ಗಣ : ಒಫಿಡಿಯ
ಕುಟುಂಬ : ಹೋಮಲೊಪ್ಸಿಡೀ (Homalopsidae)
ಉದಾ : ಸಾಮಾನ್ಯ ಮಾರ್ಜಾಲ ಹಾವು (Common cat snake)
ಶಾಸ್ತ್ರೀಯ ನಾಮ : ಬಾಯಿಗ ಟ್ರೈಗೊನೇಟ (Boiga trigonata)

ವಿತರಣೆ : ಕರ್ನಾಟಕವೂ ಸೇರಿದಂತೆ ಭಾರತಾದ್ಯಂತ ಬಯಲು ಪ್ರದೇಶಗಳಲ್ಲಿ ದೊರಕುತ್ತದೆ. ಗುಡ್ಡಗಾಡು ಪ್ರದೇಶಗಳಲ್ಲಿ ಸಮುದ್ರ ಮಟ್ಟದಿಂದ ೧೦೦೦ ಮೀ. ಎತ್ತರದವರೆಗೆ, ನಿತ್ಯ ಹರಿದ್ವರ್ಣ ಮತ್ತು ಮಾಗಿಯಲ್ಲಿ ಎಲೆ ಉದುರುವ ಕಾಡುಗಳಲ್ಲಿಯೂ ವಾಸಿಸುತ್ತದೆ.

ಗಾತ್ರ : ಸರಾಸರಿ ಗಾತ್ರ ೨ ಅಡಿ ಉದ್ದ. ೪ ಅಡಿ ಉದ್ದ ಹಾವೂ ದೊರಕಿದ ದಾಖಲೆ ಉಂಟು.

ಆಹಾರ : ಹೆಸರಿಗೆ ವಿರುದ್ಧವಾಗಿ ಸಾಮಾನ್ಯವಾಗಿ ಹಲ್ಲಿಗಳು ಮತ್ತು ಗೌಳಿಗಳನ್ನು ತಿನ್ನುತ್ತದೆ. ಇದಕ್ಕೆ ಓತಿ ಹೆಚ್ಚು ಪ್ರಿಯ. ಬಂಧನದಲ್ಲಿ ಸಣ್ಣ ಹಕ್ಕಿಗಳು, ಸಸ್ತನಿಗಳು ಮತ್ತು ಹಲ್ಲಿಗಳನ್ನು ತಿನ್ನುತ್ತದೆ.

ಲಕ್ಷಣಗಳು : ಆಕಾರ ಗಾತ್ರದಲ್ಲಿ ಸಣ್ಣ ಹಾವು. ಚಪ್ಪಟೆ, ತೆಳುದೇಹ, ಸ್ಪಷ್ಟ ಕುತ್ತಿಗೆ, ದೊಡ್ಡ ಕಣ್ಣುಗಳು, ಹಳದಿ ಕಣ್ಣುಗುಡ್ಡೆಗಳು, ನೇರವಾದ ಕಣ್ಣು ಪಾಪೆ, ಹಿಂದೆ ಹೋದಂತೆ ಚೂಪಾಗುವ ಚಾಟಿಯಂತಹ ಬಾಲ.

ಹಳದಿ ಕಂದು ಮೈಬಣ್ಣ, ಮರುಳು ಅಥವಾ ತಿಳಿಕಂದು ಬಣ್ಣವೂ ಇರಬಹುದು. ದೇಹದ ಮೇಲೆ ಕಡುಬಣ್ಣದ ಗುರುತುಗಳಿರಬಹುದು. ಬೆನ್ನಿನ ಮೇಲೆ ‘Y’ ಆಕಾರದ ಗುರುತುಗಳ ಶ್ರೇಣಿ ಉಂಟು. ಈ ‘Y’ ಆಕಾರದ ಗುರುತಿನ ಒಳಭಾಗ ಬಿಳಿಪು ಮತ್ತು ಪಕ್ಕಗಳು ಕಪ್ಪು, ಅಂಚಿನಂತಿವೆ. ಹೊಟ್ಟೆಯ ಭಾಗ ಬಿಳುಪು. ದೇಹದ ಮೇಲೆ ನಯವಾದ, ಆದರೆ ಹೊಳಪಿಲ್ಲದ ಹುರುಪೆಗಳ ಹೊದಿಕೆ ಇದೆ.

ಸಂತಾನಾಭಿವೃದ್ಧಿ : ಮೇ ಅಗಷ್ಟ್‌ತಿಂಗಳುಗಳಲ್ಲಿ ಮೊಟ್ಟೆ ಇಡುವ ಹೆಣ್ಣು ಹಾವುಗಳು ದೊರಕುತ್ತವೆ. ಸೆಪ್ಟೆಂಬರ್ ತಿಂಗಳಲ್ಲಿ ಮೊಟ್ಟೆ ಇಡುತ್ತವೆ. ಒಂದು ಸಾರಿಗೆ ೩ ರಿಂದ ೭ ಮೊಟ್ಟೆಗಳನ್ನಿಡಬಹುದು. ಮೊಟ್ಟೆಗಳ ಗಾತ್ರ ೩೦ x೧೦ ಮೀ. ಮೀ. ಉದ್ದಗಲ. ಮಾರ್ಚ್‌‌ನಲ್ಲಿ ಮರಿಗಳು ಹೊರ ಬರುತ್ತವೆ.

ಸ್ವಭಾವ : ನಿಶಾಚರಿಯಾದರೂ ಹಗಲಿನಲ್ಲಿ ಗಂಡು ಹೆಣ್ಣುಗಳು ಸಂಭೋಗಕ್ಕೆ ಸಂಧಿಸಿದ, ಅಹಾರ ಬೇಟೆಯಾಡಿದ ನಿದರ್ಶನಗಳಿವೆ. ನದಿ, ಕೆರೆದಂಡೆಗಳಲ್ಲಿ ಏಡಿ ಬಿಲ, ಕಲ್ಲುಗಳ ಕೆಳಗೆ ಅಡಗಿದ್ದು ಹಾವಿನ ತಲೆ ಮತ್ತು ಅದರ ಚಾಚಿದ ನಾಲಗೆ ಒರಗೆ ಕಾಣಿಸುತ್ತಿರುತ್ತದೆ. ಹಾವು ಚೆನ್ನಾಗಿ ಈಜಬಲ್ಲದು. ಹೆದರಿ ಓಡುವಾಗ ಜಿಗಿದು, ಪಕ್ಕಕ್ಕೆ ಹಾರಿ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತದೆ. ಬಾಯೊಳಗೆ ವಿಷದಂತಗಳು ಹಿಂದೆ ಇವೆ. ಮೇಲಿನ ದವಡೆಯ ಹಿಂದಿನ ಎರಡು ಹಲ್ಲುಗಳೇ ವಿಷದಂತಗಳು. ಇವುಗಳ ಅಂಚಿನಲ್ಲಿ ಉದ್ದಕ್ಕೂ ನಾಲೆಯಂತಹ ಜಾಡು ಇದೆ. ಇದರ ಮೂಲಕ ಬಾಯಿಯಲ್ಲಿರುವ ಪೆರಾಟಿಡ್ (ಕಿವಿಯ ಸನಿಹದ) ಗ್ರಂಥಿಗಳ ಸ್ರವಿಕೆ ಹರಿದು ಬರುತ್ತದೆ. ಇದು ಹಲ್ಲಿ ಇಲಿಗಳಿಗೆ ಮಾರಕ, ಸಾಮಾನ್ಯವಾಗಿ ಸಾಧುವಾದ ಪ್ರಾಣಿ. ಅದರೆ ರೇಗಿಸಿದಾಗ, ಪೀಡಿಸಿದಾಗ, ದೇಹದ ಮುಂಭಾಗವನ್ನು ನೆಲದಿಂದ ಮೇಲೆತ್ತಿ, ಹಿಂದಕ್ಕೂ ಮುಂದಕ್ಕೂ ಆಡಿಸಿ, ಬಾಯಿ ಕಿಸಿದು ಬಲವಾಗಿ ಬಡಿಯುತ್ತದೆ. ಪುನಃ ಪುನಃ ಹೀಗೆ ಮಾಡಿ ಹೆದರಿಸುವಂತೆ ವರ್ತಿಸುತ್ತದೆ.

ಈ ಹಾವಿನ ಅನೇಕ ಪ್ರಭೇಧಗಳು ಉಪ ಪ್ರಭೇಧಗಳು ಇವೆ.

—- 

ಗಣ : ಒಫಿಡಿಯ
ಕುಟುಂಬ : ಇಲಾಫಿಡೀ (Elaphidae)
ಉದಾ : ಕಟ್ಟುಹಾವು (Common krait)
ಶಾಸ್ತ್ರೀಯನಾಮ : ಬಂಗಾರಸ್ ಸಿರುಲಿಯಸ್ (Bungarus coeruleas)

099_69_PP_KUH

ವಿತರಣೆ : ಕರ್ನಾಟಕದ ಎಲ್ಲೆಡೆ, ಸಮುದ್ರ ಮಟ್ಟದಿಂದ ೧೬೦೦ ಮೀಟರ್ ಎತ್ತರದವರೆಗೆ ದೊರಕುತ್ತದೆ. ಬಯಲು ಸೀಮೆಯ ಮರಳುನೆಲ, ಇಲಿಯ ಬಿಲಗಳು, ಇಟ್ಟಿಗೆ ಮತ್ತು ಕಸದ ರಾಶಿ, ಗೋಡೆ ಬಿರುಕುಗಳು, ಕಲ್ಲುಗಳ ರಾಶಿಯ ನಡುವೆ ಕಂಡುಬರುತ್ತದೆ. ಸಾಮಾನ್ಯವಾಗಿ ಮೈದಾನ ಪ್ರದೇಶವಾಸಿ.

ಗಾತ್ರ : ೧ ಮೀಟರ್ ನಿಂದ ೨ ಮೀಟರ್ ಉದ್ದ.

ಆಹಾರ : ಇತರ ಹಾವುಗಳು, ಹಲ್ಲಿಗಳು ಇಲಿಗಳು ಹೆಗ್ಗಣ ಮತ್ತು ಕಪ್ಪೆಗಳು ಇದರ ಆಹಾರ. ಇದು ಸ್ವಜಾತಿ ಭಕ್ಷಕವೂ ಹೌದು.

ಲಕ್ಷಣಗಳು : ಇದರ ಮೈಬಣ್ಣ ಕಡುನೀಲಿ ಅಥವಾ ನೀಲಿಬೂದು. ಹೊಟ್ಟೆಯ ಭಾಗ ಬಿಳುಪು ತಲೆ ದುಂಡು. ಮತ್ತು ಕುತ್ತಿಗೆಯಿಂದ ಸ್ಪಷ್ಟವಾಗಿ ಪ್ರತ್ಯೇಕವಾಗಿದೆ. ವರ್ಣರಹಿತ ಕಣ್ಣುಗಳು. ಬಾಲಸಣ್ಣದು ಮತ್ತು ಮೋಟು. ದೇಹ ಉದ್ದ ಮತ್ತು ಉರುಳೆಯಾಕಾರವಾಗಿದೆ. ದೇಹದ ಮೇಲೆ ಸುಮಾರು ೪೦ ತೆಳು ಬಿಳಿ ಪಟ್ಟಿಗಳಿವೆ. ಇದರಿಂದ ಈ ಹಾವನ್ನು ಕಟ್ಟು ಹಾವು ಎಂದು ಕರೆಯುತ್ತಾರೆ. ಕೆಲವು ಹಾವುಗಳಲ್ಲಿ ತಲೆಯ ಮೇಲೆ, ಮುಂಭಾಗದ ದೇಹದ ಮೇಲೆ ಬಿಳಿ ಚುಕ್ಕೆಗಳಿರಬಹುದು. ತಲೆಯ ಮೇಲೆ ಪ್ರಶಲ್ಕಗಳ ಹೊದಿಕೆ ಉಂಟು. ಉದರಭಾಗ ಮತ್ತು ಬಾಲ ಭಾಗಗಳು ಒಂದೇ ಸಾಲಿನ ಹುರುಪೆಗಳ ಜೋಡಣೆಯನ್ನು ತೋರುತ್ತವೆ. ಬೆನ್ನುಭಾಗ ಮೇಲೆ ಉಬ್ಬಿದಂತಿರುವುದರಿಂದ ಅಡ್ಡಸೀಳೆಕೆಯಲ್ಲಿ ತ್ರಿಕೋನಾಕಾರವಾಗಿರುತ್ತದೆ.

ಸಂತಾನಾಭಿವೃದ್ಧಿ : ಏಪ್ರೀಲ್, ಮೇ ಜುಲೈ ತಿಂಗಳುಗಳಲ್ಲಿ ಮೊಟ್ಟೆ ಇಡುತ್ತವೆ. ಒಂದು ಸಾರಿಗೆ ೮ ರಿಂದ ೧೨ ಮೊಟ್ಟೆಗಳನ್ನಿಡುತ್ತವೆ. ಮೊಟ್ಟೆಗಳು ೩೫ x ೧೯ ಮೀ. ಮೀ. ಉದ್ದಳತೆ ಇರುತ್ತದೆ. ೪೫ ರಿಂದ ೬೦ ದಿನಗಳ ಕಾವು ಕಾಲದ ನಂತರ ಮೊಟ್ಟೆಗಳು ಒಡೆದು ಮರಿಗಳು ಹೊರಬರುತ್ತವೆ. ಹೆಣ್ಣು ಹಾವು ಮೊಟ್ಟೆಗಳನ್ನು ಕಾದು ಕಾಪಾಡುತ್ತದೆ.

ಸ್ವಭಾವ : ಇವು ನಿಶಾಚರಿಗಳು, ಹಗಲು ಆಡಗಿ ವಿಶ್ರಮಿಸಿಕೊಂಡಿದ್ದು ರಾತ್ರಿ ಆಹಾರ ಹುಡುಕುತ್ತ ಹೊರಬರುತ್ತವೆ. ಗಂಡುಹಾವುಗಳು ಇಂದು ರೀತಿಯ ಪ್ರದೇಶ ಸ್ವಾಮ್ಯ ಸ್ವಭಾವವನ್ನು ತೋರುತ್ತವೆ. ಒಂದು ಪ್ರದೇಶವನ್ನು ಆಕ್ರಮಿಸಿಕೊಂಡು, ತನ್ನ ಸ್ವಾಮ್ಯ ಸ್ಥಾಪಿಸಿ, ಆ ಪ್ರದೇಶಕ್ಕೆ ಇತರ ಗಂಡು ಕಟ್ಟು ಹಾವುಗಳು ಬಾರದಂತೆ ನೋಡುಕೊಳ್ಳುತ್ತವೆ. ಇವು ಸಾಮಾನ್ಯವಾಗಿ ಪುಕ್ಕಲು ಸ್ವಭಾವದ ಹಾವುಗಳು, ಹೆದರಿದಾಗ, ಗಾಬರಿಗೊಂಡಾಗ ದೇಹವನ್ನು ಸುರಳಿ ಸುತ್ತಿಕೊಂಡು, ತಮ್ಮ ತಲೆಯನ್ನು ಸುರಳಿಗಳ ಕೆಳಗೆ ಆಡಗಿಸಿಕೊಳ್ಳತ್ತವೆ. ಈ ಹಾವುಗಳು ನೋಟಕ್ಕೆ ಸುಂದರ ಪ್ರಾಣಿಗಳು.

ಇದು ವಿಷ ಜಂತು. ಇದರ ವಿಷ ಸ್ವಚ್ಛ ತೆಳು ಅರಶಿನ ಬಣ್ಣದ ದ್ರವ. ಈ ಹಾವಿನ ವಿಷ ಅತ್ಯಂತ ಅಪಾಯಕಾರಿ. ನಾಗರ ಹಾವಿನ ವಿಷಕ್ಕಿಂತ ೧೫ ಪಟ್ಟು ಹೆಚ್ಚು ತೀಕ್ಷ್ಣ ಜಗತ್ತಿನ ವಿಷ ಜಂತುಗಳಲ್ಲಿ ಅತ್ಯಂತ ಭಯಂಕರ ಪ್ರಾಣಿ. ಇದರ ವಿಷ ರಕ್ತ ಮತ್ತು ನರಗಳೆರಡರ ಮೇಲೂ ಪ್ರಭಾವ ಬೀರುತ್ತದೆ. ಕೆಂಪು ರಕ್ತಕಣಗಳನ್ನು ನಾಶಪಡಿಸುತ್ತದೆ. ರಕ್ತನಾಳಗಳನ್ನು ಹಾಳು ಮಾಡುತ್ತದೆ. ಶ್ವಾಸಾಂಗಗಳನ್ನು ಹಾಳು ಮಾಡಿ ಉಸಿರಾಟವನ್ನು ಪ್ರತಿಬಂಧಿಸುತ್ತದೆ. ಮಾತು, ನಾಲಿಗೆ, ಗಂಟಲುಗಳನ್ನು ಕೆಡಿಸುತ್ತದೆ. ಪಾರ್ಶ್ವವಾಯು, ಉಸಿರು ಕಟ್ಟಿಸಿ, ನರಮಂಡಲವನ್ನು ನಿಶ್ಚೇತಗೊಳಿಸಿ ಸಾವಿನತ್ತ ಕೊಂಡೊಯ್ಯುತ್ತದೆ. ಇದು ಕಚ್ಚಿದ ಜಾಗದಲ್ಲಿ ಯಾವ ಗುರುತು ಇಲ್ಲದಿರುವುದರಿಂದ ಇದು ಕಟ್ಟು ಹಾವು ಕಚ್ಚಿದ ಪ್ರಸಂಗ ಎಂದು ನಿರ್ಧರಿಸಿ ಮದ್ದುಕೋಡುವುದು ತಡವಾಗಿತ್ತದೆ. ವಿಷ ವಿರೋಧಿ ಔಷಧ ಸಕಾಲದಲ್ಲಿ ಪೂರೈಕೆಯಾಗದೆ ಹೆಚ್ಚು ಜನ ಸಾಯುತ್ತಾರೆ. ಕಟ್ಟು ಹಾವು ಕಚ್ಚಿದವರಿಗೆ ಆದಷ್ಟು ಬೇಗ ಔಷಧಿ ಚಿಕಿತ್ಸೆಯಾಗಬೇಕು. ಅಲ್ಲಿಯವರೆಗೆ ಮುಂಜಾಗ್ರತಾ ಕ್ರಮವಾಗಿ, ವಿಷ ಏರದಂತೆ, ವ್ಯಕ್ತಿಯನ್ನು ನೋಡಿಕೊಳ್ಳಬೇಕು. ಬೆಚ್ಚಗಿಡಬೇಕು, ಬಿಸಿಪಾನೀಯ ಕೊಡಬೇಕು. ಕಚ್ಚಿದ ೧೨-೧೫ ಗಂಟೆಗಳಲ್ಲಿ ಸಾವು ಸಾಮಾನ್ಯ.

—- 

ಗಣ : ಒಫಿಡಿಯ
ಕುಟುಂಬ : ಇಲಾಫಿಡೀ (Elaphidae)
ಉದಾ : ಕೊಕ್ಕೆ ನಾಸಿಕ ಕಡಲ ಹಾವು (Hooknosed Sea snake)
ಶಾಸ್ತ್ರೀಯ ನಾಮ : ಎನ್
ಹೈಡ್ರಿನ ಸ್ಕೈಸ್ಟೋಸ (Enhydrina schistosa)

100_69_PP_KUH

ವಿತರಣೆ : ಕರ್ನಾಟಕದ ಕರಾವಳಿ ಮತ್ತು ಕರಾವಳಿ ದ್ವೀಪಗಳಲ್ಲಿ ವಾಸಿಸುತ್ತದೆ. ಉಬ್ಬರ ವಿಳಿತಗಳ ಕಾಲದಲ್ಲಿ ಸಾಕಷ್ಟು ದೂರ ಮೇಲೇರಿ ಬರುತ್ತದೆ. ಬೆಸ್ತರ ಬಲೆಗಳಲ್ಲಿ ಸಿಕ್ಕು ಬರಬಹುದು.

ಗಾತ್ರ : ೬೦ ಸೆಂ. ಮೀ. ಉದ್ದ. ನಾಲ್ಕು ಅಡಿ (೧೨೦ ಸೆಂ. ಮೀ.) ಉದ್ದದ ಕಡಲ ಹಾವು ದೊರಕಿದ ದಾಖಲೆಗಳಿವೆ.

ಆಹಾರ : ಇದು ಸಂಪೂರ್ಣವಾಗಿ ಮೀನು ತಿನ್ನುವ ಹಾವು.

ಲಕ್ಷಣಗಳು : ಎಲ್ಲ ಕಡಲು ಹಾವುಗಳಂತೆ ಇದರ ಬಾಲವು ಪಕ್ಕದಿಂದ ಪಕ್ಕಕ್ಕೆ ಚಪ್ಪಟೆಯಾಗಿ ದೋಣಿಯ ಹುಟ್ಟಿನಂತಿದೆ. ದೇಹವು ಅಧೋ ಊರ್ಧ್ವ ಮುಖದ ಮೇಲೆ ಕೆಳಗೆ ಚಪ್ಪಟೆಯಾಗಿದೆ. ಸಾಕಷ್ಟು ಗಾತ್ರದ ಆದರೆ ಹೆಚ್ಚು ಉದ್ದವಿಲ್ಲದ ಹಾವು. ಮೂಗು ಚಚ್ಚೌಕಾರವಾಗಿದೆ. ಇದರ ಮೇಲಿನ ದವಡೆ ಕೆಳಗಿನ ದವಡೆಯ ಮುಂದೆ ಚಾಚಿ ಕೊಕ್ಕೆಯಾಕಾರದಲ್ಲಿದೆಯಾದ್ದರಿಂದ ಅದಕ್ಕೆ ಕೊಕ್ಕೆ ನಾಸಿಕ ಎಂಬ ಹೆಸರು ಬಂದಿದೆ. ಕಣ್ಣುಗಳು ಮಂದ ಹಸಿರು ಬಣ್ಣ. ಕತ್ತು ಪ್ರತ್ಯೇಕವಾಗಿ ಕಾಣುವುದಿಲ್ಲ.

ದೇಹದ ಬಣ್ಣ ಸಂಪೂರ್ಣ ಬೂದು. ಬೆನ್ನಿನ ಭಾಗದಲ್ಲಿ ಒತ್ತಾಗಿ ಹರಡಿದ ದುಂಡು ಮಚ್ಚೆಗಳಿವೆ. ಹುರುಪೆಗಳು ಒರಟು ಮತ್ತು ಅವುಗಳ ಮೇಲ್ಮೈ ತರಿತರಿಯಾಗಿವೆ. ಹೊಟ್ಟೆಯ ಭಾಗ ಬಿಳುಪು.

ಸಂತಾನಾಭಿವೃದ್ಧಿ : ಇದು ಅಂಡಜರಾಯುಜ ಪ್ರಾಣಿ. ಒಂದು ಸಾಲಿಗೆ ೨ ರಿಂದ ೫ ಮರಿಗಳನ್ನು ಹಾಕುತ್ತದೆ. ಸಾಮಾನ್ಯವಾಗಿ ಫೆಬ್ರವರಿ-ಮೇ ತಿಂಗಳ ನಡುಭಾಗದಲ್ಲಿ ಸಂತಾನೋತ್ಪತ್ತಿ ಪ್ರಕ್ರಿಯೆ ನಡೆಯುತ್ತದೆ. ಮೂರು ವರ್ಷಕ್ಕೆ ಪ್ರಾಯಕ್ಕೆ ಬರುತ್ತವೆ. ಮರಿ ಹಾಕುವ ಕಾಲಕ್ಕೆ ಇವು ಸಣ್ಣ ಕಲ್ಲು ದ್ವೀಪಗಳಿಗೆ ನೂರಾರು ಸಂಖ್ಯೆಯಲ್ಲಿ ವಲಸೆ ಬರುತ್ತವೆ.

ಸ್ವಭಾವ : ವರ್ಷದ ಕೆಲವು ಋತುಗಳಲ್ಲಿ ಕಡಲಾಳದಲ್ಲಿ ಇರುತ್ತವಾದರೂ ಇವುಗಳಿಗೆ ದಂಡೆಯ ಆಳವಿಲ್ಲದ ನೀರೇ ಇರಲು ಇಷ್ಟ ಹಗಲು-ರಾತ್ರಿ ಎರಡೂ ಚಟುವಟಿಕೆ ತೋರುತ್ತವೆ. ಇವು ಯಾವಾಗ ವಿಶ್ರಾಂತಿ ಪಡೆಯುತ್ತವೆ ಅಥವಾ ಪಡೆಯುವುದಿಲ್ಲ ತಿಳಿಯದು. ಎಚ್ಚರವಾಗಿದ್ದ ಕಾಲದಲ್ಲಿ ಸದಾ ಈಜುತ್ತಿರುತ್ತವೆ. ಒಂದು ನೂರು ಮೀಟರ್ ಆಳದ ವರೆಗೆ ಮುಳುಗಬಲ್ಲವು ಮತ್ತು ಮೇಲೆ ಬಾರದೆ ಐದು ಗಂಟೆಗಳವರೆಗೆ ಮುಳುಗಿ ಇರಬಲ್ಲವು. ಬಲೆಗಳಲ್ಲಿ ಬರುವ ಇವುಗಳನ್ನು ಬೆಸ್ತರು ಬರಿಗೈಗಳಿಂದಲೇ ತೆಗೆದು ಎಸೆಯುತ್ತಾರೆ. ಇವುಗಳಿಗೆ ಅವರು ಹೆದರುವುದಿಲ್ಲ. ಮನುಷ್ಯನನ್ನು ಕಚ್ಚುವ ಅಭ್ಯಾಸವಿಲ್ಲ. ಕಚ್ಚಿದರೂ ಹೆಚ್ಚು ಪ್ರಭಾವ ಬೀರುವುದಿಲ್ಲ. ಇದರ ವಿಷದಿಂದ ಸತ್ತವರ ಸಂಖ್ಯೆ ತುಂಬಾ ಕಡಿಮೆ. ಬಿಸಿಲು ಕಾಯಿಸುವುದು ಇವುಗಳಿಗೆ ಇಷ್ಟವಾದ ಹವ್ಯಾಸ.

ಇದರ ವಿಷವಾದರೂ ನಾಗರ ಹಾವಿನ ವಿಷಕ್ಕಿಂತ ೪-೫ ಪಟ್ಟು ಹೆಚ್ಚು ಅಪಾಯಕಾರಿ. ಆದರೆ ಈ ಹಾವುಗಳ ಹಲ್ಲುಗಳು ವಿಷವನ್ನು ಪರಿಣಾಮಕಾರಿಯಾಗಿ ಸೂಸಲು ಸಮರ್ಥವಾಗಿಲ್ಲ. ಈ ಹಾವುಗಳ ವಿಷದ ಉಪಶಮನಕಾರಿ ಔಷಧ ಕೇವಲ ಜಪಾನ್‌ಮತ್ತು ಆಸ್ಟ್ರೇಲಿಯಾಗಳಲ್ಲಿ ಮಾತ್ರ ತಯಾರಾಗುತ್ತದೆ.

ಇವು ಉಭಯಚರಿ. ನೀರಿನಲ್ಲಿ ಸುಲಭವಾಗಿ ವಾಸಿಸಿದಂತೆ ನೆಲದ ಮೇಲೂ ವಾಸಿಸಬಲ್ಲವು.

—- 

ಗಣ : ಒಫಿಡಿಯ
ಕುಟುಂಬ : ವೈಪರಿಡೀ (Viperidae)
ಉದಾ : ಮಂಡಲದ ಹಾವು (Russel’s Viper)
ಶಾಸ್ತ್ರೀಯ ನಾಮ : ವೈಪರ ರಸ್ಸೆಲ್ಲಿ (Vipera russelli)

101_69_PP_KUH

ವಿತರಣೆ : ಸಮುದ್ರ ಮಟ್ಟದಿಂದ ೩೦೦೦ ಮೀಟರ್ ಎತ್ತರದವರೆಗಿನ ಪ್ರದೇಶದ ಬಯಲು ಸೀಮೆ ಮತ್ತು ಗುಡ್ಡಗಾಡಿನಲ್ಲಿ ದೊರಕುತ್ತದೆ. ಸುತ್ತಲ ಪರಿಸರದೊಂದಿಗೆ ತನ್ನ ಚರ್ಮದ ಬಣ್ಣ ಮುಳುಗಿ ಮರೆಯಾಗುವ ಬಂಡೆಗಲ್ಲುಗಳು ಮತ್ತು ಪೊದರುಗಳಿರುವೆಡೆಯಲ್ಲಿ ಇದು ಆಯ್ದು ವಾಸಿಸುತ್ತದೆ. ಇಲಿ ಬಿಲಗಳು, ಹುತ್ತಗಳು ಕಲ್ಲುಗಳ ಕೆಳಗೆ, ಮುಳ್ಳುಗಿಡಗಳು, ಕತ್ತಾಳೆ ಮೆಳೆಗಳು ಇದರ ಸ್ವಾಭಾವಿಕ ವಾಸಸ್ಥಾನ. ಕೃಷಿ ಭೂಮಿಯ ನೆರೆಯ ಪೊದರುಗಳಲ್ಲಿಯೂ ಕಾಣಬರುತ್ತವೆ.

ಗಾತ್ರ : ೧.೫ ಮೀಟರ್ ಉದ್ದ ದೊರಕಿರುವ ಗರಿಷ್ಠ ಮಿತಿಯ ಹಾವು ೧.೮ ಮೀಟರ್ ಇದ್ದಿತು. ಗಂಡು ಹಾವುಗಳು ಹೆಣ್ಣು ಹಾವುಗಳಿಗಿಂತ ಹೆಚ್ಚು ಉದ್ದ. ಇವುಗಳ ದೇಹ ೧೫೦ ಮಿ. ಮೀ ದಪ್ಪ ವಿರುತ್ತದೆ.

ಆಹಾರ : ಸಣ್ಣ ಸಸ್ತಿನಿಗಳಾದ ಇಲಿಗಳು, ಓತಿ, ಹಲ್ಲಿಗಳು, ನೆಲದ ಮೇಲಿನ ಏಡಿಗಳು ಚೇಳುಗಳು ಮತ್ತಿತರ ಸಂಧಿಪದಿಗಳು ಇದರ ಆಹಾರ. ಇವು ಸ್ವಜಾತಿ ಭಕ್ಷಕಗಳು. ಕರ್ನಾಟಕದಲ್ಲಿ ಇವು ಮುಖ್ಯವಾಗಿ ಬಯಲಿಲಿಗಳನ್ನು ತಿಂದು ಬದುಕುತ್ತವೆ.

ಲಕ್ಷಣಗಳು : ಉಳಿದೆಲ್ಲ ಜಾತಿಯ ಹಾವುಗಳ ತಲೆಯ ಮೇಲೆ ಪ್ರಶಲ್ಕಗಳ ಹೊದಿಕೆ ಇದ್ದರೆ ಮಂಡಲದ ಹಾವಿನ ತಲೆಯ ಮೇಲೆ ಸಣ್ಣ ಹುರುಪೆಗಳ ಹೊದಿಕೆ ಇರುತ್ತದೆ. ಇದು ಈ ಜಾತಿಯ ಹಾವುಗಳ ವಿಶೇಷ ಲಕ್ಷಣ.

ದೇಹದ ಮೇಲೆ ಕಂದು ಬಣ್ಣದ ಅಂಡಬ್ರಂಶ ಮಚ್ಚೆಗಳಿವೆ. ಇವು ಮೂರು ಸಾಲಿನಲ್ಲಿ ದೇಹದ ಉದ್ದಕ್ಕೂ ಹರಡಿವೆ. ಒಟ್ಟು ೨೭ ಮಚ್ಚೆಗಳಿರುತ್ತವೆ. ತಲೆ, ಬಾಲ, ಬೆನ್ನು ಮತ್ತು ಪಾರ್ಶ್ವ ಭಾಗಗಳಲ್ಲಿ ೩ ಸಾಲುಗಳಲ್ಲಿ ಹರಡಿವೆ. ಬೆನ್ನಿನ ಮೇಲೆ ೩೭ ಹುರುಪೆ ಸಾಲುಗಳಿವೆ, ೮೪ ಹೊಟ್ಟೆ ಭಾಗದ ಹುರುಪೆಗಳಿವೆ. ಇವುಗಳ ಮೇಲೆ ಕಪ್ಪು ಗುರುತುಗಳಿವೆ.

ದೇಹದ ಬಣ್ಣ ಕಂದು ಬಣ್ಣವಾದರೂ ಬಿಳಿಯ ಅಂಚುಗಳಿರುವ ಕಪ್ಪು ಗುರುತುಗಳಿವೆ.

ತಲೆ ತ್ರಿಕೋನಾಕಾರವಾಗಿದೆ. ಕೋನ ಆಕಾರದ ಚೂಪು ಮೂತಿ, ಪ್ರಧಾನವಾಗಿ ಕಾಣುವ ನಾಸಿಕಗಳಿವೆ. ಕಣ್ಣುಗಳ ಸುತ್ತ ಬೆಳಿಯ ಅಂಚುಗಳಿವೆ.

ಸಂತಾನಾಭಿವೃದ್ಧಿ : ಜುಲೈ-ಅಗಸ್ಟ್ ತಿಂಗಳುಗಳಲ್ಲಿ ಹೆಣ್ಣು-ಗಂಡುಗಳು ಕೂಡುತ್ತವೆ. ಇವು ಹಾವುಗಳಲ್ಲಿ ನಿಜವಾಗಿ ಜರಾಯುಜಗಳು. ಮುಂದಿನ ಮೇ -ನವೆಂಬರ್ ಕಾಲದಲ್ಲಿ ಹುಟ್ಟುತ್ತವೆ. ಒಂದು ಹೆಣ್ಣು ಮಂಡಲದ ಹಾವು ೩ ದಿನಗಳಲ್ಲಿ ೯೨ ಮರಿಗಳನ್ನು ಹಾಕಿದ ದಾಖಲೆ ಇದೆ. ವರ್ಷವಿಡೀ ಗರ್ಭಕಟ್ಟಿದ ಹೆಣ್ಣು ಹಾವುಗಳು ದೊರಕುತ್ತವೆ. ಗರ್ಭಾವಸ್ಥೆ ಕಾಲ ೬ ತಿಂಗಳು. ಈ ಜಾತಿ ಬಹಳ ಸಮೃದ್ಧ ಸಂತಾನ ಭಾಗ್ಯದ ಹಾವು. ಸಾಮಾನ್ಯವಾಗಿ ೩೦ ರಿಂದ ೪೦ ಮರಿಗಳನ್ನು ಹಾಕುತ್ತವೆ. ಬಂಧನದಲ್ಲಿ ೪ ವರ್ಷಗಳು ಬದುಕಿದ ನಿದರ್ಶನಗಳಿವೆ.

ಸ್ವಭಾವ : ಕೇದಿಗೆ ವನ, ಕತ್ತಾಳೆ ಮೆಳೆಗಳು ಇದರ ಮೆಚ್ಚಿನ ಆವಾಸ ಸ್ಥಾನಗಳು ಸಾಮಾನ್ಯವಾಗಿ ಸೋಮಾರಿಗಳು. ಕೆಣಕಿದಾಗ ಕ್ರೂರ ರೀತಿಯಲ್ಲಿ ಕಚ್ಚುತ್ತವೆ. ಮೊದಲು ಬುಸುಗುಟ್ಟಿ ಹೆದರಿಸುತ್ತವೆ. ಉಳಿದೆಲ್ಲ ಹಾವು ಜಾತಿಗಳಿಗಿಂತ ಜೋರಾಗಿ ಬುಸುಗುಟ್ಟುತ್ತವೆ. ಕಚ್ಚುವ ಕಾಲದಲ್ಲಿ ಕಚ್ಚುವವರ ಮೇಲೆರಗುತ್ತವೆ. ಇವಕ್ಕೆ ೧೦. ಮಿ. ಮೀ. ಉದ್ದದ ವಿಷದಂತಗಳಿವೆ. ಇದರಿಂದ ಆಳವಾದ ಗಾಯ ಮಾಡಿ ವಿಷಸೂಸುತ್ತವೆ.

ನಿಶಾಚರಿ. ಹಗಲಿನಲ್ಲಿ ಶಾಖ ಹೆಚ್ಚಾದಾಗ ಕಲ್ಲು ಪೊಟರೆಗಳು, ತರಗೆಲೆಗಳ ರಾಶಿ, ಮುಳ್ಳು ಮೆಳೆಗಳು, ಕತ್ತಾಳೆ ಮೆಳೆ ಮುಂತಾದ ಎಡೆಗಳಲ್ಲಿ ಆಡಗಿಕೊಳ್ಳುತ್ತವೆ.

ಇವುಗಳ ಚಲನೆ ನಿಧಾನ. ಇವು ಮರಗಿಡಗಳನ್ನು ಹತ್ತಬಲ್ಲವು. ವಿಶ್ರಮಿಸಿಕೊಳ್ಳುವಾಗ ದೇಹವನ್ನು ಸುರಳಿಯಾಕಾರದಲ್ಲಿ ಸುತ್ತಿ ತಲೆಯನ್ನು ನಡುವೆ ಇರಿಸಿಕೊಂಡಿರುತ್ತವೆ. ಸ್ಪಲ್ಪ ಗಲಭೆಯಾದರೂ ಸಾಕು ಏನೆಂದು ಪರೀಕ್ಷಿಸಲು ಚುರುಕಾಗಿ ನಾಲಿಗೆ ಚಲಿಸುತ್ತದೆ.

ಇದರ ವಿಷ ಪಾರದರ್ಶಕ ಮತ್ತು ಅಮ್ಲೀಯ ಗುಣ ಉಳ್ಳದ್ದು ಇದರ ವಿಷ ರಕ್ತ ನಾಳಗಳ ಮೇಲೆ ಪ್ರಭಾವ ಬೀರಿ ರಕ್ತವನ್ನು ನಾಶಪಡಿಸುತ್ತದೆ. ರಕ್ತ ಚಲನೆ ನಿಲ್ಲುವುದು. ರಕ್ತದ ಒತ್ತಡ ಕಡಿಮೆ ಯಾಗುವುದನ್ನು, ಹೃದಯ ದುರ್ಬಲವಾಗುತ್ತದೆ. ಕೆಂಪು ರಕ್ತ ಕಣಗಳು ನಾಶವಾಗುವುವು. ರಕ್ತ ಹೆಪ್ಪುಗಟ್ಟುವ ಶಕ್ತಿ ಕಡಿಮೆಯಾಗುವುದು. ರಕ್ತ ನಾಳಗಳ ಭಿತ್ತಿ ಹಾಳಾಗುವುದು. ದೇಹದ ಒಳಭಾಗದಲ್ಲಿಯೆ ಅಪಾರ ರಕ್ತಸ್ರಾವವಾಗುವುದು. ನೋವು, ಉರಿ, ವಾಂತಿ, ಬಾಯಲ್ಲಿ ರಕ್ತ ಒಸರುವುದು ಮುಂತಾದ ಲಕ್ಷಣಗಳು ಕಾಣಿಸಿಕೊಂಡು ಅಂತಿಮವಾಗಿ ಸಾವು ಬರುತ್ತದೆ.

—-

ಗಣ : ಒಫಿಡಿಯ
ಕುಟುಂಬ : ಹೋಮಲೋಪ್ಸಿಡೀ
(Homolopsidae)
ಉದಾ : ಪಟ್ಟಿ ಕಟ್ಟು ಹಾವು (Banded Krait)
ಶಾಸ್ತ್ರಿಯ ನಾಮ : ಬಂಗಾರಸ್ ಫ್ಯಾಸಿಯೇಟಸ್ (Bangarus Fasciatus)

102_69_PP_KUH

ವಿತರಣೆ : ಸಾಮಾನ್ಯವಾಗಿ ಬಯಲು ಪ್ರದೇಶ, ಕುರುಚಲು ಕಾಡು ಇದರ ಸ್ವಾಭಾವಿಕ ನೆಲೆಗಳಾದರೂ ಕೆಲವೊಮ್ಮೆ ಜನವಸತಿದ ಇರುವ ಜಾಗಗಳಿಗೂ ಬರುತ್ತದೆ. ಕರ್ನಾಟಕದಲ್ಲಿ ವಿಶೇಷವಲ್ಲವಾದರೂ ನೆರೆಯ ಆಂಧ್ರ ಪ್ರದೇಶಗಳಲ್ಲಿ ಸಾಮಾನ್ಯ ಮತ್ತು ಪಕ್ಕದ ಜಿಲ್ಲೆಗಳಾದ ಕೋಲರ ಮತ್ತು ಚಿತ್ರದುರ್ಗಗಳಲ್ಲಿ ಇವೆ ಎಂದು ತಿಳಿದುಬರುತ್ತದೆ.

ಗಾತ್ರ : ೧.೫ ರಿಂದ ೨.೨೫ ಮೀಟರ‍್ ಉದ್ದ.

ಆಹಾರ : ಇತರ ಹಾವುಗಳು, ಹಾವು ಮೊಟ್ಟೆಗಳು, ಹಾವುರಾಣಿ, ಸಾಮಾನ್ಯವಾಗಿ ಇಲಿಗಳು ಇದರ ಆಹಾರ. ಆಪರೂಪವಾಗಿ ಮೀನುಗಳನ್ನು ತಿನ್ನಬಹುದು. ಆಹಾರ ಜೀವಿಯನ್ನು ತಲೆ ಮುಂದಾಗಿ ನುಂಗುತ್ತದೆ. ಇದು ನುಂಗುತ್ತಿರುವ ಆಹಾರ ಜೀವಿ ಅಸಾಮಾನ್ಯವಾಗಿ ಇದ್ದವಾಗಿದ್ದರೆ. ಕೆಲವು ಗಂಟೆಗಳು, ಅಥವಾ ವಿನಗಳ ಕಾಲ ನುಂಗುತ್ತಿರುವ ಪ್ರಾಣಿಯ ಕೆಲವು ಭಾಗ ಈ ಹಾವಿನ ಬಾಯಿಂದ ಹೊರಕ್ಕೆ ನೇತಾಡುವುದನ್ನು ಕಾಣಬಹುದು.

ಲಕ್ಷಣಗಳು : ದೇಹದ ಉದ್ದಕ್ಕೂ ಪರ್ಯಾಯವಾಗಿ ಹರಡಿರುವ ಕಪ್ಪು ಮತ್ತು ಬಂಗಾರದ ಪಟ್ಟಿಗಳು ಇದರ ವಿಶಿಷ್ಟ ಲಕ್ಷಣ. ಅಗಲವಾಗಿ ಚಪ್ಪಟೆಯಾದ ತಲೆ ಮೋಟು ಮೂತಿ, ಕಪ್ಪು ಕಣ್ಣುಗಳು, ಪ್ರತ್ಯೇಕವಾಗಿ ಕಾಣುವ ಕತ್ತು, ನಯವಾದ ದೇಹ ಈ ಹಾವಿನ ವಿಶೇಷ ಲಕ್ಷಣಗಳು. ಬೆನ್ನಿನ ಮೇಲೆ ಸ್ಪಷ್ಟ ಏಣಿದೆ. ಮೋಟು ಬಾಲ ಮತ್ತು ನೋಡುವುದಕ್ಕೆ ಬೆರಳಿನಂತಿದೆ.

ದೇಹದ ಮೇಲೆ ಗಿಣಿ ಹಳದಿ ಬಣ್ಣ ಮತ್ತು ಕಪ್ಪು ಪಟ್ಟಿಗಳು ಒಂದಾದ ಮೇಲೊಂದರಂತೆ ಹರಡಿವೆ. ಪಟ್ಟಿಗಳು ದೇಹದ ಸುತ್ತಲೂ ಹರಡಿವೆ. ತಲೆಯ ಮೇಲೆ ಹಳದಿಯ ಗುರುತಿದೆ. ಇದರ ಬಾಹುಗಳು ಹಿಂದಕ್ಕೆ ಬಾಗಿವೆ. ತುಟಿಗಳು ಕೆನ್ನೆಭಾಗ, ನಾಸಿಕ, ಕಣ್ಣು ಭಾಗದ ನಡುವೆ ಮತ್ತು ಕತ್ತು ಹಳದಿ ಬಣ್ಣವಾಗಿವೆ.

ಸಂತಾನಾಭಿವೃದ್ಧಿ : ಈ ಹಾವಿನ ಸಂತಾನೋತ್ಪತ್ತಿ ಚಟುವಟಿಕೆಯ ವಿಷಯ ಹೆಚ್ಚು ವಿಳಿಯದು. ದೊಗರುಗಳಲ್ಲಿ ಮೊಟ್ಟೆ ಇಟ್ಟು ತಾಯಿ ಹಾವು ಮೊಟ್ಟೆಗಳನ್ನು ಮುಚ್ಚುವಂತೆ ತನ್ನ ದೇಹವನ್ನು ಸುರುಳಿ ಸುತ್ತಿಕೊಂಡು ಮಲಗಿ ಕಾವು ಕೊಡುವುದನ್ನು ಕಂಡ ವರದಿಗಳಿವೆ. ಮೇ ತಿಂಗಳ ಹೊತ್ತಿಗೆ ಮೊಟ್ಟೆಗಳು ಒಡೆದು ಮರಿಗಳು ಹೊರಬರುತ್ತವೆ.

ಸ್ವಭಾವ : ಇದು ವಿಷದ ಹಾವು. ಆದರೆ ಇದರ ವಿಷ ಸಾಮಾನ್ಯ ಕಟ್ಟು ಹಾವು ಮತ್ತು ನಾಗರ ಹವಿನ ವಿಷಕ್ಕಿಂತ ಕಡಿಮೆ ಉಗ್ರವಾದುದು. ಈ ಹಾವು ಕಡಿದುದರಿಂದ ಒಂದು ಎತ್ತು ಸತ್ತ ವರದಿ ಇದೆ.