ಮನುಜ ರೂಪವ ಧರಿಸಿ ಧರೆಗಿಳಿದು ಬಂದಿರುವ

ದೇವಸೂರ್ಯ ಕರುಣ;
ಕವಿದಿರುವ ಕತ್ತಲೆಯೊಳೊಂದೆ ಸಂಚರಿಸುತಿದೆ
ಅಮೃತ ಚಂದ್ರಕಿರಣ:
ಪಾದಯಾತ್ರೆಯೊಳಿರುವ ಶ್ರೀ ವಿನೋಬನ ಅಮರ ಅಗ್ನಿಶೀತಚರಣ! –
ಇಂದು ವಾಮನನಂತೆ ಬಂದೀ ತ್ರಿವಿಕ್ರಮಗೆ
ಕವಿಯ ನಮನ ಅನೃಣ!

೧೩ – ೦೯ – ೧೯೫೭


* ತಾ. ೧೩-೯-೧೦೫೭ರಲ್ಲಿ ಕೊಡಗು ಜಿಲ್ಲೆಯ ಆನೆಚೌಕುರಿನ ಫಾರೆಸ್ಟ ಲಾಡ್ಜ್‌ನಲ್ಲಿ ಶ್ರೀ ವಿನೋಬಾಜಿಯನ್ನು ಸಂದರ್ಶಿಸುವ ಸುಯೋಗ ಲಭಿಸಿತು, ಬೆಳಿಗ್ಗೆ ೯ ರಿಂದ ೧೦ ರವರೆಗೆ. ಶ್ರೀ ರಾಮಾಯಣದರ್ಶನಂ ಒಂದು ವಿಶೇಷ ಪ್ರತಿಯನ್ನು ಕಾಣಿಕೆಯಾಗಿ ಕೊಟ್ಟೆ, ಅದರಲ್ಲಿ ಬರೆದ ಕವನವಿದು.