ಮೊಸರಿಗಿಂತ ಮನೋಹರ ಅವಳ ಕೂಗು;

‘ಮೊಸರು ಬೇಕೆ ಮೊಸರು’ ಎಂಬ ದನಿಯ ಬಾಗು!
‘ಮೊಸರು ಬೇಡ’ ಎಂಬರುಂಟೆ? ಕರೆ, ಹೋಗು:
ಕೊರಳ ಸವಿಗೆ ಮೊಸರು ಕೊಂಡು ಧನ್ಯನಾಗು!