ಬರುವನಿಂದು ಮಮ ಹೃದಯದ
ಅಮೃತ ಮೂರುತಿ;
ಬರುವನಿಂದು ಮಮ ಜೀವನದ
ಮಂಗಳಾರತಿ!
ಕೆಳದಿಯೆ, ಬಾ, ಸಿಂಗರಗೆಯ್;
ಹೊಸ ಹೂವಿನ ಮಾಲೆಯ ನೆಯ್;
ಮೋಹದ ಸೊಡರಾಗಲಿ ಮೆಯ್!
ಮದನನ ಸತಿ, ಸುಂದರ ರತಿ,
ಬಾರೆನ್ನಲಿ ಪ್ರಿಯಪತಿ!
ಮೈಚೆಲುವಿನ ಹೊಳೆನೀರಲಿ
ಮೀಯಲಿ ಮಧುಸಂಸ್ಕೃತಿ!
ಬರುವನಿಂದು ಮಮ ಹೃದಯದ
ಅಮೃತ ಮೂರುತಿ;
ಬರುವನಿಂದು ಮಮ ಜೀವನದ
ಮಂಗಳಾರತಿ!
ಕೆಳದಿಯೆ, ಬಾ, ಸಿಂಗರಗೆಯ್;
ಹೊಸ ಹೂವಿನ ಮಾಲೆಯ ನೆಯ್;
ಮೋಹದ ಸೊಡರಾಗಲಿ ಮೆಯ್!
ಮದನನ ಸತಿ, ಸುಂದರ ರತಿ,
ಬಾರೆನ್ನಲಿ ಪ್ರಿಯಪತಿ!
ಮೈಚೆಲುವಿನ ಹೊಳೆನೀರಲಿ
ಮೀಯಲಿ ಮಧುಸಂಸ್ಕೃತಿ!
Leave A Comment