ನಿನ್ನ ಮೈ ದೇಗುಲದಿ

ನಾನು ಪೂಜಾರಿ;
ನೀನೆ ದೇವತೆ ಅಲ್ಲಿ,
ನನ್ನೆದೆಯ ನಾರಿ.

ಪ್ರೇಮದಾಲಾಪನೆಯೆ
ಋಷಿಮಂತ್ರದೋಜೆ;
ಪ್ರಣಯ ಪ್ರಸಾದದಿಂ
ತಣಿಯುವುದೆ ಪೂಜೆ!