“ಬಿನ್ನವತ್ತಳೆಯ ಮುನ್ನಣೆಯಂತೆ!
ಬಿರುದು ಬಾವಲಿಯ ಹೊಗಳಿಕೆಯಂತೆ!
ಸ್ತುತಿರೂಪದಿ ನೀಂ ಪಡೆದರೆ ನಿನ್ನ
ಸೇವೆಯ ಫಲವನು ಮಡಿಯುವ ಮುನ್ನ,
ಸ್ವರ್ಗದೊಳಿರುವುದೆ ಗಳಿಸಿದ ಪುಣ್ಯ?” –
ಆ ಪ್ರಶ್ನೆಯೆ ಸವೆದಿಹ ನಾಣ್ಯ:

“ಅಲ್ಲೇನಿದೆಯೋ ಬಲ್ಲವರಾರು?
ಇಲ್ಲೇ ಸಿಕ್ಕರೆ ಬಿಡುವವರಾರು?
ಇಂದಿನ ಜನತೆಯ ಮನಸಿನ ತೇರು
ಸಾಗುವ ದಾರಿಯೆ ಅವರಿಗೆ ಊರು!
ಮುಂದಿನ ಚಿಂತೆಯ ಹೊಟ್ಟನು ತೂರು:
ಇದೊಂದೇ ಅನ್ನಾಸಾರು!”

೧೬ – ೦೯ – ೧೯೪೧