ಹೇ ಜಗದ್ ದೀನಬಂಧು,

ಮನೆಯ ಕ್ಷೇತ್ರವಾಯಿತಿಂದು
‘ಉದಯರವಿ’ ಗೆ ನೀನು ಬಂದು:
ಕೆರೆಯೆ ಆಯ್ತು ಮಹಾಸಿಂಧು,
ಪೂಜ್ಯ ಓ ತಪೋಧನ!
ಪಾದಯಾತ್ರೆಯಮೃತರೇಖೆ
ಮನೆಯ ಮೇಲೆ  ಹಾಯ್ದುದಕ್ಕೆ
ನಿನಗನಂತ ವಂದನಾ,
ಮುಹುರನಂತ ವಂದನಾ

೨೫ – ೦೯ – ೧೯೫೭


* ಶ್ರೀ ವಿನೋಬಾಜಿ ನಮ್ಮ ಮನೆ ‘ಉದಯರವಿ’ ಗೆ ಬಂದ ಸಂದರ್ಭದಲ್ಲಿ.