ಅಂದೋ?

ಹಿಂದಕ್ಕೆ ಗುರುವಿದ್ದ, ಮುಂದಕ್ಕೆ ಗುರಿಯಿತ್ತು;
ನುಗ್ಗಿದುದು ಮುಂದೆ ಧೀರದಂಡು!
ಇಂದೊ?
ಹಿಂದಕ್ಕೆ ಗುರುವಿಲ್ಲ, ಮುಂದಕ್ಕೆ ಗುರಿಯಿಲ್ಲ;
ಮುಗ್ತುತಿದೆ ಮಧ್ಯೆ ಹೇಡಿಹಿಂಡು!

೧೨ – ೧೨ – ೧೯೫೯


* ಯುವಜನೋತ್ಸವದಲ್ಲಿ ಗಲಭೆಯೆಬ್ಬಿಸಿದ ಸಂದರ್ಭದಲ್ಲಿ.