()

ಅಗದಿ ಬಹಳ
ಅನ್ಯ ಅನ್ಯಾಯ, ತಕರಾರು
ಅಗರಾಣಿ ಅರ್ಷ್ಟವಣಿ, ವರತಿ
ಅಬರು ಮಾನ, ಮರ್ಯಾದೆ
ಅಗಸಿ ಊರಿನಕೋಟೆ ಬಾಗಿಲು
ಅಮ್ಮಿ ಮೊಲೆ
ಅಚ್ಚ ಸಲುಗೆ, ಪ್ರೀತಿ
ಅಲಬತ್ತ ಅವಶ್ಯ, ಅದಕ್ಕಾಗಿಯೇ
ಅಡರು ಹತ್ತು, ಅಪ್ಪಿಕೊಳ್ಳು
ಅವಗಾಡು ಅಸ್ತವ್ಯಸ್ತ, ಸರಳವಲ್ಲದ
ಅಡರಸು ಆರೋಪಿಸು
ಅವಲ್ ಗಟ್ಟಿ, ಪ್ರಸಿದ್ಧಿ
ಅಡ್ರಾಸು ಹಾತೊರೆ
ಅಸವ ಸಹಿಸದ
ಅಡಿ ಅಡವಿ
ಅಸ್ತ ಮುಳುಗು
ಅಡ್ಲಿ ಜೋಗದ ಬುಟ್ಟಿ
ಆಚ ಗರಜು, ಅವಶ್ಯಕತೆ
ಅಟ ಎಂಟು

(, , , )

ಇಣಿ ಹೋರಿಯ ಹೆಗಲಿನ ಹಿಂದಿನ ಎತ್ತರವಾದ ಭಾಗ
ಇಂದು ಚಂದ್ರ                                  

ಇನ ಸೂರ್ಯ

ಇಸಮ ಅಭಿಮಾನ

ಇಳೆ ಭೂಮಿ

 

ಉಡುಪ ಶಿವ

ಉಂಬುಣ ಊಟ ಮಾಡುವಾ

ಉಮೆ ಪಾರ್ವತಿ

ಉರುಪ ಅಂಗಾಗದಲ್ಲಿ ಉರಿಯುವುದು

ಉಕ್ಕು ಕುದಿದು ಹೊರ ಚೆಲ್ಲುವುದು

ಉಲು ಉಲುಹು, ಸಹಜ ಸಪ್ಪಳ

ಉಗಡ ಗುಟ್ಟು

ಉರ್ವಿ ಭೂಮಿ

 

(, , , )

ಎಗ್ಗು ಸ್ತುತಿ, ನಿಂದೆ, ಗಮನಿಸದಿರುವಿಕೆ
ಒಲ್ಲಿ ಧೋತರ                                  
ಓಪ ಪ್ರಿಯಕರ

(, )

ಕಡ್ಡ ಒಂದು ತರಹದ ಹುಲ್ಲು

ಕಬ್ಬುವಿಲ್ಲ ಮನ್ಮಥ
ಕಟಪಡ ಪ್ರಯತ್ನ

ಕರಗ್ರ ತಕರಾರು
ಕಟವಾಯ ಬಾಯಿಯ ಇಕ್ಕೆಲ

ಕರಿ ಆನೆ
ಕಂದರ್ಪ ಮನ್ಮಥ

ಕರಿಸಾಲ ಬಿತ್ತದೇ ಇರುವ ಬರ
ಕಬಲಾತಿ ಒಪ್ಪಗೆ ಪತ್ರ

ಕಾಮ ಇಚ್ಛೆ
ಕಾಮಾರಿ ಶಿವ

ಕಾಯ್ಕುಳ್ಳು ಒಣಗಿದ ಹೆಂಡಿ, ಸೆಗಣಿ
ಕಾರಭಾರಿ ಕಾರ್ಯದರ್ಶಿ

ಕಾಸೆ ಕಾಶೀದಾರ, ಪುರವಂತರ ವೇಷ, ಬಿರುದು ಕಟ್ಟಿದ ದಾರ

ಕುಂಬಿನಿ ಭೂಲೋಕ

ಕಿಂಕರ ಸೇವಕ

ಕುರುಳು ಕುಳ್ಳು, ಹೆಂಡಿಯಿಂದ ದುಂಡಗೆ ಮಾಡಿ ಒಣಗಿಸಿದ್ದು

ಕುರುಹು ರೂಪ, ಆಧಾರ

ಕುಲ್ಲ ಕೆಟ್ಟ

ಕುಲಜರು ಶ್ರೇಷ್ಠರು

ಕುಳ್ಳ ಕುರುಳ

ಕೂನ ಗುರುತು

ಕೊಕ್ಕಟೆ ಹೂಡಿ ಸುಮ್ಮನೆ ನಗುತ್ತ ಕಾಲಕಳೆ, ಒಂದು ಪ್ರಾಣಿಯ ನಗು

ಕೊಳಮಲಿ ಆಡು, ಕುರಿಗಳ ಕೊರಳಮೊಲೆ

ಕೋದು ಕೊಯ್ದು
ಖಂಗ ಕುನುಸು

ಖಜೀಲ ಅಸಹ್ಯ, ಅಪಮಾನ

ಖಾತ್ರಿ ಮನದಟ್ಟು

ಖುಬಿ ತೃಪ್ತಿಯ ಸಂತಸ

ಖೂಳ ದುಷ್ಟ

(, )

ಗದಗಮಸು ಮಾನಸಿಕವಾಗಿ ಹೊಯ್ದಡದಿರುವುದು                

ಗಲ್ಲೀಪ ಕಲ್ಲಿನ ನಂದಿಗೆ ಹಾಕಿದ ಉಡುಪು

ಗನ್ನಘಾತಕ ದೊಡ್ಡಪಾಪ

ಗಳಗಿ ಕಾಳು ಸಂಗ್ರಹಣೆಯ ಸಾಧನ

ಗಾರಗಣ್ಣ ಬೆಕ್ಕಿನ ಕಣ್ಣಿನ ಬಣ್ಣದಕಣ್ಣು

ಗಾಲಮೇಲ ತಟ್ಟನೆ, ಆರೋಗ್ಯ, ಕೆಟ್ಟಸ್ಥಿತಿ

ಗಿಂಜು ಬದನೆಕಾಯಿಯ ಒಂದು ರೀತಿಯ ಲೋಳೆ

ಗಿಮದಿರುಗು ಪೆಟ್ಟಿನಿಂದ ತಲೆ ತಿರುಗಿಸುತ್ತ ತಿರುಗುವುದು

ಗೀಳ ಹಾಳಾದದ್ದು, ನಿರುಪಯೋಗಿ

ಗುಲ್ಲ ದನದ ಮೈಮೇಲೆ ಬಣ್ಣದಿಂದ ದುಂಡಗೆ ಹಚ್ಚಿದ ಗುರುತು

ಗುಲ್ಲಮಾಡು ಇಲ್ಲದ ಆರೋಪ ಹೊರಿಸಲುಕೂಗಾಟ

ಗೇಣಿಸು ಚಿಂತೆಮಾಡು, ಲೆಕ್ಕ ಹಾಕು

(, , , )

ಚಡತಿ ಏರಿಕೆ, ಮೇಲ್ಮೆ

ಚರಕಿ ಕೊಬ್ಬು

ಚುವಕಾಸಿ ಬೌಕಾಸಿ, ವಿಚಾರಿಸು

ಚಾಕರಿ ಸೇವೆ

ಚಂದ್ರಮೌಳಿ ಶಿವ

ಚಾಟ ಗಾಳಿಮಳೆಯಿಂದ ಮರೆ
ಚ್ಯಾಲೂರಿ ಒತ್ತಾಯದಿಂದ ಬೇಡು

ಚಿಣಿ ಆಡಲು ಮಾಡಿದ ಚಿಕ್ಕದಾದ ಕಟ್ಟಿಗೆಯ ಚೋಟುದ್ದ ತುಂಡು

ಚಿನ್ನ ಕಳೆ

ಚಿಂಗ ಗಬ್ಬುವಾಸನೆ

ಚಿಲರೆನತೆನೆ ಹಿಡಿದೆನೆ, ಆಯ್ದದೊಡ್ಡತೆನೆ

ಚೂಕ ತಪ್ಪು

ಜತ್ತಲೆ ಜೊತೆಯಾಗಿ

ಜಲ್ಲ ಅಂಜಿಕೆ, ಹೊಟ್ಟೆ ಬೇನೆ

ಜಾಂಬ ಬಟ್ಟಲು, ಗ್ಲಾಸು

ಜೇಗಟೆ ಜಾಗಟೆ

ಜಿನ್ನನ ಜಿನ

ಜೀತಪಾಪ ಪಾಪವನ್ನು ಗೆದ್ದವ

ಜೀರ್ಣ ತೀರ ಹಳೆಯ
ಝಂಗೀ ಬಹಳ ದೊಡ್ಡ

(, , , )

ಟೀಕ ಒಳ್ಳೆಯದು

ಡಾವ ತಂತ್ರ

ಡಿಂಬ ಶರೀರ

ಡಂಬಕ ಮೋಸ, ಠಕ್ಕ

ಡೋಣಿ ವಿಜಾಪೂರ ಜಿಲ್ಲೆಯ ಒಂದು ನದಿ

ಢರಿ ಹೋರಿಯ ಗುಟುರು

 

(, , , , )

ತಗಲ ಉದ್ದೇಶ ಪೂರ್ವಕ ಸುಳ್ಳು

ತರಬು ನಿಲ್ಲಿಸು

ತಳ್ಳಿ ಗೊಡವೆ

ತ್ರಾಣ ಸಕ್ತಿ

ತಿಪಲ ವಕ್ರಮಾರ್ಗ, ಗೊಂದಲ ಹುಟ್ಟಿಸುವ

ತುರುಬು ಕೂದಲಿನ ದುಂಡನೆ ಕಟ್ಟು

ತೇಜಿ ಕುದುರೆ

ದಿಂಡು ರಾಶಿ

ಥಾಳಿ ವಿಶೇಷವಾಗಿ ಹಾಲು ಕಾಯಿಸಲು ಒಟ್ಟಿದ ಕುಳ್ಳಿನ ಕಿಚ್ಚು

ದಿಕ್ಕಿ ಆಘಾತ

ದಗದ ಹೊಲ ಮನೆ ಕೆಲಸ

ದರ್ಜ ಯಾವುದೇ ಅಂಜಿಕೆ ಇಲ್ಲದ

ದವಡು ಬೇಗ

ದಸಮಿ ಹಾಲಿನಲ್ಲಿ ಹಿಟ್ಟು ಕಲಸಿ ಮಾಡಿದ ರೊಟ್ಟಿ

ದಸೀಂದ ಸಲುವಾಗಿ

ದಾಗ ಕಲೆ

ದಾರು ಯಾರು

ದಿಂಡ ಹರಿದ ಸೀರೆ, ಧೋತರ ಅಡ್ಡ ಕತ್ತರಿಸಿ ಹೊಲಿಯುವುದು

ದುರುಳ ದುಷ್ಟ

ದುಸಕಾ ಸಲುವಾಗಿ

ಧಣಗಿ ಗುಂಪಿನ ಉದ್ದೇಶ ಪೂರ್ಣ ಆಕ್ರಮಣ ಗದ್ದಲ

 

ನಬ್ಬ ಬೆಳಕೂ ಕತ್ತಲೂ ಅಲ್ಲದ ಸ್ಥಿತಿ

ನದರ ನೆದರ, ದೃಷ್ಟಿ

ನ್ಯಾರಿ ಮುಂಜಾನೆ ಉಪಹಾರ

ನಿಲಾ ನಿಲುವು, ಬೆಳೆಯ ಎತ್ತರ

ನಿಲಿ ನಿರಿಗೆ, ನಿಲಿಗೆ

ನಿವಳ ಶುದ್ಧ, ಒಳ್ಳೆಯ

 

(, )

ಪಂಕ ನೀರು

ಪಂಕಜ ಕಮಲ

ಪಕ್ತ ಕೇವಲ

ಪಡಿಕಿ ಹಳೇಸೀರಿ

ಪಟಕಾ ರುಮಾಲು (ಅಗಲ ಕಡಿಮೆ ಉದ್ದು ಜಾಸ್ತಿ)

ಪಂಟ ನೆವ, ನೆಪ

ಪಪ್ಪಳಿ ಹೆಂಡಬಂಡ (ಬಿಳಿ-ಕರಿ, ಬಿಳಿ-ಕಪ್ಪು)

ಪರಸಿ ಭಕ್ತರ ದಂಡು, ಜಾತ್ರೆ

ಪರ್ಯಾಣ ತಾಟಿನಾಕಾರದ ಮಣ್ಣಿನ ಪಾತ್ರೆ

ಪಾಸಿ ಹುಸಿಮೋಸ

ಪಂಜಾಳಿ ಸವೆದು ನೀರು ನೀರಾದ ಬಟ್ಟೆ

ಪಿಂಡ ದಪ್ಪ

ಮಗ್ಗಾ ಕಿವಿಯ ಮೇಲೆ ಉಬ್ಬಿಸಿ ಹಿಕ್ಕುವ ಕೂದಲ ವಿನ್ಯಾಸ

ಪುತನಿ ಒಬ್ಬ ರಾಕ್ಷಸಿ

ಪುರಮಾಸಿ ಬೇಕಂತುಲೆ

ಪೇರ ವ್ಯತ್ಯಾಸ

ಫಟಿಂಗ ಕಾಮುಕ

ಫೇರಿ ದುಂಡಗೆ ತಿರುಗುವುದು

ಫೌಜು ಸೈನ್ಯ

ಪ್ಯಾಟಿ ಪೇಟೆ

(, )

ಬಗಸು ಬಯಸು

ಬಗಳಿ ಪೊಳ್ಳು, ಜೊಳ್ಳು, ಚಲ್ಲಾಪಿಲ್ಲಿಯಾದ

ಬಚಾವ ಉಳಿಸು, ರಕ್ಷಿಸು
ಬಣ್ಣದ ಗಿಣಿ ಸೂಳೆ

ಬದ್ದು ಕೆಟ್ಟ ಪರಿಣಾಮ

ಬರಗೆಡು ಎಂದೂ ಕಾಣದವನಂತೆ ವರ್ತಿಸು

ಬರಷಣ ದುಷ್ಪರಿಣಾಮ ಬೀರಬಲ್ಲ, ಬೇಡಾದ

ಬರ್ಕತ್ ಶಕ್ತಿ

ಬಳಸಾಲ ಬಿತ್ತಿಗೆ ಬೀಜ ಮುಚ್ಚಲು ಹಿಂದಿನಿಂದ ಹಾಯಿಸುವ ಕುಂಟಿ

ಬಾರಿಗಿ ಕಸ ಪೊರಕೆ

ಬಿದಿಗಿ ಹುಣ್ಣಿಮೆ

ಬಿದ್ದೋಡಿ ಓಡಿ ಬಂದು ಬಿದ್ದವಳು, ನಿರುಪಯೋಗಿ

 

ಬಿಡೆ ಉಪಕಾರ

ಬಿನಗು ವಿನೋದ

ಬಿರಾಡ ಹೊಲದ ಕರ

ಬಿಂಗ ಬಿಡಸು ಮುಂಗಾಣದಂತೆ ಮಾಡು

ಬುಗುಡಿ ಕಿವಿಯ ಆಭರಣ

ಬೇತ ತಂತ್ರ

ಬೈಮಂಗ ಸೇಂಗಾ

ಬೋಕ ದೊಡ್ಡ ತೂತು

ಭಕ್ಕರಿ ರೊಟ್ಟಿ

ಭಂಗಿ ಅಮಲು ಬರಿಸು ವಸ್ತು

ಭರ್ತಿ ಪೂರ್ಣ ತುಂಬಿದ

ಭಾರಕ ವಯಸ್ಸಿಗೆ ಬರು

ಭೋಗಿ ಹಾವು

()

ಮಗಡ ಎತ್ತುಗಳ ಮುಖ ಸಿಂಗಾರಕ್ಕೆ ಹಾಕಿದ ತೊಗಲಿನ ವಸ್ತು (ಮುಖವಾಡ ?)

ಮಡದೇರು ಮಡದಿಯರು

ಮಣಕ ತಾಯಿಯಾಗುವ ಮೊದಲಿನ ತರುಣ ಎಮ್ಮೆ, ಆಕಳು

ಮರಗು ಸಂಕಟಪಡು

ಮಲಕ ಓಡುವಾಗ ತಟ್ಟನೆ ಹೊರಳುವ ರೀತಿ

ಮಲು ಹಗ್ಗದ ಒಂದು ರೀತಿಯ ಕಟ್ಟು

ಮಸಲತ್ತು ಕುತಂತ್ರ

ಮೃಡ ಶಿವ

ಮೃತ್ಯುಂಜಯ ಮೃತ್ಯುಗೆದ್ದವ

ಮುಗ್ಗು ಎಡವಿ ಬೀಳು

ಮಾರ್ತಂಡ ಸೂರ್ಯ

ಮುಟಗಿ ಬಿಸಿ ರೊಟ್ಟಿಯಲ್ಲಿ ಉಪ್ಪುಖಾರ ಹಾಕಿ ಕುಟ್ಟಿ ಮೆತ್ತಗೆ ಮಾಡಿದ ಉಂಡಿ

ಮುಂಡಾಸು ಪೇಟ

ಮುರಕ ಡೌಲು, ಆಕರ್ಷಿಸುವಂತೆ ಮಾಡು

ಮುರಗಣ ಕರಚೀಕಾಯಿಯಂಥದು ಕುದಿಸಿದ ಖಾದ್ಯ

(, , )

ಯಾಸಿ ಡೊಂಕ

ರಮಸಾಕ ರಮಿಸಲು

ರಿಕ್ಕ ಬಿಡದಂತೆ ಗಟ್ಟಿಯಾಗಿ ಅಂಟಿಕೊಂಡ

ರುಂಜಿ ಹಾಕಿದ ಗೆರೆ

ರೊಡ್ಡ ಎಡಗೈ ಬಳಸುವವ

ಲಗ್ಗ ಬೇಗ

()

ವಟ್ಟಿ ಹಟಮಾರಿ, ಮಾತು ಕೇಳದ

ವತ್ತರ ಬಹಳ ಬೇಗ

ವಸುಮತಿ ಭೂಮಿ

ವಾತ ಈಗ ತೆಗೆದುಕೊಂಡ ಕಾಳಿಗೆ ಪ್ರತಿಯಾಗಿ ಮುಂದೆ ಒಂದೂವರೆ ಪಟ್ಟು ಕೊಡುವ ಪದ್ಧತಿ.

ವಾಯಿ ಊತ, ಭಾವು

ವಾರಿ ನೀರು

 

ವಾಳಿ ಯಾರ ಮಾತೂ ಕೇಳದ, ಬೇಡಾದ

(, , , )

ಶಪ್ತ ಶಪಥ

ಶೇಲ್ತ ಸೇಲ, ಹೆಚ್ಚು, ಮೇಲು

ಸಟೆ ಸುಳ್ಳು

ಸಡ್ಲ ಸಡಿಲು, ಪೊಳ್ಳು

ಸರು ಸರುವು, ಹೊಳೆಯ ಒತ್ತು

ಸಂಗ್ರಾಮ ಸಜ್ಜು, ವ್ಯವಸ್ಥೆ

ಸಂದ್ರಿ ಎರಡು ಮನೆಯ ನಡುವಿನ ಇಕ್ಕಟ್ಟಾದ ಹಾದಿ

ಸಳ್ಳವರಿ ಅಂಜಿ ಎದೆ ಒಡೆ

ಸ್ಸಾರಿ ಗಡಿಗೆ, ಹಾಲಿನ ಗಡಿಗೆ

ಸಿಂಗಾರ ಶೃಂಗಾರ

ಸಿಂಪ ಎಡೆಕುಂಟಿಯ ತಾಳ

ಸುಮಾರ ಕೆಟ್ಟ

ಸುಪ್ಪಲಿ ಕಾಳು ಕೇರುವ ಚಿಕ್ಕಮೊರ

ಸೂಸ ಪೂರ್ತಿ ತುಂಬಿದ

ಸೌಸ ಸೌರಸು

ಹುಲ್ಲೆ ಚಿಗುರೆ