“ಬಾನಿನ ಜಗಲಿಯ ನೀಲಿಯಲಿ

ಬಿಳಿಮುಗಿಲಿನ ಕೂಸಾಡುತಿದೆ?”

“ಹಡಗಿನ ಪಟ ಹಿರಿ ಕಡಲಿನಲಿ
ಗುರಿಯಿಲ್ಲದೆ ತೇಲಾಡುತಿದೆ!”

“ಯಮುನೆಯ ನೀರಿನ ಹೊನಲಿನಲಿ
ನಿದ್ದೆಯ ಹಂಸವು ತೇಲುತಿದೆ!”

“ನೀಲಿಯ ತೈಲದ ಬಟ್ಟಲಲಿ
ಬೆಣ್ಣೆಯ ಮುದ್ದೆಯ ಹೋಲುತಿದೆ!”

“ಹಸುರನು ಹಾಸಿದ ತೊಟ್ಟಿಲಲಿ
ಬಿಳಿಗನಸಿನ ಸಿಸು ನಿದ್ರಿಸಿದೆ!”

“ಅಮ್ಮನ ಕಣ್ಣಿನ ಕಪ್ಪಿನಲಿ
ತಮ್ಮನ ಚಿತ್ರವು ಮುದ್ರಿಸಿದೆ!”

“ಮುಗಿಲಾಡುತಿದೆ”
“ಮುಗಿಲೋಡುತಿದೆ!”