ನಿನ್ನ ಮಂದಸ್ಮೇರ ಜೊತೆಯಿರದ ಕಾಶ್ಮೀರ

ನನಗಹುದು ನಿಸ್ಸಾರ; ನಾನು ಬಲ್ಲೆ.
ಕನ್ನಡದ ಮಲೆನಾಡ ಗೆಲುವ ಸೊಬಗಿನ ಬೀಡ
ನಿನ್ನುಳಿದು ನಾ ನೋಡಲಾರೆ, ನಲ್ಲೆ.

ನಾವಿರುವ ಈ ನೆಲದ ಮೇಲಿರುವ ಬಾಂಬೊಲದ
ಮೋಡಗಳ ನೋಡುವುದನರಿಯುತಿಲ್ಲೇ
ಎಲ್ಲ ದೇಶಗಳೆಲ್ಲ ಚೆಲುವ ಸವಿಯಲು ಬಲ್ಲ
ಕಬ್ಬಿಗಗೆ ಬೇಕಿಲ್ಲ ದೂರ ಜಿಲ್ಲೆ.