ಅರಬರಾಟ

ಪಗಾರ : ಸಂಬಳ

ಖೂನ : ಗುರುತು

ಧಡಿಧಡಿತ : ಹೆದರಿಕೆ ಇಲ್ಲದ

ಗಡಿ : ವ್ಯಕ್ತಿ

ಕೋರಿ : ಬಟ್ಟೆ

ನ್ಯಾರಿ : ಮುಂಜಾನೆಯ ಊಟ

ಜಟ್ಟನೆ : ಕೂಡಲೆ

ಖೊಟ್ಟಿ : ಕೆಟ್ಟದ್ದು

ಯೆತ್ತರ : ಹೇಗೆ ಹೇಗೋ

ಬತ್ತೀಸ : ಮೂವತ್ತೆರಡು

ತಿತ್ತೀಸ : ಮೂವತ್ತುಮೂರು

ಮಜಕೂರ : ವಿಷಯ

ದೌಡ : ಬೇಗನೆ

ಮಾಡತೊ : ಮಾಡುತ್ತಿರುವಿ

ಖೋಲ್ಯಾಗ : ಕೋಣೆಯೊಳಗ

ಫರಾಳ ಉಂಡಿ : ಅವಲಕ್ಕಿ ಮುಂತಾದ ಒಣ ತಿಂಡಿ

ಪಾವಸೇರು : ಒಂದೂ ಕಾಲು ಸೇರು

ಛಟಾಕ : ಅರ್ಧ ಪಾವಸೇರು

ಗೊಡವಿ : ಉಸಾಬರಿ, ಸಂಬಂಧ

ಆಯಿ : ತಾಯಿ

ಡಾಗಿನ : ಆಭರಣ

ಜರಾ : ಸ್ವಲ್ಪ

ಹಾಳೇ : ಇದ್ದಾಳೇ

ಅದ್ದನ : ಸುಮಾರು ನಾಲ್ಕು ಸೇರಿನ ಕಾಳಿನ ಅತಳೆ

ಬ್ಯಾಳಣಿ : ಚಾಣಿಗ

ಹುಕ್ಕಿ : ಉತ್ಸಾಸ

ಖಬರ : ಎಚ್ಚರ

ಭಂಡಾಟ : ಅಪಮಾನ

ಲಗೂ : ಬೇಗನೆ

ಹಿಮ್ಮತ : ಧೈರ್ಯ

ಹಾನ್ಯ : ಹಾನಿ, ನಷ್ಟ

ಜರ್ಬ : ಸೊಕ್ಕು

ಹೈರಾಣ : ಸುಸ್ತು, ದಣಿವು

ತುರುವ : ಮುಡಿ

ಝಟ್ಟನೆ : ಕೂಡಲೇ

ಬಾಯಿತಿ : ಬಾಯಿಯಿಂದ

 


ತಿರುನೀಲಕಂಠ


 ಅಡಮುಟ್ಟ : ಒರಟು, ವಿತಂಡವಾದಿ

ಲತ್ತಿ : ಹೊಡೆತ

ಬೇಗ : ಬೆಂಕಿ

ಹಳಹಳಿ : ತಂತಿ

ಅಬರು : ಮರ್ಯಾದೆ

ಪತ್ರೋಳಿ : ಪತ್ರಾವಳಿ, ಊಟದ ಎಲೆ

ಕಕಲಾತಿ : ಪ್ರೀತಿ

ಫಟಿಂಗ : ಲಫಂಗ, ಮೋಸಗಾರ

ಡೌಲು : ಅಲಂಕಾರ, ಚೆಲುವಿನ ಪ್ರದರ್ಶನ

ಎರವಾಗು : ದೂರಾಗು

ಹಾವಳಿ : ಗಲಾಟೆ, ಮೆರೆದಾಟ

ದುಗ್ಗಾಣಿ : ತೀರಾ ಕಡಿಮೆ ಬೆಲೆಯ ನಾಣ್ಯ

ಕಬೂಲ : ಒಪ್ಪಿಗೆ ಸಮ್ಮತಿ

ಕಿಮ್ಮತ್ತು : ಮರ್ಯಾದೆ

ಭೋಳೋ : ಮುಗ್ಧ

ತುಡುಗು : ಕಳ್ಳತನ

ಮುನ್ನೋಡಿ : ಸುಮ್ಮನೆ, ತಪ್ಪಗೆ

 

 

 

ಅಲ್ಲಮಪ್ರಭು
 ಪಿಚಂಡಿ ಕಟ್ಟಿ : ಹೆಡಮುರಿ ಕಟ್ಟಿ

ಕಣಗಂಡ : ಕಣ್ಣಾರೆ ಕಂಡ

ನಿಚ್ಚಣಿಕಿ : ಏಣಿ

ಎರವಾಗು : ವಂಚಿತವಾಗು

ಮುಕ್ಕಟ್ಟ : ಮುಂಚಿತವಾಗಿ

ಪಟಕಾ : ಪೇಟಾ, ರುಮಾರು

ಡಗಲಿ : ಸನ್ಯಾಸಿಗಳು ಹಾಕಿಕೊಳ್ಳುವ
ಸಡಿಲಾದ : ನಿಲುವಂಗಿ

ಪಾವಡ : ಪೇಟಾ

ಸುಳ್ಳಿ ಹೋಳಿಗಿ :ಕಣಕದ ಎಲೆಯಲ್ಲಿ ಬೆಲ್ಲದ ಸೂಸಲು
ತುಂಬಿ ಸುರುಳಿಸುತ್ತಿ
ಬೇಯಿಸಿದ : ಹೋಳಿಗೆ

ಸುಳ್ಳಾಗಿ : ಸುರುಳಿಯಾಗಿ

ಹೊಯಮಾಲಗಿತ್ತಿ : ಸುಳ್ಳುಸುಳ್ಳೇ ರಂಭಾಟ ಮಾಡಿ, ನಟನೆ
ಮಾಡಿ ಜನರನ್ನು : ಆಕರ್ಷಿಸುವ ಹೆಣ್ಣು

ಹುಳಿಮಾಡು : ಅಪಮಾನ ಮಾಡು

ಮಳ್ಳತನ : ದಡ್ಡತನ, ಹುಚ್ಚುತನ

ಕಮ್ಮನ್ನ : ಒಳ್ಳೆಯ, ಚೆನ್ನಾಗಿರುವ

ಚಲೋ : ಒಳ್ಳೆಯ

ಇನಾಮ : ಬಹುಮಾನ

ಪಡಗೆಡವು : ಭೂಮಿಯನ್ನು ಬೀಳು ಬಿಡು

 

ಅಕ್ಕಮಹಾದೇವಿ


 ಗಡ : ಬೇಗನೇ

ಏನಾ : ಏನು

ಅಂತು ಹತ್ತುವುದಿಲ್ಲ : ನೆಲೆ ಗೊತ್ತಾಗುವುದಿಲ್ಲ

ಚಲ : ಛಲ

ಬುಡಾ : ತಳ, ಪೂರ್ಣ ಪರಿಚಯ

ಬಲಾಟಗಿರಿ : ತಾರಾತಿಗಡಿ

ಅಲ್ಲೇ ಹಾಸಿ : ಅಲ್ಲಿಯೇ ಹಾಯ್ದು

ಹೊಳ್ಳು : ಹೊರಳು

ಬೇಟಿ : ಭೆಟ್ಟಿ

ಬಾಡಿಗೆ : ಭಾಡಿಗೆ

ಹಕೀಕತ್ತು : ವಿಷಯ

ತಿಳಿತಿದೆ : ತಿಳಿಯುತ್ತಿದೆ

ಬೇತಮಾಡಿ : ಹಂಚಿಕೆ ಮಾಡಿ

ಕವಕ್ಕನೇ : ತಡವಿಲ್ಲದೇ

ಬೇತು : ಹಂಚಿಕೆ

ಕುವತ್ತು : ಶಕ್ತಿ

ಮಸಲತ್ತು : ಹಂಚಿಕೆ

ಲಗು : ಬೇಗನೆ

ಬಿಡದೇನಾ : ಬಿಡುವುದಿಲ್ಲ

ಕಬೂಲಿ : ಮಾಡಿದೆ ಒಪ್ಪಿಸಿದೆ

ಒಣಚ್ಯಾಲಾ : ಸುಮನೇ ಸೋಗು

ಬೆರಕಿ : ಜಾಣೆ, ಚತುರೆ

ನೆರಿಗೆಯೇ : ನಿರಿಗೆಯೇ

ಅಖೈರಕ್ಕೆ : ಕೊನೆಗೆ

ಕೆಣಕಿ : ತಡುವಿ

ಹಲಬು : ಬಾಯಿಬಿಡು

ತ್ರಾಸು : ಕಷ್ಟವು

ನಿತ್ರಾಣ : ಶಕ್ತಿಹೀನ

 

 

ಚಂದ್ರಶಿರೋಮಣಿ
 ಅಂತಪಾರ : ಕೊನೆ

ಅಕ್ಕಲ್ : ಬುದ್ದಿ

ಅಗಲ : ತಟ್ಟೆ

ಅಡಿಮಿಕಾ : ಕಾಡುಹಂದಿ

ಅರ್ಭಾಟ : ಅರ್ಭಟ

ಅರು : ಅರಿವು

ಅವರಿಸಿಕೊಂಡು : ತಾಳಿಕೊಂಡು

ಅವಸಣ : ಶಕ್ತಿ

ಅಸಲಾ : ಮುಖ್ಯ

ಆರ‌್ಯಾಣ : ಅರಣ್ಯ

ಆವಾರ : ಕಂಪೌಂಡ

ಇತಾಲಾ : ಸೂಚನೆ

ಇನಾಮ್ : ಬಹುಮಾನ

ಉಚ್ಚಿ ಹೊಡಿ : ತೆಗೆದು ಹೊಡಿ

ಉಮ್ಮರ್ : ವಯಸ್ಸು

ಎಲ್ಲಾಥಾವಲಿ : ಎಲ್ಲಾ ಕಡೆಗೆ

ಏಸೋ : ಎಷ್ಟೋ

ಕಮ್ಮಿ : ಕಡಮೆ

ಕಸಂ : ಸಾಕ್ಷಿ

ಕಸಕೋ : ಕಸಿದುಕೊಳ್ಳು

ಕಳಕಳ : ಮರಮರನೇ ಮರಗುವುದು

ಕಾಯಾಂವ : ರಕ್ಷಿಸುವವ

ಕಾಳ : ತೊಂದರೆ, ನಾಶ

ಕುಡತಿ : ಕೊಡುವುದು

ಕುಬಸಾ : ಕುಪ್ಪಸ

ಕೈಲಾಕ : ಕಾಯುವುದಕ್ಕೆ

ಖಂಡಗ : 20 ಮಣ

ಖಮ್ಮನ್ : ರುಚಿಕಟ್ಟಾದ

ಖರ್ಮ : ಕರ್ಮ

ಖಳಿವಂತಿ : ಕಳೆಯುಳ್ಳವಳು

ಖಾಲಿ : ಬರಿದು

ಖಿಲ್ಯಾ : ಕೋಟೆ

ಖೂನಾ : ಗುರುತು

ಗಡಿಗೆ : ಮಡಿಕೆ, ಮಣ್ಣಿನ ಪಾತ್ರೆ

ಗಣಸಾ : ಗಂಡಸು

ಗಪ್ಪ : ಶಾಂತ

ಗುಂಪಾ : ಸಾಧುಗಳ ನಿವಾಸಸ್ಥಾನ

ಘಟ್ಟ : ಫಲಭರಿತ

ಘಡಿ : ಸಮಯ

ಘಳಸು : ಗಳಿಸು

ಚೂಕ್ : (ಚುಕ್) ತಪ್ಪು

ಚೌಪಟ್ಟ : ನಾಲ್ಕುಪಟ್ಟು

ಚೌವದ : ಹದಿನಾಲ್ಕು

ಛಕಾ : ಪ್ರಭಾವ

ಜಮ್ಮ : ಗರ್ವ

ಜಲ್ದಿ : ಲಗು, ಬೇಗನೆ

ಜಾನವಾರ : ಪ್ರಾಣಿಗಳು

ಜಾಮ : ಗರ್ವ

ಜುಲ್ಮಿಲಿಂದ : ಒತ್ತಾಯದಿಂದ

ಜ್ಯಾಮರ್ದ : ಜಾಣ

ಝಡತಿ : ಪರೀಕ್ಷೆ

ಡಾಗ : ಕುಂದು

ಡೊಂಗರ : ಡಂಗುರ

ತಪಾಸ : ತಪಾಸಣೆ

ತಮಾಮ : ಸರ್ವ

ತಾರೀಫ್ : ಹೊಗಳಿಕೆ

***