ಹೃದಯ ಮಂದಿರದಲ್ಲಿ ಮಧುರ ಪ್ರಾಣೇಶನಿಗೆ

ಪ್ರಣಯದಾರತಿ ಪೂಜೆಯಾಗುತಿದೆ ಬಾ!
ಕಂಬನಿಯ ಚುಂಬನದ ಪ್ರೇಮಾಂಬುಜಾತದಲಿ
ತುಂಬಿ ಜೀವವನೆ ಮುಡುಪರ್ಪಿಸಲು ತಾ!

ರಾಗವೇ ವೈರಾಗ್ಯವಪ್ಪುದಲ್ಲಿ!
ಭೋಗವೇ ತ್ಯಾಗವಾಗಿರುವುದಲ್ಲಿ!
ಮೋಹವೇ ಭಕ್ತಿಯಾಗಿರುವುದಲ್ಲಿ!
ಪ್ರೇಮವೇ ಮುಕ್ತಿಯಂತೆಸೆವುದಲ್ಲಿ!