“ಜೀವಿತ ಪಥವಾಗಲಿ ನಿನಗಿವರೆಲ್ಲರ

ಆಶೀರ್ವಾದದ ರಥರೇಖೆ!”
ಕಂದಾ, ನಿನಗಿದೆ ತಾಯ್ ತಂದೆಯ ಹರಕೆ,
ಹುಟ್ಟಿದ ಹಬ್ಬಕೆ ಕಬ್ಬಿಗನೆದೆಯರಕೆ;
ಜೀವಿತ ಪಥವಾಗಲಿ ನಿನಗಿವರೆಲ್ಲರ
ಆಶೀರ್ವಾದದ ರಥರೇಖೆ,
ಕವಿ ಋಷಿ ಗುರುವರ ದೇವ ಮಹಾತ್ಮರ
ಜೀವಜ್ಯೋತಿಯ ಧ್ರುವರೇಖೆ!