ಈ ಧ್ವಜಗೌರವವನು ಕಾಯಿ:
ಶಿವನೆದೆ ತಲ್ಲಣಿಪುದು, ತಾಯಿ!
ಕೋಮಲತರ ಪ್ರೇಮಾಸಿಯ ಮುಂದೆ
ದಾನವ ದಳವೂ ಸರಿವುದು ಹಿಂದೆ.
ತೂರ್ಯಧ್ವನಿಯಿಂ ಘೋಷಿಸಿ ಹೇಳು:
“ಮೈತ್ರಿಯೆ ಜಯಲಕ್ಷ್ಮಿಯ ಕರವಾಳ!”
ಹಿಂಸೆಯ ಹಾವಿನ ಹಲ್ಲನು ಕೀಳು;
ಹೆಡೆಮಣಿ ಕೊಡಿಯನು ಮುಡಿಯಲಿ ತಾಳು;
ಸ್ವಾತಂತ್ರ್ಯದ ಬಾಳು!
ಧ್ವಜವೇ ಸ್ವಾತಂತ್ರ್ಯದ ಶಿವಮೂರ್ತಿ;
ಧ್ವಜ ರಕ್ಷಣಯೇ ದೇಶಕೆ ಕೀರ್ತಿ.
ಸ್ವಾತಂತ್ರ್ಯವೆ ಶಿವ: “ಜಯಶಿವ!” ಎನ್ನಿ;
ಪ್ರಾಣನಿವೇದನ ಪೂಜೆಗೆ ಬನ್ನಿ!
ಜಯಶಿವ! ಜಯಶಿವ! ಜಯಶಿವ! ಜಯ್!
ಸ್ವಾತಂತ್ರ್ಯದ ಶಿವನಿಗೆ ಜಯ್! ಜಯ್! ಜಯ್!
೧೩ – ೦೪ – ೧೯೩೮
* ಶಿವಪುರ ಕಾಂಗ್ರೇಸಿನ ಅಧಿವೇಶನದಲ್ಲಿ ಪೋಲಿಸರು ಧ್ವಜವನ್ನು ಕೀಳಲು ಬಂದಾಗ ಸ್ವಯಂಸೇವಕಿಯರು ಅದನ್ನು ಅಪ್ಪಿಹಿಡಿದು ಕಾಪಾಡಿದರು.
Leave A Comment