ಜಾರುತಿದೆ ಜೀವನದ

ನಶ್ವರದ ಕಾಲನದಿ;
ದಿನ ದಿನಕೆ ಹತ್ತಿರಕೆ
ಸಾರುತಿದೆ ನೀರನಿಧಿ.
ಮತ್ತೆ ಬಾರದು, ನಲ್ಲೆ,
ಕಳೆದ ನಿಮಿಷಂ.
ಹೊತ್ತ ಕೊಲೆಗೈಯುವನೆ
ತಿಳಿದ ಮನುಷಂ?
ನಾಚಿ ನಿಂತರೆ, ಅಯ್ಯೊ,
ಅಮೃತವೆ ವಿಷಂ!