ಹಾಲು, ಹೂವು, ಜೊನ್ನ, ಜೇನು,

ಎಲ್ಲ ಸೇರಿಯಾದೆ ನೀನು!
ಹಾಲಿಗಿಂತ ಕೆನ್ನೆ ಸವಿ;
ಹೂವಿಗಿಂತ ಕಣ್ಣೆ ಸವಿ;
ಜೊನ್ನಕಿಂತ ನಗೆಯೆ ಸವಿ;
ಜೇನಿಗಿಂತ ಮುತ್ತೆ ಸವಿ;
ಹಾಲು ಸವಿ, ಜೇನು ಸವಿ,
ಹಾಲು ಜೇನುಗಳನು ಮೀರಿ
ನೀನೆ ನನಗೆ ಹೆಚ್ಚು ಸವಿ!