, ಮುಖ್ಯವಾಗಿ ಜಲವಾಸಿಗಳು ಕಡಲು, ನದಿಗಳು, ಕೆರೆಕುಂಟೆಗಳು ಇವುಗಳ ವಸತಿ.

. ನೀರಿನ ಜೀವನಕ್ಕೆ ಚಲನೆಗೆ ಅಡ್ಡಿ ಬಾರದಂತೆ ದೇಹ ನಯವಾಗಿ ಕದುರಿನಾಕಾರದಲ್ಲಿದೆ.

. ದೇಹದ ಮೇಲೆ ಹುರುಪೆಗಳ ಹೊದಿಕೆ ಇದೆ. ಇದು ಮೀನುಗಳನ್ನು ಶತ್ರುಗಳ ದವಡೆಗಳಿಂದ ಮತ್ತು ನೀರಿನಲ್ಲಿರುವ ಕೆಟ್ಟ ರಾಸಾಯನಿಕಗಳಿಂದ ರಕ್ಷಿಸುತ್ತದೆ.

. ಮೀನುಗಳ ದೇಹವನ್ನು ತಲೆ, ಮುಂಡ ಮತ್ತು ಬಾಲ ಎಂದು ಮೂರು ಭಾಗಗಳಾಗಿ ವಿಭಾಗಿಸಬಹುದು. ತಲೆಯು ಮುಂಡ ಭಾಗದೊಂದಿಗೆ ಕೂಡಿಕೊಂಡಿರುವುದರಿಂದ ಪ್ರತ್ಯೇಕವಾದ ಕುತ್ತಿಗೆ ಭಾಗ ಇಲ್ಲ.

. ತಲೆಯ ಭಾಗದಲ್ಲಿ ಬಾಯಿ, ಒಂದು ಜೊತೆ ಕಣ್ಣುಗಳಿದ್ದು ಅವಕ್ಕೆ ರೆಪ್ಪೆಗಳಿವೆ.

. ತಲೆಯ ಭಾಗವು ಮುಂಡ ಭಾಗವನ್ನು ಸೇರುವ ಭಾಗದ ಪಾರ್ಶ್ವ ಭಾಗದಲ್ಲಿ ಸೀಳಿನಾಕಾರದ, ಒಂದೊಂದು ಪಕ್ಕದಲ್ಲಿಯೂ ನಾಲ್ಕು ಅಥವಾ ಐದು ತೆರಪುಗಳಿವೆ. ಅವುಗಳನ್ನು ಕಿವಿರು ರಂಧ್ರಗಳೆಂದು ಕರೆಯುತ್ತಾರೆ. ಉಸಿರಾಟಕ್ಕೆ ಬಳಸಲಾದ ನೀರು ಒಳಗಿನ ಕಿವಿರುಗಳ ಮೇಲೆ ಹರಿದು ಅನಿಲಗಳ ವಿನಿಮಯದ ನಂತರ ಈ ಕಿವಿರು ರಂಧ್ರಗಳ ಮೂಲಕ ನಿಷ್ಕೃಮಿಸುತ್ತದೆ.

. ನೀರಿನಲ್ಲಿ ಈಜಲು ಬಾಲ ನೆರವಾಗುತ್ತದೆ.

. ಚಲನೆಯನ್ನು ನಿಯಂತ್ರಿಸಲು ನೆರವಾಗುವಂತೆ ಈಜುರೆಕ್ಕೆಗಳಿವೆ. ಇವುಗಳಲ್ಲಿ ದೇಹದ ಮಧ್ಯಭಾಗದಿಂದ ಚಾಚಿದ ಅಜೋಡಿ ಮತ್ತು ಪಕ್ಕಗಳಲ್ಲಿರುವ ಜೋಡಿ ಈಜು ರೆಕ್ಕೆಗಳೆಂದು ಎರಡು ವಿಧ.

. ದೇಹದ ಪಕ್ಕದಲ್ಲಿ ತಲೆಯ ಹಿಂಭಾಗದಿಂದ ಬಾಲದವರೆಗೂ ಎಳೆದಂತೆ ಕಾಣುವ ಗೆರೆಯಂತಹ ಪಾರ್ಶ್ವ ಪಂಕ್ತಿಗಳಿವೆ. ಇವುಗಳ ಒಳಗೆ ನಾಲೆಯೊಂದಿದ್ದು ಅದರಲ್ಲಿ ಸುತ್ತಲಿನ ನೀರಿನ ಪ್ರವಾಹ, ಒತ್ತಡಗಳನ್ನು ತಿಳಿಸುವ ಸಂವೇದನಾಂಗಗಳಿವೆ.

೧೦. ಮೀನುಗಳು ಅಂಡಜಗಳು. ಬೆಳವಣಿಗೆ ಪ್ರತ್ಯಕ್ಷ ಅಥವಾ ಅಪ್ರತ್ಯಕ್ಷ ರೀತಿಯಾಗಿರಬಹುದು. ಮೀನುಗಳಲ್ಲಿ ಮುಖ್ಯವಾಗಿ ಎರಡು ಗುಂಪುಗಳಿವೆ. ಕೋಮಲಾಸ್ಥಿಯಿಂದಾದ ಅಸ್ಥಿಪಂಜರವಿರುವ ಇಲಾಸ್ಮೊಬ್ರಾಂಕಿಗಳು. ಇವು ಸಂಪೂರ್ಣ ಕಡಲು ವಾಸಿಗಳು. ಮೂಳೆಗಳಿಂದಾದ ಅಸ್ಥಿಪಂಜರವಿರುವ ಟೆಲಿಯಾಸ್ಟಿಯೈ. ಇವು ಕಡಲು ಮತ್ತು ಸಿಹಿ ನೀರುಗಳೆರಡರಲ್ಲೂ ವಾಸಿಸುತ್ತವೆ.

ಮೀನುಗಳ ಹುರುಪೆಗಳು

ಇವು ಮೀನುಗಳ ಚರ್ಮದ ಮೇಲಿನ ಹೊದಿಕೆ ರಚನೆಗಳು. ಇವುಗಳ ಉಪಸ್ಥಿತಿ ಮೀನುಗಳ ವಿಶೇಷ ಲಕ್ಷಣ. ಚರ್ಮದ ಒಳಪದರವಾದ ಡರ್ಮಿಸ್‌ನಲ್ಲಿ ಅಸ್ಥೀಕರಣ ಕ್ರಿಯೆಯಿಂದ ಇವು ಉತ್ಪತ್ತಿಯಾಗುತ್ತವೆ. ಆದ್ದರಿಂದ ಇವುಗಳನ್ನು ಡರ್ಮಲ್‌ಹುರುಪೆಗಳೆಂದು ಕರೆಯುತ್ತಾರೆ. ಹುರುಪೆಗಳಲ್ಲಿ ನಾಲ್ಕು ವಿಧ.

ಪಟ್ಟಭಶಲ್ಕ (ಪ್ಲಕಾಯಿಡ್ ಹುರುಪೆ) : ಈ ಹುರುಪೆಗಳು ಇಲಾಸ್ಮಿಬ್ರಾಂಕಿ ಉಪವರ್ಗಕ್ಕೆ (ಕೋಮಲಾಸ್ಥಿ / ಮೃದ್ವಸ್ಥಿ ಮೀನುಗಳು) ಸೇರಿದ ಮೀನುಗಳ ವಿಶೇಷ ಲಕ್ಷಣ. ಈ ಹುರುಪೆಯ ರಚನೆಯಲ್ಲಿ ಒಂದು ಬುಡದ ಫಲಕ ಮತ್ತು ಮೂರು ಏಣುಗಳ ಒಂದು ಮುಳ್ಳು ಇದೆ. ಮುಳ್ಳಿನಲ್ಲಿ ಡೆಂಟಿನ್ ವಸ್ತುವಿನ ಒಳತಿರುಳು ಇದ್ದು ಅದರ ಮೇಲೆ ಡೆಂಟಿನ್ ಪದರದ ಹೊದಿಕೆ ಇದೆ. ಒಳಗೊಂದು ಮಜ್ಜ ಕುಹರವಿದ್ದು ಬುಡದ ಫಲಕದ ಮೂಲಕ ಕೆಳಕ್ಕೆ, ಚರ್ಮದೊಳಗಿನ ಅಂಗಾಂಶಗಳೊಂದಿಗೆ ಸಂಪರ್ಕ ಪಡೆದಿದೆ. ಇದರ ತೆರಪಿನ ಮೂಲಕ ರಕ್ತನಾಳಗಳು ಮತ್ತು ನರಾಗ್ರಗಳು ಮಜ್ಜಕುಹರವನ್ನು ಪ್ರವೇಶಿಸುತ್ತವೆ. ಬುಡದ ಫಲಕವು ಒಂದು ರೀತಿಯ ಕ್ಯಾಲ್ಸೀಕೃತ ರಚನೆ. ಇದು ಕಶೇರುಕ ಹಲ್ಲುಗಳಲ್ಲಿನ ಸಿಮೆಂಟ್‌ವಸ್ತುವನ್ನು ಹೋಲುತ್ತದೆ. ಪ್ಲಕಾಯಿಡ್‌ಹುರುಪೆಯು ಎರಡು ಮೂಲಗಳಿಂದ ಬೆಳೆಯುತ್ತವೆ. ವಿಟ್ರೊಡೆಂಟಿನ್‌ವಸ್ತುವು ಚರ್ಮದ ಎಪಿಡರ್ಮಲ್ (ಹೊರದರ್ಮ) ದಿಂದ ಉದ್ಭವಿಸಿದರೆ, ಉಳಿದ ಭಾಗಗಳು ಡರ್ಮಿಸ್‌(ಮಧ್ಯದರ್ಮ) ನಿಂದ ಉತ್ಪತ್ತಿಯಾಗುತ್ತವೆ.

ಬಾಯಿಯ ಹೊರಗಿನ ಚರ್ಮದ ಮೇಲೆ ಇರುವ ಪ್ಲಕಾಯಿಡ್‌ಹುರುಪೆಗಳೆ ಬಾಯಿಯ ಒಳಗೆ ಪರಿವರ್ತನೆಗೊಂಡು ಹಲ್ಲುಗಳಾಗಿವೆ ಮತ್ತು ಇವುಗಳ ರಚನೆಯು ಕಶೇರುಕಗಳ ಹಲ್ಲಿನ ರಚನೆಯನ್ನು ಹೋಲುವುದರಿಂದ, ಇವುಗಳಿಂದ ಕಶೇರುಕ ಹಲ್ಲುಗಳು ಉದ್ಭವಿಸಿರಬಹುದು ಎಂಬೊಂದು ಸಿದ್ಧಾಂತವಿದೆ.

ಕಾಸ್ಮಾಯಿಡ್ಹುರುಪೆ : ಈ ಹುರುಪೆಗಳು ಸಂಪೂರ್ಣವಾಗಿ ಡರ್ಮಿಸ್ ಮೂಲದಿಂದ ಬೆಳೆದ ರಚನೆಗಳು. ಇವು ಆದಿಯ ಮೀನುಗಳಾದ ಕ್ರಾಸ್ಸೊಟೆರಿಗಿಯೈ ಮತ್ತು ಆದಿಯ ಪುಪ್ಫುಸ (ಶ್ವಾಸಕೋಶ) ಮೀನುಗಳ ಮೇಲು ಹೊದಿಕೆಯಾಗಿದ್ದವು. ಆದರೆ ಇಂದು ಬದುಕಿರುವ ಯಾವ ಮೀನಿನಲ್ಲಿಯೂ ಈ ಹುರುಪೆಗಳು ಕಂಡುಬರುವುದಿಲ್ಲ.

ಗ್ಯಾನಾಯಿಡ್ಹುರುಪೆ : ಈ ಹುರುಪೆಗಳು ಆದಿಮ ಆಕ್ಟಿನೊಟೆರಿಗಿಯೈ ಮೀನುಗಳ ವಿಶೇಷವಾದ ದೇಹದ ಮೇಲು ಹೊದಿಕೆ ರಚನೆಗಳು. ಇಂದು ಬದುಕಿರುವ ಪಾಲಿಪ್ಟೆರಸ್ಮೀನಿನಲ್ಲಿ ಈ ಹುರುಪೆಗಳಿವೆ. ಇವೂ ಸಹ ಕಾಸ್ಮಾಯಿಡ್ ಹುರುಪೆಗಳಂತೆ ಡರ್ಮಿಸ್ ಮೂಲದಿಂದ ಉದ್ಭವಿಸುವ ರಚನೆಗಳು. ಆದರೆ ಇವುಗಳ ನಿರ್ಮಾಣದಲ್ಲಿ ಚರ್ಮದ ಹೊರಪದರವು ಭಾಗವಹಿಸುವುದಿಲ್ಲ.

ಸೈಕ್ಲಾಯಿಡ್ಹುರುಪೆ/ಟಿನಾಯಿಡ್ಹುರುಪೆ : ಈ ಎರಡೂ ರೀತಯ ಹುರುಪೆಗಳು ಟೆಲಿಯಾಸ್ಟಿಯೈ ಮತ್ತು ಡಿಪ್ನಾಯಿ ಮೀನುಗಳಲ್ಲಿ ಕಂಡುಬರುತ್ತವೆ. ಹುರುಪೆಗಳ ಆಕಾರ ಮತ್ತು ರಚನೆಯಿಂದಾಗಿ ಈ ಹೆಸರು ಬಂದಿದೆ. ಇವು ಗ್ಯಾನಾಯಿಡ್‌ಹುರುಪೆ ಮೂಲ ರಚನೆಯಿಂದ ಗ್ಯಾನಾಯಿಡ್‌ಮತ್ತು ಕಾಸ್ಮಿನ್‌ಪದರಗಳನ್ನು ಕಳೆದುಕೊಂಡು ನಿರ್ಮಾಣವಾದ ರಚನೆಗಳು. ಇದರಿಂದಾಗಿ ಈ ಹುರುಪೆಗಳು ಮೃದುವಾಗಿವೆ. ಹೊರಬದಿಯ ಅಂಚು ದುಂಡಾಗಿದ್ದರೆ ಅದನ್ನು ಸೈಕ್ಲಾಯಿಡ್‌(ಚಕ್ರಾಸ್ಯ್‌), ಒಡೆದು ಮುಳ್ಳುಗಳಂತಾಗಿದ್ದರೆ ಟಿನಾಯಿಡ್‌(ಕಂಕಾತಾಭ) ಎಂದು ಹೆಸರು. ಒಂದೇ ಮೀನಿನಲ್ಲಿ ಎರಡೂ ರೀತಿಯ ಹುರುಪೆಗಳು ಇರಬಹುದು.

ಟೆಟ್ರೊಡಾನ್ (ಗೋಳಮೀನು) ಮೀನುಗಳಲ್ಲಿ ಹುರುಪೆಗಳ ಬದಲು ಮುಳ್ಳುಗಳಿವೆ. ಪೆಠಾರಿ ಮೀನುಗಳಲ್ಲಿ ದೇಹದ ಮೇಲೆ ಷಟ್‌(ಆರು ಮೂಲೆಯ) ಭುಜದ ಫಲಕಗಳು ಪರಸ್ಪರ ಕೂಡಿ ದೇಹದ ಸುತ್ತ ಪೆಟ್ಟಿಗೆಯಂತಹ ರಚನೆ ನಿಮಾರ್ಣವಾಗಿದೆ. ಕಡಲು ಕುದುರೆ, ಕೊಳವೆ ಮೀನುಗಳ ದೇಹದ ಮೇಲೆ ಹುರುಪೆಗಳ ಬದಲು ಅಸ್ಥಿ ಉಂಗುರಗಳಿವೆ.

ಹುರುಪೆಗಳು ಅಂಡಾಕಾರದಿಂದ ದುಂಡು ಆಕಾರದವರೆಗೆ ಬದಲಾಗಬಹುದು. ಅವುಗಳ ಗಾತ್ರ, ಸಂಖ್ಯೆ, ಅವುಗಳು ವ್ಯವಸ್ಥಿತವಾಗಿರುವ ಸಾಲುಗಳ ವಿಧಾನವೂ ವ್ಯತ್ಯಾಸವಾಗಬಹುದು. ಮೀನಿನ ಪಾರ್ಶ್ವ ಪಂಕ್ತಿಯಲ್ಲಿರುವ ಹುರುಪೆಗಳ ಸಂಖ್ಯೆಯು ವರ್ಗೀಕರಣಕ್ಕೆ ಮತ್ತು ಪ್ರಭೇಧಗಳನ್ನು ಗುರುತಿಸಲು ಉಪಯುಕ್ತವಾಗಿದೆ. ಪಾರ್ಶ್ವ ಪಂಕ್ತಿಯ ಹುರುಪೆಗಳ ನಂತರ ಏಣುಗಳಿರುತ್ತವೆ.

ಕರ್ನಾಟಕದ ಮೀನುಗಳು

ವರ್ಗೀಕರಣ ಮತ್ತು ಶಾಸ್ತ್ರೀಯ ನಾಮ ಸಾಮಾನ್ಯ ಹೆಸರು ಕನ್ನಡದ ಹೆಸರು ಗಮನಾರ್ಹ ಅಂಶಗಳು
ಗಣ : ಲ್ಯಾಮಿನಿಫಾರರ್ಮಿಸ್‌
ಕುಟುಂಬ : ಓರೆಕ್ಟೊಲೋಬಿಡೀ
೧. ಕೈಲೊನಿಲ್ಲಿಯಂ ಇಂಡಿಕಮ್‌ ಭಾರತದ ಬೆಕ್ಕು ಶಾರ್ಕು   ಬೆನ್ನಿನ ಮೇಲೆ ಮೂರು ಡರ್ಮಲ್‌ ಏಣುಗಳಿವೆ.
*೨. ಸ್ಟೀಗೊಸ್ಟೋಮ ಫ್ಯಾಸಿಯೇಟಸ್‌ ಕಿರುಬ ಶಾರ್ಕು ಕುನ್ನಿಸೋರು ಚಿಪ್ಪು ಮೀನುಗಳು ಇದರ ಆಹಾರ ಬಾಲದ ಈಜು ರೆಕ್ಕೆಯ ಸುಳಿವಿಲ್ಲ
ಕುಟುಂಬ : ರೈಃನಿಯೊಡಾಂಟಿಡೀ
೩. ಡೊನೊಡಾನ್‌ಡಾಂಟಸ್‌ ತಿಮಿಶಾರ್ಕು   ಶಾರ್ಕುಗಳಲ್ಲಿಯೆ ಅತ್ಯಂತ ದೊಡ್ಡದು. ಇದು ೧೫ ಮೀ. ಉದ್ದ ಬೆಳೆಯುತ್ತದೆ. ಕಡಲ ನೀರ ಮೇಲ್ಮೈನಲ್ಲಿ ಬಿಸಿಲು ಕಾಯಿಸುತ್ತದೆ. ಇದರಿಂದ ಅತ್ಯಧಿಕ ಲಿವರ್ ಎಣ್ಣೆ ದೊರಕುತ್ತದೆ.
ಕುಟುಂಬ : ಓಡೊಂಟಾಸ್ಟಿಡಿಡೀ
೪. ಯುಗೊನಪಾಡಸ್‌ಟಾರಸ್‌ ನೀಲದಾದಿ ಮರಳುಹುಲಿ ಕ್ಹೊಂಡೆಚೆ ಇದರಿಂದ ಉತ್ಪತ್ತಿಯಾಗುವ ಲಿವರ್ಎಣ್ಣೆ ಮತ್ತು ಇದರ ಈಜು ರೆಕ್ಕೆಗಳಿಗೆ ಬೇಡಿಕೆ ಹೆಚ್ಚು.
ಕುಟುಂಬ : ಸಾರ್ಕಾಲ್ಹಿನಿಡೀ
೫. ಸಾರ್ಕಾಫೈನಸ್‌ಬ್ರೆವಿಪಿನ್ನ ಚರಕ ಶಾರ್ಕು ಶಿರ್ವ ಕಪ್ಪು ತುದಿಯ ಈಜುರೆಕ್ಕೆ ಶಾರ್ಕು
೬. ಸಾ. ದುಸ್ಸುಮಿಯರಿ ಬಿಳಿ ಚೌಕಳಿ ಶಾರ್ಕು ತರಾವಟ್‌ ನರಭಕ್ಷಕ ಎಂದು ಅಂಜುವರು. ಅದರಿಂದ ಲಿವರ್ ಎಣ್ಣೆ ದೊರಕುತ್ತದೆ.
೭. ಸಾ. ಲಿಂಬಾಟಸ್‌ ಕಪ್ಪು ರೆಕ್ಕೆ ಶಾರ್ಕು ಕಾಕ್ಸೆ ಒಳ್ಳೆಯ ಗುಣ ಮಟ್ಟದ ಲಿವರ್ ಆಯಿಲ್‌ ದೊರಕುತ್ತದೆ.
೮. ಸಾ. ಮೆರಿನಾಪ್ಪೆರಸ್‌ ಕಪ್ಪು ರೆಕ್ಕೆ ಹವಳ ಶಾರ್ಕು ನೀಕಪ್ಲೆ ತಾಂಟೀ ಹೆಣ್ಣು ಮೀನಿನಲ್ಲಿ ದೊಡ್ಡ ಯಕೃತ್‌ ಇರುತ್ತದೆ. ಹೆಚ್ಚು ಲಿವರ್ ಎಣ್ಣೆ ದೊರಕುತ್ತದೆ.
೯. ಸಾ. ಸೋರ್ಹ ಸೋರ್ಹ ಶಾರ್ಕು ಶಿರಟ್‌ ಲಿವರ್ ಎಣ್ಣೆ ದೊರಕುತ್ತದೆ.
೧೦. ಗ್ಯಾಲಿಯೊಸೆರ್ಡೊ ಕೂವಿಯರಿ ಹುಲಿ ಶಾರ್ಕು ಹುಲಿಬಾತಿಯರ್ ೫೫ ಮೀ. ಉದ್ದ ಬೆಳೆಯುತ್ತದೆ. ಅತ್ಯಂತ ಅಪಾಯಕಾರಿ. ಇದರ ಯಕೃತ್‌ನಲ್ಲಿ ‘ಎ’ ಅನ್ನಾಂಗ ದೊರಕುತ್ತದೆ.
೧೧. ಲ್ಯಾಮಿಯಾಪ್ಸಿಸ್‌ಟೆಮ್ಮಿನಸ್ಕೀ ಜಿಂಕೆ ಶಾರ್ಕು ನೆಡುಂತ ಲಿವರ್ ಎಣ್ಣೆಗೆ ಹೆಸರುವಾಸಿ.
೧೨. ರೈಜೊಪ್ರಿಯೊಂಡಾನ್‌ ಆಲಿಗೊಲಿಂಕ್ಸ್‌ ಬೂದುನಾಯಿ ಶಾರ್ಕು ತಾಟಿ, ಪಿಲ್ತಾಟಿ ಲಿವರ್ ಎಣ್ಣೆಗೆ ಹೆಸರುವಾಸಿ.
೧೩. ರೈ ಅಕುಟಸ್‌ ಹಾಲುನಾಯಿ ಶಾರ್ಕು ತಾಟಿ ಲಿವರ್ ಎಣ್ಣೆಗೆ ಹೆಸರುವಾಸಿ.
೧೪. ಸ್ಕೊಲಿಯೊಡಾನ್‌ ಲ್ಯಾಟಿಕಾಡಿಸ್‌ ಭಾರತದ ನಾಯಿ ಶಾರ್ಕು ಮುರಿ ಸೋರ ಲಿವರ್ ಎಣ್ಣೆಗೆ ಹೆಸರುವಾಸಿ.
ಕುಟುಂಬ : ಸ್ಪೆರ್ನಿಡೀ(ಸುತ್ತಿಗೆ ತಲೆ ಶಾರ್ಕುಗಳು)
೧೫. ಸ್ಪೈರ್ನ ಬ್ಲೋಕ ಬಾಣತಲೆಯ ಸುತ್ತಿಗೆ ತಲೆ ಶಾರ್ಕು ಕ್ಹಾನ್‌ಮೂತಿ ಕೆಬಿ ಕಟ್ಟೆ ಎ’ ಅನ್ನಾಂಗ ಅಧಿಕವಾಗಿರುವ ಲಿವರ್ ಆಯಿಲ್‌ ದೊರಕುತ್ತದೆ
೧೬. ಸ್ಪೈರ್ನ ಲೆಮಿನಿ ಇಚಿಪ್ಪು ಸುತ್ತಿಗೆ ತಲೆ ಶಾರ್ಕು  
೧೭. ಸ್ಪೈರ್ನ ಮೊಕದ್ರಗೆ ಬೃಹದ್‌ ಸುತ್ತಿಗೆ ತಲೆ ಶಾರ್ಕು  
೧೮. ಸ್ಪೈರ್ನ ಜೈಹೀನ ದುಂಡು ಸುತ್ತಿಗೆ ತಲೆ ಶಾರ್ಕು ವೆರಯೋಕ್‌
ಗಣ : ರಾಜಿಫಾರ್ಮಿಸ್‌
ಕುಟುಂಬ : ಪ್ರಿಸ್ಟಿಡೀ(ಗರಗಸ ಮೀನು) (ಸ್ಕೇಟ್‌ಗಳು ಮತ್ತು ರೇಗಳು)
೧೯. ಅನೊಕ್ಸಿಪ್ರಿಸ್ಟಿಸ್ಡ್‌ ಕಸ್ಟಿ ಡೇಟಸ್‌ ಚೂಪು ಗರಗರಸ ಮೀನು ಗರಗಸ ಮೀನು ರುಚಿಯಾದ ಮಾಂಸ ಮತ್ತು ಲಿವರ್ ಎಣ್ಣೆ ದೊರೆಕುತ್ತದೆ.
*೨೦. ಪ್ರಿಸ್ಟಿಸ್‌ ಮೈಕ್ರೊಟಾನ್‌    
ಕುಟುಂಬ : ರೈಃನೊಬೇಟಿಡೀ
*೨೧. ರೈಃನೊಬೇಟಸ್‌ ಗ್ರಾನುಲೇಟಸ್‌ ಕಣಕ್‌ ಸಲಿಕೆರೆ ಪೊಡ್ಕ ೨೪೦ ಕೆ.ಜಿ. ತೂಗುತ್ತವೆ. ಇವುಗಳ ಮಾಂಸ ಮತ್ತು ಈಜು ರೆಕ್ಕೆಗಳನ್ನು ಬೆರಸಿ ಒಣಗಿಸಿ ಮಾರುತ್ತಾರೆ.
೨೨. ರೈಃ ಬ್ರೆಡ್ಡೆನ್ಸಿಸ್‌ ಬಿಳಿ ಚುಕ್ಕೆ ಸಲಿಕೆರೆ  
ಕುಟುಂಬ : ದೇಸಿಯಾಟಿಡೀ
*೨೩. ದೇಸ್ಯಾಟಿಸ್‌ ಬ್ಲೀಕೆರಿ ಚಾಟಿ ಕುಟುಕು ಸೊರಕೆ ಅಪಾಯಕಾರಿ ವರ್ತನೆಗೆ ಹೆಸರಾದವು
೨೪. ದೇಸ್ಯಾಟಿಸ್‌ ಸೆಫೆನ್‌ ಕೊಳಕು ಕುಟುಕು ಕಠಾರಿ ಕೊರಕ
೨೫. ದೇಸ್ಯಾಟಿಸ್‌ ಉವರಾರಿಕ ಜೇನುಕೊಟ್ಟೀರೇ ಇನ್ನೂ ಅನೇಕ ಹುಲಿ ತೊರಕೆ
೨೬. ದೇ. ಜುಗಿ ಬಳಚಿ ಅಂಜು, ಕುಟುಕು ರೇ ತೊರಕೆ
೨೭. ಜಿಮ್ನೂರ ಜಪಾನಿಕ ಉದ್ದ ಬಾಲದ ಕುಟುಕುರೇ  
೨೮. ಜಿ. ಮೈಕ್ರುರ ಮೋಟುಬಾಲದ ಚಿಟ್ಟೇರೇ ಚಿಟ್ಟೆಮೀನು
ಕುಟುಂಬ : ಮೈಲ್ಲೊಬೇಟಿಡೀ(ಹದ್ದು ಮತ್ತು ಹಸುಮೂಗು ರೇ ಮೀನುಗಳು)
೨೯. ಅಸೆಟೊಬೇಟಸ್‌ ನಲಿನಲಿ ಮಚ್ಚೆ ಹದ್ದುರೇ ಕಪ್ಪು ತೊರಕೆ ಮಾಂಸ ಮತ್ತು ಚರ್ಮಗಳು ವಾಣಿಜ್ಯ ದೃಷ್ಟಿಯಿಂದ ಮುಖ್ಯ
೩೦. ಅ. ಮ್ಯಾಕುಲೇಟಸ್‌ ಚಿತ್ತಾರ ಹದ್ದುರೇ ವಾಘ
೩೧. ಅ. ನಿಕೋಫೀ ನಿಕೋಫನ ಹದ್ದುರೇ  
೩೨. ರೈಃ ನಾಪ್ಟೆರ ಜವಾನಿಕ್‌ ಜಪಾನ ಹದ್ದುರೇ  
ಕುಟುಂಬ : ಮೊಬುಲಿಡೀ(ಪಿಶಾಚಿ ರೇಗಳು, ಮಾಂಟಗಳು)
೩೩. ಮೊಬುಲ ಡಯಬೊಲಸ್‌ ಕುಬ್ಜ ಪಿಶಾಚಿ ರೇ, ಮೋಟು ಬಾಲದ ಪಿಶಾಚಿ ರೇ ಮಾಘ ೨ ಅಡಿ ಉದ್ದ, ೧೪.೪ ಕೆ. ಜಿ. ತೂಕ
ಗಣ : ಟಾರ್ಪೆ ಡಿನಿಫಾರ್ಮಿಸ್‌ (ವಿದ್ಯುತ್‌ ರೇಗಳು)
ಕುಟುಂಬ : ಟಾರ್ಪೆಡನಿಡೀ(ವಿದ್ಯುತ್‌ ರೇ ಮತ್ತು ಜೋವುರೇ)
೩೪. ನಾರ್ಕೆ ಡಿಪ್ಸಿರೀಜಿಯ ಜೊಮಹಿಡಿಸುವ ಮೀನು ವಿದ್ಯುತ್‌ ಮೀನು ರೇ ಮೀನುಗಳಂತಿದೆ, ಆದರೆ ವಿದ್ಯುತ್‌ ಉತ್ಪಾದನಾಂಗಗಳಿವೆ.
ಗಣ : ಕ್ಲೂಪಿಯಿಫಾರ್ಮಿಸ್‌
ಕುಟುಂಬ : ಕ್ಲೂಪಿಯಿಡೀ(ಸಾರ್ಡಿಸ್‌, ಶಾಡ್‌ ಮೀನುಗಳು)
೩೫. ದುಸ್ಸುಮಿಯಿರಿಯ ಅಕ್ಯುಟ ಕಾಮನಬಿಲ್ಲು ಸಾರ್ಡಿನ್‌ ಮುನ್ನೇತಿ ರುಚಿಯಾದ ಮಾಂಸಕ್ಕೆ ಹೆಸರುವಾಸಿ
೩೬. ಎಸ್ಕು ಲೋಸ ತೊರಾಸಿಕ ಬಿಳಿ ಸಾರ್ಡಿನ್‌ ಬಾಲಂಜಿರ್
೩೭. ಸಾಡೀನೆಲ್ಲ ಲಾಂಗಿಸೆಪ್ಟ್ ಇಂಡಿಯದ ಎಣ್ಣೆ ಸಾರ್ಡಿನ್‌, ಮಲಬಾರ ಸಾರ್ಡಿನ್ ಬೈಗೆ
೩೮. ಸಾ. ಅಲಬೆಲ್ಲ ಬಿಳಿ ಸಾರ್ಡಿನ್‌, ಮೋಟು ದೇಹದ ಸಾರ್ಡಿನ್‌   ಎಣ್ಣೆ ತೆಗೆದು ಉಳಿದದ್ದನ್ನು ಕೋಳಿ ಆಹಾರ ಗೊಬ್ಬರ ತಯಾರಿಸಲು ಬಳಸುತ್ತಾರೆ.
೩೯. ಸಾ. ಬ್ರಾಹಿಸೋಮ ದಪ್ಪ ದೇಹದ ಸಾರ್ಡಿನ್‌  
೪೦. ಸಾ. ದಾಯಿ ಡೇನ್‌ ಸಾರ್ಡಿನೆಲ್ಲ ತಲೈಸಾದಿ
೪೧. ಸಾ. ಫೈಂಬ್ರಿಯೇಟ ಬೆರಳುಗಾತ್ರದ ಸಾರ್ಡಿನೆಲ್ಲ ಬಟ್ಟುಬೈಗೆ
೪೨. ಇಲಿಷ ಇಲಾಂಗೇಟ ಬಿಳಿಗಾಳ ಕಟಾಟಿ ಹೆಚ್ಚು ಬೇಡಿಕೆ ಇಲ್ಲದ ಆಹಾರ ಮೀನು
೪೩. ಅಫಿಸ್ತಾಪ್ಪೆರಸ್ ಟಾರೆದೊರೆ ಟಾರ್ ದೊರೆ ಅಂಬಟ್ಟಿಕೆ
೪೪. ಪೆಲ್ಲೋನ ಡಿಚೆಲ ಇಂಡಿಯನ್ ಹೆರ್ರಿಂಗ್‌ ಭಾಂಗ್
೪೫. ರಾಕೊಂಡ ರಸ್ಸೆಲಿಯಾನ ನಯಬೆನ್ನು ಹೆರ್ರಿಂಗ್‌ ಪಾಟುಲ್ಡ
೪೬. ಹಿಲ್ಸ ಕೆಲೀ ಕೇಲೀಶಾಡ್‌    
*೪೭. ಹಿ. ಇಲಿಷ ಹಿಲಷಶಾಡ್‌ ನದಿ ಶಾರ್ಕ ಪಾಲಿಯ ಮೊಟ್ಟೆ ಇಡಲು ಕಡಲಿನಿಂದ ಸಿಹಿನೀರಿಗೆ ವಲಸೆ ಬರುತ್ತದೆ.
೪೮. ಅನಡಾಂಟೆಸೋಮ ಕಾಸುಂಡ ಕಾಸುಂಡ ಶಾರ್ಕ   ವಿಜಾತೀಯ ಸ್ನಾಯು ಜಠರಕ್ಕೆ ಪ್ರಸಿದ್ಧಿ
೪೯. ನಿಮೆಟಲೋಸ್‌ ನಾಸಸ್‌ ಮಣ್ಣು ಶಾಡ್‌  
ಕುಟುಂಬ : ಇಂಗ್ರೆಯುಲಿಡೀ(ಆಂಕೋವಿಗಳು)
೫೦. ಕೋಯಿಲಿಯ ದುಸ್ಸುಮಿಯಿರಿ ಬಂಗಾರ ಚುಕ್ಕೆ ಆಂಕೋಟಿ ಮೊನಾಂಗು ಗುದ ಮತ್ತು ಬಾಲದ ಈಜುರೆಕ್ಕೆಗಳು ಸೇರಿ ಇಲಿಬಾಲ ಉತ್ಪತ್ತಿಯಾಗಿದೆ.
೫೧. ಸ್ಟೊಲೆಫೋರಸ್‌ ಕಾಮ್ಮರ್ಸೋನಿ ಕಾಮ್ಮರಸನ್‌ ಆಂಕೋವಿ ಕೊಲ್ಲ
೫೨. ಸ್ಟೊ. ವೇಯ್ಟೀ ಬಟಾಟಿಯನ್ ಆಂಕೋವಿ   ಸಣ್ಣ ತೆಳು ತಿನ್ನುವ ಮೀನುಗಳು. ಕ್ಯಾನಿಂಗಗೆ ಮತ್ತು ಫಿಸ್‌ ಮೀಲ್‌ ತಯಾರಿಕೆಯಲ್ಲಿ ಬಳಸುವ ಅಮೂಲ್ಯ ಕಡಲ ಮೀನುಗಳು.
೫೩. ತ್ರಿಸ್ಸ ಡಸ್ಸುಮಿಯರಿ ಉದ್ದ ಆಂಕೋವಿ ನೀಲ ಮನಾಂಗು
೫೪. ತ್ರಿ. ಹ್ಯಾಮಿಲ್ಟೋನೀ ಹ್ಯಾಮಿಲ್ಟನ್ನ ತ್ರಿಸ್ಟ ಮಾನಂದೆ
೫೫. ತ್ರಿ. ಮಲಬಾರಿಕ ಮಲಬಾರ್ ತ್ರಿಸ್ಟ  
೫೬. ತ್ರಿ. ಪುರುವ ಗಂಗಾವ ಆಂಕೋವಿ  
೫೭. ತ್ರಿ. ಮಿಸ್ಟಾಕ್ಸ್ ಮೀಸೆ ತ್ರೈಸ್ಸ ಎಂಗಲ್ಲು
ಕುಟುಂಬ : ಕೈರೊಸೆಂಟ್ರಡೀ(ತೋಳ ಹೆರ್ರಿಂಗ್‌ಗಳು)
೫೮. ಕೈರೊಸೆಂಟ್ರಸ್‌ ದೊರಾಬ್‌ ದೊರಾಬೆರ್ತೊ ಹೆರ್ರಿಂಗ್‌ ಬಾಳೆ, ಕಡಲು ಬೀಳೆ ಮಾಂಸಾಹಾರಿ
ಗಣ : ಇಲೊಪಿಪಾರ್ಮಿಸ್
ಕುಟುಂಬ : ಇಲೊಪಿಡೀ(ಮಹಿಳಾಮೀನುಗಳು, ಟೆನ್‌ಪಾಂಡರ್ ಗಳು)
೫೯. ಇಲಾಪ್ಸ್ ಮಾಕ್ನಾಟ ಟಿನ್‌ಪಾಂಡರ್   ಸಪ್ಪೆ, ನಿಸ್ಸತ್ವ ಮಾಂಸ, ಬರೀ ಮೂಳೆ
ಕುಟುಂಬ : ಮೆಗಲೋಪಿಡೀ(ಟಾರ್ ಪೆನ್‌ಗಳು)
೬೦. ಮೆಗಲಾಪ್ಸ್ ಸಿಪ್ರಿನಾಯಿಡ್ಸ್ ಇಂಡಿಯನ್ ಟಾರ್ಪೆನ್‌ ಕಡಿಮೆ ಸತ್ವದ ಮಾಂಸ ಮತ್ತು ಬರೀ ಮೂಳೆ
ಮೊಟ್ಟೆ ಇಡಲು ಕಡಲಿಂದ ನದಿಗಳಿಗೆ ಬರುತ್ತದೆ.
ಕುಟುಂಬ : ಆಲ್ಬುಲಿಡೀ (ಮೂಳೆ ಮೀನುಗಳು)
೬೦. ಆಲ್ಬುಲ ವಲ್ಪಿಸ್‌ ಮೂಳೆಮೀನು   ತಿನ್ನಬಹುದಾದರೂ ಮೂಳೆಗಳು ಜಾಸ್ತಿ
ಗಣ : ಆಸ್ಟಿಯೊಗ್ಯಾನ್ಸಿ ಫಾರ್ಮಿಸ್‌
ಕುಟುಂಬ : ನೋಟಾಪ್ಟೆಲಿಡೀ(ಫೆದರ್ ಬ್ಯಾಕ್‌ಗಳು)
೬೧. ನೋಟಾಪ್ಪೆ ರಸ ನೋಟಾಪ್ಪೆ ರಸ ಫೆದರ್ ಬ್ಯಾಕ್ ಚಪ್ಪಲಿ ಮೀನು ದೇಹದ ಆಕಾರ ಮತ್ತು ಗಾತ್ರದಲ್ಲಿ ಅಪಾರ ವೈವಿಧ್ಯ ತೋರುತ್ತವೆ.
೬೨. ನೋ. ಕಿಟಾಲ ಫೆದರ್ ಬ್ಯಾಕ್ ಚಪ್ಪಲಿ ಮೀನು
ಗಣ : ಗೋನೊರ್ಹಿಂಕಿಫಾರ್ಮಿಸ್‌
ಕುಟುಂಬ : ಬೌನಿಡೀ(ಹಾಲು ಮೀನು)
೬೪. ಚನಾಸ್‌ ಚನಾಸ್‌ ಹಾಲು ಮೀನು ಹೂಮೀನು ಒಣಗಿಸಿ ಸಾರು ಮಾಡುತ್ತಾರೆ.
ಗಣ : ಮಿಕ್ಟೊಫಿಲ್‌ಫಾರ್ಮಿಸ್‌
ಕುಟುಂಬ : ಸೈನೊಡಿಡೀ
೬೫. ಸಾರಿಡ ಟಂಬಿರ್ ದೊಡ್ಡ ಹಲ್ಲಿ ಮೀನು ಅರಾಣಿ ಮೀನು ಹಲ್ಲಿಯಂತೆ ಕಾಣುತ್ತದೆ ಮತ್ತು ವರ್ತಿಸುತ್ತದೆ. ಮಾಂಸ ಕಡಿಮೆ ಗುಣದ್ದು
ಕುಟುಂಬ : ಹಾರ್ಪಡೊಂಟಡೀ(ಬಾಂಬೆಡಕ್‌)
೬೬. ಹಾರ್ಪಡಾನ್‌ ನೆಹೆರ್ಕಸ್‌ ಬಾಂಬೆಡಕ್ ಬೊಂಬುಲಿ ಓಣಗಿಸಿ ಸಾರು ಮಾಡಲು ಬಳಸುತ್ತಾರೆ.
ಗಣ : ಅಂಗುಲ್ಲಿಫಾರ್ಮಿಸ್‌ (ಹಾವು ಮೀನುಗಳು)
ಕುಟುಂಬ : ಅಂಗುಲ್ಲಿಡೀ
೬೭. ಅಂಗುಯಿಲ್ಲಬೈಕೊಲಾರ ಬೈಕೊಲಾರ್ ಮಟ್ಟಸ ಈಜುರೆಕ್ಕೆ ಹಾವು ಮೀನು ಹಾವು ಮೀನು, ಮಲಗ ಮೊಟ್ಟೆ ಇಡಲು ಸಿಹಿನೀರಿನಿಂದ ಕಡಲಿಗೆ ವಲಸೆ ಹೋಗುತ್ತದೆ. ಇದರ ಮಾಂಸಕ್ಕೆ ಮೂಲವ್ಯಾದಿ ಗುಣಪಡಿಸುವ ಶಕ್ತಿ ಇದೆ ಎಂದು ನಂಬುತ್ತಾರೆ.
೬೮. ಅ. ಬೆಂಗಾಲೈನ್ಸಿಸ್‌ ಬೆಂಗಾಲೆನ್ಸಿಸ್‌ ಉದ್ದ ಈಜುರೆಕ್ಕೆ ಹಾವು ಮೀನು ಹೆಮ್ಮಲಗೆ ಮೀನು
ಕುಟುಂಬ : ಮುರೀನಿಡೀ(ಮುರೆ ಹಾವು ಮೀನು)
೬೯. ಬೆಮ್ನೊತೊರಾಕ್ಸ್‌ ಸುಡೋ ಕೈರ್ಯಾಯಿಡಸ್‌ ಕಪ್ಪು ಈಲ್‌    
ಕುಟುಂಬ : ಮುರೀನೆಸೋಸಿಡೀ(ಪೈಕ್‌ ಕಾಂಗರ್ಸ್)
೭೦. ಮುರೀನೆ ಸಾಕ್ಸ ಬಾಗಿಯೊ ಸಾಮಾನ್ಯ ಪೈಕ್‌ ಕಾಂಗರ್   ಹಾವು ಮೀನು ಆಕಾರ. ಆಕ್ರಮಣಕಾರಿ ಮೀನುಗಳು
೭೧. ಮು. ಸಿನೆರಿಯುಸ್‌ ಬಾಕು ಹಲ್ಲು ಪೈಕ್‌ ಕಾಂಗರ್  
ಗಣ : ಸಿಪ್ರಿನಿಫಾರ್ಮಿಸ್‌      
ಕುಟುಂಬ : ಸಿಪ್ರಿನಿಡೀ(ಕಾರ್ಪಗಳು)      
೭೨. ಕೇಲ ಅಟಪಾರ ರೆಕ್ಕೆರಾಸ್ಟೊರ ಕೊಳೆ ಮೀನು ಲಾರ್ವ ಭಕ್ಷಕ ಪ್ರಭೇಧಗಳು
೭೩. ಸಾಲ್ಮೊಸ್ಟೋಮ ಅಸಿನೇಸಸ್   ಚಿಟ್ಟೆ ಮೀನು
೭೪. ಸಾ. ಬೂಪ್ಸಿಸ್‌   ಸೂಳೆ ಮೀನು
೭೫. ಸಾ. ಹೊರಾಯಿ   ಚೊಳೆ ಮೀನು ಲಾರ್ವ ಭಕ್ಷಕಗಳು, ಹಿಂಸ್ರ ಮೀನುಗಳು ಸಂಖ್ಯೆ ಹೆಚ್ಚು. ಪೋಷಣೆಯಲ್ಲಿ ಪ್ರಮುಖ

ಮುಂಗಾರಿನಲ್ಲಿ ಮೊಟ್ಟೆ ಇಡುತ್ತವೆ.

೭೬. ಡಾನಿಯೊ ಇಕ್ವಿಪಿನೇಟಸ್‌ ದೈತ್ಯಡಾನಿಯೊ ಅರಿಶಿಣ ಪಟ್ಟ
೭೭. ರಾಸ್ಟೋರ ದಾನಿಕೋನಿಯಸ್‌ ಸಾಮಾನ್ಯ ರಾಸ್ಬೊರ ಸಾಸ್ಲುಪಕ್ಕೆ
೭೮. ರಾ. ರಾ. ಸ್ಟೋರ   ಸಾಸ್ಲುಪಕ್ಕೆ
೭೯. ಆಂಬ್ಲಿಫೆರಿಂಗೊಡಾನ್ ಮೆಲೆಟ್ಹಿನ ಎಚ್ಚರಿಕೆ ಮೊಳ ಇಲಿಯಾಂಬು
೮೦. ಆ. ಮೈಕ್ರೊಲೆಪಿಸ್   ಇಲಿಯಾಂಬು
೮೧. ಆ. ಮೋಲ ಮೋಲ ಇನಾಪು ಪಕ್ಕೆ
೮೨. ಬುರಿಲಿಯಸ್‌ ಬೆಂಡೆಲಿಸಿಸ್‌   ಅಗಸಗಿತ್ತಿ ಮೀನು, ಬಿಳಿಚೆ
೮೩. ಬು. ವರ್ಗ   ಗರೆ ಕ್ಯಲ್ಯಾಣೆ ಮೀನು
೮೪. ಬು. ಕೆನರೆನ್ಸಿಸ್‌  
೮೫. ಬು. ಗುಟೆನಸಿಸ್‌  
೮೬. ಪುಂಟಿಯಸ್‌ ಚೋಳ ಹಸಿರುಬಾರ್ಬ್ ದಡ್ವಕರ್ಸೆಪಕ್ಕೆ, ಪಕ್ಕೆ ಜಬ್ಬು
೮೭. ಪುಂ. ಮೈಕ್ರೊಪೊಗಾನ್   ಚಿಟ್ಟ ಕೌರಾಲು
*೮೮. ಪುಂ. ಫಿಲಮೆಂಟೊಸಸ್ ಮೀಸೆ ಬಾರ್ಬ ಕಸ್ಮೆ, ಗೊಗ್ಗರೆಕೆ
೮೯. ಪುಂ. ಆಂಫಿಬಿಯಸ್ ಕಡುಕೆಂಪು ಪಟ್ಟಿ ಬಾರ್ಬ ಪಕ್ಕೆ ಮೀನು
*೯೦. ಪುಂ. ಕರ್ನಾಟಿಕಸ್ ಕರ್ನಾಟಕದ ಕಾರ್ಪು ಕೊರಚ ಮೀನು, ಗೆಂಡೆ ಮೀನು, ಗುಡ್‌ಪಕ್ಕೆ ಮೀನು, ಮಚ್ಚಾಲು ಮೀನು ಕೃಷಿಯೋಗ್ಯ ಮಧಮ್ಯ ಗಾತ್ರದಿಂದ ದೊಡ್ಡ ಮೀನು, ಮುಂಗಾರಿನಲ್ಲಿ ಮೊಟ್ಟೆ ಇಡುತ್ತದೆ.
೯೧. ಪುಂ. ಅತೊಪಿಡಾಸ್‌   ಚಪ್ಪೆ ಮೀನು
೯೨. ಪುಂ. ಸುಮುಕ್‌ ಬುಚನನ ಕಾರ್ಪು ಕೊರಚ ಮೀನು, ಕುರುವಾಯಿ
೯೩. ಪುಂ. ಪುಲ್‌ಕೆಲ್ಲಿಸ್ ಭಾರತದ ಹುಲ್ಲು ಕಾರ್ಪು ಬಿಳಿ ಹರಗಿ ಮೀನು, ಹರಿಗಿ
೯೪. ಪುಂ. ಜೆರ್ಡೋನಿ ತುಂಗಭದ್ರ ಕಾರ್ಪು, ಜೆರ್ಡೊನಿ ಕಾರ್ಪು ಹರಿಗಿ ಮೀನು
೯೫. ಪುಂ. ತೊಮೆಸ್ಟಿ    
೯೬. ಪುಂ. ಮಲಬಾರಿಕಸ್‌    
೯೭. ಸಿಪ್ರಿನಸ್‌ ಕಾರ್ಪಿಯೊ ಸ್ಟೆಕುಲಾರಿಸ್‌ ಕನ್ನಡ ಕಾರ್ಪು, ಸಾಮಾನ್ಯ ಕಾರ್ಪು ಸಾಮಾನ್ಯ ಕಾರ್ಪು, ಪರೆಮೀನು
೯೮. ಸಿ. ಕಾ. ಕಮ್ಮೂನಿಸ್‌ ಹುರುಪೆ ಕಾರ್ಪು, ಸಾಮಾನ್ಯ ಕಾರ್ಪು ಕನ್ನಡಿ ಮೀನು
೯೯. ಸಿ. ಕ. ನೂಡುಸ್‌ ತೊಗಲು ಕಾರ್ಪು ಬತ್ತಲೆ ಮೀನು
೯೯A. ಸಿ. ಸಿರ್ಹೊಸಸ್‌ ಯುರೋಪು ಕಾರ್ಪು  
೧೦೦. ಕರಾನ್ಸಿಯಸ್ ಔರೇಟಸ್‌ ಬಂಗಾರ ಮೀನು ಬಂಗಾರದ ಮೀನು ಜಲತೊಟ್ಟಿಯ ಜನಪ್ರಿಯ ಮೀನು
೧೦೧. ಕ. ಕರಾನ್ಸಿಯಸ್‌ ಬಂಗಾರ ಮೀನು ಬಂಗಾರದ ಮೀನು
೧೦೨. ಹೈಪೊತಾಲ್ಟಿಕ್ರಿಸ್ ಮಾಲಿಟ್ರಿಕ್ಸ್ ಬೆಳ್ಳಿ ಕಾರ್ಪು ಬೆಳ್ಳಿಮೀನು ಸಣ್ಣಗಾತ್ರದ ಮೀನು (೧೨ ಕೆ. ಜಿ.). ಕೃಷ್ಕಿ ಯೋಗ್ಯ ಮೀನು ಚೀನಾದ ಮೂಲ ನಿವಾಸಿ
೧೦೩. ಲೇಚಿಯೊ ಬೊಗ್ಗಟ್‌   ಗುಬಾಲಿ ಮುಂಗಾರಿನಲ್ಲಿ ತತ್ತಿ ಇಡುವ ಸಸ್ಯಾಹಾರಿ
೧೦೪. ಲೇ. ನೈಗ್ರಿಸೆನ್ಸೆ   ಕುರಿಮೀನು ಮಧ್ಯಮ ಗಾತ್ರ, ಕೃಷಿ ಯೋಗ್ಯ
೧೦೫. ಲೇ. ರೊಹಿಟ ರೋಹು ರೋಹು ಮೀನು ದೊಡ್ಡ ಗಾತ್ರ ಕೃಷಿ ಯೋಗ್ಯ ಮತ್ತು ಗಾಳ ಮೀನು
*೧೦೫A. ಲೇ. ಸಿಲ್ಬಾಸು    
*೧೦೬. ತೋರ್ ಕುದ್ರೀ ಕುದ್ರಿಮಶೀರ್ ಬಿಳಿ ಮೀನು
*೧೦೭. ಸೆರ್ರಿನಸ್‌ ಮೃಗಾಲ ಮ್ರಿಗಾಲ್ ಮ್ರಿಗಾಲ ಮೀನು ದೊಡ್ಡ ಗಾತ್ರ (೨೦೨೫ ಕೆ. ಜಿ.) ಕೃಷಿ ಯೋಗ್ಯ ಮೀನು
೧೦೭A. ಸಿ. ಸಿರ್ಹೋಸಸ್‌    
೧೦೮. ಓಸ್ಟೆಯೊಕೈಲಸ್‌ ತೊಯಾನ್ಸಿ ನಾಗೇಂದ್ರಮ್‌ ಮೀನು ಬಗಲಿ ನಾಗೇಂದ್ರಮ್‌ ಸಣ್ಣ ಸಸ್ಯಾಹಾರಿ ಮುಂಗಾರಿನಲ್ಲಿ ಮೊಟ್ಟೆ ಇಡುವುದು.
*೧೦೯. ಕಾಟ್ಲ ಕಾಟ್ಲ ಕಾಟ್ಲ ಕಾಟ್ಲ ಮೀನು, ದೊಡ್ಡ ಗೆಂಡೆ ಮೀನು ದೊಡ್ಡ ಗಾತ್ರ (೪೦೪೫ ಕೆ. ಜಿ.) ಮುಖ್ಯವಾಗಿ ಕೃಷಿ ಯೋಗ್ಯ ಮೀನು
೧೧೦. ಟಿನೊಫ್ಯಾರಿಂಗೊಡಾನ್‌ ಇಡೆಲ್ಲ ಹುಲ್ಲು ಕಾರ್ಪು ಹುಲ್ಲು ಕಾರ್ಪು, ಹುಲ್ಲು ಮೀನು ದೊಡ್ಡ ಗಾತ್ರ (೧೩ ಕೆ. ಜಿ.) ಕೃಷಿ ಮಾಡುವುದು. ಜಲಕಳೆ ಕಳೆಯಲು ಬಳಸಲಾಗುತ್ತದೆ.
೧೧೧. ಗೆರ್ರಗೊಬಿಲ್ಯ ಸ್ಟೆನೊರಿಂಕಸ್   ಕಲ್ಲು ಕೊರವ ಕುರಿಕುರಿ ಸಣ್ಣ ಸಸ್ಯಾಹಾರಿ
೧೧೧A. ಗೊನೊ ಪ್ರೊಕ್ಯುಟಸ್‌ ಕೋಲಸ್‌      
ಗಣ : ಕೊಬಿಟಡೀ
೧೧೨. ನೋಮಕೈಲಸ್‌ ಭೀಮಚಾರಿ   ಮುರಂಗಿ ಮೀನು, ಕಲ್ಮುರ ಮೀನು, ಹುಣಸೆ ಮೀನು ಸಣ್ಣ ಸಸ್ಯಾಹಾರಿ ಮೀನುಗಳು
೧೦೩. ನೋ. ಪುಲ್‌ಕೆಲ್ಲಸ್‌   ಕಲ್ಲು ಮುಳ್ಳು ಮೀನು, ಮುರಂಗಿ ಮೀನು
೧೦೪. ನೋ. ಡೆನಿಸೋನಿ   ಕಲ್ಲು ಮುಳ್ಳು ಮೀನು, ಹುಣಸೆ ಮೀನು
ಗಣ : ಸೈಲೂರಿಫಾರ್ಮಿಸ್‌ (ಕ್ಯಾಟ್‌ಫಿಶ್)
ಕುಟುಂಬ : ಬ್ರಾಗಿಡೀ
೧೧೫. ಮಿಸ್ಟಸ್‌ ಮೋನಿಗ್ನಸ್‌   ಗಿರ್ಲುಮೀನು ಮುಂಗಾರಿನಲ್ಲಿ ಮೊಟ್ಟೆ ಇಡುವ ಸಸ್ಯಾಹರಿ ಮೀನು
*೧೦೬. ಮಿ. ವಿಟ್ಟೇಟಸ್‌ ಕುಬ್ಜ ಕ್ಯಾಟ್‌ ಫಿಶ್ ಚಿಟ್ಟುಗಿರ್ಲು, ಕೆಲಾಟಿ, ಜೆಲ್ಲ ಮೀನು
*೧೦೭. ಮಿ. ಮಲಬಾರಿಕಸ್‌   ಗಿರ್ಲು ಮೀನು
ಕುಟುಂಬ : ಸೈಲೂರಿಡೀ(ಹಾಳೆ ಮೀನು)
*೧೦೮. ಓಪಾಕ್‌ ಬೈಮ್ಯಾಕುಲೇಟಸ್‌ ಬೆಣ್ಣೆ ಕ್ಯಾಟ್‌ ಫಿಶ್‌ ಗುಳ್ಳೆ ಮೀನು ಮುಂಗಾರಿನಲ್ಲಿ ಮೊಟ್ಟೆ ಇಡುವ ಸಣ್ಣ ಮೀನು
*೧೦೯. ವೆಲ್ಲಾಗೊ ಅಟ್ಟ ಸಿಹಿ ನೀರು ಶಾರ್ಕು ಬಾಳೆ ಮೀನು, ವಿಟಂ, ಜಾಟೆ ದೊಡ್ಡ ಗಾತ್ರ (೨೦೨೫ ಕೆ. ಜಿ.) ಇತರ ಮೀನು ತಿನ್ನುವ ಮೀನು
*೧೨೦. ಕ್ಲೇರಿಯಸ್‌ ಬೆಟ್ರಾಕಸ್‌ ಮುಗುರ್ ಅಣ್ಣೆ ಮೀನು, ಮಾರ್ವೆ ಮುರುಗೋಡು ಗಾಳಿ ಉಸಿರಾಡುವ ಮೀನು
ಕುಟುಂಬ : ಹೆಟರೊನ್ಯುಸ್ಟಿಡೀ
*೧೨೧. ಹೆಟರೊನ್ಯುನ್ಟಿಸ್ ಫಾಸಿಲ್ಲಿಸ್‌ ಕುಟುಕು ಕ್ಯಾಟ ಫಿಶ್‌ ಚೇಳು ಮೀನು ಗಾಳಿ ಉಸಿರಾಡುವ ಮೀನು
ಕುಟುಂಬ : ಪ್ಲಾಟೊಸಿಡೀ(ಬೆಕ್ಕು ಮೀನು ಹಾವು ಮೀನುಗಳು)
೧೨೨. ಪ್ಲೊಟೊಸಸ್‌ ಅನೀಟಸ್‌ ಪಟ್ಟಿ ಸಿಡೀ ಶಿಂಗಾಲ ಮುಖ್ಯವಾಗಿ ಕಡಲು ಮೀನು ಅಳವೆಗಳಲ್ಲಿಯೂ ಕಂಡುಬರುತ್ತದೆ.
೧೨೩. ಪ್ಲೊ. ಕೇನಿಯಸ್‌ ಕೋರೆಸೀಡಿ ವಾಲ್‌ ಶಿಂಗಿ, ವಾಲ್‌ ಶಿಂಗಾಲ
ಕುಟುಂಬ : ಆರಿಡೀಟಾಕಿಸೂರಿಡೀ(ಕಡಲು ಕ್ಯಾಟ್‌ಫಿಶ್‌)
೧೨೪. ಆರಿಸ್‌ ತಲಾಸ್ಸಿನಸ್‌ ದೈತ್ಯ ಕ್ಯಾಟ್‌ಫಿಶ್, ಕಡಲು ಕ್ಯಾಟ್‌ಫಿಶ್ ಕೊಗ್ಗಿಶೆಡ್ಡೆ, ಮೊಗರು ಶೆಡ್ಡೆ ಇವುಗಳ ಗರಗಸ ಅಂಚಿನ ಮುಳ್ಳುಗಳ ಇರಿತ ಅತೀವ ನೋವುಂಟು ಮಾಡಬಹುದಾದುದರಿಂದ ತೀರಾ ಅಪಾಯಕಾರಿ ಮೀನುಗಳು. ವಿಷಗ್ರಂಥಿಗಳಿಲ್ಲ ಆದರೆ ಅದರ ಮೈಮೇಲಿನ ಶ್ಲೇಷ್ಮಕ್ಕೆ ವಿಷಗುಣವಿದೆ. ಹಿಡಿದ ತಕ್ಷಣ ಮೀನು ತಿನ್ನಲು ಯೋಗ್ಯ. ಇದರ ವಾಯುಕೋಶವನ್ನು ಇಸಿನ್‌ಗ್ಲಾಸ್‌ ಮೀನಂಟು ವಜ್ರ ತಯಾರಿಸಲು ಬಳಸುತ್ತಾರೆ.
೧೨೫. ಆ. ಸಬ್ರೊಸ್ಟ್ರೇಟಸ್‌ ಮೋಟು ಮೂಗು ಕ್ಯಾಟ ಫಿಶ್‌, ಕಡಲು ಫಿಶ್‌ ಶಿಡೆ ಪೆಡೆ
೧೨೬. ಆ. ಸಿಲೇಟ್ಸ್‌ ಕೊರೆವ ಮಾರ್ಜಾಲ, ಕಡಲ ಮೀನು ಶೇಡೆ ತೆಡೆ
೧೨೭. ಆ. ಟೆನುಯಿವಿನಿಸ್‌ ಕೊರೆವ ಮಾರ್ಜಾಲ, ಕಡಲ ಮೀನು ಶೇಡೆ ತೆಡೆ
೧೨೮. ಆ. ಜೆಲ್ಲ ಬಿಳಿ ಮಾರ್ಜಾಲ ಮೀನು ಬಿಳಿ ಶೆಡ್ಡೆ
೧೨೯. ಆ. ಸೋನ ಡಾಸ್ಕಿ ಮೀನು ಶಿಂಗಾಲ
೧೩೦. ಆ. ಡಸ್ಸುಮಿಯರಿ ದೈತ್ಯ ಕಡಲ ಮೀನು ಶಿಂಗಾಲ
೧೩೧. ಬೆಟ್ರಕೊ ಸಿಫಾಲಸ್‌ಮಿನೊ ಕಪ್ಪತಲೆ ಮೀನು ಶೇಡೆ
೧೩೨. ಆಸ್ವಿಯೊಜಿನಿಯೊನಸ್‌ ಮಿಲಿಟರಿಸ್‌ ಸೈನಿಕ್‌ಮೀನು ಸೂಗೇರ್
ಗಣ : ಅತೆರಿನಿಫಾರರ್ಮಿಸ್‌
ಕುಟುಂಬ : ಎಕ್ಸೊಸಿಟಿಡೀ(ಹಾರುವ ಮೀನು)
೧೩೩. ಸಿಪ್ಸಿಲೂರಸ್‌ ಪುರ್ಕೇಟಸ್‌ ಮೃದು ಈಜುರೆಕ್ಕೆ ಹಾರು ಮೀನು ಹಾಯಿ ಮೀನು ಸುವಾಸನಾ ಮಾಂಸಕ್ಕೆ ಪ್ರಸಿದ್ಧಿ. ಇದರ ಭುಜದ ಮತ್ತು ಗುದ ಈಜುರೆಕ್ಕೆಗಳು ವಿಸ್ತಾರಗೊಂಡು ರೆಕ್ಕೆಗಳಾಗಿ ನೀರಿನಮೇಲೆ ಜಾರಿ ಹಾರಲು ಮಾರ್ಪಟ್ಟಿವೆ.
೧೩೪. ಸಿ. ಸ್ಟೈಲೊಪ್ಪರೆಸ್‌ ಭಾರತದ ಚುಕ್ಕೆ ಹಾರು ಮೀನು ಹಾರುವ ಮೀನು
*೧೩೫. ಎಕ್ಸೊಸಿಟಸ್‌ ವೊಲಿಟಾನಸ್‌ ಉಷ್ಣವಲಯದ ಎರಡು ರೆಕ್ಕೆ ಹಾರುವ ಮೀನು ಹಾರುವ ಮೀನು
ಕುಟುಂಬ : ಹೆಮಿರಾಂಫಿಡೀ      
*೧೩೬. ಹೆಮರಾಂಫಸ್‌ಲೂಟಿಕಿ ಲೂಟ್ಕಿ ಅರೆಕೊಕ್ಕು   ಉದ್ದ ಕೆಳದವಡೆಯ ಮೀನುಗಳು, ಮೃದುವಾದ ಮಾಂಸ, ಆದರೆ ಇರುವ ಅನೇಕ ಸಣ್ಣ ಮೂಳೆಗಳು ತಿನ್ನಲು ಅಡ್ಡ ಬರುತ್ತಿವೆ
೧೩೭. ಹೆ. ಫಾರ್ ಕಪ್ಪು ಪಟ್ಟಿ ಅರೆಕೊಕ್ಕು ಸುರಭಿ ಕೆಂಡೈ
೧೩೮. ಹೈಪೊರಾಂಫಸ್‌ ಕ್ಸೆಂತೊಪ್ಪೆರಸ್‌ ಕೆಂಪು ತುದಿಯ ಅರೆಕೊಕ್ಕು  
೧೩೯. ಹೈ. ಅಂಬೇಟಸ್‌ ವೇಲೆನ್ಸಿಯೆನ್ನೆ ಅರೆಕೊಕ್ಕು  
ಕುಟುಂಬ : ಬೆಲೊನಿಡೀ(ಗಾರ್ಮೀನು, ಸೂಜಿ ಮೀನು)
೧೪೦. ಸ್ಟ್ರಾಂಗೈಲೂರಸ್ಟ್ರಾಂಗೈಲೂರ ದುಂಡು ಬಾಲದ ಸೂಜಿ ಮೀನು   ಉದ್ದವಾದ ಮೇಲು ಮತ್ತು ಕೆಳಗಿನ ದವಡೆಗಳಿಂದ ಕೊಕ್ಕು ನಿರ್ಮಾಣವಾಗಿದೆ. ಇವುಗಳ ಮೂಳೆಗಳು ಮತ್ತು ಕೆಲವೊಮ್ಮೆ ಮಾಂಸ ಹಸಿರು ಬಣ್ಣ. ಆದರೆ ತಿನ್ನಬಹುದು.
೧೪೧. ಸ್ಟ್ರಾಂ. ಲೈಯೂರ ಚೌಕಬಾಲದ ಮೀನು  
೧೪೨. ಟೈಲೊಸಾರಸ್‌ ಕ್ರೊಕೊಡೈಲಸ್‌ ದೈತ್ಯಲಾಂಗ್‌ಟ್ಯಾಮ್‌ ಕೊಕ್ಕರೆ ಮೀನು
೧೪೩. ಕ್ಸೆನೆಂಟೊಡಾನ್‌ಕಾನುಲ ಸಿಹಿ ನೀರಿನ ಗಾರ್ಮಿನು, ಸೂಜಿ ಮೀನು  
ಗಣ : ಸಿಂಗ್ನಾತಿಫಾರ್ಮಿಸ್‌
ಕುಟುಂಬ : ಫಿಸ್ಟುಲೇರಿಡೀ
೧೪೪. ಪಿಸ್ಟುಲೇರಿಯದ ವಿಲ್ಲೋಸ್‌ ಒರಟು ಕೊಳಲು ಮೂತಿ ಕೊಳಲು ಮೀನು ನೀಳವಾದ, ಚಪ್ಪಟೆ, ಮಾಂಸಲ ದೇಹ, ಬಾಲದ ಮಧ್ಯ ಭಾಗ ತಂತುವಿನಂತಿದೆ
ಕುಟುಂಬ : ಸಿಂಗ್ನಾತಿಡೀ
೧೪೫. ಹಿಪ್ಪೊಕ್ಯಾಂಪಸ್‌ಕೂಡ ಕಡಲ ಕುದುರೆ ಕುದುರೆ ಮೀನು ಗಂಡು ಮೊಟ್ಟೆಮರಿ ಉದರಭಾಗದಲ್ಲಿರುವ ಸಂತಾನ ಸಂಚಿಯಲ್ಲಿಟ್ಟುಕೊಳ್ಳುತ್ತದೆ.
ಗಣ : ಸಿಪ್ರಿನೊಡಾಂಟಿಫಾರ್ಮಿಸ್‌
ಕುಟುಂಬ : ಸಿಪ್ರಿನೊಡಾಂಟಿಡೀ
೧೪೬. ಅಪ್ಲೊಕೈಲಸ್‌ ಲಿನಿಯೇಟಸ್‌ ಬರೆಬರೆ ಮೇಲಿನ ಮೀನು ಮೂಗು ಮಲ್ಲಿ ಮೀನು, ನೆತ್ತಿ ಕಣ್ಣು ಮೀನು ಸೊಳ್ಳೆ ಲಾರ್ವ ತಿನ್ನುವ ಸಣ್ಣ ಮೀನು. ಆದ್ದರಿಂದ ಮಲೇರಿಯಾ ನಿಯಂತ್ರಣಕ್ಕೆ ಪ್ರಯೋಜಕ. ಇದು ಜಲ ತೊಟ್ಟಿ ಮೀನೂ ಹೌದು.
೧೪೭. ಅ. ಮೆಲಸಿಟಗ್ಮ ಅಳವೆ ಮೀನು ಕೂಡಹದ್ದು
ಗಣ : ಪೋಸಿಲಿಡೀ
*೧೪೮. ಗ್ಯಾಂಬೂಸಿಯ ಅಫಿನಿಸ್‌ ಟಾಪ್‌ಮಿನ್ನೊ ಗೆಂಬೂಸಿಯ ಮೀನು, ಹೆಚ್ಚಿಗೆ ಮೀನು ಸೊಳ್ಳೆ ಲಾರ್ವ ತಿನ್ನುವ ಸಣ್ಣ ಮೀನು. ಆದ್ದರಿಂದ ಮಲೇರಿಯಾ ನಿಯಂತ್ರಣಕ್ಕೆ ಪ್ರಯೋಜಕ. ಇದು ಜಲ ತೊಟ್ಟಿ ಮೀನೂ ಹೌದು.
೧೪೯. ಲೆಬಿಸ್ಟಿಸ್‌ರೆಟಿಕ್ಯುಲೇಟಸ್‌    
ಗಣ : ಬೆರಿಸಿಫಾರ್ಮಿಸ್‌ (ಸೈನಿಕ್‌ಮೀನು, ನುಣುಚು ತಲೆಗಳು)
ಕುಟುಂಬ : ಹೊಲೊಸೆಂಟ್ರಿಡೀ(ಸೈನಿಕ ಮೀನು)
೧೫೦. ಅಡಿಯೊರಿಕ್ಸ್ ರೂಬರ್ ಸೈನಿಕ ಮೀನು   ಮುಳ್ಳು ಈಜುರೆಕ್ಕೆಗಳು ವರ್ಣಭರಿತ, ಉತ್ತಳ ನೀರಿನ ಮೀನು
ಗಣ : ಸ್ಕೊರ್ಪೆನಿಫಾರ್ಮಿಸ್‌ (ಓಣಿಕೆನ್ನೆ ಮೀನು)
ಕುಟುಂಬ : ಪ್ಲಾಟಿಸಿಫಾಲಿಡೀ (ಚಪ್ಪಟೆ ತಲೆ ಮೀನು)
೧೫೧. ಪ್ಲಾಟಿಸಿಫಾಲಸ್‌ ಇಂಡಿಕಸ್‌ ತಲೆ ಮೀನು ಭಾರತದ ಚಪ್ಪಟೆ ಬೆಲ್ಟಾಟ್‌ ನೀಳವಾದ ಉರುಳೆಯಾಕಾರದ ದೇಹ, ಚಪ್ಪಟೆಯಾದ ತಲೆ, ಏಣುಗಳು ಮತ್ತು ಮುಳ್ಳುಗಳಿವೆ.
೧೫೨. ಪ್ಲಾ. ಕ್ರೊಕೊಡೈಲಸ್‌ ಚುಕ್ಕಿ ಮೀನು ಬೆಲ್ಟಾಟ್‌
೧೫೩. ಪ್ಲಾ. ಸಪ್ಪೊಸಿಟಿಸ್‌ ರಿಗನ್ನರ ಮೀನು ಬೆಲ್ಟಾಟ್‌
೧೫೪. ಪ್ಲಾ. ಸ್ಕೇಬಿರ್ ಒರಟು ಮೀನು ಬೆಲ್ಟಾಟ್‌
ಗಣ: ಚೆನ್ನಿಫಾರ್ಮಿಸ್‌ (ಹಾವುತಲೆ ಮೀನು)
ಕುಟುಂಬ : ಚೆನ್ನಿಡೀ(ಮುರೈಲ್‌ಗಳು)
*೧೫೫. ಚೆನ್ನ ಪಂಕ್ಟೇಟಸ್‌ ಕೊರವಿ ಮುರ್ರೆಲ್‌ ಕೊರ್ವ, ಮಟ್ಟ  
೧೫೬. ಚೆ. ಓರಿಯಂಟಾಲಿಸ್‌ ಹಸಿರು ಹಾವು ತಲೆ ಕೊರವ, ಮಟ್ಟ ಕೊರಜ  
೧೫೭. ಚೆ. ಮೈಕ್ರೊಪೆಲ್ಟಿಸ್‌ ಪಟ್ಟಿ ಹಾವು ತಲೆ ಕುಚ್ಚಿ ಹುಲಿ ಕುಟ್ಟಿ ತಿನ್ನಬಹುದಾದ ಹಾವು ತಲೆಯ ಮೀನುಗಳು.
೧೫೮. ಚೆ. ಸ್ಟ್ರೊಯೇಟಸ್‌ ಸಾಮಾನ್ಯ ಮುರ್ರೆಲ್‌ ಕುಚ್ಚಿಲು ಮೀನು  
೧೫೯. ಚೆ. ಮಾರಲಿಯಸ್ ದೊಡ್ಡ ಮುರ್ರೆಲ್‌, ದೈತ್ಯ ಹಾವು ತಲೆ ಹೂವಿನ ಮೀನು, ಗೂಬೆ ಮೀನು  
ಗಣ : ಪರ್ಸಿಫಾರ್ಮಿಸ್‌
ಕುಟುಂಬ : ಸೆಂಟ್ರೋಪೊಮಿಡೀ(ಕಡಲು ಪರ್ಚಗಳು)
೧೬೦. ಲೇಟಸ್‌ ಕ್ಯಾಲ್ಸಿರಿಫರ್ ದೈತ್ಯ ಪರ್ಚ್, ಬಟ್ಕ, ಗುರಿ, ನಾಯರ್ ಮೀನು ಕೆಂಬೇರಿ, ಮುಡದ ಮೀನು, ಕಾಜುರ್ ಮೀನು ಹಿನ್ನೀರಿನ ಜೌಗುನೀರುಗಳಲ್ಲಿ ಜಲ ಕೃಷಿಗೆ ಬಳಸುವ ಮೀನು. ಇದರ ಪಿತ್ತಕೋಶವನ್ನು ಮೀನಂಟು ವಜ್ರ (ಐಸಿಂಗ್ಲಾಸ್‌) ತಯಾರಿಸಲು ಬಳಸುತ್ತಾರೆ.
ಕುಟುಂಬ : ಅಂಬಾಸ್ಸಿಡೀ(ಗಾಜು ಮೀನು)
೧೬೧. ಅಂಬಾಸ್ಸಿಸ್ ಜಿಮ್ನೊಸಿಫಾಲಸ್‌ ಬೆತ್ತಲೆ ತಲೆ ಗಾಜು, ಪರ್ಚಲೆಟ್ ಅಟ್ಟಿ ತರಿ, ಮುಳ್ಳು ಜಗ್ಗು ಹೊಳಪು ಅಥವಾ ಬೆಳ್ಳಿ ಬಿಳುಪು ಬಣ್ಣದ ಪ್ರಕಾಶಕ ಪಾರದರ್ಶಕ ದೇಹದ ಮೀನುಗಳು
೧೬೨. ಅಂ. ಕಮ್ಮರ್ ಸೋನಿ ಭಾರತದ ಗಾಜು ಪರ್ಚಲೆಟ್‌ ಬಾಚಣಿಗೆ ಮೀನು ಸೀಪಾರಿ
೧೬೨A. ಸೂಡಂಬಾಸಿಸ್‌ ರಂಗ      
ಕುಟುಂಬ : ಸೆರ್ರಾನಿಡೀ(ಕಡಲು ಬಾಸ್‌ಗಳು ಮತ್ತು ಗ್ರೂಪರ್ಗಳು)
೧೬೩. ಎಪಿನೆಫೆಲಸ್‌ ಕ್ಲೋರೊಸ್ಟಿಗ್ಮ ಕಂದು ಗುರತು ದಿಬ್ಬ ಕಾಡ್‌   ತಿನ್ನಬಹುದಾದ ದೊಡ್ಡ ಗಾತ್ರದ ಮಾಂಸಹಾರಿ ಮೀನುಗಳು. ಅಂಡಜಗಳು, ಸ್ತ್ರೀ ಜನೇಂದ್ರಿಯಗಳು ಮೊದಲು ಪಕ್ವವಾಗುವ, ಅಥವಾ ಏಕಕಾಲದಲ್ಲಿ ಎರಡೂ ಲಿಂಗಗಳು ಪಕ್ವವಾಗುವ ದ್ವಿಲಿಂಗಿ ಮೀನುಗಳು
೧೬೪. ಎ. ಮಲಬಾರಿಕಸ್‌ ಮಲಬಾರ್ ರೀಪುಡ್ ಮುರು ಮೀನು
೧೬೫. ಎ. ಟಾವಿನ ಗ್ರೀಸಿ ಗ್ರೂಪರ್  
ಕುಟುಂಬ : ಟೆರಪೊನಿಡೀ(ಗ್ರಂಟರ್ ಮೀನು)
೧೬೬. ಟೆರಪಾನ್‌ ಜರ್ಬೂವ ಜರ್ಟಿಸ್‌ ಟೆರಪಾನ್ ಗೋರೆ ಒಳ್ಳೆಯ ಕಡಲ ಜಲತೊಟ್ಟಿ ಸಾಕು ಮೀನು

 

೧೬೭. ಟೆ. ಪುಟ ಅರೆಚಂದ್ರ ಪರ್ಚ, ಸಣ್ಣ ಹುರುಪೆಗಳ ಪಟ್ಟೆಗ್ರಂಟರ್, ಕೀಚಲು ಪರ್ಚ  
ಕುಟುಂಬ : ಪ್ರಿಕಾಂತಿಡೀ(ದೊಡ್ಡ ಕಣ್ಣುಗಳು)
೧೬೮. ಪ್ರಿಕಾಂತಸ್‌ ಬೂಪ್ಸ್ ಉದ್ದ ರೆಕ್ಕೆಗಳ ಗುರಿ ಕಣ್ಣು   ಕಡಲ ತಳವಾಸಿ ಮೀನು. ಕಡಿಮೆ ಮೀನುಗಾರಿಕೆಗೆ ಸೇರಿದ ಮೀನು.
ಕುಟುಂಬ : ಅಪೊಗೊನಿಡೀ(ಕಾರ್ಡಿನಲ್‌ ಮೀನು)
೧೬೯. ಚಿಲೊಡಿಪ್ಟೆರಸ್‌ ಕ್ವಿನ್‌ ಕ್ವಿರ್ಲಿನೀಟಸ್‌ ಹಲ್ಲಿನ ಕಾರ್ಡಿನಲ್‌ ಮೀನು   ದೊಡ್ಡ ಮಾಂಸಹಾರಿ ಮೀನುಗಳ ಆಹಾರದ ಅಂಶವಾಗುವ ತುಂಬಾ ಸಣ್ಣ ಮೀನು
೧೭೦. ಅಪೊಗನ್‌ ಎಂಡೆಕಟೀನಿಯ ಹನ್ನೊಂದು ಪಟ್ಟಿ, ಕಾರ್ಡಿನಲ್‌ಮೀನು.  
ಕುಟುಂಬ : ಸಿಲ್ಲಗಿನಿಡಿ(ವೈಟಿಂರ್ಗಳು)
೧೭೧. ಸಿಲ್ಲಾಗೊ ಸಿಹಾಮ ಭಾರತದ ವ್ಹೈಟಿಂಗ, ಬೆಳ್ಳಿ, ಸಿಲ್ಲಾಗೊ, ಮರಳು ವ್ಹೈಟಿಂಗ್‌, ಮಹಿಳಾ ಮೀನು ಕಂಡಿಗೆ, ನಗಾಟಿ ನೀಳವಾದ ತೆಳುದೇಹ. ಮಾಂಸ ರುಚಿಯಾಗಿದೆ ಮತ್ತು ನಯವಾಗಿದೆ. ಸ್ಥಳೀಯ ಮಾರುಕಟ್ಟೆಯಲ್ಲಿ ಅಪಾರ ಬೇಡಿಕೆ ಉಂಟು
೧೭೨. ಸಿ. ವಿನ್‌ಸಾಂಟಿ ಮರಳು ವ್ಹೈಟಿಂಗ್‌ ಕಂಡಿಗೆ  
ಕುಟುಂಬ : ಲ್ಯಾಕ್ಟಾರಿಡೀ(ಮಿಥ್ಯ ಪಯಣಿಗ)
೧೭೩. ಲ್ಯಾಕ್ಟೇರಿಯಸ್‌ ಲ್ಯಾಕ್ಟೇರಿಯಸ್‌ ಮಿಥ್ಯ ಪಯಣಿಗ, ಬಿಳಿ ಮೀನು, ದಪ್ಪ ದವಡೆ ನೆಗಿನ, ಬೆಣ್ಣೆ ಮೀನು. ಸೌಂಡೋಲ ಬಹಳವಾಗಿ ಚಪ್ಪಟೆಯಾದ ಹೆಚ್ಚು ಬೆಲೆಯ ಮೀನು.
ಕುಟುಂಬ : ರಾಕಿಸೆಂಟ್ರಿಡೀ(ಕೊಬಿಯಗಳು)
೧೭೪. ರಾಕಿಸೆಂಟ್ರಾನ್‌ ಕಾಂಡಸ್‌ ಕರಿರಾಜ ಮೀನು, ಬೆಣ್ಣೆ ಮೀನು ಮೊರ್ವಾಸ್‌ ದೊಡ್ಡ ಗಾತ್ರದ (೪೫ ಕೆ.ಜಿ. ತೂಕ). ಉತ್ಕೃಷ್ಟ ಬೇಟೆ ಮೀನು
ಕುಟುಂಬ : ಕ್ಯಾರಾಂಗಿಡೀ(ಜಾಕ್‌ಗಳು ಮತ್ತು ರಾಜ ಮೀನುಗಳು)
೧೭೫. ಅಲೆಕ್ವಿಸ್‌ ಇಂಡಿಕಸ್‌ ಟ್ರಾವೆಲ್ಲಿ, ಭಾರತದ ನೂಲು ಮೀನು   ವಾಣಿಜ್ಯ ದೃಷ್ಟಿಯಿಂದ ಪ್ರಮುಖವಾದ ಮಾಂಸಹಾರಿ ಮೀನುಗಳು.
೧೭೬. ಅಟ್ರೊಪಸ್‌ ಅಟ್ರೊಪಸ್‌ ಕುವೆ ಟ್ರವಲ್ಲಿ  
೧೭೭. ಅಟುಲೆ ಮಾಟೆ ಒಂದು ಸಣ್ಣ ಈಜುರೆಕ್ಕೆ ಸ್ಕಾಡ್‌  
೧೭೮. ಕೆರೆಂಗಾಯಿಡಿಸ್‌ ಮಲಬಾರಿಕಸ್‌ ಮಲಬಾರ ಟ್ರವೆಲ್ಲಿ  
೧೭೯. ಕೆರಾಂಕ್ಸ ಸೆರಾಂಗಸ್‌ ಕರಿಬಾಲ ಟ್ರವೆಲ್ಲಿ ಬೊಂಕೆ, ಕೆಡ್ಹೈ
೧೮೦. ಕೆ. ಮೆಲನ್‌ಪಿಗಸ್‌ ನೀಲಿ ರೆಕ್ಕೆ ಜಾಕ್‌ ಬೊಂಕೆ
೧೮೧. ಕೆ. ಸೆಕ್ಸ್ ಫ್ಯಾಸಿನೇಟಸ್‌ ಟಿಲ್ಲೆಜಾಕ್‌  
೧೮೨. ದೆಕಪ್ಟೆರಸ್‌ ರಸ್ಸೆಲ್ಲಿ ದುಂಡು ಸ್ಕಾಡ್‌ ತೆಂಗಿನ ಮೀನು  
೧೮೩. ಮೆದಲೆಪಿಸ್‌ ಕಾರ್ಡಿಲ ಗಟ್ಟಿಬಾಲದ ಸ್ಕಾಡ್‌ ಗೊಂಡ್ಲು, ಗೊಂಕೆ
೧೮೪. ನಾಕ್ರೆಟಸ್‌ ಡುಕ್ಟಾರ್ ಪೈಲಟ್‌ ಮೀನು  
೧೮೫. ಸ್ಕಾಂಬೆಸ್ಕಾಯಿಡಿಸ್‌ ಕಮ್ಮರ್ಸೋನಿಯಸ್‌ ಟಲಾಂಗ್‌ ರಾಣಿ ಮೀನು ಪಳಾಯಿ ಮೀನು
೧೮೬. ಸ್ಕಾಂ. ಇಯಸನ್‌ ಜೋಡು ಚುಕ್ಕಿ ರಾಣಿ ಮೀನು  
೧೮೭. ಸೆಲಾರ್ ಕ್ರುಮಾನೊಪ್ತಾಲ್ಮಸ್‌ ದೊಡ್ಡ ಕಣ್ಣು ಸ್ಕಾಡ್‌, ಮೆಳ್ಳಗಣ್ಣು ಮೀನು ಪೆರೈ, ಕೋದಂಡೆ, ಬೊಂಕೆ, ವೆಡ್ಡೆ ಕೊಡುಮೈ
೧೮೮. ಸೆರಿಯೊಲಿನ ನೈಗ್ರೊಪ್ಯಾಸಿಯೇಟ ಕಪ್ಪು ಪಟ್ಟೆ ಟ್ರವೆಲ್ಲಿ ಮೊರ್ವಾಸ್‌
೧೮೯. ಟ್ರಾಕಿನೋಟಸ್‌ ಬ್ಲಾಕಿ ಭಾನುಮೂಗು ಪಾಂಪೆನೊ, ಬ್ಲಾಕನ ಡಾರ್ಟ್ ಮೊರ್ವಾಸ್‌
೧೯೦. ಟ್ರಾಬೈಲ್ಲಾನೈ ಬೈಲಿಯಾನರ್ ಡಾರ್ಟ್ ಕೊದಂಡೆ
೧೯೧. ಯುರಾಸ್ವಿಸ್‌ ಹೆಲ್ವೊಲಸ್‌ ಬಿಳಿ ಬಾಯಿ ಕ್ರಿನಲ್ಲೆ  
ಕುಟುಂಬ : ಅಪೊಲೆಕ್ಟಿಡೀ(ಕಪ್ಪು ಪಾಂಫ್ರೆಟ್‌)
೧೯೨. ಅಪೊಲೆಕ್ಟಸ್‌ ನೈಗರ್ ಕಪ್ಪು ಫಾಂಫ್ರೆಟ್ಸ ತೊಂಡ್ರಟ್ಟಿ, ಕರಿಮಂಜು ತಿನ್ನಬಹುದಾದ ಒಳ್ಳೆಯ ಮೀನು, ಸ್ಥಳೀಯ ಮಾರುಕಟ್ಟೆಯಲ್ಲಿ ದುಬಾರಿ ಬೆಲೆ
ಕುಟುಂಬ : ಮೆನಿಡೀ(ಚಂದ್ರಮೀನು)
೧೯೩. ಮೀನ ಮ್ಯಾಕುಲೇಟ ಚಂದ್ರಮೀನು ಹಕ್ಕಿಮೀನು ಅಪ್ರಮುಖ ಮೀನುಗಾರಿಕೆಗೆ ಸೇರುವ ಒಂದು ಮೀನು.
ಕುಟುಂಬ : ಲಿಲೊಗ್ನಾತಿಡೀ(ಪೊನಿಗಳು) ಮೀನು, ಜಾರುಬಾಯಿ ಮೀನುಗಳು
೧೯೪. ಗಾಜ ಮಿನುಟ ಹಲ್ಲಿರುವ ಪೊನಿ ಮೀನು ಗುರುಕುತಡ್ಡು ಕುರ್ಚೆ ಪಕ್ಕದಿಂದ ಪಕ್ಕಕ್ಕೆ ಚಪ್ಪಟೆಯಾದ ಸಣ್ಣ ಮೀನುಗಳು ಸಾಮಾನ್ಯವಾಗಿ ಬಿಸಿಲಿನಲ್ಲಿ ಒಣಗಿಸಿ ಮಾರುತ್ತಾರೆ. ಮೀನು ಆಹಾರ ಮೀನು ಪ್ರೊಟಿನು ಸಾಂದ್ರ ಮತ್ತು ಇತರ ಮೀನು ಉತ್ಪನ್ನಗಳನ್ನು ತಯಾರಿಸಲು ಬಳಸುತ್ತಾರೆ.
೧೯೫. ಲಿಯೊಗ್ನಾತಸ್‌ ಬಿಂಡುಸ್‌ ಇತ್ತಲೆರೆಕ್ಕೆ ಪೊನೀ ಮೀನು ಗುರುಕು
೧೯೬. ಲಿ. ಬ್ರಿದಿರೊಸ್ಟ್ರಿಸ್‌ ಮೊಂಟೆಮೂಗು ಪೋನಿ  
೧೯೭. ಲಿ. ಸ್ಪೆಲೆಂಡೆನ್ಸ್ ಚೆಂದ ಪೋನಿ ಮೀನು ಕೋಷಿ
೧೯೮. ಲಿ. ಈಕ್ವಲಸ್‌ ಸಾಮಾನ್ಯ ಪೋನಿ ಮೀನು.  
೧೯೯. ಸೆಕ್ಯುಟಾರ್ ಇನ್‌ ಸಿಡಿಯೇಟರ್ ಚೆಂಡು ಮೂಗು, ಪೋನೀ ಮೀನು ಗುರುಕ
೨೦೦. ಸೆ. ರುಕೊನಿಯಸ್‌ ಆಳ ಚೆಂಡು ಮೂಗು ಪೋನಿ ಮೀನು  
ಕುಟುಂಬ : ಲುಟ್ಟನೀಡಿ(ಮಿಡಿ ಮೀನುಗಳು)
೨೦೧. ಲುಟ್ಜಾನಸ್‌ ಜಾನಿ ಜಾನಿಯ ಮಿಡಿಮೀನು   ಉಬ್ಬರವಿಳಿತಗಳ ನಡುವಿನ ವಲಯದ ಹೊಟ್ಟೆ ಬಾಕಗಳು. ಆಹಾರವೆಂದು ಮೌಲ್ಯ ಉಂಟು
೨೦೨. ಲು. ಫೆಲ್ವಿಟ್ಟಮ್ಮಸ್‌ ಕರಿಚುಕ್ಕಿ ಮಿಡಿಮೀನು  
೨೦೩. ಲು. ಮಲಬಾರಿಕಸ್‌ ಮಲಬಾರ್ ಕೆಂಪು ಮೀನು  
೨೦೪. ಲು. ರಸ್ಸೆಲ್ಲಿ ರಸ್ಲೆಲ್ಲರ ಮಿಡಿ ಮೀನು  
೨೦೫. ಲು. ಸೀಬೀ ಸಾಮ್ರಾಟ ಕೆಂಪು ಮೀನು  
ಕುಟುಂಬ : ನೆಮಿಪ್ಟೆರಿಡೀ (ನೂಲುರೆಕ್ಕೆ ಬ್ರಿಮ್‌, ಹವಳ ಬ್ರೀಮ್‌ಗಳು)
೨೦೬. ಸೆಮಿಪ್ಟೆರಸ್‌ ಜಪಾನಿಕಸ್‌ ಕಡು ಕೆಂಪುರ್ಚ, ಜಪಾನಿನ ನೂಲುರೆಕ್ಕೆ ಬ್ರೀಮ್‌ ಮದುಮಗಳು ಹೊಳಪು ಗುಲಾಬಿ ಬಣ್ಣ ದೇಹ ಮತ್ತು ಈಜುರೆಕ್ಕೆಗಳ ಮೇಲೆ ಹಳದಿಹಸಿರು ಹಳದಿ ಪಟ್ಟಿಗಳಿರುತ್ತವೆ.
೨೦೭. ನೆ. ಟೋಲು ಕಚ್ಚು ನೋಪೆಕ್ಕೆ ಬ್ರೀಮ್‌  
ಕುಟುಂಬ : ಗೆರ್ರಿಡೀ (ಮೊಜರ್ರಾಸ)
೨೦೮. ಗೆರ್ರಿಸ್‌ ಫಿಲಮೆಂಟೋಸಿಸ್‌ ಚಾಟಿರೆಕ್ಕೆ ಮೊಜಾರ್, ಉದ್ದಕಡ್ಡಿ ಬೆಳ್ಳಿ ಬಡ್ಡಿ ಹೊಲಿಬೈಗೆ ಬ್ರಿಂಗೆ ಚಪ್ಪಟೆ ಮತ್ತು ಓರೆದೇಹ ಕರಾವಳಿ ಅಳವೆ ಮೀನು. ಆಹಾರ ಯೋಗ್ಯ
೨೦೯. ಗೆ. ಅಬ್ಲಾಂಗಸ್‌ ಅಬ್ಲಾಂಗ ಮೆಜರ್ರ  
೨೧೦. ಗೆ. ಅಬ್ರಿವಿಯೇಟಸ್‌ ಆಳದೇಹ ಮೆಜರ್ರ  
೨೧೧. ಗೆ. ಓಯಿನ್‌ ಸಾಮಾನ್ಯ ಮೆಜರ್ರ  
೨೧೨. ಗೆರ್ರಯೊಮಾರ್ಫ ಸೆಟಿಫೆರ್ ಕಪ್ಪು ತುದಿ ಮೆಜರ್ರ ಬೈಂಗ
ಕುಟುಂಬ : ಪೊಮಡಾಸಿಯಿಡೀ (ಗ್ರಂಟ್ಸ್ ಸಿಹಿ ತುಟಿಗಳು)
೨೧೩. ಡಯಾಗ್ರಮ್ಮಪಿಕ್ಟಮ್‌ ಚೂಪು ಸಿಹಿತುಟಿ ಹಂದಿ ಮೀನು   ಗಂಟಲು ಗೂಡಿನ ಹಲ್ಲುಗಳನ್ನು ಅರೆಯುವ ಶಬ್ದವು ಪಕ್ಕದಲ್ಲಿನ ವಾಯುಕೋಶದಿಂದ ವಿಸ್ತರಿಸಲ್ಪಡುತ್ತದೆ.
೨೧೪. ಪೊಮಡೆನಿಸ್‌ ಮ್ಯಾಕುಲೇಟಸ್‌ ಮನಿಗ್ರಂಟ್‌  
೨೧೫. ಪೊ. ಹಸ್ಸ ಬೆಳ್ಳಿಗೆರೆ ಗ್ರಂಟಿ ಹಂಡಿ ಮೀನು  
ಕುಟುಂಬ : ಲೆತ್ರಿನಿಡೀ (ಹಂದಿಮುಖ ಹಳದಿ ಮೀನು, ಸಾಮ್ರಾಟರು)
೨೧೬. ಲೆತ್ರಿನಸ್‌ ಸಿನೆರಿಯಸ್‌ ಲಗಾಮು ಹಂದಿಮೂತಿ ಮೀನು   ಸಾಮಾನ್ಯ ತಿನ್ನುವ ಮೀನು, ಪ್ರಕಾಶಕ ವರ್ಣ ದೇಹದ ಬಣ್ಣ ಬದಲಾಯಿಸುವುದಕ್ಕೆ ಗೊತ್ತಾದವು

 

೨೧೭. ಲೆ. ಗೆಬುಲೋಸಸ್ ತಾರಾ ಮೀನು  
ಕುಟುಂಬ : ಸ್ಟೇರಿಡೀ (ಕಡಲು ಹಳದಿ ಮೀನು, ಪೋದ್ಗೀಸ್‌)
೨೧೮. ಅಳ್ಯಾಂತೊಪಗ್ರಸ್‌ಬೆರ್ಡ ಪಿಕನಿಕ್ ಹಳದಿ ಮೀನು, ಕಪ್ಪು ಮೀನು ಅರೆಕ್‌ ಪ್ರಕಾಶಕ ಬಣ್ಣ. ಉತ್ತಮ ಆಹಾರ ಮೀನು, ಆಕಾರದಲ್ಲಿ ಎಳೆ ಮೀನು ವಯಸ್ಕ ಮೀನಿಗಿಂತ ತುಂಬಾಭಿನ್ನ
ಕುಟುಂಬ : ಸಿಯೀನಿಡೀ (ಗೊಣಗು ಮೀನುಗಳು)
೨೧೯. ಡ್ಯಾಸೀನ ಆಲ್ಚಿಡ್‌ ಜೋಡು ದಾಡೆಗೊಣಗ   ಅಮೂಲ್ಯ ಆಹಾರ ಮೀನು, ಇದರ ಜಠರ ಮೀನು ವಜ್ರಯ ತಯಾರಿಕೆಯಲ್ಲಿ ಬಳಸುತ್ತಾರೆ. ದ್ರಾಕ್ಷಾರಸ ಮತ್ತು ಬೀರ ತಯಾರಿಸುವಲ್ಲಿ ಇದು ಬಳಕೆಯಾಗುತ್ತದೆ. ಪೆಪ್ಪರಮೆಂಟ ತಯಾರಿಕೆಯಲ್ಲಿಯೂ ಇದೊಂದು ಪರ್ಯಾಯ ಜಿಲಾಟಿನ್‌ವಸ್ತು. ಕೆಲವು ಸಿಮೆಂಟಿಂಗಗ ತಯಾರಿಯಲ್ಲಿಯೂ ಬಳಕೆಯಾಗುತ್ತದೆ.
೨೨೦. ಜೀನಿಯಸ್‌ ಅನುಯಸ್‌ ಮಸಿಗೊಣಗ ಕಲ್ಲೂರ
೨೨೧. ನಿಚಿಯ ಮ್ಯಾಕುಲೇಟ    
೨೨೩. ಆಟೊಲಿಪಸ್‌ ರೊಬರ್ ಹುಲಿಹಲ್ಲುಗೊಣಗ ಕುಡ್ಡಾಲಿ
೨೨೩. ಪ್ರೊಟಿನಿಬಿಯ ಡಯಾಕಾಂತಸ್‌ ಪಟ್ಟಿಗೊಣಗ ಬಲ್ದೆಗೋಲಿ
ಕುಟುಂಬ : ಮುಲ್ಲಿಡೀ (ಆಡು ಮೀನು)
೨೨೪. ಉಪಿನ್ಯೂಸ್‌ ಸಲ್‌ಪೊರಿಯಸ್‌ ಹಳದಿ ಆಡುಮೀನು ಪುಜ್ಜವಿಲ್ಲಕೇರಿ ಸವಿಯಾದ ಮತ್ತು ರುಚಿಯಾದ ಮಾಂಸ ಹಾಗೂ ಉತ್ಕೃಷ್ಟ ಬಣ್ಣಕ್ಕೆ ಹೆಸರಾದವು
೨೨೫. ಉ. ವಿಟ್ಟೇಟಸ್‌ ಹಳದಿ ಪಟ್ಟಿ ಆಡುಮೀನು ಕಲ್ಲುಗೊರ
೨೨೫A. ಗ್ಲಾಸೋಗೋಬಿಯಸ್‌ ಯೂರಿಸ್‌    
ಕುಟುಂಬ : ಮಾನೊಡ್ಯಾಕ್ಟೈಲಿಡೀ (ಬೆಳ್ಳಿ ಮೀನು)
೨೨೬. ಮಾನೊಡ್ಯಾಕ್ಚೈಲಸ್‌ ಅರ್ಜೆಂಟಿಯಸ್ ಬೆಳ್ಳಿಬಾವಲಿ ಮೀನು   ಜಲತೊಟ್ಟಿಯ ಜನಪ್ರಿಯ ಮೀನು. ಆಹಾರ ಮೀನು ಹೌದು
ಕುಟುಂಬ : ಎಫಿಪ್ಪಿಡೀ (ಗುದ್ದಲಿ ಮೀನು)
೨೨೭. ಡ್ರಿಪಾನೆ ಪಂಕ್ಟೇಟ ಚುಕ್ಕಿ ಗುದ್ದಲಿ ಮೀನು ಕಟ್ಸೆ ಹಕ್ಕಿ ಮೀನು ಅಪ್ರಧಾನ ಮೀನುಗಾರಿಕೆ ಕೈಗಾರಿಕೆಯ ಅಂಶ
೨೨೮. ಇಹಿಪ್ಪಸ್‌ ಆರ್ಬಿಸ್‌    
೨೨೯. ಪ್ಲಾಟಾಕ್ಸ್ ಪೆನ್ನೇಟಸ್ ದುಂಡುಬಾವಲಿ ಮೀನು  
ಕುಟುಂಬ : ಸ್ಕಾಟೊಫಾಗಿಡೀ (ಸ್ಕಾಟ್ಸ್)
೨೩೦. ಸ್ಕಾಟೊಫಾಗಸ್‌ ಆರ್ಗಸ್‌ ಚುಕ್ಕಿ ಬೆಣ್ಣೆ ಮೀನು ಬಾರೇಯಿ ಚೌಂಡರ್‌ ಎಳೆಯ ಮೀನುಗಳು ಪ್ರಕಾಶಕ ಬಣ್ಣ ಇರುವವಾದುದರಿಂದ ಕಡಲು ಜಲ ತೊಟ್ಟಿ ಮೀನುಗಳಾಗಿ ಜನಪ್ರಿಯ
ಕುಟುಂಬ : ಕೀಟೋಡಾಂಟಿಡೀ (ಚಿಟ್ಟೆ ಮೀನು)
೨೩೧. ಕಿಟೊಡೆನ್‌ ವ್ಯಾಗಬಾಂಡಸ್‌ ವ್ಯಾಗಬಾಂಡ್‌ ಚಿಟ್ಟೆಮೀನು. ಬಳಿಕಂಠ ಹವಳ ಮೀನು ಹವಳ ಮೀನುಗಳಲ್ಲಿ ಅತ್ಯಂತ ಜನಪ್ರಿಯ
೨೩೨. ಹೆನಿಯೋಕಸ್‌ ಅಕುಮಿನೇಟಸ್‌ ಪೆನ್ನೆಂಟ್‌ ಹವಳ ಮೀನು
ಕುಟುಂಬ : ಪೊಮೆಕ್ಯಾಂತಿಡೀ
೨೩೩. ಪೊಮಕ್ಯಾಂತಸ್‌ ಅನ್ನುಲೇರಿಸ್‌ ಉಂಗುರ ರೆಂಭೈ ಮೀನು   ಪ್ರಕಾಶಕ ಬಣ್ಣ ಮತ್ತು ತಿನ್ನಬಹುದಾದ ಮೀನು
ಕುಟುಂಬ : ಮುಗಿಲ್ಲಿಡೀ (ಮುಲ್ಲೆಟ್‌ಗಳು)
೨೩೪. ಲಿಜ ಪಾರ್ಸಿಯ ಬಂಗಾರ ಗುರುತು ಮುಲ್ಲೆಟ, ಬೂದು ಮುಲ್ಲೆಟ್‌ ಮಾಲು ಪ್ರಮುಖ ಆಹಾರ ಮೀನು, ಕಡಲ ಮತ್ತು ಜಲ ಕೃಷಿ ಯೋಗ್ಯ ಸಿಹಿ ನೀರುಗಳೆರಡರಲ್ಲೂ ಇರುತ್ತದೆ.
೨೩೫. ಲಿ. ಸಬ್‌ ವಿರಿಡಿಸ್‌ ಹಸಿರು ಬೆನ್ನು ಕಂದು ಮುಲ್ಲೆಟ್‌  
೨೩೬. ಲಿ. ಮ್ಯಾಕ್ರೊಲೆಪಿಸ್‌ ಬೊರ್ನಿಯೊ ಮುಲ್ಲೆಟ್‌  
೨೩೭. ಮುಗಿಲ್‌ ಸಿಫಾಲಸ್‌ ಪುಕ್ಕಬೂದು ಮುಲ್ಲೆಟ್‌, ಜಿಗಿ ಮುಲ್ಲೆಟ್‌  
೨೩೮. ವೋಲಮುಗಿಲ್‌ ಸೆಹೆಲಿ ನೀಲಿ ಚಿಕ್ಕಿಕಂದು ಮುಲ್ಲೆಟ್‌  
೨೩೯. ರೈನೊಮುಗಿಲ್‌ ಕರ್ಸುಲ ಕರ್ಯುಲ ಮುಲ್ಲೆಟ್‌  
ಕುಟುಂಬ : ಪಾಲಿನೆಮಿಡೀ (ನೂಲು ರೆಕ್ಕೆಗಳು)
೨೪೦. ಎಲ್ಯುತೆರೊನಿಮ ಟೆಟ್ರಡಾಕೈಲಮ್‌ ನಾಲ್ಕು ಬೆರಳು ನೂಲು ರೆಕ್ಕೆ, ಭಾರತದ ಸಾಲ್ಮನ್‌ ರಾಮ್ಸಿವ ಮೀನು, ವಹ್‌ ಮೀನು ಒಳ್ಳೆಯ ಆಹಾರ, ಮೀನು ವಜ್ರ ತಯಾರಿಕೆಯಲ್ಲಿ ಇದರ ವಾಯುಕೋಶ ಬಳಸುತ್ತಾರೆ.
೨೪೧. ಪಾಲಿಡ್ಯಾಕ್ಟೊಲಸ್‌ ಕೆಪ್ಟಡಾಕ್ಟೆಲಸ್‌ ಏಳು ಬೆರಳು ನೂಲು ರೆಕ್ಕೆ ಶಾಂಡಿ ಯಾರ್ವಾಸ್‌ಪುಚ್ಛ
೨೪೨. ಪಾ. ಇಂಡಿಕಸ್‌ ಭಾರತದ ಸಾಲ್ಮನ್‌, ಸನ್ಯಾಸಿ ನೂಲು ರೆಕ್ಕೆ, ದೈತ್ಯ ನೂಲು ರೆಕ್ಕೆ ದರ್ಹ, ಬಾಲು ಮೀನು
೨೪೩. ಪಾ. ಸೆಕ್ಸಟೇರಿಯಸ್‌ ಕಪ್ಪು ಚುಕ್ಕಿ ನೂಲುರೆಕ್ಕೆ  
ಕುಟುಂಬ : ಸ್ಫೈರೇನಿಡೀ(ಬರ್ರಕುಡಾಸ್‌) (ಪಿಶಾಚಿಮೀನು)
೨೪೪. ಸ್ಫೈರೀನ ಜೆಲ್ಲೊ ಪಟ್ಟಿ ಪಿಶಾಚಿ ಮೀನು, ದೈತ್ಯ ಕಡಲು ಪೈಕ್‌ ಕಂಡೈ, ಕನಕ, ಓಬನ್‌ ಟಾಲ್‌ ವೇಗ ಈಜುಗ ಮತ್ತು ಉಗ್ರ ಮಾಂಸಹಾರಿ, ನವಿರಾದ ಮಾಂಸ ತಿನ್ನಲು ಯೋಗ್ಯ
ಕುಟುಂಬ : ನಾಂಡಿಡೀ (ಮಣ್ಣು ಮೀಟುಗ)
೨೪೫. ಪ್ರಿಸ್ಟೊಲೆವಿಸ್‌ ಮಲಬಾರಿಕ ಬಾಚಣಿಗೆ ಮೀನು, ಚಿಕ್ಕಟ್ಟಿಗೆ ಮೀನು   ಇತರೆ ಮೀನುಗಳನ್ನು ತಿನ್ನುತ್ತದೆ. ಜೀವನದ ಆಸೆ ಹೆಚ್ಚು
೨೪೬. ಬಾಡಿಸ್‌ ಬಾಡಿಸ್‌    
೨೪೭. ನಂದುಸ್‌ ನಂದುಸ್‌    
ಕುಟುಂಬ : ಸಿಕಿಲಿಡೀ
೨೪೮. ಟಿಲಾಪಿಯ ಮೊಸಾಂಬಿಕ ಟಿಲಾಪಿಯ ಸರ್ಕಾರಿ ಮೀನು ಟಿಲಾಪಿಯ ಮೀನು ಹೇರಳ ಮೊಟ್ಟೆ ಇಡುತ್ತವೆ. ಆದರೆ ಕಾರ್ಪಗಳೊಂದಿಗೆ ಸಾಕಲಾಗದು. ಏಕೆಂದರೆ ಕಾರ್ಪಮರಿಗಳನ್ನು ಭಕ್ಷಿಸುತ್ತದೆ.
೨೪೯. ಎಟ್ರೊಪ್ಲಸ್‌ ಮ್ಯಾಕುಲೇಟಸ್‌ ಚುಕ್ಕೆ ಎಟ್ರೊಪ್ಲಸ್‌, ಕಿತ್ತಳೆ ಕ್ರಾಮಿಡೀ ಮಟಕ್
೨೫೦. ಎ. ಸೂರಟೆನ್ಸಿಸ್‌ ಪಟ್ಟಿ ಎಟ್ರೊಪ್ಲಸ್‌, ಮುತ್ತು ಕಲೆ ಕಗಲಾಸೆ, ಕಲೆದಿಯ, ಕಲ್ಸೆ ಈರಿಮೀನು ತಿನ್ನಬುಹುದಾದ ಒಳ್ಳೆಯ ಮೀನು. ಸಿಹಿನೀರಿಗೆ ಬಹು ಸುಲಭವಾಗಿ ಹೊಂದಿಕೊಳ್ಳುತ್ತದೆ.
೨೫೧. ಎ. ಕೆನೆರೆನ್ಷಿಸ್‌   ಎಟ್ರೊಪ್ಲಸ್‌ಮೀನು
ಕುಟುಂಬ : ಅಕೆಂತುರಿಡೀ(ಸರ್ಜನ ಮೀನು)
೨೫೨. ಅಕೆಂತ್ರುಸ್‌ ಬ್ಲೀಕೆರಿ ನೀಲಿ ಪಂಕ್ರಿ ಮೀನು    
ಕುಟುಂಬ : ಸಿಗನಿಡೀ(ಮೊಲ ಮೀನು)
೨೫೩. ಸಿಗನಸ್‌ ವರ್ಮಿಕ್ಯುಲೇಟಸ್‌ ವರ್ಮಿಕಾಲೇಟ ಮುಳ್ಳುಪಾದಿ   ಆಲೆ ತಿನ್ನುವ, ಅಕ್ರೊನುರಸ್ ಎಂಬ ವಿಜಾತೀಯ ಲಾರ್ವ ಅವಸ್ಥೆಯ ಮೀನು. ಲಾರ್ವ ದೇಹ ಪಾರದರ್ಶಕವಾಗಿದ್ದು ನೇರ ಏಣುಗಳಿರುತ್ತವೆ.

 

೨೫೪. ಸಿ. ಕೆನಾಲಿಕ್ಯುಲ್ಮೆಟಸ್‌ ಬಿಳಿಗುರುತಿನ ಮುಳ್ಳು ಪಾದಿ  
ಕುಟುಂಬ : ಟೈಕಿಯುರಿಡೀ(ಲಾಡಿ ಮೀನು)
೨೫೫. ಯುಪ್ಲಿರೊಗ್ರಾಮಸ್‌ ಮ್ಯುಟಿಕಸ್‌ ಬೂದಲಾದ ಮೀನು   ಆಹಾರದ ದೃಷ್ಟಿಯಿಂದ ಮುಖ್ಯವಲ್ಲ. ಉಪ್ಪು ಬೆರಸಿ, ಬಿಸಿಲಿನಲ್ಲಿ ಒಣಗಿಸುತ್ತಾರೆ ಮೀನು ತಿನಿಸಿಗೆ ಮತ್ತು ಪ್ರೊಟೀನಿಗೆ ಆಧಾರ.
೨೫೪. ಟ್ರೈಕೆಯುರಸ್‌ ಲೆಪ್ಪುರಸೆ ದೊಡ್ಡ ತಲೆ ಲಾಡಿ ಮೀನು ಹಂಬ್ಲೆ
ಕುಟುಂಬ : ಸ್ಕಾಂಬ್ರಿಡೀ(ಮ್ಯಾಕರೆಲ್‌ಗಳು ಮತ್ತು ಟ್ಯೂನಗಳು)
೨೫೭. ಆಕ್ಷಿಸ್‌ ತಜಾರ್ಡ್ ಫ್ರೀಗೇಟ್‌ ಟ್ಯೂನ್‌ ಫ್ರಿಗೇಟ   ಅಳಿವೆ ಮತ್ತು ಕರಾವಳಿ ನೀರಿನ ತಿನ್ನಬಹುದಾದ ಮೀನು
೨೫೮. ಯೂಪಿಮಸ್‌ ಅಫೀಸ್‌ನ ಮೂಡಣದ ಪುಟ್ಟಮನ್ನಿ, ಮ್ಯಕರೆಲ್‌ಟ್ಯೂನ, ಪುಟ್ಟ ಟ್ಯೂನ ಗಾದಾರ್, ಕೀಡಲ್‌, ಕಲ್ಲಡೆ, ಸೂರಿ ಮೀನು
೨೫೯. ರಾಸ್ಟ್ರೆಲ್ಲಿಗರ್ ಕನಗುರ್ಟ ಭಾರತದ ಮ್ಯಾಕೆರೆಲ್‌ ತೆಲ್‌ಬ್ಯಾಂಗಡೆ ಅಕ್ಟೋಬರ್ ಡಿಸೆಂಬರ್ ತಿಂಗಳುಗಳಲ್ಲಿ ಹೇರಳವಾಗಿ ದೊರಕುವ ತೇಲು ಮತ್ತು ಬಟ್ಟಲು ಆಹಾರ ಮೀನು.
೨೬೦. ಸ್ಕೊಂಬೆರೊಮಾರಸ್‌ ಕಾಮ್ಮರ್ಸನ್‌ ಸೀರ್ ಮೀನು ಕಿರಿಪಟ್ಟಿ ಬವನ್‌, ಅರ್ಕಲೈ, ಬಾರಿ ಮೀನು ಅರ್ಕಲೈ ದೊಡ್ಡ ಗಾತ್ರದ (೪೫ ಕೆ.ಜಿ) ಮತ್ತು ರುಚಿಯಾದ ಕಡಲು ಮೀನು. ಸ್ಥಳೀಯ ಮಾರುಕಟ್ಟೆಯಲ್ಲಿ ದುಬಾರಿ ಬೆಲೆ

 

೨೬೧. ಸ್ಕೊಂ. ಗುಟ್ಟಾಟಸ್‌ ಇಂಢೋ ಫಸಿಫಿಕ್‌, ಸ್ಪಾನಿಷ್‌ ಮ್ಯಾಕರೆಲ್‌, ಚುಕ್ಕಿ ಸ್ಪಾಸಿಷ್‌ ಮ್ಯಾಕರೆಲೆ, ಸೀರ್ ಮೀನು ಖುಲ್‌ಕುಲ್, ಅಂಕುಲಿ, ಜ್ನಾವರ್, ಬಾರಿ ಮೀನು
೨೬೨. ತುನ್ನುಸ್‌ ಬಾಂಗೊಲ್‌ ಉದ್ದಬಾಲ ಟ್ಯೂನ, ನೀಲಿ ರೆಕ್ಕೆ ಟ್ಯೂನ ಗೀತಾಲ್‌ ಮೂಲಂಗಿ ಆಕಾರದ ದೇಹ, ಉದರದ ಮೇಲೆ ತಿಳಿ ಅಡ್ಡ ಗುರುತುಗಳಿವೆ.
ಕುಟುಂಬ : ಕ್ಸೈಫಿಡೀ(ಕತ್ತಿ ಮೀನು)
೨೬೩. ಕ್ಸೈಫಿಯಾಸ್‌ ಗ್ಲೇಡಿಯಸ್‌ ಕತ್ತಿ ಮೀನು   ದೊಡ್ಡಗಾತ್ರದ (೬೦೬೫ ಕೆ. ಜಿ.) ಆಳ ನೀರಿನ, ಕೆ. ಅನ್ನಾಂಗ ಹೆಚ್ಚಾಗಿರುವ ತಿನ್ನಬಹುದಾದ ಮೀನು.
ಕುಟುಂಬ : ಇಸ್ಟಿಯೊಫೊರಿಡೀ(ಕೊಕ್ಕು ಮೀನು, ಈಟಿ ಮೀನು, ಮಾಲ್ಲಿನ್‌ಮತ್ತು ಹಡಗು ಪಟ ಮೀನು)
೨೬೪. ಇಸ್ತಿಯೊಪೋರಸ ಪ್ಲಾಟಿಟ್ಟೆರಸ್‌ ಪೆಸಿಫಿಕ್‌ ನಾವೆ ಮೀನು, ಭಾರತದ ನಾವೆ ಮೀನು, ಬಾಳೆ ನಾವೆ ಮೀನು, ಕತ್ತಿ ಮೀನು ಹಾಯಿ ಮೀನು ಕಡಲಾಂತರ ವಲಸೆಗಾಮಿ ಬ್ರಹದ್‌ ಗಾತ್ರದ, ವೇಗ ಈಜಿನ, ತಿನ್ನಬಹುದಾದ ಮೀನು. ಇದರ ಲಿವರ್ ಆಯಿಲ್‌ ನಲ್ಲಿ ಕೆ. ಅನ್ನಾಂಗ ಸಮೃದ್ಧವಾಗಿದೆ.
೨೬೫. ಟೆಟ್ರಾಪೈರಸ್‌ ಬ್ರೆವಿರೊಸ್ಟ್ರಿಸ್ ಮೋಟು ಮೂಗು ಕತ್ತಿ ಮೀನು  
ಕುಟುಂಬ : ಏರಿಯೋರ್ಮಿಡೀ(ಏರಿಯೋಮ್ಮ)
೨೬೬. ಏರಿಯೋಮ್ಮ ಇಂಡಿಕೆ ಭಾರತದ ಏರಿಯೋಮ್ಮ   ತಿನ್ನಬಹುದಾದ ಪುಟ್ಟ ತಿಟ್ಟೆಮೀನು. ದಂಡೆಯಿಂದೀಚೆಗಿನ ನೀರುಗಳಲ್ಲಿ ಕಂಡುಬರುತ್ತದೆ. ಕೊಬ್ಬಿನ ಅಂಶ ಹೆಚ್ಚು.
ಕುಟುಂಬ : ಸ್ಟ್ರೊಮೀಡೀ (ಪೋಮ್‌ಫ್ರೆಟ್‌ಗಳು)
೨೬೭. ಪಾಂಪಸ್‌ ಆರ್ಜೆಂಟಿಯಸ್‌ ಬಿಳಿ, ಬೂದು, ಬಿಳಿ, ಪಾಂಫ್ರೆಟ್‌ ಬಿಳಿ ಮೀನು, ತೊರಿಟ್ರೆಟ್ಟ ಆಹಾರವಾಗಿ ಸೇವಿಸಬಹುದಾದ ಅತ್ಯುತ್ತಮ ಮೀನು. ತೆಟ್ಟೆ ಹಾಗೂ ಆಳ ನೀರುಗಳಲ್ಲಿಯೂ ಕಂಡು ಬರುತ್ತವೆ. ಸ್ಥಳೀಯ ಮಾರುಕಟ್ಟೆಗಳಲ್ಲಿ ದುಬಾರಿ ಬೆಲೆ ಬಾಳುತ್ತವೆ.
೨೬೮. ಪಾಂ. ಕೈನೆನ್ಸಿಸ್‌ ಚೇನಾ
ಕುಟುಂಬ : ಗೋಬಿಡೀ
೨೬೯. ಸ್ಟೆನೊಗೋಬಿಯನ್‌ ಮಲಬಾರಿಕಸ್‌ ಮಲಬಾರಗೋಬಿ ಮಾಟ, ಕರಸೆ ಸೊಂಟದ ಈಜುರೆಕ್ಕೆಗಳು ಕೂಡಿ ಫಲಕವಾದ ಉದ್ದ ಮೀನು ಈ ಫಲಕ ಕಲ್ಲುಬಂಡೆಗಳಿಗೆ ಅಂಟಿಕೊಳ್ಳಲು ನೆರವಾಗುತ್ತದೆ.
೨೭೦. ಆಕ್ಸಿಯೂರಸ್‌ ಟೆಂಟಾಕ್ಯುಲೇರಿಸ್‌    
೨೭೧. ಗ್ಲಾಸ್ಸೊಗೋಬಿಯಸ್‌ ಗಿಯುರಿಸ್‌ ಪಟ್ಟಕಣ್ಣಿನ ಗೋಬಿ ಬಂಗಿಸಿದ್ದ ಮೀನು, ಕೊರನ, ಮಲಲೆ, ನೆತ್ತಿ, ಕಣ್ಣು ಬಂಗಿ ಮೂಲ
ಕುಟುಂಬ : ಗೋಬಿಯೊಡಿಡೀ
೨೭೨. ಟ್ರೈಪಾಚೆನ ವೆಜಿನ ಬೀಲತೊಡುವ ಗೋಬಿ   ಸಣ್ಣಕಣ್ಣುಗಳ ಹಾವು ಮೀನು ಆಕಾರದ ಮೀನು
ಕುಟುಂಬ : ಎಲಕ್ಟ್ರಿಡಿ
೨೭೩. ಬೂಟೆಸ್‌ ಮೆಲನೊಸ್ಟಿಗ್ಮ ದುಂಡು ದೇಹದ ಗಡ್ಜಿಯಾನ ಮಟ್ಟೆ ಕಲ್ಲೆಮಟ್ಟೆ ಸಣ್ಣಕಣ್ಣುಗಳ ಹಾವು ಮೀನು ಆಕಾರದ ಮೀನು
೨೭೪. ಓಫಿಯೊಕರ ಪೊರೊಸಿಫಾಲಸ್‌ ತೂತು ತಲೆಯ ಗಡ್ಜಿಯಾನ್‌  
ಕುಟುಂಬ : ಅನಬಾಂಟಿಡೀ
೨೭೫. ಅನಬಾಸ್‌ ಟಿಸ್ಟೂಡಿನಿಯನ್ಸ್ ಹತ್ತುವ ಪರ್ಚ್ ಹತ್ತೊ ಮೀನು ಬಾಲವನ್ನು ಮತ್ತು ಜೋಡಿ ಈಜುರೆಕ್ಕೆಗಳನ್ನು ಅಕ್ಕಪಕ್ಕಗಳಿಗೆ ಅಲ್ಲಾಡಿಸುವುದರ ಮೂಲಕ ಒಣ ನೆಲವನ್ನು ಈ ಮೀನು ದಾಟಬಹುದು. ತನ್ನ ಅನುಷಂಗಿಕ ಶ್ವಾಸಾಂಗಗಳ ಮೂಲಕ ವಾಯುಮಂಡಲದ ಗಾಳಿಯನ್ನು ನುಂಗಬಲ್ಲದು.
ಕುಟುಂಬ : ಆಸ್ಟ್ರೆನೆಮಿಡೀ (ಗೋರಾಮಿಗಳು)
೨೭೬. ಆಸ್ಟ್ರೊನೆಮಸ್‌ ಗೊರಾಮಿ ಗೊರಾಮಿ ಗೊರಾಮಿ ತನ್ನ ಮೊಟ್ಟೆಗಳಿಗೆ ಮತ್ತು ಮರಿಗಳಿಗೆ ಗೂಡು ಕಟ್ಟುತ್ತದೆ, ಇದು ಜಲತೊಟ್ಟಿಯ ಪ್ರೀತಿಯ ಮೀನು
ಕುಟುಂಬ : ಬೆಲೋನಿಡೀ
೨೭೭. ಮ್ಯಾಕ್ರೊಪೋಡಸ್‌ ಕ್ಯುಪಾನಸ್‌ ಪಾಮಿರನಾರು ಮೀನು, ಸಗ್ಗದ ಮೀನು ಚಂಪರಕ ಟಬುಟ್ಟಿ, ಕುಂಬಳ ಮೀನು ಉದ್ದ ಚತುರಕ್ಷವಾದ ತಟ್ಟಿದ ದೇಹ, ದೊಡ್ಡ ಕಣ್ಣುಗಳು ಮತ್ತು ಒಂದು ಬೆನ್ನಿನ ಈಜುರೆಕ್ಕೆಯಿದೆ.
ಕುಟುಂಬ : ಸ್ಕಾರ್ಪೆನಿಡೀ
೨೭೮. ಟಿರೊಯಿಸ್‌ ವೊಲಿಟಾನ್ಸ್ ರೆಕ್ಕೆ ಇರುವ ಬೆಂಕಿ ಮೀನು   ವರ್ಣರಂಜಿತ ಆದರೆ ತಿನ್ನಲಾರದ ಮೀನು
೨೭೯. ಟಿ. ರಸ್ಸೆಲ್ಲಿ ರಸ್ಸೆಲ್ಲಿ ಬೆಂಕಿ ಮೀನು    
ಕುಟುಂಬ : ಸಿನಸಿಡೀ (ಗೋಬ್ಲಿನ್‌ ಮೀನು)
೨೮೦. ಮಿನ್ನೋಸ ಮಾನೊಡ್ಯಾಕ್ಟೇಲಸ್‌ ಬೂದು ಗೋಬ್ಲಿನ್‌ ಮೀನು   ಮುಳ್ಳುಗಳಿರುವುದರಿಂದ ತಲೆ ಮತ್ತು ದೇಹ ಒರಟಾಗಿರುತ್ತವೆ.
ಗಣ : ಮಾಸ್ಟಸೆಂಬೆಲ್ಲಿಫಾರ್ಮಿಸ
ಕುಟುಂಬ : ಮಾಸ್ಟಸೆಂಬೆಲ್ಲಿಡೀ (ಮುಳ್ಳು ಹಾವು ಮೀನು)
೨೮೧. ಮ್ಯಾಕ್ರೊಗ್ನಾತಸ್‌ ಅಕುಲೇಟಸ್‌ ಕಡಿಮೆ ಮುಳ್ಳು ಹಾವು ಮೀನು ನೀಳವಾದ ಚಪ್ಪಟೆ ದೇಹದ ಹಾವು ಮೀನಿನಂತಹ ಮೀನು, ಹಾವು ಬಟ್ಟಿ ಸಿಹಿನೀರು ಮತ್ತು ಉಪ್ಪು ನೀರುಗಳಲ್ಲಿ ವಾಸಿಸುತ್ತದೆ.
೨೮೨. ಮಾಸ್ಟಸೆಂಬಲಸ್‌ ಆರ್ಟೇಟಸ್‌ ಮುಳ್ಳು ಹಾವು ಮೀನು ಹಾವು ಮೀನು, ಹಾವು ಬಟ್ಟೆ
ಗಣ : ಎಕಿನಿಫಾರ್ಮಿಸ್‌
ಕುಟುಂಬ : ಎಕಿನಿಡೀ
೨೮೩. ಎಕಿನಿಸ್‌ ನಾಕ್ರೇಟಸ್‌ ತೆಳು ಹೀರು, ಬಟ್ಟಲು ಮೀನು   ಚಪ್ಪಟೆಯಾದ ತಲೆ, ಹೀರು ಬಟ್ಟಲಾಗಿ ಮಾರ್ಪಟ್ಟ ಪಟ್ಟಿ ಸಹಿತ ಹೀರು ಬಟ್ಟಲನ್ನು ಧರಿಸಿರುವ ತನ್ನ ಪಯಣಕ್ಕೆ ಶಾರ್ಕುಗಳನ್ನು ಆತಿಥೇಯ ಪ್ರಾಣಿಗಳಾಗಿ ಆರಿಸಿಕೊಳ್ಳುತ್ತದೆ.
ಗಣ : ಡ್ಯಾಕ್ಟೈಲೊಪ್ಟೆರಿಫಾರ್ಮಿಸ್‌
ಕುಟುಂಬ : ಡ್ಯಾಕ್ಟೈಲೊಪ್ಟೆರಿಡೀ(ಹಾರುವ ಗುರ್ನಾರ್ಡಗಳು)
೨೮೪. ಡ್ಯಾಕ್ಟೈಲೊಪ್ಪಿನ ಓರಿಯಂಟಾಲಿಸ್‌ ಹಾರುವ ಗುರ್ನಾರ್ಡ   ಗಟ್ಟಿಮುಟ್ಟಾದ ಮೂಳೆಗಳಿರುವ ದೇಹ. ಮೂಳೆ ಕವಚ ಆವರಿಸಿದ ತಲೆ ತಳದಲ್ಲಿ ಆಹಾರ ಹುಡುಕುವ ಭುಜದ ಈಜುರೆಕ್ಕೆ ಬಳಸಿ ಜಿಗಿಯಬಲ್ಲ, ಜಾರಬಲ್ಲ ಮೀನು.
ಕುಟುಂಬ : ಪ್ಲೊರೊನೆಕ್ಟಿಡೀ
೨೮೪A. ಪ್ಲೊರ್ನೆಕ್ಟಿಸ್‌ ಇರುಮಿ ಪ್ಲೂರೂನೆಕ್ಟಡೀ    
ಗಣ : ಪ್ಲುರೊನೆಕ್ಞಿಫಾರ್ಮಿಸ್‌ (ಚಪ್ಪಟೆ ಮೀನು)
ಕುಟುಂಬ : ಸೆಟ್ಟೊಡಿಡೀ (ಭಾರತದ ಹ್ಯಾಲಿಬಟ್‌ಗಳು)
೨೮೫. ಸೆಟ್ಟೊಡಸ್‌ ಇರುಮಿ ಭಾರತದ ಹ್ಯಾಲಿಬಟ್‌, ಭಾರತದ ಟುರಬಟ್‌, ಹಲ್ಲಿರುವ ಚಪ್ಪಟೆ ಮೀನು ದೊಡ್ಡ ನಂಗು, ಪವೊಕೆ ನಂಗು ಪ್ರಮುಖ ಆಹಾರ ಮೀನು, ಎರಡೂ ಕಣ್ಣುಗಳು ತಲೆಯ ಎಡ ಅಥವಾ ಬಲ ಪಕ್ಕದಲ್ಲಿವೆ.
ಕುಟುಂಬ : ಬೋತೀಡಿ (ಎಡಕಣ್ಣು ಫ್ಲೌಂಡರ್ಗಳು)
೨೮೬. ಸೊಡೊರ್ಹಾಂಬಸ್‌ ಆರ್ಸಿಯಸ್‌ ದೊಡ್ಡಹಲ್ಲಿನ ಫ್ಲೌಂಡರ್ ತಿಬಿಲೆ ನಂಗು ಎಡ ಪಕ್ಕದಲ್ಲಿರುವ ಕಣ್ಣಿನ ಚಪ್ಪಟೆ ಮೀನು (ಎಡಚ) ಕರಾವಳಿ ಮತ್ತು ಆಳವಾದ ಕಡಲು ನೀರಿನಲ್ಲಿ ವಾಸಿಸುತ್ತದೆ.
ಕುಟುಂಬ : ಸೊಲಿಡೀ(ಸೋಲ್‌ಗಳು)
೨೮೭. ಈಸೊಪಿಯ ಕಾರ್ನುಟ ಕೊಂಬು ಸೋಲ್‌   ಚಪ್ಪಟೆಯಾದ ಉದ್ದ ಅಂಡಾಕಾರದ ದೇಹ ಕಣ್ಣಗಳು ಬಲ ಪಕ್ಕದಲ್ಲಿವೆ (ಬಲಚ) ಕರಾವಳಿ ಮತ್ತು ಕಡಲ ಆಳ ನೀರಿನಲ್ಲಿ ವಾಸ.
೨೮೮. ಸೈನಾಪುರ ಕಾಮ್ಮೆರ್ ಸೋಸಿಯಾನ ಕಾಮ್ಮರ ಸನ್ನರ ಸೋಲ್‌  
೨೮೯. ಯೂರಿಗ್ಲಾಸ್ಸ ಓರಿಯಂಟಾಲಿಸ್‌ ಓರಿಯಂಟಲ್‌ ಸೋಲ್‌  
ಕುಟುಂಬ : ಸೈನೊಗ್ಲಾಸ್ಸಿಡೀ(ನಾಲಿಗೆ ಸೋಲ್‌ಗಳು)
೨೯೦. ಸೈನೊಗ್ಲಾಸ್ಟಸ್‌ ಡ್ಯೂಬಿಯಸ್‌ ದೊಡ್ಡನಾಲಿಗೆ ಸೋಲ್‌   ನಾಲಿಗೆಯಾಕಾರದ ಮೀನು, ಕಣ್ಣುತಲೆಯ ಎಡ ಪಕ್ಕದಲ್ಲಿದೆ ಮಾಂಸವು ಹೆಚ್ಚು ಪ್ರೋಟೀನನ್ನೊಳಗೊಂಡಿದೆ.
೨೯೧. ಸೈ. ಬಿಲಿಯನಿಯೇಟಸ್‌ ನಾಲ್ಕ ಸಾಲು ನಾಲಿಗೆ ಸೋಲ್‌ ಲೈಯಾಂಪ್‌
೨೯೨. ಸೈ. ಡಿಸ್ವಾರ್ ಡೇರ ಸೋಲ್‌  
೨೯೩. ಸೈ. ಲಿಂಗುವ ಉದ್ದ ಸೋಲ್  
೨೯೪. ಸೈ. ಲಿಡೊ ಭುಜಗುರುತು ನಾಲಿಗೆ ಸೋಲ್‌  
೨೯೫. ಸೈ. ಮ್ಯಾಕ್ರೊಸ್ಟೋಮಸ್ ಮಲಬಾರ್ ಸೋಲ್‌  
ಗಣ : ಟೆಟ್ರಡೊಂಟಿಫಾರ್ಮಿಸ್
ಕುಟುಂಬ : ಬ್ಯಾಲಿಸ್ಟಿಡೀ
೨೯೬. ಅಲ್ಯೂಟಿರಸ್ ಮಾನೊಸೆರಸ್‌ ಯೂನಿಕಾರನ್‌ ಅರ ಮೀನು, ಹಳದಿ ಈಜುರೆಕ್ಕೆ, ಚಕ್ಕಳ ಹೊದಿಕೆ   ಸಣ್ಣ ಅಕ್ರಮ ಹುರುಪೆಗಳ ಸಣ್ಣ ಚಕ್ಕಳ ಕವಚ ಪಡೆದ ಪಕ್ಕದಲ್ಲಿ ಚಪ್ಪಟೆಯಾದ ದೇಹ. ಚರ್ಮಸುಲಿದಾಗ ತಿನ್ನಲು ಉತ್ತಮ. ದೇಹ ಪಕ್ಕಗಳಲ್ಲಿ ಚಪ್ಪಟೆಯಾಗಿದೆ. ಒಂದೇ ವಯಸ್ಸಿನ ಮೀನುಗಳನ್ನು ಸಾಕಬಹುದು.
೨೯೭. ಬಾಲಿಸ್ಟಿಸ್ ಎರಿತ್ರೊಡಾನ್ ಕೆಂಪು ಹಲ್ಲು ಅರ ಮೀನು  
ಕುಟುಂಬ : ಟ್ರೈಕ್ಯಾಂತಿಡೀ(ತ್ರಿಪಾದಿ ಮೀನು)
೨೯೮. ಟ್ರೈಕ್ಯಾಂತಸ್ ಬ್ರಿವಿರೊಸ್ಟ್ರಿಸ್ ಮೋಟು ಮೂಗಿನ, ತ್ರಿಪಾದಿ ಮೀನು ಕುದುರೆ ಮೀನು ಮುಳ್ಳು ಹುರುಪೆಗಳುಳ್ಳ ಚಪ್ಪಟೆಯಾದ ದೇಹವಿದೆ.
೨೯೯. ಟ್ರೈ. ಬಿಯಾಸುಲಿಯೇಟಸ್ ಟೊಳ್ಳು ಮೂತಿಯ, ತ್ರಿಪಾದಿ ಮೀನು  
ಕುಟುಂಬ : ಆಸ್ಟ್ರೇಸಿಯೊಂಟಿಡೀ(ಪೆಟ್ಟಿಗೆ ಮೀನು, ಆಕಳು ಮೀನು)
೩೦೦. ಲ್ಯಾಕ್ಟೊರಿಯ ಕಾರ್ನುಟ ಉದ್ದಕೊಂಬಿನ ಆಕಳು ಮೀನು ಕುದ್ರೆಮೀನು ಆರು ಮೂಲೆಯ ಫಲಕಗಳು ಅಂಚಿನಲ್ಲಿ ಕೂಡಿ ಒಂದು ಗಟ್ಟಿ ಪೆಟ್ಟಿಯ ಅವರಿತ ದೇಹ.
೩೦೧. ಆಸ್ಟ್ರೇಸಿಯಾನ್ ಲೆಂಟಿಗಿನೋಸ ಚಿಬ್ಬು ಪೆಟ್ಟಿಗೆ ಮೀನು ತೊಂಡ ಮೀನು ಮೂಲೆ ಫಲಕಗಳಾವರಿತ ಕ್ಯಾರಪೇಸ್‌ ದೇಹವನ್ನು ಸುತ್ತವರಿದಿದೆ. ಇದರ ಮೇಲೆ ಸಣ್ಣ ಕೆಂಪು ಗುರುತುಗಳಿವೆ.
ಕುಟುಂಬ : ಡಯೊಟಾಂಟಿಡೀ(ಮುಳ್ಳುಹಂದಿ ಮೀನು)
೩೦೨. ಡಯೊಡಾನ್ ಹಿನ್ಟ್ರಿಕ್ಸ್ ಮಚ್ಚೆ ಮುಳ್ಳು ಹಂದಿ ಮೀನು ಮುಳ್ಳು ಮೀನು ದೇಹದ ಮೇಲೆ ಮುಳ್ಳುಗಳಿವೆ. ಬಹಳಳೊಮ್ಮೆ ಇವು ಚಲಿಸಬಲ್ಲವು. ಇದು ಗೋಳಾಕಾರವಾಗಿ ಊದಬಹುದು.
೩೦೩. ಡ. ಮ್ಯಾಕುಲಿಫಿರ್
ಕುಟುಂಬ : ಲ್ಯಾಗೊಸಿಫಾಲಿಡೀ(ಊದು ಮೀನು)
೩೦೪. ಗ್ಯಾಸ್ಟ್ರೊಫೈಸಸ್ ಲೂನಾರಿಸ್ ಹಸಿರು ಒರಟು ಬೆನ್ನು, ಊದು ಮೀನು   ಪ್ರತಿಯೊಂದು ದವಡೆಯಲ್ಲಿಯೂ ಎರಡು ದೊಡ್ಡ ಫಲಕಗಳಿರುವ ನೀಳ ದೇಹದ ಮೀನು.
ಕುಟುಂಬ : ಟೆಟ್ರೊಒಡಾಂಟಿಡೀ(ಗೋಳ ಮೀನು)
*೩೦೫. ಟೆಟ್ರಡಾನ್ ಕುಕ್ಯುಟಿಯ ಕಣ್ಣುಭರಿತ ಊದು ಮೀನು   ಬೃಹದ್‌ ಗಾತ್ರದ, ಪ್ರತಿ ದವಡೆಯಲ್ಲಿಯೂ ಎರಡೂ ದೊಡ್ಡ ಫಲಕಗಳಿರುವ ಮೀನುಗಳು.
೩೦೬. ಆರೊಫ್ರಾನ್ ಲಿಯೊಪಾರ್ಡಸ್‌ ಪಟ್ಟಿ ಚಿರತೆ ಊದು ಮೀನು  
ಗಣ : ಬೆಟ್ರಕೊಡಿಫಾರ್ಮಿಸ್
ಕುಟುಂಬ : ಬೆಟ್ರಕಾಯಿಡೀ(ಕಪ್ಪೆ ಮೀನು)
೩೦೭. ಬೆಟ್ರಕಸ ಗ್ರುನ್ನಿಯನ್ಸ್ ಕಪ್ಪೆ ಮೀನು   ಉದ್ದವಾದ ದಪ್ಪ ದೇಹ, ಅಗಲವಾದ ಚಪ್ಪಟೆ ತಲೆ
ಗಣ : ಲೋಫಿಫಾರ್ಮಿಸ್
ಕುಟುಂಬ : ಲೋಫಿಡೀ(ಸನ್ಯಾಸಿ ಮೀನು)
೩೦೮. ಲೋಫಿಯೊಡಿಸ್‌ ಲುಗುಬ್ರಿಸ್‌ ಸನ್ಯಾಸಿ ಮೀನು   ತಟ್ಟಿದ ತಲೆ ಮತ್ತು ದೊಡ್ಡ ಬಾಯಿ ಉಳ್ಳ ದೊಡ್ಡ ಮೀನು, ಕಣಭರಿತ ಸಡಿಲ ಚರ್ಮವಿದೆ
ಕುಟುಂಬ : ಒಗೊನಿಫಾಲಿಡೀ(ಹಸ್ತ ಮೀನು)
೩೦೯. ಹ್ಯಾಲಿಯೂಟ ಸ್ವೆಲ್ಲೇಟ ಸ್ಟೆಲ್ಲೇಟ್‌ ಹಸ್ತ ಮೀನು   ತಟ್ಟಿದಂತಹ ದೇಹ, ಮುಳ್ಳುಗಳಿವೆ. ಅಗಲವಾದ ಚಪ್ಪಟೆ ತಲೆ, ತೆಳು ಚೂಪಾದ ಬಾಲ.
ಕುಟುಂಬ : ಆಂಟೆನ್ನೇರಿಡೀ (ಗಾಳದ ಮೀನು)
೩೧೦. ಆಂಟನ್ನೇರಿಯಸ್‌ ಕಮ್ಮೆನ್‌ ಸೊನಿ ಕಪ್ಪು ಗಾಳ ಮೀನು   ವಿಕಾರದ ದೇಹ.