ಮೈಗೆ ಮೈ ಸೋಂಕಿದರೆ

ನಂದನವೊ ನಮ್ಮ ಧರೆ!
ಮೈಗೆ ಮೈ ಸೋಂಕಿದರೆ
ದೇವಗಂಗೆಯಲಿ ತೆರೆ
ಪುಲಕಿಸುವುದುಕ್ಕಿ!

ಮೈಗೆ ಮೈ ಸೋಂಕಿದರೆ,
ಮೈಗಳೆರಡಪ್ಪಿದರೆ,
ಒಲಿದೊಪ್ಪಿದಪ್ಪಿನಲಿ
ದ್ವೈತವದ್ವೈತದಲಿ
ಲೀನ ಧುಮ್ಮಿಕ್ಕಿ!