ಮಾಡಿರಯ್ ಯಾಗಗಳ! ತಿನ್ನಿರಯ್ ಭಕ್ಷ್ಯಗಳ!

ಭೋಜನವೆ ಯೋಜನೆಯ ಮುಖ್ಯ ಅಂಗ!

ಮಂಕು ಮಂದಿಗೆ ಮೌಢ್ಯಮಧ್ಯವನು ಕುಡಿಸಿರಯ್;
ಸುಳ್ಳು ಭಯವನು ಬಿತ್ತಿ ಚೆನ್ನಾಗಿ ದುಡಿಸಿರಯ್.
ಕತ್ತೆಗಳಿರುವದೇಕೆ? ನಮ್ಮ ಮಡಿ ಹೊರುವುದಕೆ:
ಕತ್ತೆಗಳಿಗುತ್ತಮೆ ಇತ್ತರಾಯ್ತೆಮ್ಮ ಗತಿ!
– “ಬಡವರ ಹಸಿವೆಗೆ ಮೌಢ್ಯವ ಕೊಟ್ಟು
ಸುಖಸಂಪತ್ತನೆ ಕೊಂಡು …..
ಮೃಷ್ಷಾನ್ನವನೇ ಉಂಡು ….” –
ಪಡೆಯಿರಿ ಅಷ್ಟಗ್ರಹ ಯೋಗದ ಸಿದ್ಧಿ,
ನಿಮಗಿದ್ದರೆ ಬುದ್ಧಿ!….

೨೯ – ೦೧ – ೧೯೬೨