ಸಂಗ್ಯಾ ಬಾಳ್ಯಾ
ಅಡರು : ಏರು, ಹತ್ತು
ಅಡ್ಡಾಡಾಕ : ತಿರುಗಾಡಲು
ಅನ್ನೇದ : ಅನ್ಯಾಯದ
ಅಬ್ರು : ಕಿಮ್ಮತ್ತು, ಗೌರವ
ಅರಿವಿ : ಬಟ್ಟೆ
ಅಲುಬತ್ತ : ಅವಶ್ಯ. ಅರ್ಜಂಟ
ಇಸಾ : ವಿಷ, ಕಹಿ
ಈಬತ್ತಿ : ವಿಭೂತಿ
ಉಳ್ವಾಕ : ಬದುಕುವುದಕ್ಕೆ
ಊಂಚ್ : ಊಂಚಿ, ಅತ್ಯುತ್ತಮ
ಏನಕೇನಾರ : ಉಂಚಿ, ಅತ್ಯುತ್ತಮ ಅಲ್ಲದ್ದು
ಒಗತಾನಾ : ಸಂಬಂಧ
ಒತ್ತರಾ : ತೀವ್ರ
ಕಕಲಾತಿ : ಅಂತಃಕರಣ
ಕಟೀನ : ಕಠಿಣ
ಕದ, ಕದ್ದ ತಟ್ಟಿ :ಬಾಗಿಲು, ಕದದ, ತಟ್ಟಿಯ
ಕಾಪಡ : ಬಟ್ಟೆ
ಕುಂಟಲ : ತಾನ ಹಾದರಕ್ಕೆ
ಅನುಕೂಲ : ಮಾಡಿ ಕೊಡುವದು.
ಕುಸಿ : ಖುಷಿ, ಸಂತೋಷ
ಕೂನಾ : ಗುರತ
ಖರೆ : ನಿಜ
ಖೋಡಿ : ಮೂರ್ಖ
ಗಡಾನ : ತೀವ್ರ
ಗಡಿಬಿಡಿ : ಗರಿಕೀಲಿ ಅವಸರ
ಗೊಡವಿ : ಚಿಂತಿ, ಉಸಾಬರಿ
ಚಾಲಿವರದ : ಆಗ್ರಹಪೂರ್ವಕ
ಚಿಲ್ಲರ : ಬಿಡಿಕಾಸು
ಚೈ : ಚೈನಿ
ಜರಾ : ಸ್ವಲ್ಪ
ಜೇರಾ : ಅಜಾರಿ, ಜಡ್ಡು,
ಟೀಪನಿ : ಸ್ಟೆಪನಿ
ತರ : ಯೋಗ್ಯ
ತಲಬ : ಎಲಿ ಅಡಿಕಿ ಹಾಕಿಕೊಳ್ಳುವುದು, ಇಲ್ಲವೆ ತಂಬಾಕು ಸೇದೋದು
ತಾಬಡ : ತೋಬಡ ತೀವ್ರ
ತಾರಕ್ಕಿ : ಚಿಕ್ಕೆ, ನಕ್ಷತ್ರ
ತಿಕಾಣಾ : ಠಿಕಾಣಾ, ಜಾಗೆ
ತೆಕ್ಕ : ಸರಿ ಸರಲವಲ್ಲದ
ದಗದ : ಕೆಲಸ
ದಿನಮೇಕ : ದಿನಮುಂದೆ ಹೋಗುವುದು
ದುಕ್ಕ : ದುಃಖ
ನಾಕಮಾತ : ನಾಲ್ಕು ಮಾತ
ನಾಜೂಕ : ಸೂಕ್ಷ್ಮ
ನಾಡಾಡಿ : ನಾಡು ಅಡ್ಡಾಡುದ (ತಿರಗ್ಯಾಡುವ) ಗೃಹಿಣಿಯಲ್ಲದ
ನಿವಳ : ಒಳ್ಳೇದು
ಪಂಟ : ಸುಳ್ಳು
ಪಡಪೋಸಿ : ವಿಚಾರ ಇಲ್ಲದ್ದು
ಪದರಾಗ : ಉಡಿಯಲ್ಲಿ
ಪರಸಾದಾ : ಪ್ರಸಾದ
ಪಾರಗಾಣಿಸು : ಪಾರಮಾಡು, ದಾಟಿಸು
ಪಾವ : ಕಾಳು ಅಳೆಯುವ ಸೇರು
ಪಾವಡ : ಟಾವೆಲ್ಲ. ವಸ್ತ್ರ
ಪುರಮಾಸೆ : ಒಳ್ಳೆಯ
ಪುರಸೊತ್ತು : ಸವಡು, ಬಿಡುವು
ಪೋಲಿಮಿ : ವ್ಯವಸ್ಥೆ
ಫಡಕಿ : ಹರಿದ ಹಳೆಯ ಸೀರೆ
ಫಳಾರ : ಫಲಹಾರ, ಫಲಾರ
ಬಂಗಾಲಿ : ಬೆರಕಿ, ಚುರುಕು
ಬಡಿವಾರಾ : ಜಂಭ
ಬವಳಿಕಿ : ತಲೆ, ತಿರುಗು
ಬಾಸಿ : ಭಾಷೆ; ವಚನ
ಬೆರತಾ : ಕೂಡಕೊಂಡು
ಬೆಲಿಗೇಡಿ : ಬೆಲೆ ಕಳೆದುಕೊಂಡದ್ದು
ಬೇತ : ಮೋಸ
ಭಾಳ : ಬಹಳ
ಮಂದೀ : ಸೋವಿ (ಇಳಿದ ಧಾರಣಿ)
ಮನಾರ : ಬಹಳ
ಮಸಲತ್ತಾ : ಮೋಸ, ಹಂಚಿಕಿ
ಮರ್ಜಿ : ಮನಸ
ಮರ್ತೆ: ಮರತೆ
ಮಾರವರಾ : ಮಾರುವವರು
ಮಾಲ : ಮಹಲ
ಮುಗತಿ : ಮುಕ್ತಿ,
ಮುಚ್ಚೀಬಾಗಿಲ : ಮುಂದಿನ ಬಾಗಿಲ
ಮುಚ್ಚೆ : ಮೊದಲು
ಮುಜರಿ : ವಂದನೆ
ಮುನ್ನೂರ : ಮೂರನೂರು
ಮೆಳಿ : ಕಂಟಿ, ಗುಂಪು
ಮೇರ್ಬಾನಕಿ : ಉಪಕಾರ, ಆದರ ಸತ್ಕಾರ
ಮೈತ್ರಿ : ಗೆಳೆತನ
ಯಾಪಾರ : ವ್ಯಾಪಾರ
ಯಾಳೆ : ವ್ಯಾಳೆ, ವೇಳೆ
ರಗಡ : ಬಹಳ
ಲಕ್ಕ : ಒಳ್ಳೆಯದು
ಲಗತಾ : ಹತ್ತಿರ
ಲಗೊ : ತೀವ್ರ, ಬೇಗನೆ
ಸಕನಾ : ಶಕುನಾ, ಭವಿಷ್ಯ
ಸದಗ : ಹೊಡೆ, ಲಗಾಸು, ಏಟುಕೊಡು
ಸಾಸ : ಸಾಹಸ
ಸಿಂಗಾರ : ಶೃಂಗಾರ
ಸುಮ್ಮಾಕ : ಸುಮ್ಮನೆ
ಸೂತರ : ಸೂತ್ರ
ಸೈನ : ಬಿಳಿ ಅರಿವಿ
ಶತಾ : ಜಿದ್ದ
ಶಾಣೇರಾ : ಪಂಡಿತರು, ಜಾಣರು
ಶಾರಾ : ಶಹರ, ಪಟ್ಟಣ
ಹರಲೀ : ಅಪವಾದ
ಹಾದರ : ವ್ಯಭಿಚಾರ
ಹಾಸೀಲ : ಚಾಜಾ
ಹ್ವಾರೇಕ : ಕೆಲಸಕ್ಕ
ಹಿಂದೋಲಿ : ಹಿಂದಿನ ಒಲಿ
ಹೆರಿ : ಹೆರಚು
ಹೊರ್ತಾ : ಹೊರತು
ಬಸವಂತ : ಬಲವಂತ
ಅನ್ನೆ : ದೋಷ
ಅಬ್ರು : ಮರ್ಯಾದೆ, ಗೌರವ
ಈಟೀರತ : ಚಿಕ್ಕಂದಿರತ
ಉರುಲು : ಸಂಕಟ
ಒಗಿ : ಹಾಕು, ಚೆಲ್ಲು
ಒಟ್ಟ : ಬಿರುಸು, ಒರಟು
ಒಲ್ಲಿ : ನಿರಾಕರಿಸು, ಆಗದು
ಕತ್ತಿ : ಚೂಪಾದ ಆಯುಧ
ಕಾರಭಾರ : ಕಿತಾಪತಿ
ಕೀವ : ಗಾಯಗಳಾದಾಗ ಬರುವ ಬಿಳಿ ದ್ರವ
ಕುಮದ : ಅಗೌರವ
ಕುಮ್ಮಕ್ಕು : ಹೆದರಿಕೆ
ಕುವ್ವತ್ತು : ಶಕ್ತಿ, ಸಾಮರ್ಥ್ಯ
ಗುರ್ತ : ಪರಿಚಯ
ಗುಲ್ಲ : ಗಲಾಟೆ, ಸಪ್ಪಳ
ಗೊಣ : ಕುತ್ತಿಗೆ, ಕತ್ತು
ಗೊಬ್ಬಿ : ಸಿಂದಿ, ಶೆರೆಯನ್ನು ಅಳೆಯುವ ಮಾಪನ
ಚಂಡಾಲ : ಕಟುಕ, ಕೊಲೆ ಮಾಡುವವ
ಚಾಪ : ಚೂರ, ಹರಿತ
ಚಾವಡಿ : ನ್ಯಾಯ ತೀರ್ಮಾನ ಸ್ಥಳ
ಚೌರಾಸಿ : ಹೌಹಾರಿ ಬೀಳುವುದು
ಜಡತಿ : ಆಧಾರ, ಸಾಬೀತು
ಜಲ್ಮ : ಜೀವನ, ಪ್ರಾಣ
ತಡವು : ಮುಟ್ಟು, ಸಹವಾಸ
ತುಡುಗ : ಕಳ್ಳತನ
ದಗದ : ಕೆಲಸ
ದಶಿಂದ : ಸಲುವಾಗಿ
ದಾಗಿನ : ಹೆಂಗಸರ ಆಭರಣ
ದುಂಬಾಲು : ಬೆನ್ನು ಹತ್ತು
ನಸೀಬ್ : ಅದೃಷ್ಟ, ದೈವ
ಪುರಸೊತ್ತು : ಕಾಲಾವಕಾಶ
ಪಾಶೇಕ : ಫಾಸಿ
ಪಿತೂರ : ಒಳತಂತ್ರ
ಬಡಿವಾರ : ದೊಡಿಸ್ತನ
ಬಲ್ಲಂಗ ತಿಳಿದಂತೆ, ಮನಬಂದಂತೆ
ಬದುಕು : ಆಸ್ತಿ, ಶ್ರೀಮಂತಿಕೆ
ಬರೋಸ : ವಿಶ್ವಾಸ
ಬೇತ : ವಿಷಯ, ಸಂಗತಿ
ಬೇರತ : ಆಶ್ಚರ್ಯ
ಬೋರ್ಯಾಡು : ಹವಣಿಸು
ಭಾಸಿ : ವಚನ
ಮಟಾ : ತನಕ
ಮಂದ : ಮಟ್ಟು, ಮುಗ್ದ
ಮಳ್ಳಿ : ಮೆತ್ತನೆ, ಸೌಮ್ಯ ಸ್ವಭಾವ
ಮಾಡಿಕಿ : ಮಂತ್ರ ಹಾಕಿಸಿ ಕೇಡು ಬಗೆಯುವುದು
ಮಾಯ : ಕಾಣದಾಗು
ಮಿಕ : ಕಾಮೃಗ
ಯಾಪಾರ : ವ್ಯಾಪಾರ
ಯಾಳಿ : ವೇಳೆ, ಸಮಯ
ರುಮಾಲ : ಪೇಟ
ಲಗು : ಬೇಗ
ಲತ್ತಿ : ಹೊಡೆತ
ವಗತಾನ : ಮನೆತನ
ವಾಡೆ : ಅರಮನೆ
ವಾಯಿನ : ಸುದ್ದಿ
ವಿಳ್ಳೆ : ಎಲೆ
ಶೂಲು : ನೇಣು
ಸಾದಗಪ್ಪ : ಬಿಳಿ ಮತ್ತು ಕಪ್ಪು ಮಿಶ್ರಿತ ಬಣ್ಣ
ಸೆಟವಿ : ಹಣೆಬರಹ ಬರೆಯುವ ದೇವತೆ
ಸೊಕ್ಕ : ಅಹಂಕಾರ
ಹಲಕಟ್ಟ :ಅಶ್ಲೀಲ, ಅವಾಚ್ಯ
ಹಿರ್ಯಾ : ಯಜಮಾನ, ಒಡೆಯ
ಹುಸಿ : ಸುಳ್ಳು
ಕಟ್ಟೆ ಚೆನ್ನ
ಅಬರು : ಮಾನ
ಗಡಮುಡ : ದಿಙ್ಮೂಢ
ಗವಳಿ : ಹಲ್ಲಿ
ಚಮಲ : ಚಾಲಾಕ
ಚೌಕಶಿ : ವಿಚಾರಣೆ
ಠಾರಮಾಡು : ಗುಂಡುಹಾಕು
ದಗದ : ಕೆಲಸ
ದೌಡ : ಬೇಗನೆ
ಪಾಜಕ : ಸಂಜ್ಞೆ (?)
ಪಾಸೆ : ಮೋಸ
ಬೆಂಕಿಕಾರ : ಅತಿಸಿಟ್ಟು
ಮುಂಗೈ ಜೋರು : ಬಲಪ್ರದರ್ಶನ
ಯತನ : ಯತ್ನ
ಹುಕುಮ : ಆಜ್ಞೆ
ಹರಟ : ಒರಟ
ಕತ್ತಲ : ಇಂಜಾನ ಗಾಢಕತ್ತಲೆ
ಗಡಾ : ಬೇಗ
ಗುಲ್ಲಮಾಡು : ಚೀರಾಡಿ ಗದ್ದಲ ವೆಬ್ಬಿಸು
ಚೆಂಡಿಕೊಯ್ಯು : ಬೆಳೆಯ ನಿಲುವಿನಲ್ಲೇ ತೊನೆಕೊಯ್ಯು
ಜೇರ : ತೀವ್ರ ಅಜಾರಿ
ತಳ್ಳಿ : ದರೋಡೆ, ಜಗಳ
ದಸಿಂದ : ಸಲುವಾಗಿ
ನಿರಕ : ನಿಖರ
ಪಾರಾ : ಕಾವಲು
ಪೋಜ : ದಂಡು
ಬೆರಕಿ : ಚುರುಕಾದವ
ಮುಂಡಾಸ : ರುಮಾರ
ಹಂತಿ : ಹತ್ತಿರ
ಹುನ್ನಾರ : ಸಂಗತಿ
Leave A Comment