ನಾರಕ ನಾಕದಿ ವರ್ಷಗಳೈದನು

ಹರ್ಷದಿ ನೂಕಿದೆನು.
ಜೀವನ ಪಂಕದಿ ಜೀವದ ಕಮಲವ
ಪ್ರೇಮದಿ ಸಾಕಿದೆನು.
ಕೆಸರಿನೊಳಳಿಯುತಲಿದ್ದಾ ಹೂವನು
ನೀ ಮುದ್ದಿಸಿ ಮುಡಿದೆ;
ಮರ್ತ್ಯನಾದರೂ ಗೆದ್ದೆನು ಸಾವನು;
ನಿನ್ನಮೃತವ ಕುಡಿದೆ!