ನಾ ಭಾರತ ಮುಸಲ್ಮಾನ:
ಆಲಿಸು, ನಿನಗಿದ್ದರೆ ಮಾನ;
ಪಾಲಿಸು, ನಿನಗಿದ್ದರೆ ಜ್ಞಾನ,
ಓ ಅವಮಾನಿತ ಪಾಕಿಸ್ತಾನ!
ಇನ್ನೆತ್ತೀಯ?
ಎಂದಾದರು ಕಾಶ್ಮೀರದ ಸೊಲ್ಲೆತ್ತೀಯ?
ನಾಲಗೆ ಸೀಳೀತು!
ಹಲ್ಲೂ ಉದುರೀತು!

೨೪ – ೦೯ – ೧೯೬೫