ಕೆಂಪು ಮುನಿಯ (ಕೆಂಪುರಾಟವಾಳ) (RED MUNIA)
ಈಸ್ಟ್ರಿಲ್ಡಾ ಅಮಂಡವ (Estrilda amandava)

416_69_PP_KUH

ಗಾತ್ರ : ೧೦ ಸೆಂ.ಮೀ.

ಆವಾಸ : ದ್ವಿದಳ ಧಾನ್ಯದಹೊಲ, ಹುಲ್ಲುಗಾವಲು, ಜೊಂಡು, ಕಪಾಸದ ಗದ್ದೆ ಕುರುಚಲು ಕಾಡು ಇತ್ಯಾದಿ. ಸ್ಥಳೀಯ ಪಕ್ಷಿ.

ಲಕ್ಷಣಗಳು : ಗಂಡು : ಕಾವಿಕೆಂಪು ಮತ್ತು ಕಂದು ಬಣ್ಣ ಪುಟ್ಟ ಪಕ್ಷಿ. ಕಂದು ರೆಕ್ಕೆಗಳ ಮೇಲೆ ಬಿಳಿ ಚುಕ್ಕೆಗಳು, ಬಾಲದ ತುದಿ ಬಿಳಿ ಕೊಕ್ಕು, ತಲೆ, ಎದೆ, ಹೊಗೆ, ಕಾಲು ಕೆಂದು, ಒಟ್ಟು ನಸುಗೆಂಪು ಹೆಣ್ಣು : ಮೇಲ್ಭಾಗ ಕಂದು, ಬಾಲದ ಬುಡ ಮಾನಸು ಬಿಳಿ ಗಂಟಲು, ಹಳದಿಕಂದು ಕೆಳಭಾಗ.

ಆಹಾರ : ಹುಲ್ಲಿನ ಬೀಜಗಳು. ಸಂತಾನಾಭಿವೃದ್ಧಿ ಕಾಲದಲ್ಲಿ ಕೀಟಗಳು.

ಸಂತಾನಾಭಿವೃದ್ಧಿ : ಮಳೆಗಾಲದಲ್ಲಿ ಹುಲ್ಲು, ಗರಿ, ನಾರುಗಳ ಗೋಲಾಕಾರದ ಗೂಡು, ಮುರಿದ ಪೊದೆಗಳಲ್ಲಿ ೪-೭ ಬಿಳಿ ಮೊಟ್ಟೆಗಳು.

—- 

ಶ್ವೇತಕಂಠ ಮುನಿಯ (WHITETHROATED MUNIA)
ಲಾಂಚುರ ಮಲಬಾರಿಕ (Lonchura malabarica)

417_69_PP_KUH

ಗಾತ್ರ : ೧೦ ಸೆಂ.ಮೀ.

ಆವಾಸ : ಒಣಪ್ರದೇಶಗಳು, ಗದ್ದೆ, ಕುರುಚಲು ಮತ್ತು ಹುಲ್ಲುಗಾವಲು. ಸ್ಥಳೀಯ ಪ್ರಭೇದ.

ಲಕ್ಷಣಗಳು : ಗಂಡುಹೆಣ್ಣು ಒಂದೇ ತೆರ. ತಿಳಿಗಂದು ಮೇಲ್ಭಾಗ, ದಪ್ಪ, ಗಿಡ್ಡ ಕೊಕ್ಕು ಚೂಪಾದ ಬಾಲ ಕಪ್ಪು, ಬಿಳಿ ಕೆಳಭಾಗ, ಕಪ್ಪು ಕಣ್ಣು ಬಾಲದ ಬುಡ ಬಳಿ.

ಆಹಾರ : ಸಣ್ಣ ಬೀಜಗಳು ಮತ್ತು ಕೀಟ.

ಸಂತಾನಾಭಿವೃದ್ಧಿ : ಹೆಚ್ಚು ಕಡಿಮೆ ವರ್ಷವಿಡಿ ಇತರೆ ಮುನಿಯಗಳಂತೆ ದುಂಡನೆಯ ಗೂಡು. ೪-೬ ಬಿಳಿ ಮೊಟ್ಟೆಗಳು.

—- 

ಬಿಳಿಬೆನ್ನಿನ ಮುನಿಯ (WHITEBACKED MUNIA)
ಲಾಂಚುರ ಸ್ಟ್ರೆಯೇಟ
(Lonchura striata)

418_69_PP_KUH

ಗಾತ್ರ : ೧೦ಸೆಂ.ಮೀ.

ಆವಾಸ : ಕುರುಚಲುಕಾಡು, ವ್ಯವಸಾಯಭೂಮಿ, ಹುಲ್ಲುಗಾವಲು. ತೋಟ, ಸ್ಥಳೀಯಪಕ್ಷಿ.

ಲಕ್ಷಣಗಳು : ಗಂಡುಹೆಣ್ಣುಒಂದೇತೆರ. ಇದೊಂದುಕಪ್ಪುಬಿಳಿಮುನಿಯಬೂದುನೀಲಿಕೊಕ್ಕು, ಬಾಲದಬುಡಬಿಳಿ. ಕೆಳಭಾಗಬಿಳಿ, ರೆಕ್ಕೆಗಳಅಂಟುಕಪ್ಪು. ಗಂಟಲು, ಎದೆಬಿಳಿ. ಉಳಿದಂತೆಕಪ್ಪು.

ಆಹಾರ : ಕಾಳು, ಬೀಜಗಳು, ಸಂತಾನಾಭಿವೃದ್ಧಿಕಾಲದಲ್ಲಿಕೀಟಗಳು.

ಸಂತಾನಾಭಿವೃದ್ಧಿ : ವರ್ಷವಿಡಿದೊಡ್ಡಅಂದವಿಲ್ಲದ, ದುಂಡನೆಯಗೂಡು, ಬದಿಯಲ್ಲಿಒಳಿದಾರಿ, ೫-೬ಬಿಳಿಮೊಟ್ಟೆಗಳು.

 —-

ತಿಳಿಗಂದು ಹೊಟ್ಟೆಯ ಮುನಿಯ (RUFOUS BELLIED MUNIA)
ಲಾ. ಕೆಲಾರ್ಟಿ (Lonchura kelaarti)

419_69_PP_KUH

ಗಾತ್ರ : ೧೨ ಸೆಂ.ಮೀ.

ಆವಾಸ : ಕುರುಚಲು ಪ್ರದೇಶ, ಕಡಿದ ಕಾಡು, ತೋಟ ಇತ್ಯಾದಿ. ಸ್ಥಳೀಯ ಪಕ್ಷಿ.

ಲಕ್ಷಣಗಳು : ಗಂಡು ಹೆಣ್ಣು ಒಂದೇ ತೆರ. ನೆತ್ತಿ, ಗಲ್ಲ, ಕಣ್ಣುಗಳ ಸುತ್ತು ಕಪ್ಪು, ಬಾಲ, ರೆಕ್ಕೆಗಳು ಕಡು ಕಂದು, ಬೆನ್ನು ಕುತ್ತಿಗೆ ತಿಳಗಂದು, ಹೊಟ್ಟೆ ಕುತ್ತಿಗೆ, ಕಪ್ಪೊತ್ತಿದ ಕಂದು.

ಆಹಾರ : ಹುಲ್ಲು, ಕಳೆಗಳ ಬೀಜ, ಭತ್ತ.

ಸಂತಾನಾಭಿವೃದ್ಧಿ : ಏಪ್ರಿಲ್‌ನಿಂದ ಆಗಸ್ಟ್‌ಗೂಡು ಬಿಳಿ ಬೆನ್ನಿನ ಮುನಿಯನ ಗೂಡಿನಂತೆ ೬-೮ ಬಿಳಿ ಮೊಟ್ಟೆಗಳು.

—- 

ಚುಕ್ಕೆ ಮುನಿಯ (SPOTTED MUNIA)
ಲಾ. ಪಂಕ್ಚುಲೇಟ (Lonchura punctulata)

420_69_PP_KUH

ಗಾತ್ರ : ೧೦ ಸೆಂ.ಮೀ.

ಆವಾಸ : ಕುರುಚಲು, ಹೊಲ, ತೋಟ, ಸ್ಥಳೀಯ ಪಕ್ಷಿ.

ಲಕ್ಷಣಗಳು : ಬಿಳಿ ಬೆನ್ನಿನ ಮುನಿಯವನ್ನು ಹೋಲುತ್ತದೆ. ಗಂಡು ಹೆಣ್ಣು ಒಂದೇ ತೆರ. ಚಾಕೊಲೇಟ್ ಕಂದು ಮೇಲ್ಭಾಗ, ಮೊನಚಾದ ಆಲಿವ್‌ಹಳದಿ ಬಾಲ, ಸೊಂಟದ ಮೇಲೆ ಬಿಳಿ ಅಡ್ಡಪಟ್ಟಿ, ಬಿಳಿ ಹೊಟ್ಟೆಯ ಮೇಲೆ ಕಂಗಂದು ಚುಕ್ಕೆಗಳು (ಚಳಿಗಾಲದಲ್ಲಿ ಈ ಚುಕ್ಕೆಗಳು ಮಾಯವಾಗಬಹುದು). ಕೆಲವು ಸಲ ಗುಂಪುಗಳಲ್ಲಿ ೨೦೦ರಷ್ಟು ಪಕ್ಷಿಗಳಿರುತ್ತವೆ.

ಆಹಾರ : ಕಾಳು, ಚಿಕ್ಕ ಹಣ್ಣು ಮತ್ತು ಕೀಟ.

ಸಂತಾನಾಭಿವೃದ್ಧಿ : ಜುಲೈಯಿಂದ ಅಕ್ಟೋಬರ್ ವರೆಗೆ, ಇತರೆ ಮುನಿಯಗಳ ಗೂಡಿನಂತಹ ದುಂಡೆಯ ಗೂಡು. ಮುಳ್ಳುಗಳಿರುವ ಪೊದೆಯಲ್ಲಿ ಗೂಡು. ೪-೮ ಬಿಳಿ ಮೊಟ್ಟೆಗಳು.