ಪಂಪನಾ ಗಾಂಭೀರ್ಯ,

ರನ್ನ ವೀರ್ಯ,
ಜನ್ನನಾ ಋಜು ಕುಶಲ
ಕಥನ ಕಾರ್ಯ,
ನಾಗವರ್ಮನ ಕಲ್ಪನಾ
ಕಾದಂಬರೀ ಚಂದ್ರಿಕಾ
ಸ್ವಾಪ್ನ ಸೌಂದರ್ಯ,
ರಾಘವಾಂಕನ ನಾಟಕೀಯ ಚಾತುರ್ಯ,
ನಾರಣಪ್ಪನ ದೈತ್ಯರುಂದ್ರತಾ ದಿವ್ಯಧೈರ್ಯ,
ಲಕ್ಷ್ಮೀಶನಾ ಮೃದುಲ ಮಂಜುಲ ನಾದಮಾಧುರ್ಯ,
ರತ್ನಾಕರನ ಯೋಗದೃಷ್ಟಿಯ ಸಾಗರೌದಾರ್ಯ,
ಸಕಲ ಛಂದಸ್ ಸರ್ವ ಮಾರ್ಗ ಶೈಲಿಗಳಮರ ಐಶ್ವರ್ಯ,
ಸರ್ವವೂ ಸಂಗಮಿಸಿದೀ ‘ದರ್ಶನಂ’ ತಾನಕ್ಕೆ ಕೃತಿಗಳಾಚಾರ್ಯ!

೨೨ – ೦೭ – ೧೯೫೧