ಮತ್ತೆ ಮತ್ತೆ ಉಕ್ಕುತಿದೆ ನಿನ್ನ ಮೇಲೆ ಮೋಹ;
ಚಿತ್ತಮಧುವ ನೆಕ್ಕುತಿದೆ ದೇಹಕೆಳಸಿ ದೇಹ.
ದೇವರಿಚ್ಚೆಗಿದಿರೆ ಹೇಳು ನನ್ನ ನಿನ್ನ ಬೇಟ?
ಅವನು ಒಪ್ಪುವನಕ ತಾಳಲೆಮ್ಮ ನೇಹ ನೋಟ:
ಅವನು ಒಪ್ಪಿದೊಲವೆ ನಮಗೆ ಬಾಳೊಳಮೃತದೂಟ;
ಅವನು ಒಪ್ಪದಿರಲು ಅದುವೆ ಮೃತ್ಯು ಕಾಳಕೂಟ.
ಅವಸರವೇಕೊಲಿವುದೆಮಗೆ ಜನುಮ ಜನುಮದಾಟ!