ಬಿ.ವಿ.ಬಿ. ಮಹಾವಿದ್ಯಾಲಯ
ಬೀದರ – ೫೮೫೪೦೩.

ಐವತ್ತೆಂಟರ ಹಿರಿಯ ವಿದ್ವಾಂಸ ಸೂಗಯ್ಯ ಹಿರೇಮಠ; ಗುಲ್ಬರ್ಗಾ ಜಿಲ್ಲೆ ಶಹಾಪುರ ತಾಲೂಕಿನ ಸಿಂಗನಹಳ್ಳಿಯವರು.

ಬಾಲ್ಯದಲ್ಲಿಯೇ ಜಾನಪದ ಸಂಸ್ಕೃತಿ, ಸಾಹಿತ್ಯ, ಸಂಶೋಧನೆಗಳಿಗೆ ತಮ್ಮನ್ನು ತೊಡಗಿಸಿಕೊಂಡು ಹೈದ್ರಾಬಾದ್ ಕರ್ನಾಟಕದ ಜಾನಪದ ಲೋಕಕ್ಕೆ ಮೆರಗು ತಂದವರು.

ಕನ್ನಡ ಭಾಷೆಯ ಅಧ್ಯಾಪಕ ವೃತ್ತಿಯೊಂದಿಗೇ ವಿಶೇಷ ಬರಹ, ಸಂಶೋಧನೆ ಹಾಗೂ ಸಾಹಿತ್ಯ ಪ್ರಕಟಣೆಗಳಿಗೆ ಒಲವು ತೋರಿದವರು. ತಮ್ಮಲ್ಲಿನ ಕುತೂಹಲ ಹಾಗೂ ಆಸಕ್ತಿಗಳನ್ನು ಶಿಷ್ಯ ವೃಂದದಲ್ಲಿ ತುಂಬಿ ಸ್ಫೂರ್ತಿಯಾದವರು.

ಜಾನಪದ ವೈದ್ಯ ಪದ್ಧತಿ, ಸಾಂಸ್ಕೃತಿಕ ನೆಲೆಗಟ್ಟಿನ ಲೇಖನಗಳನ್ನು ಪ್ರಕಟಿಸಿರುವ ಸೂಗಯ್ಯ ಹಿರೇಮಠ ಎಲ್ಲ ವಿಭಾಗಗಳಲ್ಲಿ ಕೌಶಲ್ಯ ತೋರಿದ್ದಾರೆ.

ಇಂತಹ  ಮಹನೀಯರನ್ನು  ಬೆಳ್ಳಿ  ಹಬ್ಬದ  ಪ್ರಯುಕ್ತ  ಅಕಾಡೆಮಿ ಅಭಿನಂದಿಸುತ್ತದೆ.