ಮೈಸೂರು ಮಹಾರಾಜಾ ಸಂಸ್ಕೃತ ಕಾಲೇಜು, ಅಣ್ಣಾಮಲೆ ವಿಶ್ವಾವಿದ್ಯಾನಿಲಯ ಹಾಗೂ ಬನರಾಸ್ ಹಿಂದು ವಿಶ್ವವಿದ್ಯಾನಿಲಯಗಳಲ್ಲಿ ಅಭ್ಯಾಸ ಮಾಡಿ ಸ್ನಾತಕ
ಪದವಿಯೊಂದಿಗೆ ಸಾಂಪ್ರದಾಯಕ ಪದವಿಗಳಾದ ವೇದಾಂತ ವಿದ್ವಾನ್, ಮೀಮಾಂಸ ಶಿರೋಮಣಿಗಳನ್ನೂ ಪಡೆದುಕೊಂಡಿರುವ ಪ್ರೊ.ಕೆ.ಟಿ. ಪಾಂಡುರಂಗಿ ಹೆಸರಾಂತ ಸಂಸ್ಕೃತ ಪಂಡಿತರು. ಪ್ರಸ್ತುತ ಬೆಂಗಳೂಲಿನ ಪೂರ್ಣಪ್ರಜ್ಞ ವಿದ್ಯಾಪೀಠದ ಉಪಕುಲಪತಿಗಳು ಹಾಗೂ ದೇವಿತ ವೇದಾಂತ ಶಿಕ್ಷಣ ಹಾಗೂ ಸಂಶೋಧನ ಫೌಂಡೇಶನ್ನ ಅಧ್ಯಕ್ಷರಾಗಿ ಕೆಲಸ ಮಾಡುತ್ತಿರುವ ಪ್ರೊ.ಕೆ.ಟಿ. ಪಾಂಡುರಂಗಿ ಅವರು ಧಾರವಾಡ ಹಾಗೂ ಬೆಂಗಳೂರು ವಿಶ್ವವಿದ್ಯಾನಿಲಯಗಳಲ್ಲಿ ಸಂಸ್ಕೃತ ಪ್ರಾಧ್ಯಪಕರಾಗಿ ಸೇವೆ ಸಲ್ಲಿಸಿದವರು. ಬೆಂಗಳೂರು ಮಿಥಿಕ್ ಸೊಸೈಟಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಪ್ರೊ.ಕೆ.ಟಿ. ಪಾಂಡುರಂಗಿ ಅವರು ಭಾರತ ಸರ್ಕಾರದ ಕೇಂದ್ರ ಸಂಸ್ಕೃತ ಮಂಡಲ, ಭಾರತೀಯ ವಿದ್ಯಾಭವನದ ಗಾಂಧಿಕೇಂದ್ರ, ಪುಣೆಯ ಡೆಕ್ಕನ್ ಕಾಲೇಜನ ನಿಘಂಟು ಸಮಿತಿ, ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಹಣಕಾಸು ಸಂಸ್ಥೆ, ರಾಷ್ಟ್ರೀಯ ಸಂಸ್ಕೃತ ಸಂಸ್ಥಾನ ಮುಂತಾದ ಹಲವು ಸಂಘ-ಸಂಸ್ಥೆಗಳೊಡನೆ ಸಕ್ರಿಯವಾಗಿ ಸಂಬಂಧವಿಟ್ಟುಕೊಂಡಿರುವ ಪ್ರೊ.ಕೆ.ಟಿ. ಪಾಂಡುರಂಗಿ ಅವರು ಪಡೆದಿರುವ ಗೌರವ ಪುರಸ್ಕಾರಗಳು ಹಲವಾರು.
ತಿರುಪತಿಯ ಸಂಸ್ಕೃತ ವಿಶ್ವವಿದ್ಯಾಲಯದಿಂದ ಮಹಾ ಮಹೋಪಾಧ್ಯಾಯ, ಕೊಲ್ಕತ್ತಾದ ಏಷ್ಯಾಟಿಕ್ ಸೊಸೈಟಿಯ ಪ್ರತಿಷ್ಠಿತ ಸರ್್ರ. ವಿಲಿಯಂ ಜೋನ್ಸ್ ಸ್ಮಾರಕ ಪದಕ, ಉತ್ತರ ಪ್ರದೇಶ ಸಂಸ್ಕೃತ ಸಂಸ್ಥಾನ ಪುರಸ್ಕಾರ, ಕರ್ನಾಟಕ ರಾಜ್ಯ ಶಿಕ್ಷಣ ಇಲಾಖೆಯ ಗೌರವ ಪುರಸ್ಕಾರ ಹೀಗೆ ಹಲವಾರು ಗೌರವಗಳನ್ನು ಪಡೆದಿರುವ ಪ್ರೊ.ಕೆ.ಟಿ. ಪಾಂಡುರಂಗಿ ವೇದಾಂತದ ಬಗ್ಗೆ ಆಳವಾದ ಅಭ್ಯಾಸ ಮಾಡಿ ನೂರಾರು ಪ್ರೌಢ ಪ್ರಬಂಧಗಳನ್ನು ರಚಿಸಿದ್ದಾರೆ. ಸುಮಾರು ೨,೦೦೦ತೂಕ ಹೆಚ್ಚು ಸಂಸ್ಕೃತ ಹಸ್ತಪ್ರತಿಗಳನ್ನು ಸಂಗ್ರಹಿಸಿರುವ ಪ್ರೊ.ಕೆ.ಟಿ. ಪಾಂಡುರಂ ಅವರ ದೇಶ ವಿದೇಶಗಳ ಹಲವಾರು ಪ್ರತಿಷ್ಠಿತ ಸಮ್ಮೇಳನಗಳಲ್ಲಿ ಪಾಲ್ಗೊಂಡಿದ್ದು, ಜರ್ಮನಿ, ಇಂಗ್ಲೆಂಡ್, ಅಮೇಲಕಾ ಮೊದಲಾದ ದೇಶಗಳಲ್ಲಿ ಸಂಸ್ಕೃತ ಸಾಹಿತ್ಯ, ವೇದಾಂತ ಹಾಗೂ ಮೀಮಾಂಸೆ ಬಗ್ಗೆ ಉಪನ್ಯಾಸಗಳನ್ನು ನೀಡಿದ್ದಾರೆ. ಕಾವ್ಯಾಂಜಲಿ, ಸಂಸ್ಕೃತ ಕವಿಯತ್ರಿಯರು, ಕವಿ ಕಾವ್ಯ ದರ್ಶನ ಹೀಗೆ ಸಂಸ್ಕೃತ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಹಲವಾರು ಮಹತ್ವದ ಕೃತಿಗಳನ್ನು ರಚಿಸಿರುವ ಪ್ರೊ.ಕೆ.ಟಿ. ಪಾಂಡುರಂಗಿ ಅವರು ವಿಚಾರ ಜ್ಯೋತಿ ಎಂಬ ಸಂಸ್ಕೃತ ಸುಭಾಷಿತಗಳ ೩ ಸಂಪುಟಗಳನ್ನು ಪ್ರತ್ಯೇಕವಾಗಿ ಪ್ರಕಟಿಸಿದ್ದಾರೆ.
Categories
ಪ್ರೊ. ಕೆ. ಟಿ. ಪಾಂಡುರಂಗಿ
