ಸದಾ ಎನ್ನ ಹೃದಯದಲ್ಲಿ ನೆಲಸಿ ನಿಂತ ರಕ್ಷಿಸು
ಸತ್ಯ ಸಾಯಿ ನಿನ್ನ ಪಾದ ಮೋದಿಂದ ಭಜಿಸುವೆ || ಸದಾ ||
ಧ್ಯಾನವೆಂಬ ಶುದ್ಧರತ್ನ ಮಂಟಪದಾ ಮಧ್ಯದಲ್ಲಿ
ಗಾನಲೋಲ ನಿನ್ನ ಮೂರುತಿ ನೀನೆ ಸುತಿಸುವೆ || ಸದಾ ||
ಭಕ್ತಿ ರಸದ ತೈಲ ತುಂಬಿ ಭಾವದೀಪ ಬೆಳಗಿಸಿ
ಮುಕ್ತನಾಗಬೇಕು ಎಂದು ಮುತ್ತಿನಾರತಿ ಎತ್ತುವೆ || ಸದಾ ||
ನಿನ್ನ ನಾಮ ಎನಗೆ ಶರಣು ನೀನೆ ತಾಯಿ ತಂದೆಯು
ಅನ್ನಧಾತ ಭರಿತು ಪ್ರಾತವರವನಿತ್ತು ರಕ್ಷಿಸು || ಸದಾ ||
ತಾವರೆನೀರ ನಂಟದಂತೆ ಗಾಳಿಧೂಳನತ್ತದಂತೆ
ಬಿಸಿಲು ಮಳೆಯಲಿ ನೆನೆಯದಂತೆ ಬಂತು
ಲೇಪಿಸಿದಂತೆ ಸೌರಾಷ್ಟ್ರ ಸೋಮೇಶ್ವರ ನಿಮಶರಣನಾ
ಬಳಸಿಯು ಬಳಸಂತಿಪಕ್ಕೆ
ತನುವಿನಲಿ ಮೋಹ ಮನದಲ್ಲಿ ನಿರಾಂಹಕಾರ
ಚಿತ್ತದಲಿ ನಿರಪೇಕ್ಷೆ ವಿಷಯದಲ್ಲಿ ಉದಾಸೀನ
ಭಾವದಲಿ ದಿಗಂಬರವು ಜ್ಞಾನದಲಿ ಪರಿಪೂರ್ಣ
ನಾದ ಬಳಿಕ ಸೌರಾಷ್ಟ್ರ ಸೋಮೇಶ್ವರ
ತೀರಿಲ್ಲ ಕಾಣಿರೋ ||
* * *
ಬ್ರಹ್ಮಾನಂದದ ಸುಖವೇನೋ ನಿನಗೆ
ಸುಮ್ಮನಿದ್ದರೆ ಹ್ಯಾಂಗಾದೀ ತೇಳರುವೆ || ಪ ||
ದ್ವಾರಗಳೊಂಬತ್ತು ಬಾಗಿಲ ಮುಚ್ಚುವ ತನಕ |
ಪರಮ ಪ್ರಕಾಶದ ಕದ ತೆರೆಯುವ ತನಕಾ |
ಹರಿವ ತ್ರಿನದಿ ಸಂಗಮ ದಾಟುವ ತನಕ |
ಎರಡು ದಾರಿಯ ಬಿಟ್ಟು ನಡು ಹೋಗುವತನಾ || ೧ ||
ರಂಗ ಮಂಟಪ ಹೊಕ್ಕ ಸ್ಥಿರವಾಗುವ ತನಕಾ |
ಹಿಂಗದೇ ರವಿ ಕೋಟಿ ಪ್ರಭೆ ಕಾಣುವ ತನಕಾ |
ಕಂಗೊಳಿಸು ಆರ್ಭಟ ಕೇಳುವ ತನಕಾ |
ಕಂಗಳಲ್ಲಿ ಕಣ್ಣ ಕಂಡು ಬೆರಗಾಗುವ ತನಕಾ || ೨ ||
ಘನ ಮಹಾಲಿಂಗನ ಪೂಜೆ ಆಗುವ ತನಕಾ |
ಆನಹತದಲ್ಲಿ ಮೈಮರೆದಿರುವಾ ತನಕಾ |
ಮನಸಿನ ಮೈಲಿಗಿ ಕೊಳೆದ್ಹೋಗುವ ತನಕಾ |
ದಿನಕರ ಬಸವನ ದಯವಾಗುವ ತನಕಾ
* * *
ಲಿಂಗಪೂಜೆ ಆಗತದಣ್ಣಾ | ಯಾವಾಗ ನೋಡಲಿ || ಪ ||
ಲಿಂಗಪೂಜೆ ಅಗತೈಯ್ತೆ | ಅಂಗವೆಂಬೊ | ಗುಡಿಯ ಒಳಗೆ |
ಮನಸಿನಂದ ಲಿಂಗ ತನ್ನ | ಕಂಗಳಿಗೆ ಕಾಣುತದ || ಪ ||
ಆರು ಮೂರು ಕಟ್ಟಬೇಕಣ್ಣಾ | ಆ ಲಿಂಗ ಪೂಜೆಗೆ ||
ಆರುಮೂರು ಕೆಡಿಸ ಬೇಕಣ್ಣಾ
ಆರುಮನೆಯ ದಾಟಬೇಕು | ಮೂರು ನದಿಯ ನಟ್ಟ ನಡುವೆ |
ವಾರಿ ಶಿಖರದಲ್ಲಿ ನೋಡಲಿ | ಭೋರನಾದ ಗುಟ್ಟ ಕೂಗುತದಾ
ನಾಕು ಹಾದಿ ಉಂಟು ನೋಡಣ್ಣಾ | ಆ ಲಿಂಗ ಪೂಜೆಗೆ |
ಮೇಲಕ್ಕೇರಿಸಿ ನಿಲ್ಲ ಬೇಕಣ್ಣ
ಕಾಕ ಬುದ್ಧಿ ಕಲಿಯಬೇಕು | ನೂಕಬೇಕೋ ಮದಗಳೆಲ್ಲಾ |
ವಿವೇಕನಾಗಿ ನೋಡಲಿ | ಅನೇಕ ಬೆಳಕು ಕಾಣುತದ
ಯೋಗಿ ಉನ್ಮನಿವಾಸ ನೋಡಣ್ಣಾ | ಆನಂದವರೆಗೆ
ಚಿನ್ಮಯ ರೂಪ ಹೊಳೆಯುತದಣ್ಣಾ
ಆಗ ಈಗ ಎಂಬೋ ದೇಹ | ಸಾಗಿ ನಿನ್ನ ಹೋಗುತದಾ
ಹೋಗುವಾಗ ಗಂಗಾಧರನ | ಬೇಗ ನೀವು ಭಜಿಸರಣ್ಣಾ
* * *
ರತ್ನ ಬಂದದ ನೋಡಿರೋ | ಉನ್ನತ ಜೀವ |
ರತ್ನ ಬಂದದ ನೋಡಿರೋ || ಪ ||
ಪೃಥ್ವಿ-ಗಧಿಕ | ಬ್ರಹ್ಮಪುರದಿಂದ ಬಂದದೆ |
ರತ್ನ ಪರಿಕ್ಷೆಯ ಬಲ್ಲಂತ ಪುರುಷರು || ಪ || ೨ ||
ಶಿರದೊಳು ಅಡಗಿಹುದೋ | ಯಾವಾಗಲೂ |
ಕರದಲ್ಲಿ ಕಾಣುತದೆ ||
ವರ ಚಂದ್ರ ಸೂರ್ಯರ ಬೀದಯೊಳ್ಳಿಟ್ಟಿದೆ |
ದುರಿತ ಕರ್ಮಗಳುಳ್ಳದವಗೇ ಕಾಣುತ್ತದೆ
ಅಷ್ಠ ದಶಗಳಿಂದೆ | ಆರತುವು ದಿಟವಾಗಿವುದರಡಿ |
ದೃಷ್ಟಿಯನಗಳದೆ ನೋಡಿದ ಪುರುಷನು
ನಷ್ಟ ಪಾತಕನಾಗಿ ಶ್ರೇಷ್ಠನಾಗುವನಂತೆ
ಕಳ್ಳರ ಭಯವಿಲ್ಲವೋ | ಈ ರತ್ನಕ್ಕೆ ಸುಳ್ಳರ
ಸುಳುವಿಲ್ಲವೋ || ಎಲ್ಲೆಲ್ಲಿ ನೋಡಲಿ ಅಲ್ಲೇ
ಕಾಬಸಮತಾ | ಬಲ್ಲೆನೆಂದರೆ ಬಿಡದೆದುರಿಗೆ ನಿಲ್ಲುವುದು
ಶಿರದೊಳು ರತ್ನವನ್ನು ಧರಿಸಿದಂಥಾ |
ಉರಗನ ಹೃದಯವನ್ನು ||
ಉರಗ ಭೂಷಣ ಪಕ್ಷಿ ಹಂಸವಾಹನ ಮುಖ್ಯ |
ಸುರಮುನಿ ಹೃದಯದಿ ನಿತ್ಯ ಬೆಳಗುವಂಥ
ದೊರೆ ದೇಸಾಯಿಗಳಲ್ಲಿಯೂ | ನವಕೋಟಿ
ನಾರಾಯಣರಲ್ಲಿಯೂ ವರ ಚಕ್ರವರ್ತಿ ಬೊಕ್ಕಸ
ದೊಳಗಿಲ್ಲ ಶ್ರೀ ಗುರು | ಮಹಾಲಿಂಗ ರಂಗನ
ಭಂಡಾರ ದೊಳಿರುವಂತಾ
* * *
ಗುರುದೇವ ನೀನೋರ್ವ ನಿಜದೇವರು || ನಿಮ್ಮ ಚರಣದೊಳ್
ಬೆರಿಯಾದ ನರನೇ ಪಾರಮನೋ || ಓಂ ತಿರುಕನಂದೆದಿಪುರ |
ಪುರಗಳ ತಿರುಗುತ್ತಾ ಇಲ್ಲಿ ನರಳುವ ತರಳನಿಗೆ ಹರನ
ತೋರಿಸಿದೆ || ಕರುಗಾನ ಕರಗಿಸಿ | ಮರಗಿದ್ದ ಮುನಿಗಳಿಗೆ
ಆವರಿಸಿದ ತನರಿಯಾದ ಸಿರಿಯಾ ತೋರಿಸಿದೆ ||
ಸಂಪದವಾ ತೋರಿಸಿದೆ || ಗುರು ಗುರು ಶಂಕರಾರ್ಯರ
ಕರುಣ ತೋರಲು ತಾನೆ ಸದ್ಗುರು ಎಂಬವ ನಾಮ ಧರಿಸಿ
ಬಂದವಂಗೇ ಗುರುದೇವ ನೀನೋರ್ವ ನಿಜದೇವರು
* * *
ಹುಸೇನಿ ಸಾಹೇಬರ ದರ್ಗಾಕ ಹೋಗಿ |
ಹಸನಾಗಿ ನಾವು ಬಂದೇವು || ಪ ||
ಮಸೀದಿಯೋಳಗಿನ ಮೂಲವ ತಿಳಿದು |
ದೀನದಯಾಳನ ನೆನೆದೇವು || ಅ || ಪ ||
ಲಾಡ ಬಂಧನದ ಲಾಡಿಯ ಕಟ್ಟಿ ಪಂಚೇಂದ್ರಿಯ ಓಡಾಡುವ
(ಪಂಚೆಯ) ಹಿಡಿದವೋ || ಸೂರ್ಯ ಚಂದ್ರರು ಇಲ್ಲದೂರಿಗೆ
ಅಂದೊಬ್ಬ ಫೀರನ ಕಂಡಿವೋ
ಹಸಿರು ಹಳದಿ ಬಿಳಿದು ಕೆಂಪು |
ಕುಶಲದ ಚಾಕಿಯ ಕಂಡೆವೋ ||
ಮುಸಲಾರ ಗೂಡ | ಫಕೀರನಾಗಿ ಸವಿ ಸವಿ
ಪ್ರಸಾದ ಉಂಡೆವೋ
ಖತಾಲವೆಂಬ ಕತ್ತಲೆಯೊಳಗೆ
ಸುತ್ತೆಲ್ಲಾ ಜ್ಯೋತಿಯ ಕಂಡೆವು |
ಉತ್ತರ ಪಶ್ಚಿಮ ನವ ಭಾಜವ ದೈವ
ಅದರಲ್ಲಿ ನಾವು ಭ್ರಮೆಗೊಂಡೆವು
ಖಾಲಿ ಎಂಬುವ ಡೋಲಿ ಮುರಿದು |
ಒಳಗಿನ ಮೂಲವ ತಿಳಿದೇವೂ
ಕಲ್ಬರ್ಗಿಯ ಸಿದ್ಧೇಶ್ವರನ ಬಾಕನಾಗಿ
ಪಡೆದು ಕೊಂಡೇವೋ
* * *
ಒಂದೇ ನಮಗುರು ವೀರನೇ | ನಿಮಗೊಂದೆ ನಮ್
ಸುಖಸಾರನೇ | ಬಂಧ ಮೋಕ್ಷಗಳೆಂಬ ಎರಡರ
ನಂದ ತೋರಿದ ಧೀರನೇ || ಪ ||
ಹಿಂದೆ ಸುಕ್ರುತಾ ಮಾಡಿದೆ | ಅದರಿಂದ
ನಿಮ್ಮೊಳು ಕೂಡಿದೆ | ಬಂಧಾನವಿಲ್ಲದ ಪೂರ್ಣ
ಸಹಜಾನಂದ ಪದವಿಯ ಸೇರಿದೆ || ಪ ||
ತನ್ನ ನಿಜವನು ತಿಳಿಯನು | ಈ ಭಿನ್ನವಳಿಯದ
ಮೂಡನು | ನಿಮ್ಮ ಪಾದವ | ಕಂಡ ಮನುಜನು
ಜನ್ಮವಳಿದ ರೂಡನು || ಪ ||
ತಂದೆ ತಾಯಿಗಳಾದರು | ಬಹುಮಂದಿ ಕಳೆದು ಹೋದರು |
ತಂದೆ ಸದ್ಗುರು ಶಂಕರಾರ್ಯ ಹಿಂದೆ ನಿಲ್ಲುವ ದೇವರು || ಪ ||
* * *
ಆವಾಗ ಶಿವಮಂತ್ರ ನೆನಪಾಗಿ
ಗುರುದೇವ ತೋರಿದ ಗೊತ್ತು ಗುರಿಯಾಗಿ || ಪ ||
ಆಸನ ಬಲಿದೊದ್ದ ಮುಖವಾಗಿ | ತುದಿ | ನಾಸಿಕ
ದಲ್ಲಿ ಅನಾಮಿಕನಾಗಿ | ಸೋಸುವ ಮನ
ಒಬ್ಬಳಿಯಾಗಿ | ಶಿವ | ಪೋಷದೊಳಗೆ ವೊಕ್ಕು
ಲಯವಾಗಿ
ಚಂದ್ರ ಸೂರ್ಯರೊಂದೆ ರೂಪಾಗಿ |
ಕಾಳಿಂಗ ಹೆಡೆಎತ್ತಿ ಮೇಲಾಗಿ
ರತ್ನ ಮಾಣಿಕ್ಯ ಮುತ್ತು ಬಹಳಾಗಿ |
ದೇವೇಂದ್ರನ ಸಭೆಯಲ್ಲಿ ಬೆಳಕಾಗಿ
ಬ್ರಹ್ಮನಾಶ ವಿಷ್ಣುರೂಪಾಗಿ | ವರಬ್ರಹ್ಮ
ಜ್ಯೋತಿರ್ಮಯ ಲಿಂಗಾಗಿ | ನಿರ್ಮಲ ನಿಜ
ಸುಖ ಘನವಾಗಿ ಬ್ರಹ್ಮಾಂಡ
ಬೆರೆತೋರ ಪತಿಯಾಗಿ
* * *
ನಾರೀ ಚಲ್ಲಾದೆ ಮುಕ್ತಿಯು | ಗುರು
ತೋರಿಸದಲ್ಲದೆ ಕಾಣಿಸದಣ್ಣಾ || ಪ ||
ವೇದದ ಮೊದಲಿನ ಮೂಲವಿದು |
ಮೇದಿನಿಯೊಳು ತಾ ತುಂಬುಹುದು |
ಹಾದಿ ಅನಾದಿಗೆ ಬಿತ್ತಿಹುದು | ಇದು
ಸಾಧಕ ಜನರಿಗೆ ಕಾಣುವುದಣ್ಣಾ
ಎತ್ತ ನೋಡಲಿ ನರಜನ್ಮವಿದು |
ಸುತ್ತಮುತ್ತಲಿ ಸುಳಿಯುವುದು |
ಮತ್ತೆ ಮತ್ತೆ ಆಗಿ ಕಾಣುವುದು | ಗುರು
ಪುತ್ರರಿಗಲ್ಲದೆ ಕಾಣಿಸದಣ್ಣಾ
ಹಿಂದೆ ನೋಡಲಿ ಬಂದೀಹುದು
ಮುಂದೇ ನೋಡಲಿ ನಿಂತಿಹುದು
ಸಂದು ಸಂಧಿಗೆ ಜಡದಿಹುದು
ಆನಂದ ಗುಹೇಶ್ವರ ಲಿಂಗ ಕಾಣಣ್ಣಾ
* * *
ಎಂಥಾ ಗಾರುಡಿಗಾ | ಸದ್ಗುರು ಮೂರ್ತಿ |
ಗುರುವನ್ನು ನಾ ನಂಬಿ | ಗುಣವೆಲ್ಲಾ ಕಳೆಕೊಂಡೆ |
ಶರಣು ಮಾಡೆಂದರೆ ಶರಣು ಮಾಡಲಿ ಪೋದೆ |
ಕರದೋಳು ಇಟ್ಟು ನಿಜಭೋದೆ | ಅರುವಿದಾ
ಶಿರದ ಮೇಲೆ ತನ್ನ ಕೈ ಎಳೆಯಲಿ |
ಶರೀರವಾ ಮರೆತು ನಾ ಸಾಕ್ಷಿಯಾದೆನು ಗುರುವೆ
ಯಾರು ಇಲ್ಲದ ನೋಡಿ | ಬೇಕೆನ್ನ ಕರೆದೊಯ್ದ |
ವರವ ಕಿವಿಯೊಳಗಿಟ್ಟು ಮಂತ್ರಿಸಿದಾ |
ನಾರಿಬದುಕು ಮನೆ ಮಕ್ಕಳದೆಲ್ಲಾ | ಸೇರಿ
ಸೇರಿದ್ದಂತ ಮಾಡಿದನು ಗುರು
ಭವಗೇಡಿ ಕುಲಗೇಡಿ ಸಂಗಗೇಡಿಯಾದೆ |
ಇವರ ವಿಶ್ವಾಸದ ಛಲದಿಂದಾಗಲೇ |
ಇವರ ಮೇಲೆ ಎನ್ನ ವ್ಯಾಕುಲ ಹತ್ತಲಿ |
ವೈವಹಾರವೆಂಬುದು ಎಡವಟ್ಟಾಯಿತ್ತು
ಮಂತ್ರೀಸಿದ ಕ್ರಿಯಾಮರಳೇ ಎನ್ನ ತಲಿ |
ಮಂತ್ರ ತಂತ್ರಕೆ | ಜಗ್ಗಲಿಲ್ಲ | ಮಂತ್ರದ ಮಹಿಮೆ |
ಮಹಾಮಾಯಿ ವನಕೆ |
ಮಾಂತ್ರಿಕರೊಳು ಬಲಿದೊಡ್ಡವನೇ ಗುರು
ಇವರ ನಂಬಿದ ಮೇಲೆ ಇವರಂತೆ ಆಗದೆ
ಭುವನಕ್ಕೆ ಬಂದದ್ದು ಫಲವೇನು |
ವಿವರಿಸಿ ಉರುಳಿಲ್ಲ ಹೇಳು ಕೇಳುವುದೇನು |
ಭುವನ ರಕ್ಷಕ ಚಿದಾನಂದ ತಾನಾಗಿಹನು
* * *
ಗೊಲ್ಲರೋ ನಾವು ಗೊಲ್ಲರೋ || ಪ ||
ಈ ಘಟವೆಂಬ ಹುತ್ತಿನೊಳು ದಿಟವಾದ ಹಾವ
ಹಿಡಿದು ಕಟಭಾಯಿಯೊಳಗಿನ ಕಡಿಹುಲ್ಲು
ಮುರಿವಂಥಾ || ೧ || ಪ ||
ನಡು ನಾಡಿಗೆ ಹೆಡೆ ಇಟ್ಟಿಹುದು ಸರ್ಪಾದಾವಣ
ಕಡಿಚಕ್ರ ಮುಟ್ಟಿಹುದು |
ಒಡೆಯ ಶ್ರೀ ಗುರು ಮಂತ್ರ ಅಡಿಗಡಿಗೆ ಜಪಿಸುವ
ಕಡಿದಿತೆಂಬು ಅಂಜಕಿಲ್ಲದೆ ಹಿಡಿವಂಥಾ
ಹೆಡೆಯ ಮೇಲಕ್ಕೇರಿಸಿ | ಮೇಲಿನ ಬಾಲ ಕೆಳಭಾಗ
ಕ್ಕಿಳಿಸಿ | ಒಳಗಿರು ತ್ರಿಕೋಣಿಗಳಿಯೊಳಗೆ ಶ್ಲೇಷ
ಕಳಿನಾದ ಸರ್ಪದ ಫಣಿರತ್ನ ಪಡೆವಂಥಾ
ಸದ್ಭಾವವೆಂಬ ಬುಟ್ಟಿಯಲ್ಲಿ | ಹಾವಿನ ಹಿಡಿದು
ಒಳಗೆ ಹಾಕಿದೆವಲ್ಲ |
ದೇವ ದೇವರಿಗೆಲ್ಲ ದೇವ ಶಿಕಾಮಣಿ ದೇವ ಬಲ
ಭೀಮನ ಮೂಲವ ತಿಳಿದಂಥ
* * *
ಲಿಂಗನ ನೀನೋಡಿಕೋ | ಮಹಾಲಿಂಗನ ನೀನೋಡಿಕೊ |
ಲಿಂಗನ ನೀ ನೋಡಿಕೋ | ಮಹಾಲಿಂಗನ ನೀ ನೋಡಿಕೊ |
ಲಿಂಗ ನೀ ನೋಡಿಕೋ | ಲಿಂಗದೊಳಗೆ ಸಂಗದಿಂದಲಿ |
ಮಂಗಳಾದ್ಮನ || ೧ || ಪ ||
ನಾಲ್ಕು ಹಿಡಿದು ನೋಡಿಕೊ ದೃಷ್ಠಯ ವಾಕೋಭಾವದೀ
ಕೂಡು ಕಾಳ ಗುಣಗಳ ಪಾಶವ ಮಾಡಿ ಆಕಾರ, ಉಕಾರ
ಮಕಾರ ಮಧ್ಯದೀ
ಆರು ಮೂರು ಕಳೆದು ಮತ್ತೆ ಮೂರು ದ್ವಾರವು ಬಲಿದು
ಸೇರಿಸು ಮನವನು ಭೇರಿಯನಾದಧಿ |
ತೋರುವ ಚಿತ್ತಳೆ ಸವಿಸುಖ ಬೀರುತ್ತೆ
ದೇಶಕ ದಿಕವಾಸಾ | ಬಿದ್ದಿವಾಸ ಶ್ರೀಬಂದೇಶ
ಕೌಶಲ್ಯ ಎರವನು ನಾಸಿಕ ತುದಿಯಲಿ ವಾಸನಾಗಿ
ನಿತ್ಯ ವೈಭವದಿಂದ
* * *
ಗುರುವೆ ನಿಮ್ಮಾಜ್ಞೆಯನು ಮೀರದೇ ನಡೆದವನು
ನರನೆನ್ನಲಿ ಬ್ಯಾಡ ಪರಮಾತ್ಮನು || ಪ ||
ಅರಿಯದ ಪ್ರಾಣಿಗಳಿವರೇನು ಬಲ್ಲರು |
ಪರಕೆ ಪರತರವಾದ ಪರವಾಗಿ ಅವನು
ಹೆಪ್ಪು ಹಾಲಿಗೆ ಕೊಡಲಿ ತುಪ್ಪ ಅದರೊಳಗಾಗಿ
ತುಪ್ಪ ಕೊಡುವುದೇ ಹಾಲಿನೊಳು |
ನಿಷ್ಟತ್ತಿ ನಿಜರೂಪ ಆದಾಗ ಪುರುಷನು
ಅಷ್ಠ ಸಂಸಾರಕೆ ಒಳಗಾಗದವನು
ನದಿಯು ತಾ ಹುಟ್ಟಿ ಸಮುದ್ರವ ಕೂಡಲಿ
ನದಿಯು ಹೋಗುವುದೇ ಮತ್ತೆ ನದಿಗೆ |
ಸದ ಮಲ ಸುಜ್ಞಾನಿ ಪ್ರಪಂಚ ಮಾಡಲಿ |
ಅದರೊಳು ಕೂಡಿರುವ ಬಗಿಬ್ಯಾರೆ ಅವನು
ಮುತ್ತು ನೀರೊಳು ಹುಟ್ಟಿ ಮತ್ತೆ ನೀರಪ್ಪುದೇ
ಮುತ್ತು ಲಕ್ಷಾಂತರಕ್ಕೆ ಬೆಲೆಯಾದಿತು |
ತತ್ವಜ್ಞಾನಿಯವನು ಹುಟ್ಟುವನು ನರನಲ್ಲಿ
ಅತ್ಯಂತ ಅನಾಧ ಪರಿಪೂರ್ಣ ಅವಕೇ
ಗರುಡಾನ ಮಂತ್ರವ ಕಲಿತಿರುವಾಕೆಗೆ
ಉರಗ ಕಚ್ಚಿದರೆ ವಿಷವು ಏರುವುದೇ |
ಪರಿ ಪರಿ ವಿಷಯದೊಳ್ ಮುಳಗಾಡುವಾತಗೆ |
ಧರ್ಮ ಕರ್ಮಂಗಳು ಆಗತೇನು
ಜಾತಿಯೊಳು ಪುಟಿ ಅಜಾತವಾದವನಿಗೆ
ಜಾತಿಕರ್ಮಗಳಾಗತೇನು |
ಜ್ಯೋತಿ ಪ್ರಕಾಶ ನಮ್ಮ ಕೂಡಲ ಧೀಶನು |
ದಾತಿ ಪ್ರಖ್ಯಾತ ಅವಧೂತ ಅವನು
* * *
ದೇವನಲ್ಲವೇನು ಸದ್ಗುರು ಮಹಾ |
ದೇವನಲ್ಲವೇನು || ಪ ||
ಆದಿಯೊಳು ಸಿದ್ಧಾರು ಹೋದದಾರಿಯ ತೋರಿ
ಭೇದವ ಬಿಡಿಸಿ ಸಾಧುಮೂರುತಿ ಗುರು || ಪ ||
ನರಜನ್ಮದೊಳಗೆ ಬಂದು | ಪ್ರಪಂಚದ ಕಡಲಿ ಮೆಟ್ಟಿನಾಯಿ
ಅರಿತು ಮರೆತು ಒಮ್ಮೆ ಗುಹೆಯೊಂದು ನೆನೆದರೆ
ಗುರು ತಿಬ್ಬು ಅವರಿಗೆ ಪರತತ್ವ ತೋರಿದ
ಆಶಾ ಪಾರವ ಬಿಡಿಸಿ | ಮಾಡಿದ ಬಹುದೋಷ
ಕರ್ಮವ ಕೆಡಿಸಿ |
ನ್ಯಾಸ ಧ್ಯಾನದ ಜಪ ಮಾಡೆಂದು ಭೋದಿಸಿ |
ಪ್ರಕಾರ ತೋರಿದ ಈಶ ಮಹೇಶನು
ಭಕ್ತಿ ಭಾವವ ನೋಡಿರುವೆ | ನಂಬಿದವರಿಗೆ ಮುಕ್ತಿ
ಪಾಲಿಸುವ ಕಡು | ಸದ್ಗುರು ಭವತಾರಕ ದೇವನಂ
ಪ್ರತ್ಯಕ್ಷನಾದರಿದ ಪುರ ಬ್ರಹ್ಮರೂಪನು
* * *
ಧನವ ಘಳಿಸಬೇಕೆಂಧಾದು ಈ ಜನರಿಗೆ ಕಾಣಿಸದಯ್ಯ
ಅನುದಿನ ಹರಿಹರ ಬ್ರಹ್ಮಾದಿಕರು
ಹೌದ ಹೌದ ಹೌದಾನುವೆಂದಾರು ||
ಕೊಟ್ಟರೆ ತೀರದಂಥಾನು | ತನ್ನ |
ಬಿಟ್ಟು ಹೋಗದಂತಾದು
ಬಿಚ್ಚಿದ ಗಂಟು ಭೈಗೊಳಗಿಟ್ಟಲಿ
ಯಾರ್ಸಾರಂ ಮೂಟ್ಟು ದಂಧಾಮ
ಕರ್ಮಕೆ ಬಾರಥದಾದು | ನಿಜ |
ಧರ್ಮಕೆ ತೋರುವಂದಾದು
ನಿಮ್ಮಾಲಿವಾದ ಮನ ಸೊಂದಾದರೆ
ಮಲವನು ಮೀರು ವಂಥಾದು
ಮರವಿಗೆ ಬಾರದಂಥಾಜು | ನಿಜ |
ಅರಿವಿನೊಳಗೆ ಇರು ಪಂಧಾಜು
ಗುರು ಭವತಾರಕ ಜಚಿಕರ ಕಣ್ಣಿಗೆ
ತೆರಪಿಲ್ಲದೆ ಹೊಳೆಯುವಂತಾದು
Leave A Comment