ಧರೆ ಶಶಿಯನೆಳೆವಂತೆ

ನಾ ನಿನ್ನನೆಳೆವೆ;
ರವಿ ಧರೆಯನೆಳೆವಂತೆ
ನೀನೆನ್ನನೆಳೆವೆ!
ಭೀಮ ನೀಹಾರಿಕೆಯು
ಭೂಮಿ ರವಿಗಳನೆಲ್ಲ
ಸೆಳೆಯುವಂದದಲಿ
ಪ್ರೇಮವೆಂಬುವ ಶಕ್ತಿ
ನೇಮದಾಲಿಂಗನದಿ
ಬಂಧಿಸಿದೆ ಸಕಲರನು
ವಜ್ರಬಂಧದಲಿ!

 


t;font-� l:`� 8�� w Roman”,”serif”;color:black’> ಬಾಚಿದೆ ನಿನಗಾಗಿ;
ಬಾನಿನ ಬಣ್ಣದ ನೀಲಿಯ ಸೀರೆಯ
ನೆರಿಗೆಯನುಟ್ಟಿಹೆ ನಿನಗಾಗಿ.
ತುಟಿ ಕೆಂಪಾಗಿದೆ ನಿನಗಾಗಿ;
ಕಣ್ಣೆವೆಯಿಕ್ಕದು ನಿನಗಾಗಿ.
ಒಲುಮೆಯ ಹೊನಲಿನ ರಭಸದ ಹೊಯ್ಲಿಗೆ
ಬಿರಿವೆದೆ ಕರೆಯುತ್ತಿದೆ ಕೂಗಿ!
ಪ್ರಾಣ ಪಕ್ಷಿ ತಾ ದೇಹಪಂಜರದಿ
ತುಡಿಯುತ್ತಿದೆ, ಹಾ, ಸೆರೆಯಾಗಿ!

 

ಕೈಯಲಿ ಹಿಡಿದಿಹ ಕುಸುಮಮಾಲಿಕೆಯು
ಬಿಸುಸುಯ್ಲಿಗೆ ಬಾಡುವ ಮುನ್ನ
‘ನೇತಿ’ಯ ನಿರ್ಗುಣ ಶೂನ್ಯವನುಳಿಯುತ
‘ಇತಿ’ಯಾಗೈತರು, ಓ ಚೆನ್ನ!