳು, ಬೀಜ, ಕೀಟ ಮತ್ತು ಮಕರಂದ.

ಸಂತಾನಾಭಿವೃದ್ಧಿ : ಮೇ ಯಿಂದ ಸೆಪ್ಟೆಂಬರ್, ಉದ್ದನೆಯ ಕೊಳವೆಯಂತಹ ನೇತಾಡುವ ಗೂಡು. ನಾರುಗಳಿಂದ ಅತ್ಯಂತ ಸಂಕೀರ್ಣವಾದ ನೇಯ್ದ ರಚನೆ. ಒಳಗಡೆ ಮರಳಿನ ಹಾಸು. ೨-೪- ಬಿಳಿ ಮೊಟ್ಟೆಗಳು.

—- 

ಹಳದಿ ಗಂಟಲಿನ ಗುಬ್ಬಚ್ಚಿ (YELLOWTHROATED SPARROW)
ಪೆಟ್ರೊನಿಯ ಕ್ಸಾಂತೊಕೊಲ್ಲಿಸ್ (Petronia xanthocollis)

413_69_PP_KUH

ಗಾತ್ರ : ೧೪ ಸೆಂ.ಮೀ.

ಆವಾಸ : ಕಾಡು, ತೋಪು, ಉದ್ಯಾನ, ತೋಟ, ವಿರಳ ಜನ ಸಂಖ್ಯೆ ಇರುವೆಡೆ. ಸ್ಥಳೀಯ ಪಕ್ಷಿ.

ಲಕ್ಷಣಗಳು : ಗಂಡು : ಮಾಸಲು ಕಂದುಬೂದು ಮೇಲ್ಭಾಗ, ಕರಿಗಂದು ಬುಜ, ರೆಕ್ಕೆಗಳ ಮೇಲೆ ಬಿಳಿ ಚುಕ್ಕೆಗಳು, ಗಂಟಲಲ್ಲಿ ಲಿಂಬೆ ಹಳದಿ ಗುರುತು ಕೊಕ್ಕಿನ ಮೂಲಕ ಕರಿಗೆರೆ, ಹೆಣ್ಣು : ಗಂಟಲಲ್ಲಿ ಹಳದಿ ಗುರುತು ಇಲ್ಲ. ಭುಜದ ಕರಿಗಂದಿನ ಬದಲು ತಿಳಿ ಗಂದು.

ಆಹಾರ : ಕಾಳು, ಮಕರಂದ, ಕೀಟಗಳು.

ಸಂತಾನಾಭಿವೃದ್ಧಿ : ಏಪ್ರಿಲ್‌ನಿಂದ ಜೂನ್‌, ಮರದ ಪೊಟರೆಯಲ್ಲಿ ತುರುಕಿದ ಹುಲ್ಲು ನಾರು, ಬೇರು ಇತ್ಯಾದಿಗಳ ಗೂಡು. ಕಂದು ಕಲೆಗಳ ೩-೪ ತಿಳಿ ಹಸಿರು ಬಿಳಿ ಮೊಟ್ಟೆಗಳು.

—- 

ಗುಬ್ಬಚ್ಚಿ (HOUSE SPARROW)
ಪಾಸೆರ ಡೊಮೆಸ್ಟಿಕಸ್
(Passer domesticus)

414_69_PP_KUH

ಗಾತ್ರ : ೧೫ಸೆಂ.ಮೀ.

ಆವಾಸ : ವ್ಯವಸಾಯದಭೂಮಿ, ಮನೆಯಸುತ್ತಮುತ್ತ. ಸ್ಥಳೀಯಪಕ್ಷಿ.

ಲಕ್ಷಣಗಳು : ಚಿರಪರಿಚಿತಹಕ್ಕಿ. ಗಂಡು : ಬೂದುತಲೆ, ಕಣ್ಣಿನಮುಂದೆಕಪ್ಪು, ಗಿಡ್ಡಅಗಲಕೊಕ್ಕುಗಂಟಲು, ಕುತ್ತಿಗೆಎದೆಕಪ್ಪು, ಬಿಳಿಹೆಗಲು, ರೆಕ್ಕೆಗಳಕೆಂಗಂದು. ಬಾಲಕಡುಕಂದು, ಹೆಣ್ಣು : ಹೊಗೆಬೂದುಕಂದುತಲೆಕುತ್ತಿಗೆ, ಬೂದುಮಾಸಲುಕೆಳಭಾಗ, ಹುಬ್ಬುಕಡುಕಂದು.

ಆಹಾರ : ಸರ್ವಭಕ್ಷ, ಪ್ರಮುಖವಾಗಿಕಾಳುಬೀಜಗಳು.

ಸಂತಾನಾಭಿವೃದ್ಧಿ : ಹೆಚ್ಚುಕಡಿಮೆವರ್ಷವಿಡಿಮಾಡ, ಸಂದು, ಗೋಡೆಬಿರುಕುಇತ್ಯಾದಿಗಳಲ್ಲಿಕಸಕಡ್ಡಿಗರಿ, ಹುಲ್ಲುಇತ್ಯಾದಿಗಳಅಸ್ತವ್ಯಸ್ತಗೂಡು. ಕಂದುಕಲೆಗಳ೩-೫ಹಸಿರುಬಿಳಿಮೊಟ್ಟೆಗಳು.

 —-

ಕಪ್ಪು ತಲೆ ಮುನಿಯ (BLACKHEADED MUNIA)
ಲೊಂಕುರ ಮೆಲಕ್ಕ (Lonchura malacca)

415_69_PP_KUH

ಗಾತ್ರ : ೧೦ ಸೆಂ.ಮೀ.

ಆವಾಸ : ಜೊಂಡುಗಳಿರುವಲ್ಲಿ ಬತ್ತದಗದ್ದೆ ಹುಲ್ಲು ಮತ್ತು ಕುರುಚಲು. ಸ್ಥಳೀಯ ಪಕ್ಷಿ

ಲಕ್ಷಣಗಳು : ಗಂಡು ಹೆಣ್ಣು ಒಂದೇ ತೆರ. ತಲೆ, ಕುತ್ತಿಗೆ, ಎದೆ, ಹೊಟ್ಟೆ ಕಪ್ಪು, ಭಾರದ, ಗಿಡ್ಡ ದಪ್ಪ ಕೊಕ್ಕು ; ಕೆಂಗಂದು ಮೇಲ್ಭಾಗ, ರೆಕ್ಕೆಗಳು, ಬಾಲ ; ಹೊಟ್ಟೆಯ ಮುಂಬಾಗ ಬಿಳಿ.

ಆಹಾರ : ಹುಲ್ಲಿನ ಬೀಜಗಳು, ಭತ್ತ, ಕೀಟಗಳು.

ಸಂತಾನಾಭಿವೃದ್ಧಿ : ಮಳಿಗಾಲದಲ್ಲಿ ಗೂಡು. ಇತರೆ ಮುನಿಯಗಳಲ್ಲಿರುವಂತೆ ಆದರೆ ಜೊಂಡು ಅಥವಾ ಹುಲ್ಲುಗಳ ನಡುವೆ. ೫ ಬಿಳಿ ಮೊಟ್ಟೆಗಳು.