ಜನ ನೆರೆದು, ಸಭೆಸೇರಿ, ಕಯ್ಯ ಚಪ್ಪಳೆಯಿಕ್ಕಿ,

ಕೊರಳಿಗುರುಳಿಪ ಹಾರ ನನಗೆ ನಿಸ್ಸಾರ;
ತಳಿರ ಬೆರಳಿನ ಕಯ್ಯ ಕಂದನಾ ನಳಿದೋಳು
ಕೊರಳನಪ್ಪಿದರೆನಗೆ ಸಗ್ಗಕ್ಕೆ ಸಾರ:
ಸಾಮಾನ್ಯತಾ ಸುಖವೆ ಶಾಂತಿ ಜೀವಾಧಾರ;
ಸಾಮಾನ್ಯತೆಯೆ ಜಗನ್‌ಮಾನ್ಯತಾ ಸಂಸಾರ!