ಅಲ್ಲಿ ಅರಳಿದೆ ಹೂವು, ಮಕರಂದ ತುಂಬಿ;

ಇಲ್ಲಿ ಬಾಯಾರಿ ಹಾರಾಡುತಿದೆ ದುಂಬಿ.
ಅಂತರವೊ? ಇನ್ನೂರು ಮೈಲಿಗಳ ಕಂಬಿ,
ಅಲ್ಲಾಡದಿರುವ ಕಬ್ಬಿಣದ ಕಂಬಿ!
ದೇಶವನು ಕಾಲ ಗೆಲ್ಲುವುದೆಂದು ನಂಬಿ
ಆಶೆ ಕುಳಿತಿಹುದಿಲ್ಲಿ ಸ್ವಪ್ನಚುಂಬಿ!