ಅಂತೂ ಇಂತೂ

ತುದಿಮುಟ್ಟಿತು ಶಿಬಿರೋತ್ಸವ ಎಂತೂ!
“ಶಿವಾಸ್ತೇ ಪಂಥಾನಸ್ಸಂತು!”

ದಡಬಿಟ್ಟಿತು ದೋಣಿ;
ಕಿರಿದಾಗುತ್ತಿದೆ,
ಮಸುಕಾಗುತ್ತಿದೆ
ಭೂ ಕಾನನ ಪರ್ವತಶ್ರೇಣಿ,
ಅನುರಣಿಸಿರೆ ಜಯಕಾರ
ಸರಿಯುತ್ತಿದೆ ದೂರ,
ದೂರ ದೂರ ದೂರ,
ಸುಖಸುಂದರ ತೀರ. ….!
ನಮಸ್ಕಾರ, ಓ, ನಮಸ್ಕಾರ?
“ಶಿವಾಸ್ತೇ ಪಂಥಾನಸ್ಸಂತು!”
“ಶಿವಾಸ್ತೇ ಪಂಥಾನಸ್ಸಂತು!”
“ಶಿವಾಸ್ತೇ ಪಂಥಾನಸ್ಸಂತು!”

೧೫ – ೧೨ – ೧೯೫೯


* ಯುವಜನೋತ್ಸವದ ಮುಕ್ತಾಯದಲ್ಲಿ.