ಗಣ : ಕೈರಾಪ್ಟೆರ
ಉದಾ : ಡಾಬ್
ಸನ್ರ ಉದ್ದ ನಾಲಿಗೆಯ ಹಣ್ಣು ಬಾವಲಿ (Dobson’s long tongued fruit bat)
ಶಾಸ್ತ್ರೀಯ ನಾಮ : ಇಯೊನೆಕ್ಟೆರಿಸ್ ಸ್ಪಿಲೆ (Eonyeteris Spelae)

ವಿತರಣೆ ಮತ್ತು ಆವಾಸ : ಉತ್ತರ ಕನ್ನಡ ಜಿಲ್ಲೆಯಲ್ಲಿ ದೊರಕುತ್ತದೆ.

ಗಾತ್ರ : ತಲೆ ಮತ್ತು ದೇಹ ೧೩೫ ಸೆಂ. ಮೀ. ಬಾಲ ೧೫ ಸೆಂ.ಮೀ. ಉದ್ದ.

ಆಹಾರ : ಫಲಾಹಾರಿ ಮತ್ತು ಹೂವಿನ ಮಧುವನ್ನು ಹೀರುತ್ತದೆ.

ಲಕ್ಷಣಗಳು : ಸಾಧಾರಣ ಗಾತ್ರದ ದುಂಡು ತುದಿಯ ಕಿವಿಗಳಿವೆ. ಬುಡದಲ್ಲಿ ಬಾಚಿಕೊಂಡ ಸಣ್ಣ ಪಾಲಿ ಇದೆ. ಹೆಬ್ಬೆರಳು ಮೋಟು, ಇದರ ತುದಿಯ ಭಾಗ ರೆಕ್ಕೆಯಲ್ಲಿ ಸೇರಿದೆ. ತುಪ್ಪುಳು ಸಣ್ಣ ಮತ್ತು ತೆಳುವು. ಗುದದ್ವಾರದ ಇಕ್ಕೆಡೆಗಳಲ್ಲಿಯೂ ಹಿಂಭಾಗದಲ್ಲಿ ಚರ್ಮದ ಕೆಳಗಿನ ಒಂದು ಗ್ರಂಥಿ ಕಾಯವಿದೆ. ಬಾಯಿಂದ ಹೊರಕ್ಕೆ ಚಾಚಬಹುದಾದ ನಾಲಿಗೆಯಿದೆ. ದೇಹವು ಕಡು ಕಂದು ಬಣ್ಣ ತಳಭಾಗ ಸ್ವಲ್ಪ ತಿಳಿಯಾಗಿರಬಹುದು.

ಸಂತಾನಾಭಿವೃದ್ಧಿ : ವಿವರಗಳು ತಿಳಿದಿಲ್ಲ.

ಸ್ವಭಾವ : ಸಾಮಾನ್ಯವಾಗಿ ತೋಟ ಮತ್ತು ಗುಡ್ಡಗಳ ಗುಹೆಗಳಲ್ಲಿ ವಿರಮಿಸುತ್ತದೆ. ಹೆಚ್ಚು ವಿಷಯಗಳು ತಿಳಿಯದು.

—-

ಗಣ : ಕೈರಾಪ್ಟೆರ
ಉದಾ : ಪತ್ರ ನಾಸಿಕ ಬಾವಲಿ (Leaf nosed bat)
ಶಾಸ್ತ್ರೀಯ ನಾಮ : ಹಿಪ್ಪೊಸಿಡೆರಸ್ ಸ್ಪಿ ರೊರಿಸ್ (Hipposiderus Speroris)

ವಿತರಣೆ ಮತ್ತು ಆವಾಸ : ಕರ್ನಾಟಕದಲ್ಲಿ ಧಾರವಾಡ, ದಕ್ಷಿಣ ಮತ್ತು ಉತ್ತರ ಕನ್ನಡ ಜಿಲ್ಲೆ, ಮೈಸೂರು, ಕೊಡಗು, ಹಂಪಿ, ಪಟ್ಟದಕಲ್ಲು, ಬಾದಾಮಿ, ಗದಗ, ಗೇರುಸೊಪ್ಪೆ, ಚಿತ್ರದುರ್ಗ ಜಿಲ್ಲೆಗಳಲ್ಲಿ ಕಂಡುಬರುತ್ತದೆ.

ಗಾತ್ರ : ತಲೆ ಮತ್ತು ದೇಹ ೭೦ ಸೆಂ.ಮೀ. ಬಾಲ ೨೧ ಸೆಂ.ಮೀ. ಉದ್ದ.

ಆಹಾರ : ಕೀಟಾಹಾರಿ

ಲಕ್ಷಣಗಳು : ಕಿವಿಗಳು ಅಗಲವಾಗಿ ಚೂಪಾಗಿವೆ ಮತ್ತು ಹೊರ ಅಂಚುಗಳು ನಿಮ್ನವಾಗಿವೆ. ಮಧ್ಯಭಾಗದಲ್ಲಿ ಒಂದು ಮುಳ್ಳಿನ ರೀತಿಯ ರಚನೆಯಿದೆ. ಬಾಲವು ರೆಕ್ಕೆಯಲ್ಲಿ ಸೇರಿದ್ದರೂ ಅದರ ತುದಿಯು ಹೊರಕ್ಕೆ ಚಾಚಿಕೊಂಡಿದೆ. ದೇಹದ ಮೇಲ್ಭಾಗದ ತುಪ್ಪುಳು ಕಂದು, ಬಂಗಾರ ಕಂದಿನಿಂದ ಮಾಸಲು ಬಣ್ಣದವರೆಗೂ ಬದಲಾಗುತ್ತದೆ. ಹೊಟ್ಟೆಯ ಭಾಗ ಬಿಳುಪು.

ನಾಸಿಕ ಪತ್ರವು ಚಚ್ಚೌಕವಾಗಿದೆ, ಮತ್ತು ರಚನೆಯಲ್ಲಿ ಜಟಿಲವಾಗಿದೆ. ಇದರಲ್ಲಿ ೩ ಭಾಗಗಳಿವೆ. ಅಗ್ರ ಭಾಗವು ಕುದುರೆಯ ಲಾಳಾಕಾರ ಅಥವಾ ಅರೆ ವೃತ್ತಾಕಾರದಲ್ಲಿದೆ, ಮೂತಿಯ ಮೇಲೆ ಚಪ್ಪಟೆಯಾಗಿ ಒರಗಿದೆ. ಇಲ್ಲಿ ಕಚ್ಚು ಇಲ್ಲ. ಈ ಲಾಳಾಕಾರದ ನಡುವೆ ನಾಸಿಕಗಳು ತೆರೆಯುತ್ತವೆ. ನಾಸಿಕ ರಂಧ್ರಗಳು ಪಾರ್ಶ್ವವಾಗಿ ಅಥವಾ ಪೂರ್ಣವಾಗಿ ಎಲೆಯಾಕಾರದ ರಚನೆಗಳಿಂದ ಮುಚ್ಚಲ್ಪಟ್ಟಿವೆ. ಎರಡು ನಾಸಿಕಗಳ ನಡುವೆ ಒಂದು ಏಣಿದೆ. ಲಾಳಾಕಾರದ ರಚನೆಯ ಸುತ್ತ ಅನುಷಂಗಿಕ ಪತ್ರಗಳಿದ್ದು ಕುಚ್ಚಿನಂತಾಗಿರುತ್ತದೆ. ನಾಸಿಕ ಪತ್ರದ ಹಿಂಭಾಗದಲ್ಲಿ ಸಾಮಾನ್ಯವಾಗಿ ಗಂಡುಗಳಲ್ಲಿ ಒಂದು ದೊಡ್ಡ ರಂಧ್ರವಿದೆ. ಇದು ಒಂದು ಗ್ರಂಥಿಯಂತಿರುವ ಸಂಚಿಯ ತೆರಪು, ಈ ತೆರಪಿನ ಪಕ್ಕಗಳಲ್ಲಿ ಮತ್ತು ಕಣ್ಣುಗಳ ಮೇಲ್ಭಾಗದಲ್ಲಿ ಗ್ರಂಥಿಯಂತಹ ರಚನೆಗಳಿವೆ. ಇವುಗಳಲ್ಲಿ ಕೆಲವೊಮ್ಮೆ ರಂಧ್ರಗಳಿರಬಹುದು. ದಂತ ಸೂತ್ರ ೨, ೧, ೨, ೩ / ೩, ೧, ೨, ೩.

ಸ್ವಭಾವ : ಪಾಳು ಬಿದ್ದ ಮನೆಗಳು, ಗುಹೆಗಳು, ಬಾವಿಗಳು, ಸಮಾಧಿಗಳಲ್ಲಿ ಗುಂಪುಗಳಲ್ಲಿ ವಾಸಿಸುತ್ತವೆ. ರಾತ್ರಿಯ ಹೊತ್ತು ಆಹಾರದ ಬೇಟೆಗೆ ಹೊರಡುತ್ತವೆ.

—-

ಗಣ : ಕೈರಾಪ್ಟೆರ
ಉದಾ : ಬಣ್ಣಾಲಂಕೃತ (Painted bat)
ಶಾಸ್ತ್ರೀಯ ನಾಮ : ಕೆರಿವೊಲ ಪಿಕ್ಟ್ (Kerivoula picta)

425_69_PP_KUH

ವಿತರಣೆ ಮತ್ತು ಆವಾಸ : ಕರ್ನಾಟಕವೂ ಸೇರಿದಂತೆ ಭಾರತದ ದಕ್ಷಿಣ ದ್ವೀಪಕಲ್ಪಗಳಲ್ಲಿ ಕಂಡು ಬರುತ್ತವೆ.

ಗಾತ್ರ : ತಲೆ ಮತ್ತು ದೇಹ ೩.೮ ಸೆಂ.ಮೀ. –ಬಾಲ ೪.೩ ಸೆಂ.ಮೀ. ಉದ್ದ

ಆಹಾರ : ಕೀಟಾಹಾರಿ

ಲಕ್ಷಣಗಳು : ಪ್ರಕಾಶಕ ಕಿತ್ತಳೆ ಬಣ್ಣ, ಮಬ್ಬು ಹಳದಿ ದೇಹದ ಬಣ್ಣ ಗಮನಾರ್ಹ. ಕಿತ್ತಲೆ ಬಣ್ಣವು ಬೆರಳುಗಳ ಮೂಲಕ ರೆಕ್ಕೆಗಳಿಗೂ ಮತ್ತು ಪಕ್ಕೆಗಳಿಗೂ ಹರಡಿದೆ. ರೆಕ್ಕೆಗಳು ತೆಳು ಪೊರೆಯಂತಿದ್ದು ಕಪ್ಪು ಮತ್ತು ಕಿತ್ತಲೆ ಬಣ್ಣದ ಚುಕ್ಕೆಗಳಿವೆ. ಎರಡು ತೊಡೆಗಳ ನಡುವಿನ ರೆಕ್ಕೆ ಭಾಗವು ಪ್ರಕಾಶಕ ಕಿತ್ತಳೆ ಬಣ್ಣವಾಗಿದೆ. ಕಿವಿಗಳು ಲಾಲಿಕೆಯಾಕಾರದಲ್ಲಿವೆ. ಟ್ರ್ಯಾಗಸ್‌ಸಂವೇದನಾಂಗವು ನೀಳವಾಗಿ ಕಿರಿದಾಗಿ ಮತ್ತು ಪಾರದರ್ಶಕವಾಗಿದೆ.

ಸಂತಾನಾಭಿವೃದ್ಧಿ : ಏನೂ ವಿಷಯ ತಿಳಿದಿಲ್ಲ.

ಸ್ವಭಾವ : ಇದು ಪ್ರಕಾಶಕ ವರ್ಣವೈವಿಧ್ಯ ಪ್ರಾಣಿಯಾದರೂ ಕಾಣಿಸಿಕೊಳ್ಳವುದು ಅಪರೂಪ. ಏಕೆಂದರೆ ಇದರ ಬಣ್ಣವು ಇದು ವಿರಮಿಸುವ ಒಣಗಿದ ಎಲೆಗಳ ನಡುವೆ ಮುಚ್ಚಿ ಹೋಗುತ್ತದೆ. ಇವು ಒಣಗಿದ ಎಲೆಗಳ ನಡುವೆ ಒಂಟಿಯಾಗಿ ಅಥವಾ ಜೊತೆಯಾಗಿ ವಿರಮಿಸುತ್ತವೆ. ಇದರ ಹಾರುವಿಕೆ ಪತಂಗದ ಹಾರುವಿಕೆಯಂತಿದೆ.

—- 

ಗಣ : ಕೈರಾಪ್ಟೆರ
ಉದಾ : ಮೂಡಣ ಬೃಹತ್
ಕುದರೆ ಲಾಳ ಬಾವಲಿ (Great eastern horseshoe bat)
ಶಾಸ್ತ್ರೀಯ ನಾಮ : ರೈನೊಲೋಫಸ್‌ಲುಕ್ಟಸ್‌(Rhinolophus luctus)

426_69_PP_KUH

ವಿತರಣೆ ಮತ್ತು ಆವಾಸ : ಕರ್ನಾಟಕವೂ ಸೇರಿದಂತೆ ಭಾರತದ ದಕ್ಷಿಣ ದ್ವೀಪ ಕಲ್ಪಗಳಲ್ಲಿ ಕಂಡುಬರುತ್ತದೆ. ಪಶ್ಚಿಮಘಟ್ಟಗಳಲ್ಲಿಯೂ ಕಾಣಬರುತ್ತದೆ.

ಗಾತ್ರ : ತಲೆ ಮತ್ತು ದೇಹ ೧೧ ಸೆಂ.ಮೀ ಬಾಲ ೧ ಸೆಂ.ಮೀ ಉದ್ದ.

ಆಹಾರ : ಕೀಟಾಹಾರಿ

ಲಕ್ಷಣಗಳು : ಈ ಜಾತಿಯಲ್ಲಿ ಇದೇ ತುಂಬಾ ದೊಡ್ಡದಾದ ಬಾವಲಿ. ದೇಹದ ಮೇಲಿರುವ ತುಪ್ಪುಳು ಉದ್ದವಾಗಿ ಉಣ್ಣೆಯಂತೆ ಗುಂಗುರುಗುಂಗುರಾಗಿದೆ. ದೇಹ ಕಡು ಕಪ್ಪು ಬಣ್ಣ ಕೂದಲಿನ ತುದಿ ಬೂದು ಬಣ್ಣ. ಅಪರೂಪವಾಗಿ ಕೆಂಪು ಕಂದು ಇರಬಹುದು. ಕಿವಿಗಳೂ ತುಂಬಾ ದೊಡ್ಡವು. ತುದಿ ಚೂಪಾಗಿದೆ ಮತ್ತು ತುದಿಯು ನಿಮ್ನ ಮಧ್ಯ ಮತ್ತು ಗರಗಸದಂತಿದೆ. ಒಂದು ಆಳವಾದ ಕಚ್ಚು ಕಿವಿ ಅಲೆಯನ್ನು ಟ್ರ್ಯಾಗಸ್‌ನಿಂದ ಬೇರ್ಪಡಿಸುತ್ತದೆ. ಮೂಗಿನ ಬಳಿ ಎಲೆಯಂತಿರುವ ಕುದುರೆ ಲಾಳಾಕಾರದ ರಚನೆಯೊಂದು ತುಟಿಯ ಮೇಲ್ಗಡೆ ಚಾಚಿಕೊಂಡಿದೆ. ನಡು ಭಾಗದಲ್ಲಿ ಇದು ಕತ್ತರಿಸಿದಂತೆ ಕಾಣುತ್ತದೆ. ಕೆಳತುಟಿಯ ಮಧ್ಯದಲ್ಲಿ ಒಂದು ಜಾಡಿದೆ. ಬಾಲವು ವಿಸ್ತಾರವಾದ ತೊಡೆಗಳ ಮಧ್ಯದ ರೆಕ್ಕೆ ಪಟಲದಲ್ಲಿ ಸೇರಿದೆ.

ರೈನೊಲೋಫಸ್‌ : ನಾಸಿಕ ಪತ್ರವು ದೊಡ್ಡದು ಮತ್ತು ಮಾದರಿ ಆಕಾರವನ್ನು ಹೊಂದಿದೆ. ಇದರಲ್ಲಿ ಅಗ್ರ, ಮಧ್ಯ ಮತ್ತು ಪಶ್ಚ ಈ ಮೂರು ಭಾಗಗಳು ಚೆನ್ನಾಗಿ ಬೆಳೆದಿವೆ. ಅಗ್ರ ಭಾಗವು ಕುದುರೆಯ ಲಾಳಾಕಾರದಲ್ಲಿದೆ ಮತ್ತು ಅದರ ಮುಂತುದಿಯಲ್ಲಿ ಒಂದು ಕಚ್ಚು ಇದೆ. ಈ ಲಾಳಾಕಾರದ ರಚನೆಯ ಮೂತಿಯ ಮೆಲೆ ಚಪ್ಪಟೆಯಾಗಿ ಒರಗಿದೆ. ಈ ಲಾಳಾಕಾರದ ರಚನೆಯು ಎರಡು ಭಾಗಗಳಲ್ಲಿ ನಾಸಿಕಗಳು ತೆರೆಯುತ್ತವೆ. ರೆಕ್ಕೆಗಳು ತುಂಬಾ ದೊಡ್ಡವು. ದಂತಸೂತ್ರ ೨, ೧, ೨, ೩ / ೪, ೧, ೩, ೩

ಸಂತಾನಾಭಿವೃದ್ಧಿ : ಹೆಚ್ಚು ತಿಳಿಯದು. ಪಶ್ಚಿಮ ಘಟ್ಟದ ಬಾವಲಿಗಳಲ್ಲಿ ಮರಿಯೊಂದಿಗಿನ ಹೆಣ್ಣುಗಳು ಮೇ ತಿಂಗಳಲ್ಲಿ ಕಂಡುಬರುತ್ತವೆ.

ಸ್ವಭಾವ : ಬಹಳ ಅಪರೂಪದ ಪ್ರಾಣಿ. ಪಾಳು ಬಿದ್ದ ಮನೆ ಮತ್ತು ಗುಹೆಗಳಲ್ಲಿ, ನಿರ್ಜನವಾದ ಪ್ರದೇಶದಲ್ಲಿ ಶ್ರೀರಂಗಪಟ್ಟಣದ ನೆಲಮಾಳಿಗೆಯ ಮದ್ದು ಮನೆಗಳಲ್ಲಿ ಒಂಟಿಯಾಗಿ ಅಥವಾ ಜೊತೆಯಾಗಿ ವಿರಮಿಸುತ್ತವೆ. ಸಂಜೆ ಬೇಗನೆ ಬೇಟೆಗೆ ಹೊರಡುತ್ತವೆ. ಮನೆಗಳು ಮತ್ತು ಮರಗಳ ಸುತ್ತ ನಿಶ್ಯಬ್ದವಾಗಿ ಹಾರಾಡುತ್ತವೆ. ೨೦ ಅಥವಾ ೩೦ ಅಡಿಗಳ ಮೇಲಕ್ಕೆ ಹಾರುವುದಿಲ್ಲ.

—- 

ಗಣ : ಕೈರಾಪ್ಟೆರ
ಉದಾ : ಸಾಮಾನ್ಯ ಹಳದಿ ಬಾವಲಿ (Common yellow bat)
ಶಾಸ್ತ್ರೀಯ ನಾಮ : ಸ್ಕೋಟೊಫಿಲಸ್‌ಹೀಥಿ (Scotophilus heathi)

427_69_PP_KUH

ವಿತರಣೆ ಮತ್ತು ಆವಾಸ : ಕರ್ನಾಟಕವೂ ಸೇರಿದಂತೆ ಭಾರತದ ದಕ್ಷಿಣ ದ್ವೀಪ ಕಲ್ಪಗಳಲ್ಲಿ ಕಂಡು ಬರುತ್ತವೆ.

ಗಾತ್ರ : ತಲೆ ಮತ್ತು ದೇಹ ೭-೬ ಸೆಂ.ಮೀ ಬಾಲ ೫ ಸೆಂ.ಮೀ ಉದ್ದ

ಆಹಾರ : ಕೀಟಾಹಾರಿ

ಲಕ್ಷಣಗಳು : ಇದರ ದೇಹದ ತಳಭಾಗದ ಗಿಣಿ ಹಳದಿ ಬಣ್ಣ ಬಹಳ ವಿಶಿಷ್ಟ. ಕೆಲವುಗಳಲ್ಲಿ ಕೆಂಪಾಗಿಯೂ ಇರಬಹುದು. ದೇಹದ ಮೇಲ್ಭಾಗ (ಬೆನ್ನಿನ) ಹಳದಿ ಕಂದು ಗಾತ್ರ ಮತ್ತು ಬಣ್ಣ ತುಂಬಾ ಬದಲಾಗುತ್ತದೆ.

ಸಂತಾನಾಭಿವೃದ್ಧಿ : ಜೂನ್‌-ಜುಲೈ ತಿಂಗಳಲ್ಲಿ ಈಯುತ್ತದೆ. ಒಂದು ಸೂಲದಲ್ಲಿ ೨ ಮರಿಗಳು ಹುಟ್ಟುತ್ತವೆ.

ಸ್ವಭಾವ : ಗುಂಪಿನಲ್ಲಿ ವಾಸಿಸುತ್ತವೆ. ಸಾಮಾನ್ಯವಾಗಿ ಮೇಲ್ಛಾವಣಿಯ ಬಿರುಕುಗಳು. ತೂತುಗಳು, ಸಂದುಗಳು, ತೊಲೆಗಳಿಗೆ ನೇತು ಬಿದ್ದು ಹಗಲನ್ನು ಕಳೆಯುತ್ತವೆ. ಬೇಟೆಯಾಡುವ ಸಮಯದಲ್ಲಿ ನಡು-ನಡುವೆ ತಮ್ಮ ಹಗಲಿನ ವಿರಾಮ, ವಿಶ್ರಾಂತಿ ಸ್ಥಾನಕ್ಕೆ ಹಿಂದುರುಗಿ ತಮ್ಮ ತಮ್ಮಲ್ಲಿಯೇ ಜೋರಾಗಿ ಶಬ್ದ ಮಾಡುತ್ತಾ ಜಗಳವಾಡುತ್ತವೆ. ಸಾಮಾನ್ಯವಾಗಿ ಸಂಜೆ ಬಹುಬೇಗನೆ ಆಹಾರಾನ್ವೇಷಣೆಗೆ ಹೊರಡುತ್ತವೆ ಮತ್ತು ಗುಂಪಿನಲ್ಲಿ ಬೇಟೆಯಾಡುತ್ತವೆ. ವಿಶೇಷವಾಗಿ ಹಾರುವ ಇರುವೆಗಳನ್ನು ಇಷ್ಟಪಡುವಂತೆ ಕಾಣುತ್ತದೆ.